Sunday, 7 August 2016

ಹೃದಯ ವೈಶಾಲ್ಯ

ಹೃದಯ ವೈಶಾಲ್ಯ
ಎತ್ತರಕ್ಕೆ ಏರಿದವರು ಅಹಂಕಾರ, ಸ್ವಪ್ರತಿಷ್ಠೆಗಳಿಗೆ ಬಲಿಯಾಗಬಾರದು. ‘ಏರಿದವನು ಚಿಕ್ಕವನಿರಬೇಕೆಲೆಎಂಬ ಕವಿವಾಣಿ ಎಂದೆಂದಿಗೂ ಸುಳ್ಳಾಗದು. ಇದನ್ನು ಸ್ಪಷ್ಟಪಡಿಸುವ ಘಟನೆಯೊಂದು ಶ್ರೇಷ್ಠ ವಿಜ್ಞಾನಿಯೊಬ್ಬರ ಜೀವನದಲ್ಲಿ ನಡೆಯಿತು.
ಆಲ್ಬರ್ಟ್ ಐನ್ಸ್ಟೀನ್ ಅಸಾಧಾರಣ ಪ್ರತಿಭಾವಂತ. ಬಡ ಕುಟುಂಬದಲ್ಲಿ ಜನಿಸಿದ್ದರಿಂದ ವೈಜ್ಞಾನಿಕ ಪ್ರಯೋಗಗಳಿಗೆ ಬೇಕಾದ ಅತ್ಯಾಧುನಿಕ ಪ್ರಯೋಗ ಶಾಲೆಯಾಗಲೀ ಇರಲಿಲ್ಲ. ಆದರೆ ಭೌತಶಾಸ್ತ್ರದ ಕ್ಷೇತ್ರದಲ್ಲಿ ಅದ್ಭುತವಾದ ಸಾಧನೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಯಾವುದರ ಚಲನೆಯೂ ಸ್ವಯಂಪೂರ್ಣವಲ್ಲ. ಪ್ರತಿಯೊಂದು ಚಲನೆಯೂ ಇನ್ನೊಂದರ ಜತೆ ಹೋಲಿಸಿದ್ದು. ಎಂದರೆ ಪ್ರತಿ ಚಲನೆಯೂ ಸಾಪೇಕ್ಷವಾದುದು. ಪಥದಲ್ಲಿ ಸುತ್ತುವ ಪ್ರತಿಯೊಂದು ವಸ್ತುವೂ ಒಂದೇ ನಿಯಮಕ್ಕೆ ಒಳಗಾಗಿದೆ. ಸಾಪೇಕ್ಷ ಸಿದ್ಧಾಂತವನ್ನು ಐನ್ಸ್ಟೀನ್ 1915ರಲ್ಲಿ ಪ್ರಕಟಿಸಿದರು. ಅವರ ಸಿದ್ಧಾಂತಗಳು ಎಷ್ಟು ಪ್ರೌಢವಾಗಿದ್ದುವೆಂದರೆ ತಜ್ಞ ಭೌತಶಾಸ್ತ್ರಜ್ಞರಿಗೆ ಕೂಡ ಅವನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತಿತ್ತು.
1920
ರಲ್ಲಿ ಆಲ್ಬರ್ಟ್ ಕ್ವಾಂಟಮ್ ಸಿದ್ಧಾಂತವನ್ನು ಮಂಡಿಸಿ ನೊಬೆಲ್ ಬಹುಮಾನ ಗಳಿಸಿದರು. ಬೆಳಕೆಂದರೆ ಭೌತಿಕ ಕಣಗಳೂ ಅಲ್ಲ, ಅಲೆಗಳೂ ಅಲ್ಲ. ಬಹುಸಣ್ಣ ಪ್ರಮಾಣದ ಚೈತನ್ಯದ ತುಣುಕುಗಳು. ಒಂದರ ಹಿಂದೆ ಒಂದು ಚಲಿಸುತ್ತವೆ. ಒಂದೊಂದು ತುಣುಕೂ ಒಂದು ಪ್ರೋಟಾನು. ಅದರಲ್ಲಿ ಅಡಗಿರುವ ನಿರ್ದಿಷ್ಟ ಪ್ರಮಾಣದ ಚೈತನ್ಯ ಒಂದು ಕ್ವಾಂಟಮು. ಹೀಗೆ ಬೆಳಕಿನ ಸ್ವರೂಪವನ್ನು ಐನ್ಸ್ಟೀನ್ ವಿವರಿಸಿದರು.
1939
ರಲ್ಲಿ ಅವರು ಯುರೇನಿಯಂ ಬಳಸಿ ಅಪಾರ ಚೈತನ್ಯ ಉತ್ಪಾದಿಸಬಹುದೆಂದು ತಿಳಿಸಿದರು. ಇದು ಮುಂದೆ ಪರಮಾಣು ಬಾಂಬಿನ ತಯಾರಿಕೆಗೆ ದಾರಿ ಮಾಡಿತು. ಯೆಹೂದ್ಯರು ಹೊಸತಾಗಿ ರೂಪುಗೊಂಡ ಇಸ್ರೇಲ್ ಅಧ್ಯಕ್ಷತೆ ವಹಿಸಿಕೊಳ್ಳುವಂತೆ ಐನ್ಸ್ಟೀನರನ್ನು ಕೋರಿದ್ದರು. ಆದರೆ ಅವರು ಕೊಡುಗೆಯನ್ನು ವಿನಯಪೂರ್ವಕ ನಿರಾಕರಿಸಿದರು.
ಇಷ್ಟೆಲ್ಲ ಔನ್ನತ್ಯಕ್ಕೆ ಏರಿದರೂ ಐನ್ಸ್ಟೀನ್ ತುಂಬ ಸರಳ ವ್ಯಕ್ತಿಯಾಗಿದ್ದರು. ಹಣ್ಣು ಹಣ್ಣು ಮುದುಕರಿಂದ ತೊಡಗಿ ಸಣ್ಣ ಮಕ್ಕಳವರೆಗೆ ಎಲ್ಲರ ಜತೆಗೂ ಪ್ರೀತಿಯಿಂದ ಬೆರೆಯುತ್ತಿದ್ದರು. ಪಕ್ಕದ ಮನೆಯಲ್ಲಿದ್ದ ಹತ್ತು ವರ್ಷದ ಹುಡುಗಿಯೊಬ್ಬಳು ಆಗಾಗ ಐನ್ಸ್ಟೀನ್ ಬಳಿಗೆ ಹೋಗುತ್ತಿದ್ದಳು. ಅವಳ ತಾಯಿಗೆ ಅಚ್ಚರಿಯಾಯಿತು. ಮಗಳನ್ನು ಕರೆದುಅವರೊಬ್ಬ ಶ್ರೇಷ್ಠ ವಿಜ್ಞಾನಿ. ಅಲ್ಲಿ ನಿನಗೇನು ಕೆಲಸ?’ ಎಂದು ಕೇಳಿದಳು.
ಆಗ ಹುಡುಗಿಅಮ್ಮಾ, ಅಲ್ಲೊಬ್ಬರು ಪ್ರೊಫೆಸರ್ ಇದ್ದಾರೆ. ತುಂಬ ಒಳ್ಳೆಯವರು. ನನಗೆ ಕಷ್ಟವಾಗಿರುವ ಲೆಕ್ಕಗಳನ್ನೆಲ್ಲ ಅವರು ಸುಲಭವಾಗಿ ತಿಳಿಸಿಕೊಡುತ್ತಾರೆ. ಈಗ ನನಗೆ ಗಣಿತ ಮೊದಲಿನಷ್ಟು ಕಷ್ಟ ಅನಿಸುತ್ತಿಲ್ಲಎಂದಳು.
ತಾಯಿಗೆ ಗಾಬರಿಯಾಯಿತು. ಜತೆಗೆ ಬೇಸರವೂ ಆಯಿತು. ಐನ್ಸ್ಟೀನ್ ಬಳಿಗೆ ಹೋಗಿ ಕ್ಷಮೆ ಯಾಚಿಸಿದಳು. ಆಗ ಅವರುಅಮ್ಮಾ, ಚಿಂತಿಸಬೇಡಿ. ಮಗು ನನ್ನಿಂದ ಎಷ್ಟು ಕಲಿತಿದೆಯೋ ಅದಕ್ಕಿಂತ ಹೆಚ್ಚು ನಾನು ಅವಳಿಂದ ಕಲಿತಿದ್ದೇನೆ. ಮಕ್ಕಳೊಂದಿಗೆ ಮಾತಾಡುವುದು ತುಂಬ ಖುಷಿಯ ಸಂಗತಿಎಂದರು.



collected

No comments:

Post a Comment