*ಪರೀಕ್ಷಾ ರಜೆ ಪ್ರಸೂತಿ ರಜೆ*
Wednesday, 30.08.2017, 3:00 AM ವಿಜಯವಾಣಿ ಸುದ್ದಿಜಾಲ
| ಲ. ರಾಘವೇಂದ್ರ
*ಪರೀಕ್ಷಾ ರಜೆ (Examination Leave):* ನಿಗದಿಪಡಿಸಿದ ಇಲಾಖಾ ಪರೀಕ್ಷೆಯ ಸಂಬಂಧದಲ್ಲಿ ಪರೀಕ್ಷೆಗೆ ಹಾಜರಾಗಲು ಆತನ ಸೇವಾವಧಿಯಲ್ಲಿ 2 ಬಾರಿ ಮಾತ್ರ ಅನುಮತಿ ನೀಡಲಾಗುವುದು ಆದರೆ ರಾಜ್ಯ ಲೆಕ್ಕಪತ್ರ ಇಲಾಖೆಯ ಎಸ್ಎಎಸ್ ಹಾಗೂ ಖಜಾನೆ ಇಲಾಖೆಯ ಟ್ರೆಝುರಿ ಹೆಡ್ ಅಕೌಂಟಂಟ್ ಪರೀಕ್ಷೆಗೆ ಹಾಜರಾಗಲು 3 ಬಾರಿ ಅನುಮತಿ ನೀಡಲಾಗುವುದು. ಈ ಸಂದರ್ಭಗಳಲ್ಲಿ ಪರೀಕ್ಷೆ ದಿನ ಮತ್ತು ಪ್ರಯಾಣದ ದಿನಗಳಿಗೆ ರಜೆ ನೀಡಲಾಗುವುದು.
*ಪ್ರಸೂತಿ ರಜೆ (Maternity Leave)*: ಎರಡು ಅಥವಾ ಹೆಚ್ಚು ಜೀವಂತ ಮಕ್ಕಳನ್ನು ಹೊಂದಿರದ ವಿವಾಹಿತ ಸರ್ಕಾರಿ ನೌಕರಳಿಗೆ ಪ್ರಸೂತಿ ರಜೆಯನ್ನು ಅದರ ಆರಂಭದ ದಿನಾಂಕದಿಂದ 180 ದಿನಗಳು ನೀಡಬಹುದು. ಈ ಅವಧಿಯಲ್ಲಿ ಅವಳು ರಜೆಯ ಮೇಲೆ ಹೋಗುವ ನಿಕಟಪೂರ್ವದಲ್ಲಿ ಆಕೆ ಪಡೆಯುತ್ತಿದ್ದ ವೇತನಕ್ಕೆ ಸಮನಾದ ರಜಾವೇತನವನ್ನು ನೀಡಲಾಗುವುಗು. (ಕ.ಸ.ಸೇ.ನಿ. 135(1).
ಇದನ್ನು ವೊಕೆಷನ್ ರಜೆ ಅಥವಾ ಇನ್ನಾವುದೇ ರೀತಿಯ ರಜೆಯೊಂದಿಗೆ ಸೇರಿಸಬಹುದು. ವೈದ್ಯಕೀಯ ಪ್ರಮಾಣಪತ್ರವನ್ನು ಹಾಜರುಪಡಿಸದೆ ಇದ್ದರೂ 60 ದಿನಗಳಿಗೆ ಮೀರದಂತೆ ರಜೆಯನ್ನು ಮಂಜೂರು ಮಾಡಬಹುದು (ಕ.ಸ.ಸೇ.ವಿ. 135 (4ಎ) ಪ್ರಸೂತಿ ರಜೆಯನ್ನು ಯಾವುದೇ ರಜೆಯ ಲೆಕ್ಕದಿಂದ ಕಳೆಯತಕ್ಕದ್ದಲ್ಲ. (ಕ.ಸ.ಸೇ.ವಿ. 135 (4ಬಿ).
*ಗರ್ಭಸ್ರಾವ ಅಥವಾ ಗರ್ಭಪಾತ ರಜೆ (Medical Termination Leave):* ವೈದ್ಯಕೀಯ ಪರ್ಯವಸಾನ ಅಧಿನಿಯಮ 71ರ ಮೇರೆಗೆ ಪ್ರೇರಣೆಯಿಂದ ಮಾಡಿಸಿಕೊಂಡ ಗರ್ಭಪಾತವು ಸೇರಿದಂತೆ ಗರ್ಭಸ್ರಾವ ಅಥವಾ ಗರ್ಭಪಾತವಾದಾಗ ವೈದ್ಯಕೀಯ ಪ್ರಮಾಣ ಪತ್ರದ ಆಧಾರದಿಂದ 2 ಅಥವಾ ಹೆಚ್ಚು ಜೀವಂತ ಮಕ್ಕಳನ್ನು ಹೊಂದಿರದ ವಿವಾಹಿತ ಸರ್ಕಾರಿ ನೌಕರಳಿಗೆ 6 ವಾರಗಳಿಗೆ ಮೀರದಂತೆ ಮಂಜೂರು ಮಾಡಬಹುದು. (ಕ.ಸ.ಸೇ.ವಿ. 135 (2ಎ, ಬಿ, 3)
*ಮಗುವನ್ನು ದತ್ತು ತೆಗೆದುಕೊಂಡಾಗ ಮಹಿಳಾ ಸರ್ಕಾರಿ ನೌಕರಳಿಗೆ ರಜೆ Leave to female Govt. Servant on adoption of child):* ಎರಡು ಜೀವಂತ ಮಕ್ಕಳನ್ನು ಹೊಂದಿರದ ಮಹಿಳಾ ಸರ್ಕಾರಿ ನೌಕರಳು ಮಗುವೊಂದನ್ನು ದತ್ತು ತೆಗೆದುಕೊಂಡಾಗ ಒಂದು ವರ್ಷದ ಅಥವಾ ದತ್ತಕ ಮಗುವಿಗೆ ಒಂದು ವರ್ಷ ವಯಸ್ಸಾಗುವವರೆಗೆ ಇವುಗಳಲ್ಲಿ ಯಾವುದು ಕಡಿಮೆಯೊ ಆವರೆಗೆ ದೊರೆಯಬಹುದಾದ ಮತ್ತು ಅನುಮತಿಸಬಹುದಾದ ರಜೆಯನ್ನು (60 ದಿನಗಳನ್ನು ಮೀರದಂತೆ, ವೈದ್ಯಕೀಯ ಪ್ರಮಾಣಪತ್ರವನ್ನು ಹಾಜರುಪಡಿಸದೆ ಪರಿವರ್ತಿತ ರಜೆ ಮತ್ತು ಗಳಿಸದ ರಜೆ ಸೇರಿದಂತೆ) ಮಂಜೂರು ಮಾಡಬಹುದು. (ಕ.ಸ.ಸೇ.ವಿ. 135ಎ)
*ಪಿತೃತ್ವ ರಜೆ (Paternity Leave):* ಎರಡು ಅಥವಾ ಹೆಚ್ಚಿಗೆ ಜೀವಂತ ಮಕ್ಕಳಿಲ್ಲದ ಸರ್ಕಾರಿ ನೌಕರನ ಪತ್ನಿಯ ಹೆರಿಗೆ ಸಂದರ್ಭದಲ್ಲಿ ಹೆರಿಗೆ ದಿನಾಂಕದಿಂದ ಪ್ರಾರಂಭವಾಗುವಂತೆ 15 ದಿನಗಳ ಮೆಟರ್ನಿಟಿ ರಜೆಯನ್ನು ಮಂಜೂರು ಮಾಡಬಹುದು. ಇದನ್ನು ಯಾವುದೇ ರಜಾ ಲೆಕ್ಕದಿಂದ ಕಳೆಯತಕ್ಕದ್ದಲ್ಲ ಹಾಗೂ ಸಾಂರ್ದಭಿಕ ರಜೆ ಹೊರತು ಉಳಿದ ಯಾವುದೇ ರಜೆಯೊಂದಿಗೆ ಸಂಯೋಜಿಸಿಕೊಳ್ಳಬಹುದು. ಈ ರಜೆ ಅವಧಿಯಲ್ಲಿ ರಜೆಗೆ ಹೋಗುವ ನಿಕಟ ಪೂರ್ವದಲ್ಲಿದ್ದಂತೆ ವೇತನವು ಪ್ರಾಪ್ತವಾಗುತ್ತದೆ. ಈ ರಜೆಯನ್ನು ನಗದೀಕರಿಸಿಕೊಳ್ಳಲು ಅಥವಾ ಗಳಿಕೆ ರಜೆಯೊಂದಿಗೆ ಸೇರಿಸಿಕೊಳ್ಳಲು ಆಗುವುದಿಲ್ಲ. ಸಾಮಾನ್ಯವಾಗಿ ಈ ರಜೆಯನ್ನು ನಿರಾಕರಿಸುವಂತಿಲ್ಲ (ಕ.ಸ.ಸೇ.ವಿ. 135 (ಬಿ)

No comments:
Post a Comment