Saturday, 24 February 2018

ಕಷ್ಟ ಬಂದಾಗ ಗೊಣಗದೆ, ಕುಗ್ಗದೇ ಇರಲು ಸಾಧ್ಯವೇ?

ಕಷ್ಟ ಬಂದಾಗ ಗೊಣಗದೆ, ಕುಗ್ಗದೇ ಇರಲು ಸಾಧ್ಯವೇ?

ಒಮ್ಮೆ ಒಬ್ಬ ಮಹಿಳೆ ಮಾಲ್‌ನಲ್ಲಿ ಸಾಮಾನು ಖರೀದಿಸುತ್ತಿದ್ದಳು. ಅವಳ ಕೈಲಿ ಒಂದಷ್ಟು ಬೇಳೆಕಾಳುಗಳು, ಟೊಮೇಟೊ ಸಾಸ್, ತರಕಾರಿ, ಹಣ್ಣುಗಳು, ಶ್ಯಾಂಪೂ ಥರದ ದಿನ ಬಳಕೆಯ ವಸ್ತುಗಳಿದ್ದವು. ಆಕೆ ಅವನ್ನೆಲ್ಲ ತೆಗೆದುಕೊಂಡು ಬಿಲ್ ಮಾಡಿಸಲು ಕ್ಯೂನಲ್ಲಿ ಬಂದು ನಿಂತಳು. ಅವಳ ಹಿಂದೆ, ಒಬ್ಬ ಪುರುಷ ಬಂದು ನಿಂತ. ಅವಳ ಸರದಿ ಬಂದಾಗ ಬಿಲ್ ಮಾಡಿಸಿ ಪರ್ಸ್‌ನಿಂದ ಹಣ ತೆಗೆದು ಕೊಡಲು ಹೋದರೆ ಅವಳಿಗೆ ರು. ಕಡಿಮೆ ಇತ್ತು. ಆಗ ಅವಳು ಕ್ಯಾಶಿಯರ್ ಬಳಿ ಮನವಿ ಮಾಡಿಕೊಂಡಳು. ನಾನು ಇಲ್ಲಿಗೆ ಹಲವಾರು ವರ್ಷಗಳಿಂದ ಬರುತ್ತಿದ್ದೇನೆ. ದಯವಿಟ್ಟು ಇವತ್ತು ಸಾಮಾನು ಕೊಡಿ. ನಾನು ಇನ್ನರ್ಧ ಗಂಟೆ ಬಿಟ್ಟು ಮನೆಯಿಂದ ಕಾಸು ತಂದುಕೊಡುವೆ ಎಂದಳು. ಆದರೆ ಆ ಕ್ಯಾಶಿಯರ್ ಹೊಸಬನಾಗಿದ್ದ. ಆಕೆಯ ಮನವಿಯನ್ನು ನಿರಾಕರಿಸಿ ಬಿಟ್ಟ. ಅರ್ಧ ಗಂಟೆ ಬಿಟ್ಟೇ ಬನ್ನಿ ಎಂದ. ಅವಳ ಮುಖದಲ್ಲಿ ಸಹಾಯಕತೆ ಕಾಣಿಸಿತು.

ಅಷ್ಟರಲ್ಲಿ ಅವಳ ಹಿಂದಿದ್ದ ಪುರುಷ ನೆಲದಿಂದ ಏನೋ ಮಾಡಿ, ಇದು ನಿಮ್ಮ ಹಿಂದೆ ಬಿದ್ದಿತ್ತು. ನೋಡಿ ನಿಮ್ಮ ಪರ್ಸಿನಿಂದಲೇ ಬಿದ್ದಿದ್ದಾಗಿರಬಹುದು ಎಂದು ಎತ್ತಿಕೊಟ್ಟಂತೆ ಮಾಡಿದ. ಆಕೆಯ ಮುಖದಲ್ಲಿ ಹರ್ಷ ಮೂಡಿತು. ಸಾಮಾನು ಪಡೆದು ಆತನಿಗೆ ಧನ್ಯವಾದ ಹೇಳಿ ಹೊರಟಳು. ಹೋಗುವಾಗ ಅವಳಿಗೊಂದು ಪ್ರಶ್ನೆ ಮೂಡಿತು. ಆದರೆ ಸರಿಯಾಗಿ ನನಗೆ ಬೇಕಾದ 80 ರುಪಾಯಿ ಕೆಳಗೆ ಬಿದ್ದಿದ್ದು ಹೇಗೆ? ಆತ ಕೊಟ್ಟಿದ್ದು ಅವನದೇ ದುಡ್ಡನ್ನು. ಸಹಾಯ ಮಾಡುವ ಮನಸ್ಸಿರುವವರಿಗೆ ಉಪಾಯಗಳು ತಾನಾಗೇ ಹೊಳೆಯುತ್ತವೆ. ಆತ ಯೋಚಿಸಿದ, ಹಾಗೆಯೇ ಕೊಡಲು ಇವರು ತೆಗೆದುಕೊಳ್ಳುವುದಿಲ್ಲ. ತಕ್ಷಣ ಆಕೆಗೆ ಹಣದ ಅಗತ್ಯವಿದೆ. ನಾನು ಕೊಡಬಹುದು. ಆದರೆ ಹೇಗೆ? ಆಗ ಅವನು ತನ್ನದೇ ಹಣ ಕೆಳಗೆ ಬೀಳಿಸಿ, ಅದು ಆಕೆಯದು ಎಂಬಂತೆ ಎತ್ತಿಕೊಟ್ಟ. ನಮ್ಮದೇ ಒಳ್ಳೆಯತನ, ಹಾರೈಕೆ, ಉತ್ತಮ ಕೆಲಸಗಳು ಜೀವನದಲ್ಲಿ ಹೀಗೆ ವರದಾನವಾಗಿ ಪ್ರಯೋಜನಕ್ಕೆ ಬರುತ್ತದೆ. ಹೀಗಾಗಿ ಸಾಧ್ಯವಾದಾಗೆಲ್ಲ ಇತರರಿಗೆ ಒಳ್ಳೆಯದು ಮಾಡಿ. ಅದು ನಿಮ್ಮ ಬಳಿ ಯಾವ ರೂಪದಲ್ಲಾದರೂ,ಯಾವತ್ತಾದರೂ ವಾಪಸ್ ಬಂದೇ ಬರುತ್ತದೆ.

☘🍁☘🍁☘🍁☘🍁☘🍁☘

No comments:

Post a Comment