🔹🔸🔹🔸🔹🔸🔹🔸🔹
ಖಂಡಿತವಾಗಿಯೂ ಒಳಗೆ ಅನುಮತಿಯಿಲ್ಲ
ನಾನು ಎಷ್ಟೋ ಬಾರಿ ಯೋಚಿಸಿದ್ದೇನೆ, ಸಾಧನೆಯ ಮೊದಲನೆಯ ಮೆಟ್ಟಿಲು ಯಾವುದು? ಈಗ ನನಗೆ ಅನ್ನಿಸಿದ್ದು, ಸಾಧನೆಯ ಪಥ ಪ್ರಾರಂಭವಾಗುವುದು ಸ್ಫೂರ್ತಿಯಿಂದ. ಆ ಸ್ಫೂರ್ತಿ ಎಲ್ಲಿಂದ, ಹೇಗೆ, ಯಾರಿಂದ ಬಂದೀತು ಎಂದು ಹೇಳುವುದು ಕಷ್ಟ. ಕೆಲವೊಮ್ಮೆ ಒಂದು ಘಟನೆ, ಒಂದು ಮಾತು, ಒಂದು ನಡತೆ, ಒಂದು ದೃಶ್ಯ, ಒಬ್ಬ ವ್ಯಕ್ತಿಗೆ ಸ್ಫೂರ್ತಿ-ಯ ಸೆಲೆಯನ್ನು ಉಕ್ಕಿಸಬಹುದು. ಆ ಸ್ಫೂರ್ತಿ ಮನಸ್ಸಿನಲ್ಲಿ ಭಾವೋದ್ವೇಗ ಉಂಟು--ಮಾಡುತ್ತದೆ. ಆ ಭಾವೋದ್ವೇಗವೇ ಕಾರ್ಯಕ್ಕೆ ಪ್ರಚೋದನೆ ಮಾಡುತ್ತದೆ, ಅದರಿಂದಲೇ ಸಾಧನೆ.
ಎಲ್ಲಿಯವರೆಗೂ ಆ ಸ್ಫೂರ್ತಿಯ ಸೆಲೆ ಉಕ್ಕುತ್ತಲೇ ಇರುತ್ತದೋ, ಆ ಭಾವೋದ್ವೇಗದ ತೀಕ್ಷ್ಣತೆ ಕುಂದುವುದಿಲ್ಲವೋ ಅಲ್ಲಿಯವರೆಗೆ ಸಾಧನೆಗೆ ಅನಂತ ಅವಕಾಶಗಳು. ಡೆಬ್ಬಿ ಮೆಂಕಾಂಬರ್ ಎಂಬ ಮಹಿಳೆಗೆ ಸ್ಫೂರ್ತಿ ದೊರೆತದ್ದು ನಂಬಲಸಾಧ್ಯವಾದ ನೆಲೆಯಲ್ಲಿ. ಆಕೆಯ ದೊಡ್ಡಪ್ಪನ ಮಗ ಕ್ಯಾನ್ಸರ್ ರೋಗದಲ್ಲಿ ನರಳುತ್ತ ಕೊನೆಯ ಹಂತದಲ್ಲಿದ್ದ. ಅವನನ್ನು ನೋಡಲು ಆಕೆ ಆಸ್ಪತ್ರೆಗೆ ಹೋದಳು. ಆಕೆಗೆ ಬೋರ್ಡುಗಳನ್ನು ಓದುವ, ಮಾರ್ಗವನ್ನು ತಿಳಿದುಕೊಳ್ಳುವುದು ಕಷ್ಟದ ಕೆಲಸ.ಆಕೆ ಆಸ್ಪತ್ರೆಯಲ್ಲಿ ಅಲ್ಲಲ್ಲಿ ಸುತ್ತಾಡಿ ಕೊನೆಗೆ ಒಬ್ಬ ವೈದ್ಯರನ್ನು ಮಾರ್ಗದರ್ಶನಕ್ಕಾಗಿ ಕೇಳಿದಳು. ಆತ ಹೇಳಿದರು, ‘ಈ ಪಡಸಾಲೆಯಲ್ಲೇ ನೇರವಾಗಿ ಹೋಗಿ, ಮೊದಲನೇ ತಿರುವಿನಲ್ಲಿ ಬಲಕ್ಕೆ ಹೊರಳಿ ಮುಂದೆ ಸಾಗಿ. ಅಲ್ಲಿ ‘ಖಂಡಿತವಾಗಿಯೂ ಒಳಗೆ ಅನುಮತಿಯಿಲ್ಲ’ ಎಂದು ಫಲಕವಿರುವ ಬಾಗಿಲು ಕಾಣುತ್ತದೆ. ಅದನ್ನೇ ತಳ್ಳಿ-ಕೊಂಡು ಒಳಗೆ ಹೋಗಿ, ಅದೇ ನಿಮಗೆ ಬೇಕಾದ ಸ್ಥಳ’. ಈ ಮಾತು ಮಿಂಚಿ ಅವಳ ಮನಸ್ಸಿನಲ್ಲಿ ಚಿರಸ್ಥಾಯಿಯಾಯಿತು.
ಅಂದಿನಿಂದ ಬದುಕಿನ ಮುಚ್ಚಿದ, ಅನುಮತಿಯಿಲ್ಲವೆಂದು ಭಾವಿಸಿದ ಕಾಲ್ಪನಿಕ ಬಾಗಿಲುಗಳನ್ನು ತೆಗೆಯುತ್ತಲೇ ಹೋದಳು ಡೆಬ್ಬಿ ಮೆಕಾಂಬರ್. ಆಕೆಯ ಶಾಲಾಜೀವನ ಅಷ್ಟೇನೂ ಸುಖಕರವಾಗಿರಲಿಲ್ಲ. ಓದಿನಲ್ಲೂ ಹಿಂದಿದ್ದ ಆಕೆಗೆ ಕಾಲೇಜು ಸೇರಲಾಗಲಿಲ್ಲ. ಆಗಿನ ಕಾಲದಲ್ಲಿ ಓದಲಾಗದ ಹುಡುಗಿಯರು ಏನು ಮಾಡುತ್ತಿದ್ದರೋ, ಅದನ್ನೇ ಡೆಬ್ಬಿ ಮಾಡಿದಳು. ಚಿಕ್ಕ ವಯಸ್ಸಿಗೇ ಮದುವೆ-ಯಾಗಿ ನಾಲ್ಕು ಮಕ್ಕಳನ್ನು ಹೆತ್ತಳು. ಮಕ್ಕಳನ್ನು ಬೆಳೆಸುವುದ-ರೊಂದಿಗೆ ಆಗಾಗ ಮನೆಗೆ ಬರುವ ಪತ್ರಿಕೆಗಳನ್ನು ಓದುತ್ತಿದ್ದ ಅವಳಿಗೆ ತಾನೂ ಬರೆಯಬೇಕು ಎಂಬ ಆಸೆ ಅಗುತ್ತಿತ್ತು.
ಛೇ ತನಗೆಲ್ಲಿ ಬರೆಯುವುದು ಸಾಧ್ಯ ಎಂದು ನಿರಾಶಳಾಗುತ್ತಿದ್ದಳು. ಆದರೆ, ಅಂದು ವೈದ್ಯರು ಹೇಳಿದ ಮಾತು ಅವಳಲ್ಲಿ ವಿಚಿತ್ರವಾದ ಸಂಚಲನವನ್ನು ಮಾಡಿತು. ಹೌದಲ್ಲ, ಬದುಕಿನಲ್ಲಿ ಅನೇಕ ಬಾಗಿಲುಗಳು ಇದೇ ಫಲಕವನ್ನು ಹೊತ್ತಿವೆ- ‘ಒಳಗೆ ಖಂಡಿತವಾಗಿ-ಯೂ ಅನುಮತಿಯಿಲ್ಲ’. ಆದರೆ ನಾವು ಮನಸ್ಸು ಮಾಡಿದರೆ ತೆರೆದು ಹೋಗಬಹುದು. ನಾನು ಬರೆಯಲಾರೆ ಎಂಬುದೂ ಮುಚ್ಚಿದ ಬಾಗಿಲೇ. ಅದನ್ನು ತೆಗೆದೇ ತೀರುತ್ತೇನೆ ಎಂದು ಹಟದಿಂದ ಕಥೆಗಳನ್ನು ಬರೆದು ಪತ್ರಿಕೆಗಳಿಗೆ ಕಳುಹಿಸಿದಳು.
ಅವು ಅಷ್ಟೇ ಬೇಗ ಪ್ರಕಟಣೆ ಕಾಣದೆ ಮರಳಿ ಬಂದವು. ಆಕೆ ತನ್ನ ಭಾಷೆಯನ್ನು ಮತ್ತಷ್ಟು ಸರಿ ಮಾಡಿಕೊಂಡು ಹೃದಯ ತಟ್ಟುವ, ಲೈಂಗಿಕತೆ, ಕ್ರೌರ್ಯ ಇಲ್ಲದ ಸುಂದರ ಕಥೆಗಳನ್ನು ಬರೆದಳು. ಮನೆಮಂದಿ-ಯೆಲ್ಲ ಜೊತೆಗೇ ಕುಳಿತು ಓದಬಹುದಾದ ಇವಳ ಕಥೆಗಳು ಬಹುಬೇಗನೇ ಜನಪ್ರಿಯವಾದವು. ಈಗ ಡೆಬ್ಬಿ ಅಮೆರಿಕೆಯ ಪ್ರಮುಖ ಬರಹಗಾರ್ತಿ. ಆಕೆ ‘ನ್ಯೂಯಾರ್ಕ ಟೈಮ್ಸ್’ ಪತ್ರಿಕೆಯ ಅತ್ಯಂತ ಜನಪ್ರಿಯ ಲೇಖಕರಲ್ಲಿ ಮೊದಲನೇ ಸ್ಥಾನ ಪಡೆದಿದ್ದಾಳೆ. ಆಕೆಯ ಪುಸ್ತಕಗಳ ೧೭೦ ದಶಲಕ್ಷ ಪ್ರತಿಗಳು ಮಾರಾಟವಾಗಿವೆ. ಈ ವರ್ಷವೇ ಅವಳ ಐದು ಪುಸ್ತಕಗಳು ಪ್ರಕಟವಾಗಿ ಜನಪ್ರಿಯತೆಯ ತುತ್ತ ತುದಿ ಏರಿದ್ದಾಳೆ. ನಮ್ಮ ಬದುಕಿನಲ್ಲಿ ಅನೇಕ ಬಾಗಿಲು ಮುಚ್ಚಿದಂತೆ ತೋರುತ್ತವೆ. ಪ್ರತಿಯೊಂದರ ಮೇಲೂ ‘ನಿಮಗೆ ಒಳಗೆ ಪ್ರವೇಶವಿಲ್ಲ’ ಎಂಬ ಫಲಕ ಇದ್ದಂತೆ ತೋರುತ್ತದೆ. ಆದರೆ ಯಾವ ಬಾಗಿಲೂ ನಮ್ಮನ್ನು ತಡೆಯಲಾರದು. -ಸಾಧನೆಯ ಛಲವಿದ್ದರೆ. ಎಲ್ಲ ಬಾಗಿಲುಗಳನ್ನು ತಳ್ಳುತ್ತಾ, ತೆರೆಯುತ್ತ ಹೋಗೋಣ, ಅಲ್ಲಿಯೇ ಒಳಗಿದೆ ನಮ್ಮ ಸಾಧನೆಯ ಗಮ್ಯಸ್ಥಾನ.
Gururaaj karjagi
🌿🌿🌿🌿🌿🌿🌿🌿🌿

No comments:
Post a Comment