Monday, 1 August 2016

ಅಮೃತ ಧಾರೆ ✨... [by enlightened master jaggi vaasudev]

✨ಅಮೃತ ಧಾರೆ ✨... [by enlightened master jaggi vaasudev]


💫ಯಾರು ಎಷ್ಟೇ ಶ್ರೀಮಂತರಾಗಿರಬಹುದು ,ಆದರೆ ಜಗತ್ತಿನಲ್ಲಿರುವ ಯಾವ ವ್ಯಕ್ತಿಯೂ ಕಳೆದು ಹೋದ ದಿನಗಳನ್ನಗಲೀ ಕ್ಷಣ ಗಳನ್ನಾಗಲೀ ಮರಳಿ ಪಡೆಯುವಷ್ಟು ಶ್ರೀಮಂತನೇನಲ್ಲ ಆದುದರಿಂದ ಪ್ರತಿ ಕ್ಷಣವೂ ಸಮಾಧಾನ , ನೆಮ್ಮದಿ ಮತ್ತು ಆಹ್ಲಾದತೆಯಿಂದ ಕಳೆಯಿರಿ .


(love)ನಿಶ್ಚಲವಾಗಿರುವ ಕೊಳದ ನೀರು ಸ್ತಬ್ಧತೆಯ ಸಂಕೇತವಲ್ಲ . ಅದು ಶುಭ್ರತೆಗೆ ಇನ್ನೊಂದು ಹೆಸರು ಹಾಗೆಯೇ ನಮ್ಮ ಮೌನ ದೌರ್ಬಲ್ಯವಲ್ಲ ಅದೊಂದು ನಿಜವಾದ ಶಕ್ತಿ ಆದ್ದರಿಂದ ಅನಗತ್ಯ ಮಾತು ಬೇಡ , ಮೌನದಂತಹ ದಿವ್ಯ ಶಕ್ತಿಯಿರಲಿ


(love) ಬೇರೆಯವರ ಸಲಹೆ ಮತ್ತು ಮಾರ್ಗದರ್ಶನ ಪಡೆಯುವುದಿ ತಪ್ಪಲ್ಲ . ಆದರೆ ಅಂತಿಮ ನಿರ್ಧಾರ ತೆಗೆದುಕೊಳ್ಳ ಬೇಕಾದವರು  ನೀವೇ . ಯಾವುದೇ ಆದರೂ ಏನೇ ಆದರೂ ನಿಮಗಿಂತಾ ಬೇರೆಯವರಿಗೆ ಚೆನ್ನಾಗಿ ಗೊತ್ತಿರಲು ಸಾಧ್ಯವೇ ಇಲ್ಲ ಆದುದರಿಂದ ನಿಮ್ಮ ಪರವಾಗಿ ಬೇರೆಯವರು ನಿರ್ಧಾರ ತೆಗೆದುಕೊಳ್ಳಲು ಬಿಡಬೇಡಿ .


♻️ ಬಿಸಿಯಾದರೆ ಕಬ್ಬಿಣವೂ ದುರ್ಬಲವಾಗುತ್ತದೆ ಹಾಗೂ ಜನರು ಅದನ್ನು ತಮ್ಮಿಷ್ಟದಂತೆ ಬಗ್ಗಿಸಿಕೊಳ್ಳುತ್ತಾರೆ . ಹಾಗೆಯೇ ತಲೆ ಬಿಸಿ ಮಾಡಿಕೊಂಡರೆ ನಮ್ಮದೂ ಅದೇ ಸ್ಥಿತಿ ಆದ್ದರಿಂದ ಶಾಂತರಾಗಿದ್ದು ನಾವು ನಮ್ಮ ಶಕ್ತಿಯನ್ನು ಉಳಿಸಿಕೊಳ್ಳೋಣ .


♻️ಬೇರೆಯವರು ಯಾರೂ ನಿಮ್ಮನ್ನು ಅರ್ಥ ಮಾಡಿಕೊಳ್ಳದಿದ್ದಾಗ ಬೇಸರ ಮಾಡಿಕೊಳ್ಳಬೇಡಿ . ನಿಮಗೆ ನೀವು ಅರ್ಥವಾಗದಿದ್ದಾಗ ತಲೆ ಕೆಡಿಸಿಕೊಳ್ಳಿ ನಮ್ಮ ಸಾಮರ್ಥ್ಯ ಬಲಹೀನತೆಗಳೇನು  ಎಂಬುದನ್ನು ನೀವು ಮೊದಲು ಅರ್ಥ ಮಾಡಿಕೊಳ್ಳಬೇಕು .

✨🔹✨🔹✨🔹✨🔹✨

No comments:

Post a Comment