💥💥💥💥💥
*ಸೇರಿಕೆ ಕಾಲದ ಅವಧಿ ಲೆಕ್ಕ ಹಾಕುವ ವಿಧಾನ*
|ಲ. ರಾಘವೇಂದ್ರ
ಸರ್ಕಾರಿ ನೌಕರರು ವರ್ಗಾವಣೆಯಾದಾಗ ಸೇರುವ ಕಾಲದ ಅವಧಿಯನ್ನು ಹಳೆಯ ಕೇಂದ್ರದ ಸ್ಥಳದಿಂದ ಹೊಸ ಕೇಂದ್ರ ಸ್ಥಳಕ್ಕೆ ಇರುವ ದೂರದ ಆಧಾರದ ಮೇಲೆ ಲೆಕ್ಕ ಹಾಕಬೇಕು.
★ವಿಮಾನದಲ್ಲಿ ಪ್ರಯಾಣಿಸಿದ ಸಂದರ್ಭದಲ್ಲಿ ಹನ್ನೆರಡು ದಿನಗಳ ಸೇರುವ ಕಾಲದ ಅವಧಿ ದೊರೆಯುವುದು.
★ಸರ್ಕಾರಿ ನೌಕರನು ವಿದೇಶದಲ್ಲಿ ಉನ್ನತ ವ್ಯಾಸಂಗ/ತರಬೇತಿ ಮುಗಿಸಿ ವಾಪಸ್ಸು ಬರುವಾಗ, ಎಷ್ಟೇ ದೂರದ ಸ್ಥಳಕ್ಕೆ ನೇಮಿಸಿದರೂ ಏಳು ದಿನದವರೆಗೆ ಸೇರುವ ಕಾಲ ಬಳಸಿಕೊಳ್ಳಬಹುದು.
★ಈ ಮೇಲೆ ತಿಳಿಸಿದ ಸೇರುವ ಕಾಲದ ಅವಧಿ ಜತೆಗೆ ನಿಯಮ 85ರಲ್ಲಿ ಸೂಚಿಸಿರುವ ಇಲಾಖೆಯ ಕೆಲವು ಸಿಬ್ಬಂದಿ ವರ್ಗದವರು ಆ ನಿಯಮದಲ್ಲಿ ಕೊಟ್ಟಿರುವ ಹೆಚ್ಚಿನ ಸೇರುವ ಕಾಲದ ಅವಧಿ ಯನ್ನು ಉಗ್ರಾಣದ ತಪಾಸಣೆಗಾಗಿ ಅಥವಾ ಕಾಮಗಾರಿ ಕೆಲಸಗಳ ತಪಾಸಣೆಗೆ ಬಳಸಿಕೊಳ್ಳುವ ಅವಕಾಶವುಂಟು.
★ವರ್ಗ ಮಾಡುವ ಪ್ರಕಾರ ಸೇರುವ ಕಾಲದ ಅವಧಿಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಕಡಿತಗೊಳಿಸಬಹುದು.
★ನೌಕರನು ನಿಗದಿತ ಸೇರುವ ಕಾಲದ ಅವಧಿ ಒಳಗೆ ಆತನ ಕೈ ಮೀರಿದ ಕಾರಣಗಳಿಂದ ಹೊಸ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗಲು ತಡೆಯುಂಟಾದಾಗ 15 ದಿನಗಳವರೆಗೆ ಇಲಾಖಾ ಮುಖ್ಯಸ್ಥರು/ಹದಿನೈದು ದಿನಗಳನ್ನು ಮೀರಿದಾಗ ಸರ್ಕಾರವು ಪರಿಸ್ಥಿತಿ ಪರಿಗಣಿಸಿ ಸೇರುವ ಕಾಲದ ಅವಧಿ ವಿಸ್ತರಿಸಬಹುದು.
★ಸರ್ಕಾರಿ ನೌಕರನು ತನಗೆ ದೊರೆಯುವ ಸೇರುವ ಕಾಲದ ಅವಧಿಯನ್ನು ಪೂರ್ಣ ಬಳಸಿಕೊಳ್ಳದೆ, ಮುಂಚಿತವಾಗಿಯೇ ಹೊಸ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾದಲ್ಲಿ ಆ ಉಪಯೋಗಿಸಿಕೊಳ್ಳದ ಅವಧಿಯನ್ನು ಆತನ ಗಳಿಕೆ ರಜೆಯ ಲೆಕ್ಕಕ್ಕೆ ಜಮಾ ಮಾಡಬೇಕು.
*ವರ್ಗಾವಣೆ ಆದಲ್ಲಿ ಸೇರಿಕೆ ಕಾಲದ ಅವಧಿ (ನಿಯಮ 78)*
★ಸರ್ಕಾರಿ ನೌಕರನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾವಣೆಯಾದಾಗ ಸ್ಥಳ ಬದಲಾವಣೆಯಾದರೆ ಹಳೇ ಕೇಂದ್ರಸ್ಥಾನ ಮತ್ತು ಹೊಸ ಕೇಂದ್ರಸ್ಥಾನಕ್ಕೆ ಇರುವ ನಡುವಣ ದೂರ 1000 ಕಿಲೋಮೀಟರ್ ಮತ್ತು ಅದಕ್ಕಿಂತ ಕಡಿಮೆಯಾದರೆ 10 ದಿನ, 1000 ಕಿಲೋಮೀಟರ್ಗಿಂತಲೂ ಹೆಚ್ಚಾದರೆ 12 ದಿನ, 2000 ಕಿಲೋಮೀಟರ್ಗಿಂತಲೂ ಹೆಚ್ಚು 15 ದಿನ(ವಿಮಾನದಲ್ಲಿ ಪ್ರಯಾಣಿಸಿದರೆ 12 ದಿನ) ಸೇರಿಕೆ ಕಾಲದ ರಜೆ ಪಡೆಯಬಹುದು.
★ಪೂರ್ವಾಹ್ನ ಕಚೇರಿಯಿಂದ ಬಿಡುಗಡೆಗೊಂಡಿದ್ದರೆ ಬಿಡುಗಡೆಗೊಂಡ ದಿನದಿಂದ ಸೇರುವಿಕೆ ಕಾಲವನ್ನು ಲೆಕ್ಕ ಹಾಕತಕ್ಕದ್ದು. (12 ಗಂಟೆಯನ್ನು ಪೂರ್ವಾಹ್ನ ಎಂದು ಪರಿಗಣಿಸತಕ್ಕದ್ದು) ಮಧ್ಯಾಹ್ನ ಬಿಡುಗಡೆಗೊಂಡಿದ್ದರೆ ಸೇರುವಿಕೆ ಸಮಯವು ಮರು ದಿನದಿಂದ ಪ್ರಾರಂಭವಾಗುವುದು.
★ಸರ್ಕಾರಿ ನೌಕರನು ಪ್ರವಾಸದಲ್ಲಿದ್ದಾಗ ವರ್ಗಾವಣೆಯಾಗಿ ಕಚೇರಿಯಿಂದ ಬಿಡುಗಡೆಗೊಂಡಿದ್ದರೆ ಅವನು ತನ್ನ ಹಳೆಯ ಕೇಂದ್ರ ಸ್ಥಾನದಿಂದಲೇ ಸೇರುವಿಕೆ ಕಾಲವನ್ನು ಲೆಕ್ಕಹಾಕಬೇಕು.
★40050 ರೂ. ಅಥವಾ ಅದಕ್ಕಿಂತಲೂ ಹೆಚ್ಚು ವೇತನ ಪಡೆಯುವ ನೌಕರನು ವರ್ಗಾವಣೆಯಾದಾಗ ವಿಮಾನಯಾನ ಮಾಡಬಹುದು.
*ವೇತನ ಮತ್ತು ಇತರ ಭತ್ಯೆಗಳ ವಿವರ*
ಕರ್ತವ್ಯದಲ್ಲಿದ್ದ ನೌಕರನು ವರ್ಗವಾದ ಪ್ರಯುಕ್ತ ಬಿಡುಗಡೆ ಹೊಂದಿದಾಗ ಆತನು ತನ್ನ ಹಳೆಯ ಹುದ್ದೆಯಲ್ಲಿ ಬಿಡುಗಡೆಯ ನಿಕಟ ಪೂರ್ವದಲ್ಲಿ ಪಡೆಯುತ್ತಿದ್ದ ವೇತನ ಮತ್ತು ಆ ಸ್ಥಳದಲ್ಲಿ, ಆ ವೇತನಕ್ಕೆ ಅನ್ವಯಿಸುವ ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ ಮತ್ತು ನಗರ ಪರಿಹಾರ ಭತ್ಯೆಗಳಿಗೆ ಅರ್ಹನಾಗುತ್ತಾನೆ.
★ರಜೆ/ಅಮಾನತಿನಲ್ಲಿದ್ದ ಸರ್ಕಾರಿ ನೌಕರನು ಸೇರುವ ಕಾಲದ ಅವಧಿಗೆ ರಜೆಯ/ಅಮಾನತಿನಲ್ಲಿದ್ದ ದಿನಾಂಕದ ನಿಕಟ ಪೂರ್ವದಲ್ಲಿ ಪಡೆಯುತ್ತಿದ್ದ ವೇತನ ಮತ್ತು ಅದಕ್ಕೆ ಅನ್ವಯಿಸುವ ತುಟ್ಟಿಭತ್ಯೆ, ಮನೆ ಬಾಡಿಗೆ ಮತ್ತು ನಗರ ಪರಿಹಾರ ಭತ್ಯೆಗಳಿಗೆ ಅರ್ಹನಾಗುತ್ತಾನೆ.
★ಉನ್ನತ ವ್ಯಾಸಂಗ/ತರಬೇತಿಗೆ ನಿಯೋಜಿಸಿದ ಸರ್ಕಾರಿ ನೌಕರನು, ಆ ನಿಯೋಜನಾ ಅವಧಿಯಲ್ಲಿ ಪಡೆಯುತ್ತಿದ್ದ ವೇತನ ಮತ್ತು ಅದಕ್ಕೆ ಅನ್ವಯಿಸುವ ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ ಮತ್ತು ನಗರ ಪರಿಹಾರ ಭತ್ಯೆಗಳಿಗೆ ಅರ್ಹನಾಗುತ್ತಾನೆ.
★ಸೇರುವ ಕಾಲದ ಅವಧಿಗೆ ವಾಹನ ಭತ್ಯೆ, ನಿಗದಿತ ಪ್ರಯಾಣ ಭತ್ಯೆ ಮತ್ತು ಯೋಜನಾ ಭತ್ಯೆಗಳು ದೊರೆಯುವುದಿಲ್ಲ.
💥✨💥✨💥✨💥✨💥✨💥

No comments:
Post a Comment