Sunday, 24 December 2017

ವೇತನ ನಿಗದೀಕರಣದ ನಿಯಮಗಳು

☘🌷

*ವೇತನ ನಿಗದೀಕರಣದ ನಿಯಮಗಳು*

| ಲ. ರಾಘವೇಂದ್ರ

ಒಂದು ಹುದ್ದೆಯ ವೃಂದದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸರ್ಕಾರಿ ನೌಕರಿಗೂ ಏಕರೀತಿಯ ವೇತನ ಲಭ್ಯವಾಗಲು ಅನುಕೂಲವಾಗುವಂತೆ ಪ್ರತಿ ಹುದ್ದೆಗೂ ಒಂದು ನಿಶ್ಚಿತ ವೇತನ ಶ್ರೇಣಿಯನ್ನು ರೂಪಿಸಲಾಗಿದೆ. ಒಂದು ಹುದ್ದೆಗೆ ಮೂಲತಃ ನೇಮಕವಾಗಿರುವ ಸರ್ಕಾರಿ ನೌಕರನು, ಈ ವೇತನ ಶ್ರೇಣಿಯಂತೆ ವೇತನ ಪಡೆಯಲು ಹಕ್ಕುಳ್ಳವನಾಗಿರುತ್ತಾನೆ. ಇದರ ಜತೆ ವಿವಿಧ ಭತ್ಯೆಗಳಾದ – ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ, ವೈದ್ಯಕೀಯ ಭತ್ಯೆ, ವಿಶೇಷ ಭತ್ಯೆ ಮುಂತಾದವು – ಪರಿಹಾರ ಭತ್ಯೆಗಳ ರೂಪದಲ್ಲಿ ಸರ್ಕಾರ ಮಂಜೂರು ಮಾಡಬಹುದಾದರೂ, ವೇತನ ಶ್ರೇಣಿಯನ್ವಯ ಪಡೆಯುವ ವೇತನ ಮಾತ್ರ ನಿಶ್ಚಿತ ಹಕ್ಕಿನದಾಗಿದ್ದು ಇದನ್ನು ಮೂಲವೇತನವೆಂದು ಕರೆಯಲಾಗುತ್ತದೆ. (ನಿಯಮ 8 (44).

ವೇತನ ಶ್ರೇಣಿಯು ಒಂದು ಕನಿಷ್ಠ ಮಟ್ಟದಿಂದ ಪ್ರಾರಂಭವಾಗಿ – ನಿಯತಕಾಲಿಕ (ವಾರ್ಷಿಕ) ವೇತನ ಬಡ್ತಿಗಳ ಮೂಲಕ ಹೆಚ್ಚಾಗುತ್ತಾ ಹೋಗಿ ಒಂದು ಗರಿಷ್ಠ ಹಂತದವರೆಗೆ ತಲುಪುವುದರಿಂದ ಇದಕ್ಕೆ ಕಾಲಿಕ ವೇತನ ಶ್ರೇಣಿ ಎಂದು ಕರೆಯಲಾಗುತ್ತದೆ. (ನಿಯಮ 8(48).

ಸರ್ಕಾರಿ ಹುದ್ದೆಗೆ ನೇಮಕಾತಿ ಆದಾಗ ಮತ್ತು ಆ ನಂತರ ಪದೋನ್ನತಿ (ಬಡ್ತಿ) ಪಡೆದಾಗ ವಿವಿಧ ಸಂದರ್ಭಗಳಲ್ಲಿ ವೇತನ ಶ್ರೇಣಿಯಲ್ಲಿ ವೇತನ ನಿಗದಿಗೊಳಿಸಬೇಕಾಗುವ ಸಂದರ್ಭಗಳು ಇರುತ್ತದೆ.

*ಹೊಸ ನೇಮಕಾತಿಯಾದಾಗ*

ಪ್ರಥಮ ನೇಮಕಾತಿಯೆಂದು ಹುದ್ದೆಗೆ ನಿಗದಿಪಡಿಸಿದ ವೇತನ ಶ್ರೇಣಿ ಕನಿಷ್ಠ ಹಂತದಲ್ಲಿ ನಿಗದಿ ಮಾಡಬೇಕಾಗುತ್ತದೆ. ಆದರೆ ವಿಶೇಷ ಸಂದರ್ಭಗಳಲ್ಲಿ ಅಭ್ಯರ್ಥಿಯ ಅರ್ಹತೆ, ಅನುಭವ ಪರಿಗಣಿಸಿ ನಿಯಮ 57ರಡಿಯಲ್ಲಿ ಮುಂಗಡ ವೇತನ ಬಡ್ತಿ ನೀಡಿ ವೇತನ ನಿಗದಿಪಡಿಸಲು, ಸರ್ಕಾರಕ್ಕೆ ಅಧಿಕಾರವಿರುತ್ತದೆ.

*ವಾರ್ಷಿಕ ವೇತನ ಬಡ್ತಿ*

 ((Increments): ಎ) ಸರ್ಕಾರಿ ನೌಕರನು ತಾನು ಹೊಂದಿದ ಹುದ್ದೆಗೆ ನಿಗದಿಪಡಿಸಿದ ವೇತನ ಶ್ರೇಣಿಯ ಕನಿಷ್ಠ ವೇತನ ಹಂತದಿಂದ ಗರಿಷ್ಠ ವೇತನ ಮಟ್ಟಕ್ಕೆ ಹಂತಹಂತವಾಗಿ ಏರುತ್ತಾ ಹೋಗಲು ಅವಕಾಶವಿದೆ. ಈ ವೇತನ ಏರಿಕೆಯನ್ನು ವಾರ್ಷಿಕ ವೇತನ ಬಡ್ತಿ ಎಂದು ಕರೆಯಲಾಗುತ್ತದೆ. ಉದ್ಯೋಗಿಯು ಒಂದು ವರ್ಷ ತೃಪ್ತಿಕರ ಸೇವೆಯನ್ನು ಪೂರ್ಣಗೊಳಿಸಿದ ಮುಂದಿನ ದಿನಾಂಕದಂದು ವಾರ್ಷಿಕ ವೇತನ ಬಡ್ತಿಯನ್ನು ಪಡೆಯಲು ಅರ್ಹನಿರುತ್ತಾನೆ. ಈ ವಾರ್ಷಿಕ ಬಡ್ತಿಯನ್ನು, ತಡೆಯಲು ಯಾವುದೇ ಆದೇಶವಿದ್ದ ಹೊರತು, ತಂತಾನೆ ಬಿಡುಗಡೆ ಮಾಡತಕ್ಕದ್ದು.

ಸಕ್ಷಮ ಅಧಿಕಾರಿಯು, ಉದ್ಯೋಗಿಯ ನಡತೆ ಸರಿಯಾಗಿಲ್ಲವೆಂದು ಅಥವಾ ಆತನ ಸೇವೆಯು ತೃಪ್ತಿಕರವಲ್ಲವೆಂದು ಭಾವಿಸಿ, ಸಿ ಸಿ ಎ ನಿಯಮಾವಳಿಗಳ ಪ್ರಕಾರ ಶಿಸ್ತು ಕ್ರಮ ಜರುಗಿಸಿ ದಂಡನೆಯ ರೂಪದಲ್ಲಿ ಆತನು ಮುಂದೆ ಗಳಿಸಬಹುದಾದ ವಾರ್ಷಿಕ ವೇತನ ಬಡ್ತಿಗಳನ್ನು ತಡೆ ಹಿಡಿಯಬಹುದು. (ನಿಯಮ 51(ಜಿ))

ಬಿ) ಆಯಾ ತಿಂಗಳ ಮೊದಲನೆಯ ದಿನಾಂಕವಲ್ಲದೆ, ಇತರ ದಿನದಂದು, ವೇತನ ಬಡ್ತಿ ಪ್ರಾಪ್ತವಾಗುವುದಾದರೆ, ಅದನ್ನು ಆಯಾ ತಿಂಗಳ ಮೊದಲ ದಿನಾಂಕವೇ ಪ್ರಾಪ್ತವಾಗುವುದೆಂದು ಭಾವಿಸಿ ಬಿಡುಗಡೆಗೊಳಿಸಬೇಕು.

ಮೊದಲ ವರ್ಷದಲ್ಲಿ ಮಾತ್ರವೇ ಇಂತಹ ಸಂದರ್ಭ ಬರುವುದಿದ್ದು , ಈ ರೀತಿ ಹಿಂದೂಡಿದ ಬಗ್ಗೆ ಸೇವಾ ಪುಸ್ತಕ ಮತ್ತು ವೇತನ ಬಡ್ತಿ ಫಾರಂ-28ರಲ್ಲಿ ನಮೂದಿಸಬೇಕು. (ಸರ್ಕಾರಿ ಆದೇಶ ಎಫ್​ಡಿ : 119 : ಎಸ್ ಆರ್ ಎಸ್ : 74 ದಿನಾಂಕ : 23-1-1974)

ಸಿ) ಕರ್ನಾಟಕ ಆರ್ಥಿಕ ಸಂಹಿತೆ ಅನುಚ್ಛೇದ 12ರಲ್ಲಿ ನಿಗದಿಪಡಿಸಿರುವ ಫಾರಂ – 28ರಲ್ಲಿ ವೇತನ ಬಡ್ತಿಯ ವಿವರಗಳನ್ನು ನಮೂದಿಸಿ, ಮಂಜೂರು ಮಾಡಿ ವೇತನ ಬಿಲ್ಲಿನೊಂದಿಗೆ ಲಗತ್ತಿಸಬೇಕು.

ಡಿ) ವೇತನ ಬಡ್ತಿಯ ದಿನಾಂಕದಂದು ಸರ್ಕಾರಿ ನೌಕರನು ಯಾವುದೇ ರೀತಿ ರಜೆಯ ಮೇಲಿದ್ದರೆ (ಸಾಂರ್ದಭಿಕ ರಜೆ ಹೊರತುಪಡಿಸಿ), ಅರ್ಹ ದಿನಾಂಕದಂದು ವೇತನ ಬಡ್ತಿ ಮಂಜೂರು ಮಾಡಬಹುದು. ಆದರೆ ನಿಯಮ 118ರ ಮೇರೆಗೆ ರಜೆಯ ಮೇಲೆ ತೆರಳುವ ಹಿಂದಿನ ದಿನದಂದು ಪಡೆ ಯುತ್ತಿದ್ದ ವೇತನಕ್ಕೆ ಸಮನಾದ ರಜಾ ಸಂಬಳವನ್ನು ಮಾತ್ರ ರಜೆಯ ಅವಧಿಯಲ್ಲಿ ಪಡೆಯಲು ಹಕ್ಕುಳ್ಳವ ನಾಗಿದ್ದರಿಂದ, ಆತನು ರಜೆಯಿಂದ ಕರ್ತವ್ಯಕ್ಕೆ ಹಿಂತಿರುಗಿದ ದಿನಾಂಕದಿಂದ ಮಾತ್ರ ಆರ್ಥಿಕ ಸೌಲಭ್ಯ ಕೊಡತಕ್ಕದ್ದು. (ಸರ್ಕಾರಿ ಆದೇಶ ಸಂಖ್ಯೆ : ಎಫ್​ಡಿ : 119 : ಎನ್​ಆರ್​ಎನ್ : 74 : ದಿನಾಂಕ : 23-10-1974)

No comments:

Post a Comment