Monday, 1 August 2016

♻️ ಶ್ರೀವಾಣಿ ♻️


♻️ ಶ್ರೀವಾಣಿ ♻️



ಪರಮಾಣು ಅತ್ಯಂತ ಸೂಕ್ಷ್ಮ ಬರಿಗಣ್ಣಿನಿಂದ ನೋಡಲು ಬರದು ಅಂತ ಪರಮಾಣುವಿನಲ್ಲಿಯೂ ಒಂದು ಕೇಂದ್ರ ಬಿಂದುವಿದೆ. ಆ ಕೇಂದ್ರ ಬಿಂದುವಿನ ಸುತ್ತ ಎಲೆಕ್ಟ್ರಾನ್ ಪ್ರೋಟಾನ್ ಗಳು ಸುಮ್ಮನೆ ನಿರಂತರ ಸುತ್ತುತ್ತಾ ಇರುತ್ತವೆ. ಪರಮಾಣುವಿನ ಕೇಂದ್ರ ಬಿಂದುವಿಗೆ ಎಲೆಕ್ಟ್ರಾನ್ ಗಳನ್ನು ಎಳೆಯುವ ಒತ್ತಾಸೆ! ಎಲೆಕ್ಟ್ರಾನುಗಳಿಗೆ ಕೇಂದ್ರಬಿಂದುವಿನ ಸುತ್ತ ಸುತ್ತವ ನಿತ್ಯಾಸೆ! ಅಣು ಅಣುವಿನ ಮಧ್ಯದಲ್ಲಿರುವ ಈ ಗುರುತ್ವಾಕರ್ಷಣ ಸಾಮರ್ಥ್ಯ ಅಷ್ಟು ಅಗಾಧವಾದುದು! ನಾವೆಲ್ಲರೂ ಈ ಗುರುತ್ವಾಕರ್ಷಣ ಶಕ್ತಿಯಿಂದಾಗಿಯೇ ನಾವು ನಡೆಯುವುದು, ಕೂಡುವುದು, ಏಳುವುದು ಮೊದಲಾದ ದೈನಂದಿನ ಚಟುವಟಿಕೆಗಳನ್ನು ಮಾಡುತ್ತೇವೆ. ಈ ಆಕರ್ಷಣ ಶಕ್ತಿಯೇ ಇರದಿದ್ದರೆ, ನಮ್ಮ ಬದುಕೇ ಸಾಗುತ್ತಿರಲಿಲ್ಲ. ಇದು ಭೌತಿಕ ಆಕರ್ಷಣ ಶಕ್ತಿ.

ಇದರಂತೆ ನಮ್ಮ ಮನಸ್ಸಿನಲ್ಲಿಯೂ ಒಂದು ಆಕರ್ಷಣ ಶಕ್ತಿ ಇದೆ. ಅದು ಅಭೌತಿಕವಾದುದು. ಅದರಿಂದಾಗಿ ನಮ್ಮಲ್ಲಿ ಅನೇಕ ಆಸೆ-ಆಕಾಂಕ್ಷೆಗಳು, ಭಾವ ಬಯಕೆಗಳು ಉಂಟಾಗುತ್ತವೆ. ಭೌತಿಕ ಆಕರ್ಷಣೆಗಿಂತಲೂ ಇದು ಬಲಿಷ್ಠವಾದುದು. ಅಭೌತಿಕವೂ ಆಂತರಂಗಿಕವೂ ಆದ ಈ ಮನೋಗತ ಆಕರ್ಷಣೆಯ ಏಕಕೋಶ ಜೀವಿ ಅಮೀಬಾದಿಂದ ಹಿಡಿದು ಬಹುಕೋಶಜೀವಿ ಮಾನವನವರೆಗೆ ವಿಸ್ತಾರವಾಗಿ ಹರವಿಕೊಂಡಿದೆ.

ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು

🌱🌿🌺🌱🌿🌺🌱🌿🌺

No comments:

Post a Comment