ಅಂಚೆ ವಿಳಾಸದಲ್ಲಿ ಪಿನ್‌ಕೋಡ್ ಯಾಕೆ ಬಳಸಬೇಕು
ಕಾಗದ ಕೊರಿಯರ್ ಎಲ್ಲ ನಿಮ್ಮ ಕೈಗೆ ಸಿಗಬೇಕಾದ್ರೆ PIN ಕೋಡ್ ಯಾಕೆ ಸರಿಯಾಗಿ ಬರೀಬೇಕು ಅಂತ ಗೊತ್ತಿರಲಿ
ಭಾರತ ತುಂಬ ದೊಡ್ಡ ದೇಶ, PIN code - ಪಿನ್ ಕೋಡ್ (Postal Index Number) - ಇದನ್ನ ಜಾರಿಗೆ ತಂದಿದ್ದು ಆಗಸ್ಟ್ 15, 1972 ರಲ್ಲಿ. ಇದನ್ನ ಬೇರೆ ದೇಶಗಳಲ್ಲಿ ಜ಼ಿಪ್ ಕೋಡ್ ಅಂತಾನೂ ಕರೀತಾರೆ. ದೇಶದಲ್ಲಿರೋ ಯಾವುದೇ ಒಂದು
ಪ್ರದೇಶಾನ ಅಂಚೆ ಇಲಾಖೆಯೋರು ಗುರುತಿಸಕ್ಕೆ ಈ ನಂಬರನ್ನ ಬಳಸ್ತಾರೆ. ಯಾರಿಗಾದ್ರೂ ಕಾಗದ ಬರೆದಾಗ
ಅಡ್ರಸ್ಸಲ್ಲಿ ಪಿನ್ ಕೋಡ್ ಬರೀತಿವಲ್ಲ, ಅದರಿಂದ ಕಾಗದ ಸರಿಯಾದ ಜಾಗಕ್ಕೆ ಬೇಗ ಹೋಗಕ್ಕೆ ಸಹಾಯ ಮಾಡುತ್ತೆ ಹೇಗೆ
ಗೊತ್ತಾ? ಮುಂದೆ ಓದಿ...
*ಪಿನ್ಕೋಡ್ನಲ್ಲಿ 6 ಅಂಕಿ ಇರುತ್ತೆ. *
ಮೊದಲನೇ ಅಂಕಿ ದೇಶದ ಯಾವ ವಲಯ ಅಂತ ಹೇಳುತ್ತೆ
1,2 ಇದ್ರೆ ಉತ್ತರ ಭಾರತ
3,4 ಇದ್ರೆ ಪಶ್ಚಿಮ,
5,6 ಇದ್ರೆ ದಕ್ಷಿಣ,
7,8 ಇದ್ರೆ ಪೂರ್ವ.
ಆರ್ಮಿಗೆ ಸಂಬಂಧಿಸಿದ್ದಾದ್ರೆ PIN ಕೋಡ್ "9" ಅಂತ ಶುರುವಾಗುತ್ತೆ.
ಎರಡನೇ ಅಂಕಿ ಯಾವ ರಾಜ್ಯ/ಉಪವಲಯ ಅಂತ ಹೇಳುತ್ತೆ
560001 - ಇಲ್ಲಿ ಎರಡನೇ ಅಂಕಿ 6 ಸೂಚಿಸುತ್ತಿರೋ ಊರು ಬೆಂಗಳೂರು.
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಒಟ್ಟು 9 ಪಿನ್ ವಲಯಗಳಿವೆ
ಮೂರನೇ ಅಂಕಿ ಯಾವ ಜಿಲ್ಲೆ ಅಂತ ಹೇಳುತ್ತೆ
560001 - ಅನ್ನೋದ್ರಲ್ಲಿ ಮೂರನೆ ಅಂಕಿ 0 ಬೆಂಗಳೂರು ಸಿಟಿ ಸೂಚಿಸತ್ತೆ.
ಕೊನೆ 3 ಅಂಕಿಗಳು ಯಾವ ಪೋಸ್ಟ್ ಆಫೀಸ್ ಅಂತ ಹೇಳುತ್ತೆ
560001 - ಇದ್ರಲ್ಲಿ ಕೊನೆ ಮೂರು ಅಂಕಿ ಬೆಂಗಳೂರಿನ ಜೆನರಲ್ ಪೋಸ್ಟ್ ಆಫೀಸ್ (G.P.O) ಸೂಚಿಸತ್ತೆ.
ಅಲ್ಲಿಂದ ನಿಮ್ಮ ಬೀದಿ, ಮನೆ ಅಡ್ರಸ್ ಹುಡುಕ್ಕೊಂಡು ಪೋಸ್ಟ್ ಮ್ಯಾನ್ ಬರ್ತಾರೆ...
No comments:
Post a Comment