Sunday, 24 December 2017

ಸರ್ಕಾರಿ ಕಾರ್ನರ್‌

 *ಸರ್ಕಾರಿ ಕಾರ್ನರ್‌*

Thursday, 21.12.2017, 3:02 AM     ವಿಜಯವಾಣಿ ಸುದ್ದಿಜಾಲ 

ಇಂದಿನ ಪ್ರಶ್ನೆ

ನಮ್ಮ ಶಾಲೆಯಲ್ಲಿ ನಾಲ್ಕು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು, ಈಗ ಒಬ್ಬರು ಪ್ರಭಾರೆ ಮುಖ್ಯಶಿಕ್ಷಕರಾಗಿ ಚಾರ್ಜ್ ತೆಗೆದುಕೊಳ್ಳಬೇಕಾಗಿದೆ. ನಾನು ಸೇವೆಯಲ್ಲಿ ಹಿರಿಯ ಶಿಕ್ಷಕನಾಗಿದ್ದು, ನನಗೆ ಚಾರ್ಜ್ ತೆಗೆದುಕೊಳ್ಳಿ ಎನ್ನುತ್ತಿದ್ದಾರೆ. ಕಾನೂನು ವ್ಯಾಪ್ತಿಯಲ್ಲಿ ಯಾರು ಚಾರ್ಜ್ ತೆಗೆದುಕೊಳ್ಳಬೇಕು? ತಿಳಿಸಿಕೊಡಿ.

| ಜಗನ್ನಾಥ್ ಮೈಸೂರು

ದಿನಾಂಕ 25.05.2016ರ ಸರ್ಕಾರಿ ಸುತ್ತೋಲೆ ಸಂಖ್ಯೆ ಇಡಿ 124 ಎಲ್​ಬಿಪಿ 2016ರ ಮೇರೆಗೆ ಸರ್ಕಾರಿ/ಖಾಸಗಿ ಪ್ರೌಢಶಾಲೆಗಳಲ್ಲಿ ಖಾಯಂ ಮುಖ್ಯ ಶಿಕ್ಷಕರು ಇಲ್ಲದ ಸಂದರ್ಭದಲ್ಲಿ ಅಥವಾ ರಜೆ ಹೋದ ಸಂದರ್ಭದಲ್ಲಿ ಸಂಪೂರ್ಣವಾಗಿ ಆಡಳಿತಾತ್ಮಕ ಹಿತದೃಷ್ಟಿಯಿಂದ ಶಾಲೆಯ ಪ್ರಭಾರವನ್ನು ಸದರಿ ಶಾಲಾ ಜ್ಯೇಷ್ಠತೆ ಹೊಂದಿರುವ ಶಿಕ್ಷಕರನ್ನು ಮುಖ್ಯೋಪಾಧ್ಯಾಯರ ಹುದ್ದೆಗೆ ಪ್ರಭಾರದಲ್ಲಿರಿಸತಕ್ಕದ್ದು. ಈ ರೀತಿ ಕ್ರಮ ಜರುಗಿಸುವಾಗ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ 32ನೇ ನಿಯಮದ ಪ್ರಕಾರ ಪ್ರಭಾರದಲ್ಲಿಡತಕ್ಕದ್ದಲ್ಲವೆಂದು ಸೂಚಿಸಲಾಗಿದೆ. ಆದುದರಿಂದ ಈ ಸುತ್ತೋಲೆಯಂತೆ ಆ ಶಾಲೆಯ ಹಿರಿಯ ಶಿಕ್ಷಕರು ಪ್ರಭಾರ ತೆಗೆದುಕೊಳ್ಳಬೇಕಾಗುತ್ತದೆ.


★★★★★

🔹🔹🔹🔹🔹🔹🔹🔹🔹🔹🔹
*ಸರ್ಕಾರಿ ಕಾರ್ನರ್‌*

Wednesday, 20.12.2017, 3:00 AM    ವಿಜಯವಾಣಿ ಸುದ್ದಿಜಾಲ

ಇಂದಿನ ಪ್ರಶ್ನೆ

ನಾನು ಪ್ರಾಥಮಿಕ ಶಾಲಾ ಶಿಕ್ಷಕಿ. ಆರು ತಿಂಗಳು ಎರಡು ವಾರದ ಗರ್ಭಿಣಿಯಾಗಿದ್ದಾಗಲೇ ಮಗು ಗರ್ಭಕೋಶದಲ್ಲೇ ನಿಧನವಾಗಿದ್ದರಿಂದ ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದರು. ನಾನು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ರೀತ್ಯ ಹೆರಿಗೆ ರಜೆಗೆ ಅರ್ಜಿ ಸಲ್ಲಿಸಿದ್ದು, ಪೂರ್ಣ ಹೆರಿಗೆ ರಜೆ ಬಳಸಿಕೊಳ್ಳಬಹುದೆ?

| ಎಂ.ಎನ್. ಹರ್ಷರಾಣಿ ಮಡಿಕೇರಿ

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135ರ ಮೇರೆಗೆ ಎರಡು ಜೀವಂತ ಮಗು ಇರುವವರೆಗೂ ಎರಡು ಬಾರಿ 180 ದಿನಗಳ ಹೆರಿಗೆ ರಜೆ ಪಡೆಯಬಹುದು. ಗರ್ಭದಲ್ಲಿ 26 ವಾರಗಳ ಕಾಲ ಇದ್ದ ಮಗುವನ್ನು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದಿರುವುದರಿಂದ ಪ್ರಸೂತಿ ಸೌಲಭ್ಯ ಅಧಿನಿಯಮ ಕಂಡ 3(ಜೆ) ಪ್ರಕಾರ 26 ವಾರಗಳ ನಂತರ ಮಗುವು ಗರ್ಭದಲ್ಲೇ ನಿಧನವಾದರೆ ಅಥವಾ ಜನನವಾಗಿ ನಿಧನವಾದರೆ ಅದನ್ನು ಸಾಮಾನ್ಯ ಜನನವೆಂದು ಪರಿಗಣಿಸಿ ಬಾಣಂತಿಯ ಆರೈಕೆಗಾಗಿ 180 ದಿನಗಳ ಹೆರಿಗೆ ರಜೆಯನ್ನು ಬಳಸಿಕೊಳ್ಳಬಹುದು.

No comments:

Post a Comment