Saturday, 24 February 2018

ಮನಸ್ಸಿನ ಆಂತರ್ಯದ ಆಕಾಶ

ಮನಸ್ಸಿನ ಆಂತರ್ಯದ ಆಕಾಶ

ಶ್ರೀ ಶ್ರೀ ರವಿಶಂಕರ್‌

ಲೀಟರ್‌ಗಳನ್ನು ಹೇಗೆ ಲೆಕ್ಕ ಮಾಡುತ್ತೀರಿ? ಪಾತ್ರೆಯ ಸಾಮರ್ಥ್ಯ‌ ಒಂದು ಲೀಟರ್‌, ಎರಡು ಲೀಟರ್‌ ಅಥವಾ ಅರ್ಧ ಲೀಟರ್‌ ಎಂದು ಲೆಕ್ಕ ಮಾಡುತ್ತೇವೆ. ಕಾರಣ ಎಂದರೆ ಎಲ್ಲಾ ಕಾರಣಗಳ ಕಾರಣ. ಅದು ಯಾವುದರ ಪ್ರಭಾವವೂ ಅಲ್ಲ. ಪ್ರಭಾವ ಎಂದರೆ ಅದರ ಹಿಂದೆ ಏನೋ ಒಂದು ಕಾರಣ ಇರುತ್ತದೆ. ಕಾರಣ ಎಂದರೆ ಅಂತಿಮವಾದ ಕಾರಣ. ಅದರ ಹಿಂದೆ ಬೇರೆ ಯಾವ ಕಾರಣವೂ ಇರುವುದಿಲ್ಲ.

ವಿವಿಧ ಜಾತಕಗಳನ್ನು ನೋಡಿ ಜನರು ವಿವಿಧ ರೀತಿಯ ಚಿತ್ತಾಕಾಶವನ್ನು ತಿಳಿಯುತ್ತಾರೆ. ಕುಂಡಲಿಯಿಂದ ಕೆಲವು ಗುಣಗಳನ್ನು ಕಂಡುಹಿಡಿಯಬಹುದು. ಇದು ಚಿತ್ತಾಕಾಶವನ್ನು ಸೂಚಿಸುತ್ತದೆ. ಒಂದು ವ್ಯಕ್ತಿಯಲ್ಲಿರುವ ಆಲೋಚನೆಗಳ, ಭಾವನೆಗಳ ರೀತಿ. ಕಾಲವೂ ಮುಖ್ಯ. ಆದರೆ ಜಾತಕದ ಭವಿಷ್ಯ ಧೂಮಕೇತುವಿನ ಭವಿಷ್ಯದಂತೆ. ಅವು ಸದಾ ಸರಿಯಾಗಿರುತ್ತವೆಂದಲ್ಲ. ಧೂಮಕೇತುವಿನ ಭವಿಷ್ಯ ಸದಾಕಾಲ ಕೆಲಸ ಮಾಡುವುದಿಲ್ಲ. ಗುಡುಗು ಮಿಂಚು ಇರುತ್ತದೆನ್ನುತ್ತಾರೆ, ಆದರೆ ಸೂರ್ಯನು ಹೊಳೆಯುತ್ತಾನೆ! ಆದ್ದರಿಂದ ಜ್ಯೋತಿಷ್ಯವು ಒಂದು ಸಾಧ್ಯತೆಯಷ್ಟೆ.

ಭಾವನೆಗಳೂ ಚಂದ್ರಮನ ಮೇಲೆ ಅವಲಂಬಿತವಾಗಿವೆ. ಚಂದ್ರಮನು ಒಂದು ಸ್ಥಳದಲ್ಲಿ ಎರಡು ಕಾಲ ದಿವಸಗಳಿಗಿಂತಲೂ ಹೆಚ್ಚಾಗಿ ಇರುವುದಿಲ್ಲ. ಆ ಸ್ಥಳದಿಂದ ಚಂದ್ರಮನು ಜರುಗಿದಾಗ ನಿಮ್ಮ ಭಾವನೆಯೂ ಬದಲಿಸುತ್ತದೆ. ಚಂದ್ರಮ ಮತ್ತು ಶನಿಯು ಒಂದಾದಾಗ ಜನರು ಖಿನ್ನರಾಗುತ್ತಾರೆ. ಈ ಭಾವನೆಗಳು ಬರುತ್ತವೆ, ಹೋಗುತ್ತವೆ. ಯಾವುದೂ ಶಾಶ್ವತವಲ್ಲ. ಯಾವ ಗ್ರಹವೂ ಸ್ಥಿರವಾಗಿ ಒಂದೇ ಕಡೆ ನಿಲ್ಲುವುದಿಲ್ಲ. ಎಲ್ಲವೂ ಚಲಿಸುತ್ತವೆ. ಆದರೆ ಈ ಯಾವುದೇ ಭಾವನೆಗಳೊಡನೆ ನೀವು ಗುರುತಿಸಿಕೊಂಡಾಗ ನೀವು ಸಿಲುಕಿಕೊಳ್ಳುತ್ತೀರಿ. ಆಗ ನೀವು ಮುಂದಕ್ಕೆ ಹೋಗುವುದಿಲ್ಲ. ಆಗ ಅದು ನಿಮ್ಮ ದೇಹದೊಳಗೆ ಹೊಕ್ಕುತ್ತದೆ, ಖಾಯಿಲೆ ಬೀಳುತ್ತೀರಿ. ಎಲ್ಲವೂ ಅದ್ಭುತವಲ್ಲವೆ? ಆದ್ದರಿಂದ ದಾರಿಯೇನು? ಇಲ್ಲಿಂದ ಮುಂದಕ್ಕೆ ಹೇಗೆ ಹೋಗುವುದು?

ಮೋಡವಿರುವ ದಿನದಂದು ವಿಮಾನವು ಹೇಗೆ ಹಾರುತ್ತದೆ? ಮೋಡಗಳ ಮೇಲಕ್ಕೆ ಹಾರುತ್ತದೆ ಮತ್ತು ಸೂರ್ಯನು ಹೊಳೆಯುತ್ತಾನೆ. ಆಧ್ಯಾತ್ಮಿಕ ಅಭ್ಯಾಸಗಳು ಇರುವುದೇ ಅದಕ್ಕಾಗಿ. ಆಧ್ಯಾತ್ಮಿಕ ಅಭ್ಯಾಸಗಳು ನಮ್ಮನ್ನು ಚಿತ್ತಾಕಾಶದಿಂದ ಚಿದಾಕಾಶಕ್ಕೆ ಕೊಂಡೊಯ್ಯುತ್ತದೆ. ಎಲ್ಲಾ ಭಾವನೆಗಳನ್ನೂ ದಾಟಿ ಹೊರಬರುತ್ತೇವೆ.

ಬಹಳ ಹಿಂದೆಯೆ ಋುಷಿಗಳು ಒಂಭತ್ತು ಗ್ರಹಗಳು ಹನ್ನೆರಡು ರಾಶಿಗಳಲ್ಲಿ ಚಲಿಸಿ 108 ಬದಲಾವಣೆಗಳು ಆಗುತ್ತವೆ. ಇದರಿಂದ ಒಳ್ಳೆಯ ಪ್ರಭಾವಗಳು ಹೆಚ್ಚುತ್ತದೆ ಮತ್ತು ಕೆಟ್ಟ ಪ್ರಭಾವವು ಕುಗ್ಗುತ್ತಾ ಹೋಗುತ್ತದೆ. ಓಂ ನಮಃ ಶಿವಾಯ 108 ಸಲ ಉಚ್ಚರಿಸಿದರೆ ನಿಮ್ಮ ಆತ್ಮವನ್ನು ಉತ್ಥಾಪಿಸಿ, ಅದರಿಂದ ಹೊರಗೆ ಕರೆದೊಯ್ದು ಚಿದಾಕಾಶದೊಡನೆ ಸಂಬಂಧ ಕಲ್ಪಿಸುತ್ತದೆ.

ತಮಿಳುನಾಡಿನಲ್ಲಿ ''ಚಿತ್ತಂಬಲಂ ಶಿವ'' ಎನ್ನುತ್ತಾರೆ. ಇದು ಚಿದಾಕಾಶವನ್ನು ಸೂಚಿಸುತ್ತದೆ. ''ನಾನು ಶಿವ ಎಂದೊಡನೆಯೇ ಚಿದಾಕಾಶದೊಳಗೆ ಹೊಕ್ಕುತ್ತೇನೆ, ಚೈತನ್ಯದ ಆಕಾಶದೊಳಗೆ ಹೊಕ್ಕುತ್ತೇನೆ'' ಎಂಬುದು ಇದರ ಅರ್ಥ. ಶಿವ ಚಿತ್ತಂಬಲಂ ಎಂದರೆ ಗುರು ತತ್ತ್ವ ಅಥವಾ ಶಿವತತ್ತ್ವ ಅಥವಾ ನಮ್ಮದೇ ಆತ್ಮ. ಎಲ್ಲವೂ ಅದೇ ಮತ್ತು ಅದೇ ಧ್ಯಾನ. ಉನ್ನತ ಸ್ಥಿತಿಗೇರಿದಾಗ ಆಗುವ ಅನುಭವವಿದು. ಎಲ್ಲಾ ಆಲೋಚನೆಗಳೂ ಹೊರಟು ಹೋಗುತ್ತವೆ. ಭಾವನೆಗಳು ನೆಲೆನಿಲ್ಲುತ್ತವೆ ಅತಿ ಪ್ರಶಾಂತವಾದ, ಅತಿ ಮಂಗಳವಾದ, ಅತ್ಯಂತ ಆಂತರ್ಯದ ಆಕಾಶವನ್ನು ಅನುಭವಿಸುತ್ತೇವೆ. ಸುದರ್ಶನ ಕ್ರಿಯೆಯಿಂದ ಆಗುವುದೇ ಇದು. ನಿಮ್ಮನ್ನು ಸುತ್ತಲೂ ಕೊಂಡೊಯ್ದು ಕೊಂಡೊಯ್ದು ನಂತರ ನಿಮ್ಮನ್ನು ಈ ವಲಯದಿಂದ ಹೊರಕ್ಕೆ ಕೊಂಡೊಯ್ಯುತ್ತದೆ. ಆಗ ಚಿದಾಕಾಶದೊಳಗೆ ಹೊಕ್ಕುತ್ತೀರಿ. ಶಿವ ತಿರು ಚಿತ್ತಂಬಲಂ!

🔸🔸🔸🔸🔸🔸🔸🔸🔸🔸🔸

No comments:

Post a Comment