Sunday, 24 December 2017

ಕೇಂದ್ರ ನೌಕರರಿಗೆ 25 ಲಕ್ಷ ರೂ. ಗೃಹ ಸಾಲ

*ಕೇಂದ್ರ ನೌಕರರಿಗೆ 25 ಲಕ್ಷ ರೂ. ಗೃಹ ಸಾಲ*

 Saturday, 11.11.2017, 3:00 AM     ವಿಜಯವಾಣಿ ಸುದ್ದಿಜಾಲ 

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಗೃಹ ಸಾಲ ಭಾಗ್ಯ ಕರುಣಿಸಿರುವ ಮೋದಿ ಸರ್ಕಾರ, ಗೃಹ ನಿರ್ಮಾಣ ಮುಂಗಡ ಹಣದ (ಎಚ್​ಬಿಐ) ಗರಿಷ್ಠ ಮೊತ್ತವನ್ನು ಈಗಿರುವ 7.5 ಲಕ್ಷ ರೂ.ನಿಂದ 25 ಲಕ್ಷ ರೂ.ಗೆ ಏರಿಕೆ ಮಾಡಿದೆ. ಏಳನೇ ವೇತನ ಆಯೋಗದ ಶಿಫಾರಸುಗಳನ್ವಯ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಸೌಲಭ್ಯ ಸುಮಾರು 50 ಲಕ್ಷ ಕೇಂದ್ರ ನೌಕರರಿಗೆ ಅನುಕೂಲ ಮಾಡಿಕೊಡುವ ಜತೆಗೆ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೂ ಹೊಸ ಚೈತನ್ಯ ನೀಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕೇಂದ್ರ ನೌಕರರು ತಮ್ಮ ಮೂಲ ವೇತನದ 34 ತಿಂಗಳ ಒಟ್ಟು ಮೊತ್ತ ಅಥವಾ ಗರಿಷ್ಠ 25 ಲಕ್ಷ ರೂ.ವರೆಗೆ ಎಚ್​ಬಿಎ ಪಡೆಯಬಹುದಾಗಿದೆ.

*ಹೊಸ ನಿಯಮಗಳು ಏನೇನು?*

#ಸಾಲಕ್ಕೆ ಶೇ.8.5 ಬಡ್ಡಿ

#15 ವರ್ಷ 180 ಮಾಸಿಕ ಕಂತುಗಳಲ್ಲಿ ಅಸಲು ಹಣ ಪಾವತಿಸಬೇಕು

# ಉಳಿದ ಐದು ವರ್ಷಗಳಲ್ಲಿ 60 ಇಎಮ್ ಮೂಲ ಬಡ್ಡಿ ಹಣ ಸಂದಾಯ

# ಮನೆ ವಿಸ್ತರಣೆ ಮಿತಿ 1.8 ಲಕ್ಷದಿಂದ 10 ಲಕ್ಷ ರೂ.ಗೆ ಏರಿಕೆ

 ಕೇಂದ್ರ ನೌಕರರಿಗೆ ಹೊಸ ಕೊಡುಗೆ ಮನೆ ಖರೀದಿಯ ಎಚ್​ಬಿಎ ಮಿತಿ 25 ಲಕ್ಷ ರೂ.ಗೆ ಏರಿಕೆ

ನವದೆಹಲಿ: ಗೃಹ ನಿರ್ಮಾಣ ಅಥವಾ ಫ್ಲಾ್ಯಟ್ ಖರೀದಿಸಲು ಚಿಂತನೆ ನಡೆಸುತ್ತಿರುವ ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ನೌಕರರಿಗೆ ನೀಡಲಾಗುತ್ತಿದ್ದ ಗೃಹ ನಿರ್ಮಾಣ ಮುಂಗಡ ಹಣವನ್ನು (ಎಚ್​ಬಿಎ) ಗರಿಷ್ಠ -ಠಿ;7.5 ಲಕ್ಷದಿಂದ -ಠಿ;25 ಲಕ್ಷಕ್ಕೆ ಏರಿಸುವ ಮಹತ್ವದ ನಿರ್ಧಾರ ಪ್ರಕಟಿಸಿದೆ.

ಏಳನೇ ವೇತನ ಆಯೋಗದ ಶಿಫಾರಸು ಅನ್ವಯ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಇದರಿಂದ ದೇಶದ ಸುಮಾರು 50 ಲಕ್ಷ ನೌಕರರಿಗೆ ಅನುಕೂಲವಾಗ ಲಿದ್ದು, ನಿಸ್ತೇಜಗೊಂಡಿರುವ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಹೊಸ ಚೈತನ್ಯ ಬರಲಿದೆ ಎಂದು ಸರ್ಕಾರ ವ್ಯಾಖ್ಯಾನಿಸಿದೆ. ಕೇಂದ್ರ ನೌಕರರು ಮೂಲ ವೇತನದ 34 ತಿಂಗಳ ಒಟ್ಟು ಮೊತ್ತ ಅಥವಾ ಗರಿಷ್ಠ -ಠಿ;25 ಲಕ್ಷ ಎಚ್​ಬಿಎ ಪಡೆಯಬಹುದಾಗಿದೆ.

ಮನೆ ವಿಸ್ತರಣೆ ಮಿತಿ -ರೂ;10 ಲಕ್ಷ ಏರಿಕೆ: ಈಗಾಗಲೇ ಮನೆ ನಿರ್ವಿುಸಿದ್ದು, ಅದನ್ನು ವಿಸ್ತರಣೆ ಮಾಡಲು ಚಿಂತನೆ ನಡೆಸುತ್ತಿ ರುವವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ಹಿಂದೆ ಇದ್ದ ಗರಿಷ್ಠ -ಠಿ;1.8 ಲಕ್ಷ ಮಿತಿಯನ್ನು -ಠಿ;10 ಲಕ್ಷ ಏರಿಸಲಾಗಿದೆ. ಪತಿ ಮತ್ತು ಪತ್ನಿ ಇಬ್ಬರೂ ಕೇಂದ್ರ ಸರ್ಕಾರಿ ನೌಕರರಾಗಿದ್ದರೆ ಇಬ್ಬರೂ ಎಚ್​ಬಿಎ ಪಡೆಯಬಹುದಾಗಿದೆ. ಹಿಂದೆ ಒಬ್ಬರು ಮಾತ್ರ ಎಚ್​ಬಿಎ ಪಡೆಯಲು ಅವಕಾಶವಿತ್ತು.

*ಶೇ.8.5 ಬಡ್ಡಿ*

ಹಿಂದೆ -ಠಿ;7.5 ಲಕ್ಷಕ್ಕೆ ಶೇ.6-ಶೇ.9.5 ರ ಮಿತಿಯಲ್ಲಿ ವಿಧಿಸಲಾಗುತ್ತಿದ್ದ ನಾಲ್ಕು ಸ್ಲ್ಯಾಬ್ ಬಡ್ಡಿಯನ್ನು ತೆಗೆದು ಹಾಕಲಾಗಿದ್ದು, ಹೊಸ ನಿಯಮದ ಪ್ರಕಾರ ಶೇ. 8.5 ಬಡ್ಡಿ ವಿಧಿಸಲಾ ಗುತ್ತದೆ. ಇದನ್ನು ಮೂರು ವರ್ಷಕ್ಕೊಮ್ಮೆ ಪರಾಮರ್ಶೆ ನಡೆಸಲಾಗುತ್ತದೆ. ಸಾಲದ ಹಣವನ್ನು ಮರಳಿ ಪಡೆಯುವ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. 15 ವರ್ಷಗಳ 180 ಮಾಸಿಕ ಕಂತುಗಳಲ್ಲಿ ಪ್ರಿನ್ಸಿಪಲ್ ಹಣ ಪಾವತಿಸಬೇಕಿದ್ದು, ಉಳಿದ ಐದು ವರ್ಷಗಳ 60 ಮಾಸಿಕ ಕಂತುಗಳಲ್ಲಿ ಬಡ್ಡಿಯ ಹಣ ಸಂದಾಯ ಮಾಡಿಕೊಳ್ಳಲಾಗುತ್ತದೆ.

No comments:

Post a Comment