*ಸರ್ಕಾರಿ ಕಾರ್ನರ್*
Saturday, 09.12.2017, 3:02 AM ವಿಜಯವಾಣಿ ಸುದ್ದಿಜಾಲ
ದಿನದ ಪ್ರಶ್ನೆ
ನಾನು 1997ರ ಜನವರಿ 13ರಂದು ಪ್ರಾಥಮಿಕ ಶಾಲಾಶಿಕ್ಷಕನಾಗಿ ಕೆಲಸಕ್ಕೆ ಸೇರಿದೆ. ನನಗೆ ವಾರ್ಷಿಕ ಬಡ್ತಿ ಜನವರಿ ತಿಂಗಳಿಗೆ ಬರುತ್ತಿತ್ತು. ನನಗಿಂತ ಕಡಿಮೆ ಸೇವೆಯಲ್ಲಿರುವ ಶಿಕ್ಷಕರಿಗೆ ಒಂದು ಇನ್ಕ್ರಿಮೆಂಟ್ ವೇತನ ಜಾಸ್ತಿ ಪಡೆಯುತ್ತಿರುವುದರಿಂದ, ನನಗೂ ಸಹ ಸ್ಟೆಪ್ಅಪ್ ಮಾಡಿ, ವಾರ್ಷಿಕ ಬಡ್ತಿಯನ್ನು ಪ್ರತಿವರ್ಷ ಮೇ ತಿಂಗಳಿಗೆ ಹಾಕುತ್ತಿದ್ದಾರೆ. ನಾನು 2011ರ ಫೆಬ್ರವರಿ 21ರಿಂದ ಡಿಸೆಂಬರ್ 6ರವರೆಗೆ ಅಂದರೆ 9 ತಿಂಗಳು 15 ದಿನ ಬಿ.ಇಡಿ. ತರಬೇತಿಯ ಉನ್ನತ ವ್ಯಾಸಂಗಕ್ಕಾಗಿ ನಾನು ವೈಯಕ್ತಿಕವಾಗಿ ಇಲಾಖಾ ಅನುಮತಿ ಪಡೆದು ವೇತನ ರಹಿತ
ರಜೆ ಪಡೆದಿದ್ದು, ವ್ಯಾಸಂಗ ಮುಗಿಸಿದ್ದೇನೆ. ಆದ್ದರಿಂದ ನನಗೆ ವಾರ್ಷಿಕ ಬಡ್ತಿ, 15 ವರ್ಷದ ಬಡ್ತಿ, 20 ವರ್ಷದ ವಿಶೇಷ ವೇತನ ಬಡ್ತಿ ಯಾವ ತಿಂಗಳು, ವರ್ಷಕ್ಕೆ ಬರುತ್ತದೆ?
| ರವಿಕುಮಾರ್ ಸಾಗರ
ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ನಿಯಮ ‘55 ಎ’ರಂತೆ ನಿಮ್ಮ ಬಿ.ಇಡಿ. ವ್ಯಾಸಂಗಕ್ಕೆ ಪಡೆದ 9 ತಿಂಗಳು 15 ದಿವಸಗಳಷ್ಟು ವೇತನರಹಿತ ರಜೆಯನ್ನು ಲೆಕ್ಕಕ್ಕಿಲ್ಲದ ಅವಧಿ (ಕರ್ತವ್ಯವಲ್ಲದ) ಎಂದು ಪರಿಗಣಿತವಾಗಿದ್ದರೆ, ನಿಮಗೆ 2012ರ ಅಕ್ಟೋಬರ್ ತಿಂಗಳಿನಲ್ಲಿ 15 ವರ್ಷದ ಸ್ವಯಂಚಾಲಿತ ವೇತನ ಬಡ್ತಿ ಹಾಗೂ 2017ರ ಅಕ್ಟೋಬರ್ನಲ್ಲಿ 20 ವರ್ಷದ ವಿಶೇಷ ವೇತನ ಬಡ್ತಿ ಮುಂದೂಡಿ ನೀಡಲಾಗುತ್ತದೆ.
★★★★★
ಸುಗ್ರೀವಾಜ್ಞೆ (Ordinance) : --
ಇದೊಂದು ಕಾನೂನು ಆದೇಶ. ರಾಜ್ಯಪಾಲರು, ರಾಷ್ಟ್ರಪತಿಗಳು ಈ ರೀತಿಯ ಆದೇಶ ಹೊರಡಿಸುವ ಅಧಿಕಾರ ಹೊಂದಿರುತ್ತಾರೆ. ಭಾರತದ ಸಂವಿಧಾನದ ಪ್ರಕಾರ ಕಾನೂನು ರಚಿಸುವ ಅಧಿಕಾರ ಇರುವುದು ಶಾಸನ ಸಭೆಗೆ. ಅದು ಬಿಟ್ಟರೆ ತುರ್ತು ಸಂಧರ್ಭಗಳಲ್ಲಿ ರಾಷ್ಟ್ರಪತಿ ಅಥವಾ ರಾಜ್ಯಪಾಲರಿಗೆ ಈ ರೀತಿಯ ಆದೇಶಗಳನ್ನು ನೀಡುವ ವಿಶೇಷ ಅಧಿಕಾರ ನೀಡಲಾಗಿದೆ. ಆದರೆ ಈ ರೀತಿಯ ಸುಗ್ರೀವಾಜ್ಞೆಗಳನ್ನು ತುರ್ತು ಸಂಧರ್ಭದಲ್ಲಿ ಮಾತ್ರ ಹೊರಡಿಸಬಹುದು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಶಾಸನಸಭೆ ನಡೆಯುತ್ತಿದ್ದ ವೇಳೆ ಸುಗ್ರೀವಾಜ್ಞೆ ಹೊರಡಿಸಲು ರಾಷ್ಟ್ರಪತಿ, ರಾಜ್ಯಪಾಲರಿಗೆ ಅಧಿಕಾರವಿಲ್ಲ.

No comments:
Post a Comment