Sunday, 24 December 2017

ಇದ್ದದ್ದನ್ನು ಇದ್ದ ಹಾಗೆ ಒಪ್ಪಿಕೊಳ್ಳುವುದು ಮುಖ್ಯ

🌾🌿☘🌾🌿☘🌾🌿☘🌾🌿

*ಇದ್ದದ್ದನ್ನು ಇದ್ದ ಹಾಗೆ ಒಪ್ಪಿಕೊಳ್ಳುವುದು ಮುಖ್ಯ.*

ಅದೊಂದು ಪುನರ್ಮಿಲನ ಸಮಾರಂಭ. ಹಲವು ವರ್ಷಗಳ ಹಿಂದೆ ಒಂದೇ ಕಾಲೇಜಿನ ಒಂದೇ ತರಗತಿಯಲ್ಲಿ ಕಲಿತಿದ್ದವರೆಲ್ಲ ಬಹಳ ವರ್ಷಗಳ ನಂತರ ಸೇರಿದ್ದರು. ಅವರೆಲ್ಲರ ಮೆಚ್ಚಿನ ಪ್ರೊಫೆಸರ್ ಕೂಡ ಅವರನ್ನು ಕೂಡಿಕೊಂಡಿದ್ದರು. ಎಲ್ಲ ಮಾತುಗಳಾದ ಮೇಲೆ ಒಬ್ಬೊಬ್ಬರೇ ತಮ್ಮ ಜೀವನವನ್ನು ದೂಷಿಸತೊಡಗಿದರು. ತಾವು ಮಾಡುತ್ತಿರುವ ಕೆಲಸ, ಅದರಲ್ಲಿನ ಒತ್ತಡಗಳ ಕುರಿತು ಆರೋಪ ಮಾಡತೊಡಗಿದರು. ಇದನ್ನೆಲ್ಲ ಪ್ರೊಫೆಸರ್ ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದರು. ಆಮೇಲೆ ಎದ್ದು ಹೋಗಿ ಒಂದಷ್ಟುಪ್ಲಾಸ್ಕುಗಳಲ್ಲಿ ಕಾಫಿ ತಂದರು. ಒಂದಷ್ಟು ಕಪ್‌ಗಳನ್ನೂ ತಂದಿದ್ದರು. ಎಲ್ಲರಿಗೂ ತಾವೇ ಕಾಫಿ ಹಾಕಿಕೊಂಡು ಕುಡಿಯಲಿಕ್ಕೆ ಹೇಳಿದರು.

ಎಲ್ಲರೂ ಅಲ್ಲಿದ್ದ ಎರಡು ಥರದ ಕಪ್ಪುಗಳಲ್ಲಿ ದುಬಾರಿ ಕಪ್‌ಗಳನ್ನೇ ಆರಿಸಿಕೊಂಡಿದ್ದರು. ಎಲ್ಲರೂ ಕಾಫಿ ಹೀರುತ್ತಿರಬೇಕಾದರೆ ಪ್ರೊಫೆಸರ್ ಮಾತನಾಡಿ, ‘ನೋಡಿ.. ನೀವು ಅಲ್ಲಿಟ್ಟಿದ್ದ ಕಪ್‌ಗಳಲ್ಲಿ ದುಬಾರಿ ಕಪ್‌ಗಳನ್ನೇ ಆರಿಸಿಕೊಂಡಿದ್ದೀರಿ. ಯಾವ ಕಪ್ ಆರಿಸಿಕೊಂಡಿದ್ದರೂ ಅದೇ ರುಚಿ ಇರುತ್ತಿತ್ತು. ಆದರೆ ನೀವು ದುಬಾರಿ ಕಪ್ ಅನ್ನೇ ಆರಿಸಿಕೊಂಡಿರಿ. ಅದೇ ರೀತಿ ಜೀವನದಲ್ಲೂ ಆಗುತ್ತದೆ. ಜೀವನವನ್ನು ಕಾಫಿಯೆಂದು ಭಾವಿಸಿದರೆ ನೀವು ಮಾಡುವ ಉದ್ಯೋಗ, ಹೊಂದುವ ಹಣ, ಅಂತಸ್ತುಗಳೆಲ್ಲ ಕಪ್‌ಗಳಿದ್ದಂತೆ. ಯಾವ ಕಪ್‌ನಲ್ಲಿ ಹಾಕಿದರೂ ಕಾಫಿಯ ರುಚಿ ಬದಲಾಗುವುದಿಲ್ಲ. ಅಂತೆಯೇ ನೀವು ಯಾವುದೇ ಉದ್ಯೋಗದಲ್ಲಿದ್ದರೂ ಜೀವನದ ರೀತಿ ಬದಲಾಗುವುದಿಲ್ಲ. ನೀವು ಅದನ್ನು ಹೇಗೆ ಸ್ವೀಕರಿಸುತ್ತೀರಿ ಎಂಬುದರ ಮೇಲೆ ನಿಮ್ಮ ಸಂತೋಷ ನಿಂತಿದೆ.’ ಎಂದು ಹೇಳಿದರು.

ಜೀವನದಲ್ಲಿ ಯಾರೂ ಪರಿಪೂರ್ಣರಲ್ಲ. ಇದ್ದದ್ದನ್ನು ಇದ್ದ ಹಾಗೆ ಒಪ್ಪಿಕೊಳ್ಳುವುದು ಮುಖ್ಯ. ಇರುವ ಜೀವನದಲ್ಲೇ ಹೊಸತನ ಕಂಡುಕೊಂಡಾಗ ಉತ್ಸಾಹ ಹೆಚ್ಚುತ್ತದೆ. ನಿಮ್ಮ ಸಂತೋಷಕ್ಕಾಗಿ ಇತರರನ್ನು ಅವಲಂಬಿಸುವ ಅಗತ್ಯತೆ ಬರುವುದೇ ಇಲ್ಲ.

Gour Gopal prabhu
💧💧💧💧💧💧💧💧💧💧💧

No comments:

Post a Comment