Sunday, 24 December 2017

ಸರ್ಕಾರಿ ನೌಕರರ ಹುದ್ದೆಯ ಹಕ್ಕಿನ ವಿಶ್ಲೇಷಣೆ

*ಸರ್ಕಾರಿ ನೌಕರರ ಹುದ್ದೆಯ ಹಕ್ಕಿನ ವಿಶ್ಲೇಷಣೆ*


| ಲ. ರಾಘವೇಂದ್ರ

ಕರ್ನಾಟಕ ಸರ್ಕಾರಿ ಸೇವಾ ನಿಮಯಾವಳಿಯ ನಿಯಮ 17ರಿಂದ 20 ರವರೆಗಿನ ನಿಯಮಗಳು ಸರ್ಕಾರಿ ನೌಕರನ ಹುದ್ದೆಯ ಹಕ್ಕಿನ ಬಗೆಗೆ ವಿವೇಚಿಸುತ್ತದೆ. ಅದರ ವಿಶ್ಲೇಷಣೆ ಇಲ್ಲಿದೆ.

ಒಬ್ಬ ವ್ಯಕ್ತಿಯನ್ನು ಸರ್ಕಾರದ ವ್ಯವಹಾರಗಳ ನಿರ್ವಹಣೆಗಾಗಿ ಒಂದು ಸ್ಥಿರ (ಮೂಲ) ಹುದ್ದೆಗೆ ನೇಮಕಾತಿ ನಿಯಮಗಳು ಪ್ರಕಾರ ನೇಮಿಸಿ ವಿಧಿಸಲಾದ ಷರತ್ತುಗಳನ್ನು ತೃಪ್ತಿಕರವಾಗಿ ಪೂರೈಸಿದ ಮೇರೆಗೆ ಆತನ ನೇಮಕಾತಿಯನ್ನು ಆ ಸ್ಥಿರ ಹುದ್ದೆಯಲ್ಲಿ ಸ್ಥಿರೀಕರಣಗೊಳಿಸಲಾಗುವುದು. ನೇಮಕಾತಿ ಸ್ಥಿರೀಕೃತಗೊಳಿಸಿದ ದಿನದಿಂದ ಆ ಮೂಲ (ಸ್ಥಿರ) ಹುದ್ದೆಯ ಮೇಲೆ ಸರ್ಕಾರಿ ನೌಕರನ ಹಕ್ಕು ಸ್ಥಾಪಿತವಾಗುತ್ತದೆ.(ನಿಯಮ 17-20)

ಆದ್ದರಿಂದ ಒಂದು ಸ್ಥಿರ (ಮೂಲ) ಹುದ್ದೆಗೆ ಒಬ್ಬ ವ್ಯಕ್ತಿಯನ್ನು ಮಾತ್ರ ಕಾಯಂ ಆಗಿ ನೇಮಿಸಬಹುದು. ಹಾಗೆಯೇ ಒಬ್ಬ ವ್ಯಕ್ತಿಯನ್ನು ಕಾಯಂ ಆಗಿ ಒಂದೇ ಸ್ಥಿರ ಹುದ್ದೆಗೆ ನೇಮಕ ಮಾಡಲು ಮಾತ್ರ ಅವಕಾಶವಿರುತ್ತದೆ. ಆದರೆ ಸರ್ಕಾರ ವಿಶೇಷ ಸಂದರ್ಭಗಳಲ್ಲಿ ತಾತ್ಕಾಲಿಕವಾಗಿ ಒಬ್ಬ ಸರ್ಕಾರಿ ನೌಕರನನ್ನು ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ನೇಮಿಸಲೂಬಹುದು. (ನಿಯಮ – 66)

ಒಬ್ಬ ನೌಕರನು ಹುದ್ದೆ ಹಕ್ಕು ಪಡೆದಿರುವ ಹುದ್ದೆಗೆ ಕಾಯಂ ಆಗಿ ಬೇರೊಬ್ಬ ನೌಕರನನ್ನು ನೇಮಿಸಲು ಅವಕಾಶವಿಲ್ಲ. ಸರ್ಕಾರಿ ನೌಕರನು ಬೇರೊಂದು ಕಾಯಂ ಹುದ್ದೆ ಮೇಲೆ ಹಕ್ಕುಗಳಿಸಿದ ದಿನದಿಂದ ತನ್ನ ಹಿಂದಿನ ಸ್ಥಿರ ಹುದ್ದೆ ಮೇಲಿನ ಹಕ್ಕನ್ನು ಕಳೆದುಕೊಳ್ಳುತ್ತಾನೆ. ಅಂತಹ ಹುದ್ದೆಗೆ ಬೇರೊಬ್ಬ ವ್ಯಕ್ತಿಯನ್ನು ಕಾಯಂ ಆಗಿ ನೇಮಿಸಬಹುದು ಅಥವಾ ಪದೋನ್ನತಿ ನೀಡಿ ಸದರಿ ಸ್ಥಿರ ಹುದ್ದೆಯನ್ನು ಕಾಯಂ ಆಗಿ ತುಂಬಬಹುದು. (ನಿಯಮ 18 ಮತ್ತು 19) ಸರ್ಕಾರಿ ನೌಕರನ ಹುದ್ದೆಯ ಹಕ್ಕನ್ನು ತನ್ನಲ್ಲಿ ಉಳಿಸಿಕೊಳ್ಳುವ ಸಂದರ್ಭಗಳು:

*ಸರ್ಕಾರಿ ನೌಕರನು ಹುದ್ದೆಯ ಹಕ್ಕನ್ನು ತಾತ್ಕಾಲಿಕವಾಗಿ ವರ್ಗಾಯಿಸದಿದ್ದಲ್ಲಿ ಅಥವಾ ಅಮಾನತ್ತಿನಲ್ಲಿಡದಿದ್ದಲ್ಲಿ ಕೆಳಗಿನ ಸಂದರ್ಭಗಳಲ್ಲಿ ಸ್ಥಿರ ಹುದ್ದೆಯಲ್ಲಿ ಹಕ್ಕನ್ನು ಉಳಿಸಿಕೊಂಡಿರುತ್ತಾನೆ.*

# ಸ್ಥಿರ ಹುದ್ದೆಯ ಕಾರ್ಯನಿರ್ವಹಣಾ ಅವಧಿ

# ರಜೆ ಅವಧಿ (ಉನ್ನತ ವ್ಯಾಸಂಗದ ರಜೆ ಅವಧಿಯೂ ಸೇರಿ)

# ತಾತ್ಕಾಲಿಕ ಹುದ್ದೆಯ ಕಾರ್ಯನಿರ್ವಹಣಾ ಅವಧಿ

#  ಸ್ಥಾನಾಪನ್ನ ಆಧಾರದ ಮೇಲೆ ಮತ್ತೊಂದು ಹುದ್ದೆಯ ಕಾರ್ಯನಿರ್ವಹಣಾ ಅವಧಿ

# ಅನ್ಯ ಸೇವೆಗೆ ನಿಯೋಜನಾ ಅವಧಿ

# ತರಬೇತಿ ಮತ್ತು ಉನ್ನತ ವ್ಯಾಸಂಗದ ನಿಯೋಜನಾ ಅವಧಿ

# ವೃಂದೇತರ ಹುದ್ದೆಯಲ್ಲಿನ ಸೇವಾ ಅವಧಿ

# ಸೇರಿಕೆ ಕಾಲದ ಬಳಕೆಯ ಅವಧಿ

# ವಿಚಾರಣಾ ಪ್ರಯುಕ್ತ ಅಮಾನತುಗೊಳಿಸಿದ ಅವಧಿ

# ದಂಡನೆಯಾಗಿ ಕೆಳದರ್ಜೆ ಹುದ್ದೆಗೆ ತಾತ್ಕಾಲಿಕ ವರ್ಗಾವಣೆ ಅವಧಿ

# ಒಂದು ಸ್ಥಿರ ಹುದ್ದೆಯಲ್ಲಿ ‘ಹುದ್ದೆಯ ಹಕ್ಕು’ ಹೊಂದಿರುವ ಸರ್ಕಾರಿ ನೌಕರ ಅದೇ ಇಲಾಖೆಯ ಇನ್ನೊಂದು ಹುದ್ದೆಗೆ ಅಥವಾ ಸರ್ಕಾರದ ಬೇರೆ ಇಲಾಖೆಯ ಇನ್ನೊಂದು ಹುದ್ದೆಗೆ ನೇಮಕಗೊಂಡಾಗ ತನ್ನ ಮೊದಲನೇ ಹುದ್ದೆಯಿಂದ ಬಿಡುಗಡೆ ಹೊಂದಿದ ದಿನಾಂಕದಿಂದ ಹೊಸ ಹುದ್ದೆಯಲ್ಲಿ ಸೇವೆಯನ್ನು ಸ್ಥಿರೀಕೃತಗೊಳಿಸುವ ದಿನಾಂಕದವರೆಗಿನ ಅವಧಿ.

# ಸರ್ಕಾರವು ಸರ್ಕಾರಿ ನೌಕರನನ್ನು ಬೇರೆ ರಾಜ್ಯಗಳ ಅಥವಾ ಕೇಂದ್ರ ಸರ್ಕಾರದ ಸೇವೆಗೆ ನಿಯೋಜಿಸಿದ ಅವಧಿ.

ಸ್ಥಿರ ಹುದ್ದೆಯ ಹಕ್ಕು ಹೊಂದಿರುವ ಉದ್ಯೋಗಿಯ ಅರ್ಜಿಯನ್ನು ಇಲಾಖೆ ಮುಖಾಂತರ ಸಲ್ಲಿಸಿ, ರಾಜ್ಯದ ಹೊರಗಿನ ಸೇವೆಗೆ ನೇಮಕಗೊಂಡಾಗ ಆತನ ಸೇವೆಯು ಹೊಸ ಹುದ್ದೆಯಲ್ಲಿ ಸ್ಥಿರೀಕರಣಗೊಳ್ಳುವವರೆಗೆ ಮೊದಲಿನ ಹುದ್ದೆಯಲ್ಲಿಯೇ ಹಕ್ಕು ಅಂತರ್ಗತವಾಗಿರುತ್ತದೆ.

ಹುದ್ದೆಯ ಹಕ್ಕನ್ನು ಅಮಾನತುಗೊಳಿಸಬಹುದಾದ ಸಂದರ್ಭಗಳು:

ಸರ್ಕಾರವು ಕೆಳಗಿನ ಸಂದರ್ಭಗಳಲ್ಲಿ ಸರ್ಕಾರಿ ನೌಕರನ ಹುದ್ದೆಯ ಹಕ್ಕನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಬಹುದು.

# ನಿರ್ದಿಷ್ಟಾವಧಿ ಹುದ್ದೆ (ಟೆನ್ಯೂರ್ ಪೋಸ್ಟ್)ಗೆ ನೇಮಕ

# ಒಬ್ಬ ಸರ್ಕಾರಿ ನೌಕರ ಹಕ್ಕು ಪಡೆದಿರುವ ಹುದ್ದೆಗೆ ತಾತ್ಕಾಲಿಕವಾಗಿ ಬೇರೊಬ್ಬನ ನೇಮಕಾತಿ.

# ಸರ್ಕಾರಿ ನೌಕರನನ್ನು ಹೊರಗಿನ ಸೇವೆಗೆ ಅನ್ಯ ಸೇವೆಗೆ ಅಥವಾ ಬೇರೊಂದು ಹುದ್ದೆಯಲ್ಲಿ ಸ್ಥಾನಪನ್ನ ಆಧಾರದ ಮೇಲೆ ನಿಯೋಜಿಸಿದಾಗ ಆತನು ಕನಿಷ್ಠ ಪಕ್ಷ ಮೂರು ವರ್ಷ ಕಡಿಮೆ ಇಲ್ಲದಂತೆ ಹುದ್ದೆಯ ಹೊರಗುಳಿಯುವ ಪ್ರಸಂಗಗಳಲ್ಲಿ.

ಮೇಲಿನ ಸಂದರ್ಭಗಳಲ್ಲಿ ಮತ್ತೊಬ್ಬ ಸರ್ಕಾರಿ ನೌಕರನನ್ನು ತಾತ್ಕಾಲಿಕವಾಗಿ ಕಾಯಂಆಗಿ ನೇಮಿಸಬಹುದು ಹಾಗೂ ಅಂತಹ ಸರ್ಕಾರಿ ನೌಕರನು ತಾತ್ಕಾಲಿಕವಾಗಿ ಹುದ್ದೆಯ ಹಕ್ಕು ಗಳಿಸುತ್ತಾನೆ.

ಮೇಲಿನ ಮೂರು ಪ್ರಸಂಗಗಳಲ್ಲಿ ಸರ್ಕಾರಿ ನೌಕರ ತನ್ನ ಮೂಲ ಹುದ್ದೆಗೆ ಹಿಂದಿರುಗಿದ ಕೂಡಲೇ ಹುದ್ದೆಯ ಮೇಲಿನ ಅವನ ಮೂಲ ಹಕ್ಕು ಪುನರುಜ್ಜೀವನಗೊಳಿಸಲ್ಪಡುತ್ತದೆ. ಯಾವುದೇ ಕಾರಣಕ್ಕೂ ನಿರ್ದಿಷ್ಟಾವಧಿ ಹುದ್ದೆಯಲ್ಲಿನ ಹಕ್ಕನ್ನು ಅಮಾನತುಗೊಳಿಸಲಾಗುವುದು.

ಸರ್ಕಾರಿ ನೌಕರ ಇಚ್ಛೆಪಡಿಸಿದ್ದಾಗ್ಯೂ ಆತನ ಹುದ್ದೆಯ ಹಕ್ಕನ್ನು ತೆಗೆದುಹಾಕಲಾಗುವುದಿಲ್ಲ.

(ಪ್ರತಿಕ್ರಿಯಿಸಿ: raghavendral3532@gmail.com,

No comments:

Post a Comment