Sunday, 24 December 2017

ಬಡ್ತಿಗೆ ಅರ್ಹವಾಗುವ ಅವಧಿ

*ಬಡ್ತಿಗೆ ಅರ್ಹವಾಗುವ ಅವಧಿ*



| ಲ. ರಾಘವೇಂದ್ರ

1.) ಒಂದು ಹುದ್ದೆಯಲ್ಲಿ ನಿರ್ವಹಿಸಿದ ಎಲ್ಲ ಕರ್ತವ್ಯವೂ ಕಾಲಿಕ ವೇತನ ಶ್ರೇಣಿಯಲ್ಲಿ ವೇತನ ಬಡ್ತಿ ಪಡೆಯಲು ಪರಿಗಣಿತವಾಗುವುದು.

2.) ವೇತನ ಬಡ್ತಿಗೆ ಪರಿಗಣಿತವಾಗುವ ಕರ್ತವ್ಯದ ಅವಧಿಯಲ್ಲಿ ಈ ಕೆಳಕಂಡವು ಒಳಗೊಳ್ಳುತ್ತದೆ. (ನಿಯಮ 53)

3.) ಒಂದು ಹುದ್ದೆಯಲ್ಲಿ ನಿರ್ವಹಿಸಿದ ಎಲ್ಲ ಕರ್ತವ್ಯದ ಅವಧಿ

4.) ವೇತನ ಸಹಿತ ಎಲ್ಲ ರೀತಿಯ ರಜೆಯ ಅವಧಿ

5.) ವೈದ್ಯಕೀಯ ಪ್ರಮಾಣ ಪತ್ರದ ಆಧಾರದ ಮೇಲೆ ಪಡೆದ ಅಸಾಧಾರಣ ರಜೆ (EOL)

6.) ಎಲ್ಲ ರೀತಿಯ ಸೇರಿಕೆ ಕಾಲದ ಅವಧಿ

7.) ತರಬೇತಿ ಅವಧಿಗಳು

8.) ಅನ್ಯ ಸೇವೆಯ ನಿಯೋಜನೆಯಲ್ಲಿ ಕಳೆದ ಅವಧಿ.

9.) ಸ್ಥಳ ನಿಯುಕ್ತಿ ಆದೇಶದ ಕಡ್ಡಾಯ (ನಿ8 (15-ಎಫ್)ನಿರೀಕ್ಷಣೆಯಲ್ಲಿ ಕಳೆದ ಅವಧಿ.

*ವೇತನ ಬಡ್ತಿಗೆ ಕರ್ತವ್ಯವೆಂದು ಪರಿಗಣಿಸಲಾಗದ ಅವಧಿ*

ಎ) ವಾರ್ಷಿಕ ವೇತನ ಬಡ್ತಿಯು ಒಂದು ವರ್ಷ ಸೇವೆ ಪೂರೈಸಿದ ಮರುದಿನ ಪ್ರಾಪ್ತವಾಗುವುದಾದರೂ ಈ ಒಂದು ವರ್ಷದ ಸೇವೆಯಲ್ಲಿ , ಈ ಕೆಳಕಂಡ ಅವಧಿಗಳು ವಾರ್ಷಿಕ ವೇತನ ಬಡ್ತಿಗೆ ಕರ್ತವ್ಯವೆಂದು ಪರಿಗಣಿಸಲಾಗುವುದಿಲ್ಲ.

1.) ವೈದ್ಯಕೀಯ ಉದ್ದೇಶಕ್ಕಾಗಿ ಹೊರತುಪಡಿಸಿ, ಇತರೆ ಉದ್ದೇಶಗಳಿಗಾಗಿ ಪಡೆದ ಅಸಾಧಾರಣ ರಜೆಯ ಅವಧಿ (ನಿಯಮ 53(ಬಿ)

2.) ಕರ್ತವ್ಯವಲ್ಲವೆಂದು ಪರಿಗಣಿಸಿ ಅಮಾನತ್ತು ಅವಧಿ (ನಿಯಮ 55)

3.) ಲೆಕ್ಕಕ್ಕಿಲ್ಲದ ಅವಧಿ (ಈಜಿಛಿಠಟ್ಞ) (ನಿಯಮ 8(14ಎ) ಮತ್ತು ನಿಯಮ 55ಎ)

(ಬಿ) ಸರ್ಕಾರಿ ನೌಕರನು ತನ್ನ ಹತೋಟಿಗೆ ಮೀರಿದ ಕಾರಣಗಳಿಂದ ವೈದ್ಯಕೀಯೇತರ ಅಸಾಧಾರಣ ರಜೆ ಪಡೆಯಬೇಕಾಯಿತೆಂದು, ಸರ್ಕಾರಕ್ಕೆ ಮನದಟ್ಟಾದರೆ ಸರ್ಕಾರದ ಪೂರ್ವಾನುಮತಿಯಿಂದ ರಜೆ ಪಡೆದಿದ್ದರೆ, ಆ ಅವಧಿಯನ್ನು ಸರ್ಕಾರವು ವೇತನ ಬಡ್ತಿಗೆ ಪರಿಗಣಿಸಲು ಆದೇಶ ಮಾಡಬಹುದು. (ನಿಯಮ 53(ಬಿ) (ಜಿಜಿ) ಪರಂತುಕ).

ಸಿ) ಹೆಚ್ಚಿನ ವ್ಯಾಸಂಗಕ್ಕಾಗಿ ಪಡೆದ ಅಸಾಧಾರಣ ರಜೆಯನ್ನು ಪದವಿ, ಸ್ನಾತಕೋತ್ತರ ಪದವಿ ಪಡೆಯಲು 2 ವರ್ಷದ ಅವಧಿ ಮತ್ತು ಪಿಎಚ್​ಡಿ ಪಡೆಯಲು 3 ವರ್ಷಗಳ ಅವಧಿಯನ್ನು ಸರ್ಕಾರವು ವೇತನ ಬಡ್ತಿಯ ಗಣನೆಗೆ ಪರಿಗಣಿಸಿ ಆದೇಶ ಮಾಡಬಹುದು. (ನಿಯಮ 53 (ಬಿ) (ಜಿಜಿ) ಪರಂತುಕ ಮತ್ತು ಟಿಪ್ಪಣಿ -3.

ಡಿ) ವಾರ್ಷಿಕ ವೇತನ ಬಡ್ತಿಗೆ ಪರಿಗಣಿಸುವ ಆ ವರ್ಷದಲ್ಲಿ, ಮೇಲ್ಕಂಡಂತೆ ವೇತನ ಬಡ್ತಿಗೆ ಪರಿಗಣಿಸಲಾಗದ ಅವಧಿಗಳಿದ್ದಲ್ಲಿ, ಆ ಅವಧಿಯನ್ನು, ಯಥಾ ಪ್ರಕಾರ ಬರುವ ವೇತನ ಬಡ್ತಿ ದಿನಾಂಕಕ್ಕೆ ಕೂಡಿಸಿದ ನಂತರ ಬರುವ ಮುಂದಿನ ದಿನಾಂಕಕ್ಕೆ ಮುಂದೂಡಲಾಗುವುದು. (ನಿಯಮ 53(ಎ))

ಆದರೆ ಆ ಮುಂದೂಡಿದ ದಿನವು ತಿಂಗಳ ಮೊದಲ ದಿನಾಂಕವಲ್ಲದೆ, ಇತರ ದಿನವಾದಲ್ಲಿ, ಅದನ್ನು ಆ ತಿಂಗಳ ಮೊದಲ ದಿನಾಂಕವೇ ಮಂಜೂರು ಮಾಡಬೇಕು ಮತ್ತು ಈ ರೀತಿ ಹಿಂದೂಡಿದ ಬಗ್ಗೆ ಸೇವಾಪುಸ್ತಕ ಮತ್ತು ವೇತನ ಬಡ್ತಿ ಮಂಜೂರಿ ಫಾರಂ – 28ರಲ್ಲಿ ಟಿಪ್ಪಣಿ ಇಡಬೇಕು. (ಸರ್ಕಾರಿ ಆದೇಶ ಸಂಖ್ಯೆ : ಎಫ್​ಡಿ 119 ಎಸ್​ಆರ್​ಎಸ್ : 74 : ದಿನಾಂಕ 23-10-1974)

8) ನಿಯಮ 106ಎ ಅನ್ವಯ ಅನಧಿಕೃತ ಗೈರು ಹಾಜರಿ ಅವಧಿ, ನಿಯಮ 162ರನ್ವಯ ರಜೆಯ ಅನಧಿಕೃತ ಮುಂದುವರಿದ ಅವಧಿ, ನಿಯಮ 88ರನ್ವಯ ಹೆಚ್ಚುವರಿಯಾಗಿ ಉಪಯೋಗಿಸಿ ಸೇರುವ ಕಾಲದ ಅವಧಿ – ಈ ಅವಧಿಗಳಿಗೆ ಅರ್ಧವೇತನ ರಜೆ ಖರ್ಚು ಹಾಕಿದ ನಂತರ (ಯಾವುದೇ ವೇತನ ಪ್ರಾಪ್ತಿ ಮಾಡದೇ) – ಈ ಅವಧಿಗಳನ್ನು ವಾರ್ಷಿಕ ವೇತನ ಬಡ್ತಿಗೆ ಸೇವೆಯೆಂದು ಪರಿಗಣಿಸಲಾಗುವುದು. (ನಿಯಮ 106-ಎ, ನಿಯಮ 53(ಬಿ) (ಟಿಪ್ಪಣಿ -4)

No comments:

Post a Comment