Saturday, 30 July 2016

ಕಲ ಕಲ ಕಲರವ

ಹಕ್ಕಿಗಳ ನಿನಾದ

ಮನದಲ್ಲಿ ಮೂಡಿದೆ

ಏನೋ ಹೊಸ ಉನ್ಮಾದ


ಪ್ರಪಂಚವನ್ನೇ ಜಯಿಸಿ ಬಿಡದಬಹುದೆನ್ನುವ

ಅದಮ್ಯ ಉತ್ಸಾಹ

ಪ್ರೀತಿಯ ಚಿಲುಮೆ ಚಿಮ್ಮಲಿ ಸದಾ

ಬಾಳೊಂದು  ಪ್ರೀತಿಯ ಆಗರವಾಗಿರಲಿ..


ಮಮತೆಯ ಸೆಲೆಯಾಗಿರಲಿ..

ಸಹಿಸದ  ಜನಗಳು ಸಾವಿರವಿರಲಿ

ಜಯಿಸುವ  ಹಾದಿಯ ಮೊದಲು ಹಿಡಿ

ಹಿಂದೆ ಅಣಕಿಸಿ ಮು೦ದೆ ಹೊಗಳುವವರ

ಮಾತಿಗೆ ಕಿವಿಗೊಡದೆ ಮು೦ದೆ ನಡೆ...


By
Mcs Shetty

No comments:

Post a Comment