Wednesday, 19 October 2016

Life Is Very Strange !!!

💫Life Is Very Strange !!!💫

We Wish To Wear High
Brands, But
We Feel Most Comfortable
In Simple Dresses…

We Wish To Sit In A Five
Star Hotel With Elite
People, But
We Enjoy The Roadside
Vendor Food With Friends …

We Wish To Own Big Cars
& Go On Long Drives, Yet
We Talk Our Heart Out Only
While Walking Down A Long
Road …

We Have 64GB iPods Filled
With Songs, But
Sometimes A Song On Radio
Brings A Smile That Cannot Be
Compared …

Life Is Simple Indeed
But
We Make It Complex By
Running After What Never Gives
Us Happiness …

We Shouldn’t Chase Luxuries &
Glamour Blindly,
Lets Focus On The Peace Of
Heart n Soul Also … ♥ ♥

🌿🌱🌿🌱🌿🌱🌿🌱🌿

ಮೂರು ರೀತಿಯ ಸ್ಮೃತಿ

🌱ಮೂರು ರೀತಿಯ ಸ್ಮೃತಿ🌱



ನಾವು ಎರಡು ರೀತಿಯ ಜಗತ್ತುಗಳಲ್ಲಿ ಜೀವಿಸುತ್ತೇವೆ. ಒಂದು ಸ್ಮೃತಿಯ ಜಗತ್ತು, ಮತ್ತೊಂದು ನಿಜವಾದ ಜಗತ್ತು. ಸ್ಮೃತಿಯಲ್ಲಿ ಮೂರು ರೀತಿಯ ಸ್ಮೃತಿಗಳಿವೆ. 1) ಒಂದನೆಯ ರೀತಿಯ ಸ್ಮೃತಿಯಲ್ಲಿ ನಿಮಗೆ ನೆನಪಿದೆ ಆದರೆ ಅದರ ಬಗ್ಗೆ ನೀವೇನನ್ನೂ ಮಾಡಲಾರಿರಿ. ನಿಮ್ಮ ಬಾಲ್ಯದ ನೆನಪು ನಿಮಗಿದೆ, ಆದರೆ ಅದನ್ನು ಮತ್ತೆ ಮರಳಿ ಪಡೆಯಲಾರಿರಿ. 2) ಮತ್ತೊಂದು ರೀತಿಯ ಸ್ಮೃತಿ ಎಂದರೆ, ನೀವು ನೆನಪಿಸಿಕೊಳ್ಳುತ್ತೀರಿ ಮತ್ತು ಅದನ್ನು ಪಡೆದುಕೊಳ್ಳಲು ಬಹಳ ಪ್ರಯತ್ನ ಪಡುತ್ತೀರಿ. ಒಂದು ವೇಳೆ ನಿಮ್ಮ ಬೀಗದ ಕೈಯನ್ನು ಟೊರೊಂಟೊವಿನಲ್ಲೇ ಮರೆತು ನೀವು ಕೆನಡಾಗೆ ಬಂದು ಬಿಟ್ಟಿದ್ದರೆ, ಮತ್ತೆ ಏಳು ಗಂಟೆಗಳ ಕಾಲ ಗಾಡಿಯನ್ನು ಓಡಿಸಿಕೊಂಡು ಬಂದು ನಿಮ್ಮ ಬೀಗದ ಕೈಯನ್ನು ತೆಗೆದುಕೊಳ್ಳಬೇಕು. ಅದನ್ನು ತಕ್ಷ ಣವೇ ಪಡೆಯಲು ಸಾಧ್ಯವಿಲ್ಲ. ನೆನಪಿಸಿಕೊಂಡರೂ, ಬಹಳ ಪ್ರಯತ್ನ ಪಟ್ಟ ನಂತರ ಮಾತ್ರ ಅದನ್ನು ಪಡೆದುಕೊಳ್ಳುತ್ತೀರಿ. 3) ಮೂರನೆಯ ರೀತಿಯ ಸ್ಮೃತಿ ಎಂದರೆ ನೀವು ನೆನಪಿಸಿಕೊಳ್ಳುತ್ತೀರಿ ಮತ್ತು ಅದನ್ನು ತಕ್ಷ ಣವೇ ಪಡೆದುಕೊಳ್ಳುತ್ತೀರಿ. ನಿಮ್ಮ ಕನ್ನಡಕಗಳಿಗಾಗಿ ಹುಡುಕುತ್ತಿರುತ್ತೀರಿ ಮತ್ತು ಯಾರೋ ಬಂದು, ''ನಿನ್ನ ಕನ್ನಡಕ ನಿನ್ನ ತಲೆಯ ಮೇಲೇ ಇದೆಯಲ್ಲ!?'' ಎಂದಾಗ ನೀವು, ''ಓ ಹೌದು, ಅದು ಅಲ್ಲೇ ಇದೆ'' ಎಂದು ನೆನಪಿಸಿಕೊಳ್ಳುತ್ತೀರಿ. ಇಲ್ಲಿ ನೆನಪಿಸಿಕೊಂಡ ತಕ್ಷ ಣವೇ ಸಿಕ್ಕು ಬಿಡುತ್ತದೆ. ಅದನ್ನು ಪಡೆದುಕೊಳ್ಳಲು ಪ್ರಾಯಾಸ ಪಡಬೇಕಿಲ್ಲ. ಆಧ್ಯಾತ್ಮಿಕ ಪಯಣವು ಮೂರನೆಯ ರೀತಿಯ ಸ್ಮೃತಿ. ಅದನ್ನು ತಿಳಿದುಕೊಳ್ಳುವುದು, ಪಡೆದುಕೊಳ್ಳುವುದು, ಎಲ್ಲವೂ ಒಮ್ಮೆಲೇ ಆಗಿಬಿಡುತ್ತದೆ. ನೀವು ಮಾಡಬೇಕಾದದ್ದೆಂದರೆ ಆ ಸಂಬಂಧವನ್ನು ಅನುಭವಿಸುವುದು. ಆ ಸಂಬಂಧವನ್ನು ಅನುಭವಿಸುವುದು ಎಂದರೆ ನಿಜ ಜಗತ್ತಿಗೆ ನಮ್ಮನ್ನು ಸೇರಿಸುವ ಆ ಸ್ಮೃತಿ. ನಾವು ಜೀವಿಸುವ ಕಾಲ್ಪನಿಕ ಸ್ಮೃತಿಗಳ ಜಗತ್ತಿನಿಂದ ನಿಜವಾದ ಜಗತ್ತಿಗೆ ತೆರಳುವುದು. ಆ ಸಂಬಂಧವನ್ನು ಹೇಗೆ ಅನುಭವಿಸುವುದು? ಇಲ್ಲೇ ಗುರು ತತ್ವದ ಪಾತ್ರ ಬರುವುದು, ಏಕೆಂದರೆ ಆ ಸಂಬಂಧ ಉಂಟಾಗುವುದು ಗುರುವಿನಿಂದ ಮಾತ್ರ. ನೀವು ಬೆಂಗಳೂರಿನಲ್ಲಿದ್ದು, ಒಮ್ಮೆ ಅದನ್ನು ತಿಳಿದುಕೊಂಡರೆ ಸಾಕು. ಪದೇ ಪದೇ ಪ್ರಾಯಾಸಪಟ್ಟು ಬೆಂಗಳೂರಿನಲ್ಲಿ ಇದ್ದೀರೆಂದು ನೆನಪಿಸಿಕೊಳ್ಳುತ್ತಲಿರಬೇಕಿಲ್ಲ. ಅದೇ ರೀತಿಯಾಗಿ, ಸಂಬಂಧ ಅನುಭವಿಸಿದ ತಕ್ಷ ಣವೇ ಕಾಲ್ಪನಿಕವಾದ ಸ್ಮೃತಿಯ ಮೋಡಗಳಿಂದ ವಾಸ್ತವ ಜಗತ್ತಿಗೆ ಬಂದು ಬಿಡುತ್ತೀರಿ. ಅದೇ, ''ಓ'' ಎಂಬ ಆಶ್ಚರ್ಯಕರವಾದ, ವಿಸ್ಮಯಕಾರಕವಾದ ಸ್ಥಿತಿ. ಜ್ಞಾನದೊಡನೆ, ಗುರುವಿನೊಡನೆ ಸಂಬಂಧವನ್ನು ಬೆಳೆಸಿಕೊಂಡಾಗ ಚಿಂತಿಸುವ ಅವಶ್ಯಕತೆಯೇ ಇಲ್ಲ. ಚಿಂತೆ, ಆತಂಕ ಅಥವಾ ನಕಾರಾತ್ಮಕವಾದ ಭಾವನೆಗಳಿರಲು ಹೇಗೆ ಸಾಧ್ಯ? ಸಾಧ್ಯವೇ ಇಲ್ಲ! ಎಲ್ಲವೂ ಮಾಯವಾಗಿಬಿಡುತ್ತವೆ. ವಿಶಿಷ್ಟವಾಗಿ ಗುರು ಹುಣ್ಣೆಮೆಯಂದು ಈ ಸಂಬಂಧವನ್ನು ಅನುಭವಿಸಿ, ''ನಾನು ಸಂಬಂಧಪಟ್ಟಿದೆ, ದೈವದೊಡನೆ ಒಂದಾಗಿದ್ದೇನೆ'' ಎಂದು ಸಂತಸದಿಂದಿರುವುದು. ಇದರಿಂದ ತಕ್ಷ ಣವೇ ಸಂಭ್ರಮ, ಸಂತೋಷ ಉಂಟಾಗುತ್ತದೆ. ಸಂಭ್ರಮಿಸಲು ತಯಾರಿ ಮಾಡಿಕೊಳ್ಳಬೇಕಿಲ್ಲ. ಓರ್ವ ಕಡುಬಡವನು ತಾನೇ ರಾಜಕುಮಾರ ಎಂದು ಅರಿತುಕೊಂಡಂತೆ. ತಾನು ರಾಜಕುಮಾರನೆಂದು ಮರೆತು ಕಷ್ಟದಲ್ಲಿ ಸಿಲುಕಿ ಬಳಲುತ್ತಿದ್ದವನಿಗೆ ಯಾರೋ ಬಂದು, ''ಹೇ, ನೀನೇ ರಾಜಕುಮಾರ'' ಎಂದು ಎಬ್ಬಿಸಿದಂತೆ. ಒಂದೇ ವಾಕ್ಯದಿಂದ ಅವನಿಗೆ ನೆನಪು ಬಂದು ರಾಜ್ಯವನ್ನು ತಕ್ಷ ಣವೇ ಮರಳಿ ಪಡೆಯುತ್ತಾನೆ. ಅಲ್ಲಿ ಪ್ರಯತ್ನವೇ ಇಲ್ಲ. ನಿಮ್ಮ ಮನಸ್ಸಿಗೆ ಸದಾ ಶ್ರಮಪಡುವುದೇ ಒಂದು ಅಭ್ಯಾಸವಾಗಿಬಿಟ್ಟಿದೆ. ಮನಸ್ಸನ್ನು ಶಾಂತಗೊಳಿಸಿ, ಪ್ರಯತ್ನ ಮಾಡಲು ಏನೂ ಇಲ್ಲ ಎಂಬ ಅರಿವನ್ನು ಮನಸ್ಸಿಗೆ ಮೂಡಿಸಬೇಕು. ''ನಾನು ಸಂಬಂಧಪಟ್ಟಿದೇನೆ'' ಎಂದು ನೇರವಾದ ಸಂಬಂಧವನ್ನು ಗುರುತಿಸಬೇಕಷ್ಟೆ. ಎಲ್ಲವೂ ಆದಂತೆಯೆ!

* ಶ್ರೀ ಶ್ರೀ ರವಿಶಂಕರ್‌
🍁☘🍁☘🍁☘🍁☘🍁

ಶ್ರೀವಾಣಿ. ☘ಸೇವೆಯೆಂದರೆ ಹೀಗಿರಬೇಕು.....☘

ಶ್ರೀವಾಣಿ


☘ಸೇವೆಯೆಂದರೆ ಹೀಗಿರಬೇಕು.....☘


ಒಂದು ಊರು, ಆ ಊರಿನಿಂದ ಎರಡು ಮೈಲು ಅಂತರದಲ್ಲಿ ಒಂದು ಎತ್ತರದ ಬೆಟ್ಟವಿತ್ತು. ಆ ಬೆಟ್ಟದ ಮೇಲೆ ಒಂದು ವಿಶಾಲ ಸ್ಥಳವಿತ್ತು. ಆ ಊರಿನ ರಾಜನಿಗೆ ಆಲ್ಲಿ ಒಂದು ಸುಂದರ ಗುಡಿಯನ್ನು ಕಟ್ಟುವ ಆಶೆ ಇತ್ತು. ಒಂದು ದಿನ ಗುಡಿಯ ಕಟ್ಟಡ ಪ್ರಾರಂಭವಾಯಿತು.''ಪ್ರಜೆಗಳೆಲ್ಲ ಗುಡಿಗೆ ಯಥಾಶಕ್ತಿ ಉಚಿತ ಸೇವೆ ಮಾಡಬೇಕು,'' ಎಂದು ರಾಜನು ಡಂಗುರ ಸಾರಿಸಿದ. ಜನರು ರಾಜನ ಆಜ್ಞೆಯಂತೆ ಅತ್ಯಂತ ಉತ್ಸಾಹದಿಂದ ಗುಡಿಯ ಸೇವೆಗೆ ಮುಂದಾದರು. ತಮ್ಮ ತಮ್ಮ ಎತ್ತು, ಗಾಡಿಗಳನ್ನು ಹೂಡಿ; ಬೆಟ್ಟದ ಮೇಲೆ ಕಲ್ಲು, ಕಟ್ಟಿಗೆ, ನೀರು, ಮಣ್ಣು ಎಲ್ಲವನ್ನೂ ಸಾಗಿಸಿದರು. ಶ್ರೇಷ್ಠ ಶಿಲ್ಪಿಗಳು ಗುಡಿಯನ್ನು ಕಟ್ಟಲು ತೊಡಗಿದರು. ಆ ಊರಿನ ಬಡ ಮುದುಕಿ ಏನಾದರೂ ದೇವರ ಸೇವೆ ಮಾಡಬೇಕೆಂದು ಬೆಟ್ಟದ ಮೇಲೆ ಹೋದಳು. ಅಪಾರ ಜನರು ಇರುವುದು ಹೋಗುವುದು ಎತ್ತು, ದನಕರುಗಳ ಓಡಾಟ ನಡೆದಿತ್ತು. ಇದರಿಂದಾಗಿ ಗುಡಿಯ ಸುತ್ತಮುತ್ತ ನಿತ್ಯವೂ ವಿಪರೀತ ಕಸ ಬೀಳುತಿತ್ತು. ಮುದುಕಿಗೆ ಒಂದು ಸೇವೆ ಸಿಕ್ಕಂತಾಯಿತು. ಜನರು ಸಂಜೆ ಬೆಟ್ಟದಿಂದ ಕೆಳಗಿಳಿದ ಕೂಡಲೇ ಮುದುಕಿ ಬೇಗ ಎದ್ದು ಮೇಲೆ ಏರುತ್ತಿದ್ದಳು. ಗುಡಿಯ ಆವರಣದಲ್ಲಿ ಒಂದು ಕಡ್ಡಿಯೂ ಉಳಿಯದಂತೆ ಕಸಗುಡಿಸಿ ಬೇಗ ಎದ್ದು ನಸುಕಿನಲ್ಲಿ ಕೆಳಗೆ ಇಳಿದು ಬಿಡುತ್ತಿದ್ದಳು. ಯಾರು ಕಸಗುಡಿಸುತ್ತಾರೆಂದು ಯಾರಿಗೂ ಗೊತ್ತಾಗಲಿಲ್ಲ. ಎರಡು ವರುಷಗಳ ನಿರಂತರ ಪರಿಶ್ರಮದ ನಂತರ ಒಂದು ದಿನ ಗುಡಿಯ ಉದ್ಘಾಟನೆ ವೈಭವದಿಂದ ನೆರವೇರಿತು. ರಾಜನಿಗೆ, ಪ್ರಜೆಗಳಿಗೆ ಎಲ್ಲಿಲ್ಲದ ಹರ್ಷ ! ರಾಜನು ತನ್ನ ಹೆಸರಿನಲ್ಲಿ ಒಂದು ಶಿಲಾಶಾಸನ ಬರೆಯಿಸಿ ಗುಡಿ ಎದುರು ನಿಲ್ಲಿಸಿದ. ಶಿಲ್ಪಿಗಳಿಗೆ ಕೆಲಸಗಾರರಿಗೆಲ್ಲ ಕಾಣಿಕೆ ಕೊಟ್ಟು ಕಳುಹಿಸಿದ. ಅದೇ ದಿನ ರಾತ್ರಿ ರಾಜನ ಕನಸಿನಲ್ಲಿ ದೇವರು ಪ್ರತ್ಯಕ್ಷನಾದ. ರಾಜನು ಸಂತಸದಿಂದ ದೇವರಿಗೆ ವಂದಿಸಿ ಕೇಳಿದ -''ನನ್ನ ಸೇವೆ ನಿನಗೆ ಸಂತೋಷ ನೀಡಿತೇ?,'' ದೇವರು -''ನೀನೆಲ್ಲಿ ಸೇವೆ ಮಾಡಿರುವೆ?,'' ರಾಜ -''ಈ ವಿಶಾಲ ಗುಡಿ ಕಟ್ಟಿಸಿದ್ದು ಸೇವೆಯಲ್ಲವೇ ?,'' ದೇವರು - ''ಅಲ್ಲ, ಅದು ನೀನು ನಿನ್ನ ಶಿಲಾಶಾಸನಕ್ಕಾಗಿ ಮಾಡಿದ ಕೆಲಸವಷ್ಟೇ!,'' ರಾಜ -''ಎರಡು ವರುಷ ನಿರಂತರ ನನ್ನ ಪ್ರಜೆಗಳು, ಶಿಲ್ಪಿಗಳು ಮಾಡಿದ್ದು ಸೇವೆಯಲ್ಲವೇ ?,'' ದೇವರು-''ಪ್ರಜೆಗಳು ನಿನ್ನ ಆಜ್ಞೆಗಾಗಿ ಮಾಡಿದ್ದಾರೆ. ಶಿಲ್ಪಿಗಳೆಲ್ಲ ಸನ್ಮಾನ ಸತ್ಕಾರಗಳಿಗಾಗಿ, ಕಪ್ಪು ಕಾಣಿಕೆಗಾಗಿ, ಮಾಡಿದ್ದಾರೆ ! ಇದಾವುದೂ ಸೇವೆಯಲ್ಲ. ನಿನ್ನ ರಾಜ್ಯದಲ್ಲಿಯೇ ಒಂದೇ ಒಂದು ವ್ಯಕ್ತಿ ಮಾತ್ರ ನನ್ನ ಸೇವೆಯನ್ನು ಮನಮುಟ್ಟಿ ಮಾಡಿದೆ!,'' ರಾಜ-''ಆ ವ್ಯಕ್ತಿ ಯಾರು ?,''ದೇವರು-''ಇನ್ನಾರೂ ಅಲ್ಲ;ಒಂದು ಹಣ್ಣು ಹಣ್ಣಾದ ಮುದುಕಿ -ಈ ಗುಡಿಯ ಆವರಣವನ್ನೆಲ್ಲ ಇವತ್ತಿನವರೆಗೆ ಒಂದು ದಿನವೂ ಬಿಡದೇ ಕಸಗೂಡಿಸಿ ಹಸನ ಮಾಡಿ ಮರೆತು ಎಲೆಯ ಮರೆಯ ಕಾಯಿಯಂತೆ ಉಳಿದು ಬಿಟ್ಟಿದ್ದಾಳೆ. ಆ ಮುದುಕಿಯ ನಿಷ್ಕಾಮ ಸೇವೆಗಾಗಿ ನಾನು ಈ ಗುಡಿಯಲ್ಲಿ ನಿರಂತರ ಉಳಿಯುತ್ತೇನೆ!'' ರಾಜನು ಕನಸು ಒಡೆದು ಎಚ್ಚರವಾದಾಗ ಹಸನಾದ ಹೃದಯದ ಆ ಮುದುಕಿಯ ಗುಡಿಸಲು ಎದುರು ತಲೆಬಾಗಿ ನಿಂತಿದ್ದ. ''ದೇವದರ್ಶನದ ಮತ್ತೊಂದು ಸುಗಮೋಪಾಯವೆಂದರೆ ಈ ರೀತಿ 'ಮಾಡಿಮರೆ' ಯಾಗುವುದು !!

* ಶ್ರೀ ಸಿದ್ದೇಶ್ವರ ಸ್ವಾಮೀಜಿ
🍃🌱🍃🌱🍃🌱🍃🌱🍃

ಸೇವೆಯ ತೃಪ್ತಿ

ಪ್ರಶ್ನೆ: ಸೇವೆಯು ತೃಪ್ತಿಯನ್ನು ತರುತ್ತದೆ, ಪ್ರತಿಯೊಬ್ಬರೂ ಅದನ್ನು ಯಾಕೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದಿಲ್ಲ? ಅದು ಯಾಕೆ ಎಲ್ಲರಿಗೂ ಸಹಜವಾಗಿ ಬರುವುದಿಲ್ಲ?



ಶ್ರೀ ಶ್ರೀ ರವಿ ಶಂಕರ್: ಸೇವೆಯನ್ನು ಮಾಡದಿರುವವನೊಬ್ಬನು ಒತ್ತಡದಲ್ಲಿರುವವನಾಗಿರುವುದು, ಅಸುರಕ್ಷಿತ, ಸ್ವಾರ್ಥಪರ ಅಥವಾ ಜ್ಞಾನವಿಲ್ಲದಿರುವವನಾಗಿರುವುದು ಸ್ವಾಭಾವಿಕವೇ. ಸ್ವಲ್ಪವಾದರೂ ಜ್ಞಾನವಿದ್ದರೆ, ಸೇವೆಯು ಸಹಜವಾಗಿರುತ್ತದೆ. ನೀವು ಸುಸಂಸ್ಕೃತರೂ ನಾಗರಿಕರೂ ಆಗಿದ್ದರೆ, ಆಗ ಸೇವೆಯು ಸಹಜವಾಗಿರುತ್ತದೆ. ಸೇವೆ ಮಾಡುವುದನ್ನು ಯಾರೂ ನಿಮಗೆ ಕಲಿಸಬೇಕಾಗಿಲ್ಲ. ಯಾವುದಾದರೂ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಯಾರೂ ನಿಮಗೆ ಹೇಳಬೇಕಾಗಿಲ್ಲ.
ಚೆನ್ನೈ ಪ್ರವಾಹದ ಸಂದರ್ಭದಲ್ಲಿ ಏನಾಯಿತು ನೋಡಿ? "ನೀವೆಲ್ಲಾ ಬಂದು ಸಹಾಯ ಮಾಡಿ" ಎಂದು ಯಾರೂ ಜನರನ್ನು ಆಹ್ವಾನಿಸಲಿಲ್ಲ. ಚೆನ್ನೈಯ ಇಡೀ ಯುವಕರು, ಯುವಕರು ಮಾತ್ರವಲ್ಲ, ಚೆನ್ನೈಯ ಜನರೆಲ್ಲಾ ಒಟ್ಟು ಸೇರಿ ಪರಸ್ಪರ ಸಹಾಯ ಮಾಡಿದರು. ಈ ದುರಂತಗಳು ಯಾವುದೋ ವಿಚಿತ್ರವಾದ ರೀತಿಯಲ್ಲಿ ಜನರನ್ನು ಒಂದುಗೂಡಿಸುತ್ತವೆ, ಶತ್ರುಗಳನ್ನು ಒಂದುಗೂಡಿಸುತ್ತವೆ. ತಮ್ಮ ಸಹಜವಾದ ಮಾನವೀಯ ಮೌಲ್ಯಗಳನ್ನು ಅರಿತುಕೊಳ್ಳಲು ದುರಂತಗಳು ಜನರನ್ನು ವಿವಶರಾಗಿಸುತ್ತವೆ. ನೀವು ಬುದ್ಧಿವಂತರಾಗಿದ್ದರೆ, ನಿಮ್ಮ ಅತ್ಯಂತ ಒಳ್ಳೆಯ ಗುಣವನ್ನು ಹೊರತರುವುದಕ್ಕಾಗಿ ನೀವೊಂದು ದುರಂತಕ್ಕಾಗಿ ಕಾಯುವುದಿಲ್ಲ.  

SHIVA

             ⭐️Shiva⭐️


Everyone experiences life according to his or her individual sensitivities. Some people take great pleasure in food, others in the body, music, art, or some other expression of life. But in their very nature, external pleasures cannot be sustained. The only sustainable pleasure is that of the basis of all life. Unfortunately, very few people experience this fundamental dimension that we refer to as “Shiva.” The dimension of Shiva is the canvas on which everything in existence is painted. The play of life is nice as long as we know its limitations. If we invest our entire lives into the play, we will regret it one day. Some people are fortunate that their illusions are shattered early on in life. Others will only realize on their deathbed that they have wasted their lives.
I want you to look at it before it is too late. Imagine you had only a few minutes left to live. If you look at what you have done from birth until now, has it all been worthwhile? If you are wise enough to look at it now, you can craft your life in a beautiful way. You will know not only the colors of life but that which is the basis of life. Otherwise, ninety-five percent of humanity has some inane thoughts in their minds, all the time. Education teaches you how to conduct yourself in front of other people. Spiritual process is about how to conduct yourself internally. This is about turning inward and knowing the deeper roots of life. The mind is useful if you know when to turn it on, and when to turn it off. If it is out of control – on all the time – it is madness. This is the state the majority of people are in.



The spiritual process is about obliterating all that you ever thought you are – even your gender. It is about being here just as a piece of life. Only human beings, who are supposed to be the pinnacle of evolution, have made such a mess out of themselves. They have been given a mind that they do not know how to handle. All that is happening is the endless psychological drama of their thoughts and emotions. The quality of your life is determined by how beautiful you are within yourself. No one can see this; no one needs to acknowledge this; no one needs to pay attention to this. But this is the most worthwhile thing.
In this context, chanting “Shiva Shambho” can do wonders to you. Do not expect Shiva to come. He will not interfere with your life. This is not a religious process. This is about using sound as a tool to clear the mental nonsense. If you chant “Shiva Shambho” effectively, new energy, boundless Grace, and intelligence will be available to you.


LOVE & GRACE by

SADGURU VASUDEV
🌱☘🌱☘🌱☘🌱☘🌱

ಭಾವನೆಗಳನ್ನು ಮುದಗೊಳಿಸುವ ಹಬ್ಬ☘

☘ಭಾವನೆಗಳನ್ನು ಮುದಗೊಳಿಸುವ ಹಬ್ಬ☘


ಮರದೊಳಗಿನ ಹಣ್ಣನ್ನು ಕಿತ್ತು ತಿಂದರೆ ಪ್ರಕೃತಿ. ಅದೇ ಹಣ್ಣನ್ನು ತಂದು ಮನೆಯೊಳಗೆ ಜ್ಯೂಸ್‌ ಮಾಡಿ ಕುಡಿದರೆ ಸಂಸ್ಕೃತಿ. ಅದೇ ಹಣ್ಣನ್ನು ಕದ್ದು ತಿಂದರೆ ವಿಕೃತಿ. ಮನುಷ್ಯನ ಎಲ್ಲ ಕೃತಿಗಳಿಗೆ ನಾವು ಒಂದೊಂದು ಗುಣಗಳನ್ನು ತೊಡಿಸಿದ್ದೇವೆ. ಅವು ರಜಸ್ಸು, ಸಾತ್ವಿಕ, ತಾಮಸ ಗುಣಗಳು. ಹೀಗಾಗಿ ಸಂಸ್ಕೃತಿ ಒಂದು ಆಚರಣೆಯನ್ನು ಜನಪರವಾದ ಖುಷಿಯನ್ನಾಗಿ ಪರಿವರ್ತಿಸಿ, ಅದಕ್ಕೊಂದು ಚೌಕಟ್ಟನ್ನು ತೊಡಿಸುವುದು. ಹಾಗೆಯೇ ಕಾಲ ಕಾಲಕ್ಕೆ ತಪ್ಪದೇ ಆಚರಿಸುತ್ತಾ ಇತಿಹಾಸದ ಭಾಗವಾಗುವುದು ಕೆಲವರಿಗೆ ಮಾತ್ರ ಸಾಧ್ಯ. ಅದು ವ್ಯಕ್ತಿ, ಸಂಘ ಸಂಸ್ಥೆ, ಮಠ ಯಾವುದೋ ಆಗ ಬಹುದು. ಅದಕ್ಕೆ ಒಂದು ನಿಸ್ವಾರ್ಥತೆ ಇರುತ್ತದೆ. ಸಮೂಹವನ್ನು ಆರೋಗ್ಯಕರವಾಗಿಡುವಂತಹ ಉಮೇದು ಆ ಆಚರಣೆಗೆ ಇರುತ್ತದೆ. ಈ ಉಮೇದು ಹಬ್ಬ ಆಗಬೇಕು. ಹಬ್ಬ ನಮ್ಮ ಭಾವನೆಗಳನ್ನು ಮುದಗೊಳಿಸಬೇಕು. ನಮ್ಮ ವಿಚಾರ ದಾರಿದ್ರ್ಯವನ್ನು ದೂರ ಮಾಡಬೇಕು. ಮನೆಯಲ್ಲಿ ಸಂತೋಷ ಉಕ್ಕಿದರೆ ದೇಶದಲ್ಲಿ ಶಾಂತಿ ಇರುತ್ತದೆ. ಅದು ನಾಡು, ನುಡಿ, ನೆಲ ಜಲ, ಭಾಷೆ ಭಾಗವಾಗಿ ನಳನಳಿಸುತ್ತದೆ. ಆ ರೀತಿಯಿಂದ ಒಂದು ಭಾಗವೇ ಚಿತ್ರದುರ್ಗದ ಶರಣ ಸಂಸ್ಕೃತಿ ಉತ್ಸವ. ಹಬ್ಬದ ಸ್ವರೂಪಕ್ಕೆ ವೈಭವದ ಮೆರುಗು ನೀಡಿ ವಿಚಾರ ವೈಭವ, ಕಲೆಯ ವೈಭವ, ಭೌತಿಕ ಕಸರತ್ತಿನ ವೈಭವ, ಪ್ರಗತಿಯ ವೈಭವ ಈ ರೀತಿಯಾಗಿ ಸೃಜನಶೀಲವಾದ ಸ್ಪರ್ಶವನ್ನು ನೀಡಿದ ಕೀರ್ತಿ ಈ ಉತ್ಸವಕ್ಕೆ ಸಲ್ಲುತ್ತದೆ. ಬಡವರ ದಶಮಿಯಾಗಿರುವ ಇದಕ್ಕೆ ವರ್ಷ ವರ್ಷವೂ ತೋರಿಸುವ ಪ್ರಯತ್ನ ಈ ಉತ್ಸವದ ಉದ್ದೇಶ. ಇಂತಹ ಒಂದು ಉತ್ಸವ ಮತ್ತೆ ಮತ್ತೆ ನಮ್ಮನ್ನು ಸುಸಂಸ್ಕೃತರನ್ನಾಗಿಸಿ ಮಾಡಬೇಕು ಎಂಬುದೇ ಇದರ ಆಶಯ. ಸಂಸ್ಕೃತಿಯ ಜೀವಕಾರುಣ್ಯಕ್ಕೆ ಅಂದು ರಾಜ ಮಹಾರಾಜರು ಚಾಲನೆ ಕೊಟ್ಟು ಪ್ರೋತ್ಸಾಹಿಸುತ್ತಿದ್ದರು. ಧರ್ಮಗುರುಗಳ ಆಶ್ರಯದಲ್ಲಿ ಪೋಷಿಸುತ್ತಿದ್ದರು. ಅವುಗಳನ್ನು ಬದುಕಿನ ಭಾಗವಾಗಿ ಬಳಸುತ್ತಿದ್ದರು. ಎಲ್ಲ ಕಾಲದಲ್ಲೂ ಜಗತ್ತು ಯುದ್ಧ, ಶಾಂತಿ, ಕ್ಷೋಭೆ, ರಾಜ್ಯ ವಿಸ್ತರಣೆ, ಅಧಿಕಾರ ಸ್ಥಾಪನೆ , ಅಧಿಪತ್ಯದ ಹಂಬಲಗಳಲ್ಲಿ ಕೊಲಲ್ಲುವ ಕ್ರಿಯೆಯನ್ನು ಮುಂದುವರಿಸಿಕೊಂಡೇ ಬಂದಿದೆ. ಪಾಪಗಳ ಪ್ರಮಾಣ ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಏರಿಕೆಯಾಗುತ್ತಲೇ ನಡೆದಿದೆ. ಭೂಮಿಯ ಮೇಲೆ ಆಡಮ್‌ ಮತ್ತು ಈವ್‌(ಮಾರ ಮತ್ತು ಮಾರಿ) ಈ ಇಬ್ಬರೇ ಇದ್ದಾಗ ಅವರ ಭಾವನೆಗಳು ಜಗತ್ತಿನ ಸೃಷ್ಟಿಯನ್ನು ಹೇಗೆ ಮುಂದುವರಿಸಿದವೋ ಅದೇ ರೀತಿ ಒಳ್ಳೆಯ ಮತ್ತು ಕೆಟ್ಟ ಗುಣಗಳು ಬೆಳೆಯುತ್ತಲೇ ಇವೆ. ಈ ವಿಸ್ತಾರವಾದ ಪ್ರಪಂಚವನ್ನು ಸಲಹುವುದಕ್ಕೆ ಕಾಣದ ಶಕ್ತಿಯ ನಿಯಂತ್ರಣದ ಜತೆ ಜತೆಗೇನೆ ನಾವೇ ರೂಪಿಸಿದ ವ್ಯವಸ್ಥೆಯ ಕಟ್ಟುಪಾಡುಗಳ ಮೂಲಕ ಕಾನೂನು ಕಟ್ಟಳೆ ಮಾಡತಕ್ಕದು, ಮಾಡಬಾರದು ಎಂಬ ಅಭಿಪ್ರಾಯ ಬೇಧಗಳಲ್ಲಿ ಸಂಸ್ಕೃತಿಯನ್ನು ರೂಪಿಸುತ್ತಾ ಬಂದಿದ್ದೇವೆ. ಇದನ್ನು ಆಯಾ ಕಾಲಘಟ್ಟದ ಶರಣರು, ದಾರ್ಶನಿಕರು, ಸಂತರು, ಅವಧೂತರು, ಯೋಗಿಗಳು, ಸಿದ್ಧಾಂತವಾದಿಗಳು ರೂಪಿಸುತ್ತಾ ಬಂದಿದ್ದಾರೆ. ಅಂತಹ ಒಂದು ಸಮಾಜಮುಖಿ ಸಂಸ್ಕೃತಿ ರೂಪಿಸುವ ಪ್ರಯತ್ನವೇ ಡಾ.ಶಿವಮೂರ್ತಿ ಮುರುಘಾ ಶರಣರು ಪ್ರತಿವರ್ಷ ಆಯೋಜಿಸುವ ಶರಣ ಸಂಸ್ಕೃತಿ ಉತ್ಸವ. ಇಂತಹ ಉತ್ಸವಗಳು ಹೆಚ್ಚಿದಷ್ಟು ಸಮಾಜ ಆರೋಗ್ಯ, ಚಿಂತನೆ, ಬೆಳವಣಿಗೆಯ ಗತಿ ಆರೋಗ್ಯಕವಾಗಿರುತ್ತದೆ.

-ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ
🍁☘🍁☘🍁☘🍁☘🍁

ಬಾಯಾರಿಕೆ ಮತ್ತು ಚಲನೆ

ಬಾಯಾರಿಕೆ ಮತ್ತು ಚಲನೆ



ಸತ್ಯವು ಕೂಡ ಬೆಳಕಿನಂತೆಯೇ ಯಾವಾಗಲೂ ಲಭ್ಯವಿರುವಂತಹುದು. ಇಲ್ಲಿ ಸತ್ಯ ಮುಖ್ಯವಾದುದಲ್ಲ ಬದಲಿಗೆ ನಾನು ಕಣ್ಣುಗಳನ್ನು ಹೊಂದಿರುವುದು ಅಥವಾ ಆ ಕಣ್ಣುಗಳನ್ನು ತೆರೆದಿರುವುದು ಮುಖ್ಯ. ನೀರು ಯಾವಾಗಲೂ ಲಭ್ಯವಿರುತ್ತದೆ. ಆದರೆ ನೀರಿನ ಅವಶ್ಯಕತೆ ಉಂಟಾಗುವುದು ನನಗೆ ಬಾಯಾರಿಕೆ ಇದ್ದಾಗ ಮಾತ್ರ. ಆದ್ದರಿಂದಲೇ ನೀರಿನ ಕುರಿತು ನನ್ನ ಮಾತುಗಳನ್ನು ಆರಂಭಿಸುವ ಮೊದಲು ನಾನು ನಿಮ್ಮ ಬಾಯಾರಿಕೆಯ ಬಗ್ಗೆ ಚರ್ಚಿಸಲು ಬಯಸುತ್ತೇನೆ. ಮೂರನೆಯದಾಗಿ ನಾನು ನಿಮಗೆ ಹೇಳಲು ಬಯಸುವುದು, ನನ್ನ ತಿಳಿವಳಿಕೆಯಲ್ಲಿ ಧರ್ಮದ ಕುರಿತು ನಿಮ್ಮ ಹಂಬಲವೇ ಅತ್ಯಂತ ಅಮೂಲ್ಯವಾದುದು. ಅಂಥ ಧರ್ಮದ ತೃಷೆ ನಿಮ್ಮಲ್ಲಿ ಉಂಟಾಗಲೆಂದು ಬಯಸುತ್ತೇನೆ. ಏಕೆಂದರೆ ಯಾರಲ್ಲಿ ಧರ್ಮದ ಕುರಿತು ಬಾಯಾರಿಕೆ ಉಂಟಾಗುವುದೋ ಅವರು ದೀರ್ಘಕಾಲ ಧಾರ್ಮಿಕರಾಗದೇ ಹಾಗೇ ಉಳಿದಿರುವುದು ಸಾಧ್ಯವಾಗುವುದಿಲ್ಲ. ಯಾವುದೇ ವ್ಯಕ್ತಿ ವರ್ಷಗಳಿಂದಲೂ ನಾನು ಬಾಯಾರಿದ್ದೇನೆ ಆದರೆ ಈವರೆಗೆ ನಾನು ನೀರನ್ನು ಹುಡುಕಿಕೊಂಡು ಹೊಗಿಲ್ಲ ಎಂದು ಹೇಳುವುದನ್ನು ಕಲ್ಪಿಸಿಕೊಳ್ಳುವುದೂ ನನ್ನಿಂದ ಸಾಧ್ಯವಿಲ್ಲ. ಬಾಯಾರಿದರೂ ಬಾವಿಯನ್ನು ಹುಡುಕಿಕೊಂಡು ಹೋಗದಿರುವುದು ಅಸಾಧ್ಯ. ಆತ ಹೋಗದೇ ಇರಲು ಪ್ರಮುಖವಾದ ಕಾರಣ ಆತನಲ್ಲಿ ಬಾಯಾರಿಕೆಯೇ ಉಂಟಾಗದಿರುವುದು. ಬಾಯಾರಿಕೆ ಉಂಟಾದ ಮೇಲೆ ಕಾಲುಗಳು ತಾವಾಗಿಯೇ ಕರೆದುಕೊಂಡು ಹೋಗುವವು. ಬಾಯಾರಿಕೆ ಉಂಟಾದಾಗ ಉಸಿರು ಸಿಕ್ಕಿ ಹಾಕಿಕೊಳ್ಳುವುದು, ಪ್ರಾಣ ಅತ್ತಲೇ ಓಡಲು ಆರಂಭಿಸುವುದು. ಎಲ್ಲಿ ಬಾಯಾರಿಕೆ ಇರುವುದೊ ಅಲ್ಲಿ ಚಲನೆ ಆರಂಭವಾಗುವುದು. ಎಲ್ಲಿ ಬಾಯಾರಿಕೆ ಇರುವುದಿಲ್ಲವೋ ಅಲ್ಲಿ ಚಲನೆಯೂ, ಹುಡುಕಿಕೊಂಡು ಸಾಗುವಿಕೆಯೂ ಸಂಭವಿಸುವುದಿಲ್ಲ. ಈ ಜಗತ್ತು ಅಧಾರ್ಮಿಕವಾಗಿದೆಯೆಂದು ಜನರು ಹೇಳುವರು. ಜಗತ್ತು ಅಧಾರ್ಮಿಕವಾಗಿಲ್ಲ, ಬದಲಿಗೆ ಧರ್ಮದ ಕಡೆಗೆ ಸಾಗಬೇಕೆಂಬ ಆತುರಕೆ, ತೀವ್ರತೆ, ಹಂಬಲ ಕಡಿಮೆಯಾಗಿದೆ. ಅದರ ಕುರಿತು ಬಯಕೆ ನಾಶವಾಗಿದೆ. ಮಹಾವೀರನಂತಹ ವ್ಯಕ್ತಿ ಹಳ್ಳಿಯ ಮೂಲಕ ಹಾದು ಹೋಗುತ್ತಿದ್ದರೆ, ಆತನ ಆನಂದ, ಆತನ ಶಾಂತಿ, ಆತನ ತೇಜಸ್ಸನ್ನು ನೋಡುವ ಲಕ್ಷಾಂತರ ಮಂದಿಯ ಹೃದಯದಲ್ಲೂ, ಅಂಥ ಶಾಂತಿ, ಅಂಥ ಆನಂದ ನಮಗೆ ಹೇಗೆ ಲಭ್ಯವಾಗಬಹುದು ಎಂದು, ಒಂದು ಬಯಕೆ ಉಂಟಾಗುವುದು, ಮಹಾವೀರ, ಬುದ್ಧನಂತಹ ವ್ಯಕ್ತಿಗಳು ಯಾರಿಗೂ ಉಪದೇಶ ಮಾಡುವುದಿಲ್ಲ. ಅವರ ಉಪದೇಶ ಒಂದೇ, ಅದು ಅತ್ಯಂತ ತೀವ್ರವಾಗಿಯೂ ಇರುತ್ತದೆ. ಅವರು ನಿಮ್ಮ ಸನಿಹದಲ್ಲಿ ಹಾದು ಹೋದರೆ ಸಾಕು ನಿಮ್ಮೊಳಗೆ ಒಂದು ತೀವ್ರತರವಾದ ಅಪೇಕ್ಷೆಯನ್ನು ಹುಟ್ಟು ಹಾಕುತ್ತಾರೆ. ಅವರು ನೀಡುವ ಬೋಧೆಗಳು ಅಷ್ಟು ಮುಖ್ಯವಲ್ಲ. ಏಕೆಂದರೆ ಅವರ ಬೋಧೆಗಳನ್ನು ಪುಸ್ತಕದಲ್ಲಿ ಬರೆದಿಡಬಹುದು. ಆದರಿಂದ ನಿಮಗೆ ಯಾವುದೇ ಉಪಯೋಗ ಆಗುವುದಿಲ್ಲ. ಈ ಜಗತ್ತಿನಲ್ಲಿ ಪ್ರತಿಯೊಬ್ಬ ಶಿಕ್ಷಕ ನಷ್ಟವಾದಾಗಲೂ ಆತನೊಮದಿಗೆ ಆತನ ಶಿಕ್ಷಣವೂ ನಷ್ಟವಾಗುವುದು. ಅವುಗಳಿಗೆ ಯಾವುದೇ ಅರ್ಥ ಇರುವುದಿಲ್ಲ. ಶಿಕ್ಷಕನ ವಿಶೇಷತೆ ಆತ ನೀಡುವ ಶಿಕ್ಷಣದಲ್ಲಿ ಇರುವುದಿಲ್ಲ. ವೈಶಿಷ್ಟ್ಯವು ನಿಮ್ಮೊಳಗೆ ಒಂದು ತೀವ್ರತರವಾದ ಬಯಕೆ ಅಥವಾ ಹಂಬಲವನ್ನು ಹುಟ್ಟುಹಾಕುವುದರ ಮೇಲೆ ಅವಲಂಬಿಸಿರುತ್ತದೆ. ಮೃತ ಶಿಕ್ಷಕ ನಿಮ್ಮಲ್ಲಿ ಅಂಥ ಬಯಕೆ ಅಥವಾ ಹಂಬಲವನ್ನು ಹುಟ್ಟು ಹಾಕುವುದು ಸಾಧ್ಯವಿಲ್ಲ. ಜೀವಂತವಿರುವ ವ್ಯಕ್ತಿ ಮಾತ್ರವೇ ಅಂಥ ಸ್ಥಿತಿಯನ್ನು ಹುಟ್ಟು ಹಾಕಬಲ್ಲ.

- ಓಶೋ
🌿☘🌿☘🌿☘🌿☘🌿

ಬೆಲ್ಲ, ಸಿದ್ಧೌಷಧ ಹಲವು ತೊಂದರೆಗಳಿಗೆಲ್ಲ!

👆 ಬೆಲ್ಲ, ಸಿದ್ಧೌಷಧ ಹಲವು ತೊಂದರೆಗಳಿಗೆಲ್ಲ!

ನಮ್ಮ ಹಳ್ಳಿಗಳಲ್ಲಿ ಕುಡಿಯಲು ನೀರು ಕೇಳಿದರೆ ನೀರಿನ ಜೊತೆ ಬೆಲ್ಲದ ತುಂಡುಗಳನ್ನು ಕೂಡ ತಂದಿಡುತ್ತಾರೆ. ಅ ದೊಂದು ಸಂಪ್ರದಾಯ, ಆದರೆ ಬೆಲ್ಲ ತಿಂದರೆ ಅದ್ಭುತವಾದ ಆರೋಗ್ಯಕರ ಗುಣಗಳನ್ನು ಪಡೆಯಬಹುದೆಂದು ಹೆಚ್ಚಿನ ಜನರಿಗೆ ಗೊತ್ತಿರುವುದಿಲ್ಲ.

 ಬೆಲ್ಲವನ್ನು ತಿಂದರೆ ಅನೇಕ ಸಣ್ಣ ಪುಟ್ಟ ಸಮಸ್ಯೆಗಳನ್ನು ಮಾತ್ರವಲ್ಲ, ದೊಡ್ಡ ಸಮಸ್ಯೆಗಳನ್ನೂ ದೂರವಿಡಬಹುದು.

ಬನ್ನಿ, ಬೆಲ್ಲದಲ್ಲಿರುವ ಆರೋಗ್ಯಕರ ಗುಣಗಳೇನು ಎಂದು ನೋಡೋಣ:

೧.ರಕ್ತವನ್ನು ಶುದ್ಧೀಕರಿಸುತ್ತದೆ.   ಈ ಸಿಹಿ ವಸ್ತು ರಕ್ತವನ್ನು ಶುದ್ಧೀಕರಿಸುತ್ತದೆ. ಆದ್ದರಿಂದ ದಿನಾ ಸ್ವಲ್ಪ ಬೆಲ್ಲವನ್ನು ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಜೀರ್ಣಕ್ರಿಯೆಗೆ ಒಳ್ಳೆಯದು ಇದು ಅಜೀರ್ಣ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಅಜೀರ್ಣವಾದಾಗ ಸ್ವಲ್ಪ ಬೆಲ್ಲವನ್ನು ಈರುಳ್ಳಿ ಜೊತೆ ತಿಂದರೆ ಒಳ್ಳೆಯದು.

೨.ಹೊಟ್ಟೆಯನ್ನು ತಂಪಾಗಿಸುತ್ತದೆ ಬೆಲ್ಲ ಹೊಟ್ಟೆಯನ್ನು ತಂಪಾಗಿಸುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಒಂದು ತುಂಡು ಬೆಲ್ಲವನ್ನು ಬಾಯಿಗೆ ಹಾಕಿಕೊಳ್ಳಿ.

೩.ರಕ್ತ ಹೀನತೆ ಇರುವವರಿಗೆ ಅತ್ಯುತ್ತಮವಾದ ಮನೆಮದ್ದು ಇದಾಗಿದೆ. ಇದರಲ್ಲಿ ಕಬ್ಬಿಣದಂಶ ಅತ್ಯಧಿಕವಾಗಿದೆ. ಹದಿ ಹರೆಯದ ಹೆಣ್ಣು ಮಕ್ಕಳು ಮತ್ತು ಗರ್ಭಿಣಿ ಸ್ತ್ರೀಯರು ಬೆಲ್ಲವನ್ನು ತಿನ್ನುವುದರಿಂದ ರಕ್ತಹೀನತೆ ಸಮಸ್ಯೆಯನ್ನು ತಡೆಗಟ್ಟಬಹುದು.

೪.ತ್ವಚೆಗೆ ತುಂಬಾ ಒಳ್ಳೆಯದು ಬೆಲ್ಲ ತ್ವಚೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೊಡವೆ ಇದ್ದರೆ ಬೆಲ್ಲವನ್ನು ತಿನ್ನಿ, ಮೊಡವೆಯನ್ನು ನಿಯಂತ್ರಿಸಿ ಕಮ್ಮಿಗೊಳಿಸುತ್ತದೆ. ಇದು ತ್ವಚೆಯ ಹೊಳಪನ್ನೂ ಹೆಚ್ಚಿಸುತ್ತದೆ.

೫.ಗಂಟಲು ಕೆರೆತ, ಕೆಮ್ಮು ಕಾಣಿಸಿದರೆ ಈರುಳ್ಳಿ ಅಥವಾ ಬೆಳ್ಳುಳ್ಳಿಯನ್ನು ಸುಟ್ಟು ಅದನ್ನು ಬೆಲ್ಲದ ಜೊತೆ ತಿನ್ನುವುದು ಒಳ್ಳೆಯದು.

೬.ತುಂಬಾ ದಣಿವಾದಾಗ ದುಬಾರಿ ಖರ್ಚಿನ ಗ್ಲೂಕೋಸ್ ಅಥವಾ ಎನರ್ಜಿ ಡ್ರಿಂಕ್ಸ್ ನ ಅಗತ್ಯವಿಲ್ಲ! ಒಂದು ಬೆಲ್ಲದ ತುಂಡನ್ನು ಬಾಯಿಗೆ ಹಾಕಿ ನೀರು ಕುಡಿದರೆ ಸಾಕು. ದಣಿವು ಕ್ಷಣಾರ್ಧದಲ್ಲಿ ಮಾಯ!

೭.ಬೆಲ್ಲದ ಚೂರನ್ನು ಬಾಯಿಗೆ ಹಾಕಿ ಕೊಂಡರೆ ಉಸಿರಾಟದ ತೊಂದರೆ ಕಡಿಮೆಯಾಗುತ್ತದೆ. ಅಸ್ತಮಾ ಕಾಯಿಲೆ ಇರುವವರು ದಿನಾ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಲ್ಲವನ್ನು ತಿನ್ನುವುದು ಒಳ್ಳೆಯದು.

೮. ನಿಯಮಿತವಾದ ಬೆಲ್ಲದ ಸೇವನೆ ಸಂಧಿನೋವನ್ನು ಕಡಿಮೆ ಮಾಡುತ್ತದೆ ಮಂಡಿ ನೋವು, ಕೈಕಾಲು ನೋವು ಇವುಗಳನ್ನು ಕಮ್ಮಿ ಮಾಡುವಲ್ಲಿ ಬೆಲ್ಲ ಪ್ರಯೋಜನಕಾರಿಯಾಗಿದೆ.

೯.ಮೈಗ್ರೇನ್(ಅರ್ಧ ತಲೆಶೂಲೆ) ಕಾಯಿಲೆಯನ್ನು ಗುಣಪಡಿಸುವಲ್ಲಿ ಕೂಡ ಬೆಲ್ಲ ಸಹಾಯ ಮಾಡುತ್ತದೆ. ತಲೆನೋವು ಕಾಣಿಸಿಕೊಂಡಾಗ ಒಂದು ಚೂರು ಬೆಲ್ಲ ತಿಂದು ಆರಾಮವಾಗಿರಿ.

೧೦. ಮುಟ್ಟಿನ ಸಮಯದಲ್ಲಿ ಅಧಿಕ ನೋವು ಕಾಣಿಸಿದರೆ ಮಾತ್ರೆ ತೆಗೆದುಕೊಳ್ಳುವ ಬದಲು ಬೆಲ್ಲವನ್ನು ಸೇವಿಸುವದರಿಂದ ನೋವು ಕಡಿಮೆಯಾಗುವುದು.

ಬೆಲ್ಲವನ್ನು ಸೇವಿಸಿ ಉತ್ತಮ ಆರೋಗ್ಯ ಪಡೆಯಿರಿ. ಸಕ್ಕರೆಗಿಂತ ಬೆಲ್ಲ ಎಲ್ಲಾ ರೀತಿಯಿಂದಲೂ ಅತಿ ಉತ್ತಮ.

ನೆನಪಿರಲಿ. ನಾಲ್ಕು ಬಿಳಿ ವಿಷಗಳೆಂದು ಪರಿಗಣಿಸಲ್ಪಟ್ಟ ವಸ್ತುಗಳಲ್ಲಿ ಸಕ್ಕರೆಯೂ ಒಂದು!

ಮೈದಾ, ಸಕ್ಕರೆ, ಬಿಳಿ ಉಪ್ಪು ಹಾಗೂ ಆಶ್ಚರ್ಯಕರ ಎಂಬಂತೆ ಹಾಲು, ಇವೇ ನಾಲ್ಕು ಬಿಳಿವಿಷಗಳು ಎನ್ನಲಾಗಿದೆ. ಇವುಗಳ ಬಳಕೆಯನ್ನು ಪೂರ್ತಿ ನಿಷೇಧ ಮಾಡಲಾಗದಿದ್ದರೂ ಸಾಧ್ಯವಾದಷ್ಟು ಮಿತಗೊಳಿಸಿದರೆ ಅದು ನಮ್ಮ ಆರೋಗ್ಯಕ್ಕೆ ಉತ್ತಮ ಎಂದು ಹೇಳಲಾಗಿದೆ.👆👌👍

Quotes

Luck means who gets the opportunity. Brilliant means who creates the opportunity. Winner means who uses the opportunity..with Brilliancy …!
“Be an Achiever.”


★★★★★
Beautiful Tomorrow Never Comes !When It Comes,Its Already TODAY !In The Search For Beautiful Tomorrow,DON’T Lose Your Wonderful “TODAY”……..

Really, WORRYING does not take away tomorrow’s TROUBLES, It takes away today’s PEACE.  So, Don’t cry for what happened yesterday, don’t  fear what happens today, dont expect anything from tomorrow…. Enjoy the moments….

 Lucky people get opportunities; Brave people create opportunities; And Winners are those that convert problems into opportunities

★★★★—★★★★


 Once a Wise man asked God.What is meaning of Life?God replied,Life itself has no meaning,Life is an opportunity To create a Meaning.

★★★★★★★★★
Rishika Jain 

ಏನಿದೆಯೋ ಅದನ್ನು ತಿಳಿಯುವುದು

ಏನಿದೆಯೋ ಅದನ್ನು ತಿಳಿಯುವುದು



ಜೀವನ ಎನ್ನುವುದು ಸಂಘರ್ಷ. ಸಂಘರ್ಷ ಎಂದರೇನು ಎಂಬುದು ನಮಗೆ ಗೊತ್ತಿದೆ. ಸಂಘರ್ಷ ಅರ್ಥವಾದಾಗ 'ಏನಿದೆಯೋ', ಅದರ ಸತ್ಯ ತಿಳಿಯುತ್ತದೆ. ಈ ಸತ್ಯದ ಅವಲೋಕನದಿಂದಾಗಿ ಮನಸ್ಸು 'ಏನಿದೆಯೋ' ಅದರಿಂದ ಬಿಡುಗಡೆ ಹೊಂದುತ್ತದೆ. ಜೀವನದಲ್ಲಿ ತುಂಬಾ ದುಃಖವಿದೆ. ಆದರೆ ಅದನ್ನು ಪರಿಹರಿಸುವುದು ಹೇಗೆಂದು ತಿಳಿದಿಲ್ಲ. ದುಃದ ಪರಿಹಾರವೇ ವಿವೇಕದ ಉದಯ. ದುಃಖವೆಂದರೇನು? ಅದರ ಸ್ವರೂಪವೇನು? ರಚನೆಯೇನು? ಎಂಬುದನ್ನು ತಿಳಿಯದೆ ಪ್ರೇಮವೆಂದರೇನು? ಎಂಬುದು ನಮಗೆ ತಿಳಿಯದು. ಏಕೆಂದರೆ ನಮ್ಮ ಪಾಲಿಗೆ ಪ್ರೇಮವೆಂಬುದು ದುಃಖ, ನೋವು, ಯೋತನೆ, ಸುಖ ಹಾಗೂ ಅಸೂಯೆ. 'ನಾನು ನಿನ್ನನ್ನು ಪ್ರೀತಿಸುತ್ತೇನೆ' ಎಂದು ಹೆಂಡತಿಗೆ ಹೇಳುವ ಗಂಡ ಅದೇ ವೇಳೆಗೆ ಮಹತ್ವಾಕಾಂಕ್ಷಿಯು ಆಗಿದ್ದರೆ ಅಂಥ ಪ್ರೀತಿಗೆ ಅರ್ಥವಿದೆಯೇ? ಮಹತ್ವಾಕಾಂಕ್ಷೆ ಇರುವಾಗ ಪ್ರೀತಿಸಲು ಸಾಧ್ಯವೇ? ಪೈಪೋಟಿಯ ಮನುಷ್ಯ ಪ್ರೀತಿಸಬಲ್ಲನೇ? ಆದರೂ ನಾವು ಪ್ರೇಮ, ಮಾರ್ದವತೆ, ಯುದ್ಧಗಳನ್ನು ನಿಲ್ಲಿಸುವ ಬಗ್ಗೆ ಮಾತಾಡುತ್ತೇವೆ. ಇನ್ನೊಂದು ಕಡೆಯಿಂದ ಸ್ಪರ್ಧಾತ್ಮಕವಾಗಿದ್ದೇವೆ, ಮಹತ್ವಾಕಾಂಕ್ಷಿಗಳಾಗಿದ್ದೇವೆ. ನಮ್ಮ ಸ್ಥಾನಗಳ ಬಗ್ಗೆ ಕಾತರರಾಗಿದ್ದೇವೆ ಇತ್ಯಾದಿ. ಇದೆಲ್ಲವೂ ದುಃಖವನ್ನುಂಟುಮಾಡುತ್ತದೆ. ದುಃಖಕ್ಕೆ ಕೊನೆ ಇದೆಯೇ? ನಿಮ್ಮನ್ನು ನೀವು ಅರ್ಥಮಾಡಿಕೊಂಡಾಗ ಅಂದರೆ 'ಏನಿದೆಯೋ' ಅದನ್ನು ತಿಳಿದಾಗ ದುಃಖ ಮಾಯಾವಾಗುತ್ತದೆ. ಆಗ ನಿಮಗೇಕೆ ದುಃಖ ಒದಗಿತು, ಆ ದುಃಖವೆಂಬುದು ಆತ್ಮ ಮರುಕವೆ? ಅಥವಾ ಒಂಟಿತನದ ಭಯವೇ? ನಿಮ್ಮ ಬದುಕಿನ ಖಾಲಿತನವೇ? ಅಥವಾ ಪರರನ್ನು ಅವಲಂಬಿಸುವುದರಿಂದ ಬಂದ ದುಃಖವೇ ಎಂಬುದು ತಿಳಿಯುತ್ತದೆ. ಇದೆಲ್ಲ ನಮ್ಮ ಜೀವನದ ಒಂದು ಭಾಗ. ಇವುಗಳನ್ನು ಅರಿತಾಗ ಬದುಕಿನ ದೊಡ್ಡ ಸಮಸ್ಯೆ ಅದೇ ಸಾವಿನ ಬಗ್ಗೆ ಚಿಂತನೆಗಳು; ನಾವು ಪುನರ್ಜನ್ಮದ ಬಗ್ಗೆ, ಸಾವಿನ ಅನಂತರ ಏನಾಗುತ್ತದೆ ಎಂಬ ಬಗ್ಗೆ ಮಾತನಾಡುತ್ತಿಲ್ಲ ಅಥವಾ ಸಾವಿನ ಬಗ್ಗೆ ಭಯ ಪಡುವವರಿಗೆ ಆ ಬಗ್ಗೆ ಭರವಸೆಯನ್ನು ತುಂಬುತ್ತಿಲ್ಲ. ವೃದ್ಧಾಪ್ಯವಿದೆ ಅದರೊಂದಿಗೆ ಕಾಯಿಲೆ ಕಸಾಲೆ, ಸ್ಮೃತಿನಾಶ, ವಯಸ್ಸಾಗುತ್ತಿದೆ ಎಂಬ ಭಯ ಎಲ್ಲ ಇದೆ. ಈ ದೇಶದಲ್ಲಿ ವಯಸ್ಸಾದವರನ್ನು ತರುಣರೆಂದು ಕರೆಯಲಾಗುತ್ತಿದೆ! ಎಂಬತ್ತರ ಹರೆಯದ ಹೆಂಗಸನ್ನು ತರುಣಿ ಎಂದು ಸಂಬೋಧಿಸಲಾಗುತ್ತದೆ. ಜನರಿಗೆ ಭಯವಿದೆ. ಭಯವಿರುವಲ್ಲಿ ತಿಳಿವಳಿಕೆಯಿಲ್ಲ. ಆತ್ಮ ಮರುಕವಿರುವಲ್ಲಿ ದುಃಖದಿಂದ ಬಿಡುಗಡೆಯಿಲ್ಲ. ಹೀಗಾಗಿ ಸಾಯುವುದು ಎಂದರೇನು? ಜೀವಿಯ ಬದುಕು ಮುಗಿಯುತ್ತದೆ. ಮನುಷ್ಯ ಸುಮಾರು 90 ವರ್ಷ ಬದುಕಬಹುದು. ವಿಜ್ಞಾನಿಗಳು ಏನಾದರೊಂದು ಔಷಧ ಕಂಡು ಹುಡುಕಿದರೆ 150 ವರ್ಷ ಬದುಕಿದರೂ ಬದುಕಬಹುದು. ಈ ನೂರೈವತ್ತು ವರ್ಷ ಏಕೆ ಬದುಕಬೇಕು? ದೇವರಿಗೇ ಗೊತ್ತು! ನೂರೈವತ್ತು ವರ್ಷ ಬದುಕಿದರೂ ನಿಮ್ಮ ದೇಹ ಸವೆಯುತ್ತದೆ. ಏಕೆಂದರೆ ಸಂಘರ್ಷ, ಭಯ, ಉದ್ವಿಗ್ನತೆ, ಮನುಷ್ಯರು ಹಾಗೂ ಪ್ರಾಣಿಗಳನ್ನು ಕೊಲ್ಲುವುದು- ಹೀಗೆ ತೀರ ಕೆಟ್ಟದಾಗಿ ಬದುಕುತ್ತೇವೆ. ನಾವು ನಮ್ಮ ಬದುಕನ್ನು ಎಷ್ಟೊಂದು ಕೆಡೆಸಿಕೊಳ್ಳುತ್ತೇವೆ! ಹೀಗಾಗಿ ವೃದ್ಧಾಪ್ಯವೆಂಬುದು ಭಯಾನಕ ಸಂಗತಿಯಾಗುತ್ತದೆ. ಆದರೂ ಯುವಕರು, ಮಧ್ಯವಯಸ್ಕರು ಪ್ರಾಯದವರು ಸಾಯುತ್ತಾರೆ. ಭೌತಿಕ ಮರಣದ ಹೊರತಾಗಿ ಅನಿವಾರ‍್ಯವಾದ ಸಾಯುವುದು ಎಂದರೇನು? ಚರಮದೇಹದ ಅಂತ್ಯ ಎಂಬುದಕ್ಕಿಂತ ಆಳವಾದ ಅರ್ಥ ಮರಣಕ್ಕಿದೆ.

* ಜೆ. ಕೃಷ್ಣಮೂರ್ತಿ
☘🌿☘🌿☘🌿☘🌿☘

ಕಥೆ

ಒಬ್ಬ ಹುಡ್ಗ ಇದ್ದ. ಅವ್ನಿಗೆ ಮೂಗಿನ ತುದೀಲೇ ಕೋಪ. ಚಿಕ್ಕಚಿಕ್ಕ ವಿಷಯಗಳಿಗೂ ಸಿಕ್ಕಾಪಟ್ಟೆ ಸಿಟ್ಟಾಗಿ ಅನಾಹುತಕಾರಿಯಾಗೆಲ್ಲ ಪ್ರತಿಕ್ರಿಯಿಸಿಬಿಡ್ತಿದ್ದ. ದೊಡ್ಡವನಾಗ್ತಾ ಆಗ್ತಾ ಇದು ಅತಿರೇಕಕ್ಕೆ ಹೋಗಿ ಅವನಿಗೇ ಅಪಾಯ ತಂದೊಡ್ಡಬಹುದು ಅಂತ ಅವನ ಅಪ್ಪನಿಗೆ ಅನಿಸಿತು. ಈಗಲೇ ಇವನನ್ನು ತಿದ್ದಬೇಕು ಎಂದು ನಿರ್ಧರಿಸಿದ. ಅದೊಂದು ದಿನ ಮಗ ತುಂಬ ಆರಾಮಾಗಿ ಇರುವಾಗ ಕರೆದ. ಒಂದು ಪ್ಯಾಕೆಟ್ ಮೊಳೆ ಕೊಟ್ಟ. ಅದರಲ್ಲಿ ಸುಮಾರು ನೂರಿನ್ನೂರು ಮೊಳೆಗಳಿದ್ದವು. ಜತೆಗೊಂದು ಸುತ್ತಿಗೇನೂ ಕೊಟ್ಟ. ಸೀದಾ ಮನೆ ಮುಂದಿದ್ದ ಮರದ ಬೇಲಿಯ ಬಳಿ ಕರೆತಂದು ಮಗನಿಗೆ ಹೇಳಿದ..
'ನೋಡು.. ಯಾಕೆ ಅಂತ ಈಗ ಹೇಳಲ್ಲ. ನೀನೂ ಕೇಳಬೇಡ. ನೀನು ಯಾವಾಗೆಲ್ಲ ತಾಳ್ಮೆ ಕಳೆದುಕೊಂಡು ಕೋಪಗೊಳ್ತೀಯೋ ಅಂಥ ಪ್ರತಿ ಸಂದರ್ಭದಲ್ಲೂ ಈ ಮರದ ಬೇಲಿಗೆ ಒಂದು ಮೊಳೆ ಹೊಡಿ'.  ಮಗನಿಗೆ ವಿಚಿತ್ರ ಅನಿಸಿದರೂ ಅಪ್ಪನ ಮಾತಿಗೆ ಒಪ್ಪಿದ. ಈ ಟಾಸ್ಕ್ ನ ಮೊದಲ ದಿನ, ಒಂದೇ ದಿನಕ್ಕೆ ಬರೋಬ್ಬರಿ ಮೂವತ್ತೇಳು ಮೊಳೆ ಹೊಡೆದ! ನಿಜಕ್ಕೂ ಮೊಳೆ ಹೊಡೆದು ಹೊಡೆದು ಅವನ ಕೋಪ ಹೆಚ್ಚಿತ್ತು ಅನಿಸುತ್ತೆ. ಇನ್ನೂ ಎರಡು ಮೊಳೆ ಹೊಡೆದ. ಕೆಲವು ಮೊಳೆಗಳು ಬೆಂಡಾಗಿದ್ದವು. ಕೆಲವು ಎಷ್ಟು ಹೊಡೆದರೂ ಒಳಗೆ ಹೋಗುತ್ತಿರಲಿಲ್ಲ. ಕೆಲವು ಮೊಳೆ ಹೊಡೆಯುವ ಭರದಲ್ಲಿ ಕೈಗೇ ಏಟು ಬಿದ್ದಿದ್ದವು. ಆದರೆ ಹುಡುಗ ಕೊಟ್ಟಿದ್ದ ಟಾಸ್ಕ್ ನ ನಿಲ್ಲಿಸಲಿಲ್ಲ. ಪ್ರತಿ ದಿನ ಆತ ಕೋಪಗೊಳ್ಳುವುದು ಮೊಳೆ ಹೊಡೆಯುವುದು ಮುಂದುವರಿಯಿತು. ಆದರೆ ಅವನಿಗೇ ಗೊತ್ತಿಲ್ಲದಂತೆ ಎರಡೇ ವಾರದಲ್ಲಿ ಬೇಲಿಗೆ ಹೊಡೆವ ಮೊಳೆಗಳ ಸಂಖ್ಯೆ ಗಣನೀಯ ಇಳಿಕೆ ಕಂಡಿತ್ತು. ಹೀಗೆ ಬೇಲಿಗೆ ಮೊಳೆ ಹೊಡೆಯೋದಕ್ಕಿಂತ ಕೋಪ ಅದುಮಿಟ್ಟುಕೊಳ್ಳೋದೇ ಸಲೀಸು ಎಂದು ಅವನಿಗೆ ಅನಿಸತೊಡಗಿತ್ತು.
ಅದೊಂದು ದಿನ ಖುದ್ದು ಅವಧಿಯಲ್ಲಿ ಅಚ್ಚರಿ ಕಾದಿತ್ತು. ಒಂದಿಡೀ ದಿನ ಆತ ಒಮ್ಮೆಯೂ ಕೋಪಗೊಳ್ಳಲೇ ಇಲ್ಲ. ಬೇಲಿಗೆ ಒಂದು ಮೊಳೆಯೂ ಬೀಳಲಿಲ್ಲ! ಹುಡುಗನಿಗೆ ತನ್ನ ಮೇಲೆ ತನಗೇ ಹೆಮ್ಮೆ ಎನಿಸತೊಡಗಿತು. ಸೀದಾ ಓಡಿ ಹೋಗಿ ಅಪ್ಪನ ಬಳಿ ಹೇಳಿಕೊಂಡ… 'ಅಪ್ಪಾ ಇವತ್ತು ಒಂದೇ ಒಂದು ಮೊಳೆ ಕೂಡಾ ಹೊಡೀಲಿಲ್ಲ. ನಾನೊಂದ್ಸಲಾನೂ ಕೋಪ ಮಾಡ್ಕೊಳ್ಲಿಲ್ಲ!' ಅಪ್ಪನಿಗೆ ತುಂಬ ಖುಷಿಯಾಯ್ತು. 'ಈಗ ಕೋಪಾನೇ ಬರ್ತಿಲ್ವಾ ಮರಿ' ಅಂತ ಕೇಳ್ದ. ಮಗ ಹೇಳ್ದ ಬರುತ್ತೆ ಅಪ್ಪಾ… ಆದರೆ ಅದನ್ನ ಕಂಟ್ರೋಲ್ ಮಾಡ್ಕೊಳೋದನ್ನು ಕಲಿತುಕೊಂಡಿದ್ದೀನಿ ನಿಮ್ಮೀ ಟಾಸ್ಕ್ ನಿಂದ. ಆದರೆ ಟಾಸ್ಕ್ ಇಲ್ಲಿಗೇ ಮುಗಿದಿರಲಿಲ್ಲ. ಬೇಲಿಯ ಬಳಿ ಕರೆದುಕೊಂಡು ಬಂದ ಅಪ್ಪ ಹೇಳಿದ. ಇವತ್ತಿಂದ ನಿನಗೆ ಇನ್ನೊಂದು ಸವಾಲು. 'ಒತ್ತರಿಸಿಬಂದ ಕೋಪವನ್ನು ನೀನು ಯಾವಾಗೆಲ್ಲ ಕಂಟ್ರೋಲ್ ಮಾಡ್ಕೊಳ್ತೀಯೋ ಆಗೆಲ್ಲ ನೀನು ಹೊಡೆದಿರೋ ಒಂದೊಂದೇ   ಮೊಳೆಯನ್ನು ಬೇಲಿಯಿಂದ ಕಿತ್ತು ತೆಗೀತಾ ಬಾ. ಯಾಕೆ ಏನು ಅಂ  ತ ಆಮೇಲೆ ಹೇಳ್ತೀನಿ'. ಮಗನಿಗೆ ವಿಸ್ಮಯ ಎನಿಸಿತು.
ನಾನಾಗಲೇ ಕೋಪ ಕಳ್ಕೊಂಡಿದೀನಿ. ಆದರೂ ಯಾಕೆ ಇನ್ನೊಂದು ಚಾಲೆಂಜು ಅಂತ. ಆದರೆ ಅಪ್ಪನ ಮಾತಿಗೆ ಮರುಮಾತಾಡದೇ ಒಪ್ಪಿಕೊಂಡ. ಒಂದಷ್ಟು ವಾರಗಳಲ್ಲಿ ಬೇಲಿಗೆ ಅವನೇ ಚಚ್ಚಿದ್ದ ಅಷ್ಟೂ ಮೊಳೆಗಳನ್ನೂ ಒಂದೊಂದಾಗಿ ತೆಗೆದು ಮುಗಿಸಿದ್ದ. ಅಪ್ಪನ ಎದುರು ಬಂದು ನಿಂತು 'ಟಾಸ್ಕ್ ಕಂಪ್ಲೀಟ್' ಅಂದ. ಅಪ್ಪ ತುಂಬ ಪ್ರೀತಿಯಿಂದ ಮಗನ ಕೈ ಹಿಡಿದುಕೊಂಡ. ತಲೆನೇವರಿಸುತ್ತಾ ಬೇಲಿಯ ಬಳಿ ಕರೆದೊಯ್ದ. ಒಣಮರದ ಬೇಲಿಯನ್ನು ಗಮನಿಸಿದ. ಒಂದೇ ಒಂದು ಮೊಳೆಯೂ ಇರಲಿಲ್ಲ. 'ಭೇಷ್ ಮಗನೇ..' ಮಗನ ಮುಖದಲ್ಲಿ ತಾನೇನೋ ಯಾವುದೋ ದೊಡ್ಡ ಸಾಧನೆ ಮಾಡಿದ ಖುಷಿ. ಆಗ ತಂದೆ ಬೇಲಿಯನ್ನು ತೋರಿಸಿ ಹೇಳಿದ 'ಈ ಬೇಲಿ ನೀನು ಮೊಳೆ ಹೊಡೆಯೋಕೆ ಮೊದಲು ಹೇಗಿತ್ತು.. ಮೊಳೆ ಹೊಡೆದು ಮತ್ತೆ ಕಿತ್ತು ತೆಗೆದ ಮೇಲೆ ಹೇಗಿದೆ ಅಂತ ಒಮ್ಮೆ ನೋಡು. 'ಮಗ ನೂರಾರು ಮೊಳೆ ಹೊಡೆದು ಕಿತ್ತೆಗೆದಿದ್ದ ಆ ಬೇಲಿಯನ್ನು ಸೂಕ್ಷ್ಮವಾಗಿ ನೋಡ್ತಾ ಹೋದ. ಎಲ್ಲೆಡೆ ತೂತುತೂತುಗಳು. ಅಪ್ಪ ಶಾಂತವಾಗಿ ಹೇಳಲಾರಂಭಿಸಿದ.. ಮಗ ಅಷ್ಟೇ ಶಾಂತ ಚಿತ್ತದಲ್ಲಿ ಕೇಳಿಸಿಕೊಳ್ಳತೊಡಗಿದ… 'ಮಗೂ.. ಕೋಪದಲ್ಲಿ ನೀನಾಡೋ ಮಾತುಗಳು, ನೀನು ನೀಡೋ ಪ್ರತಿಕ್ರಿಯೆಗಳು ಎಂದೂ ಅಳಿಸೋಕಾಗದ ಗಾಯ ಮಾಡಿಬಿಡ್ತವೆ. ಈ ಬೇಲಿಗಾಗಿದೆ ನೋಡು.. ಆ ಥರ. ನೀನೆಷ್ಟೇ ಸಲ ಆಮೇಲೆ ಕ್ಷಮೆ ಕೇಳು, ಗಾಯ ಹುಷಾರಾಗಬಹುದು. ಆದರೆ ಗಾಯದ ಕಲೆ ಮಾಸೋದೇ ಇಲ್ಲ. 'ಮಗ ಪಾಠ ಕಲಿತದ್ದು ಮೊಳೆ ಹೊಡೆದಾಗಲೂ ಅಲ್ಲ, ಮೊಳೆ ತೆಗೆದಾಗಲೂ ಅಲ್ಲ. ಆನಂತರ ಉಳಿದಿದ್ದ ಗಾಯದ ಕಲೆಗಳನ್ನು ಕಂಡ ಮೇಲೆ. ತುಂಬ ಸಾಂದರ್ಭಿಕ ಎಂಬಂತೆ ಈ ಕಿರುಗತೆ ಇಂದು ಕಣ್ಣಿಗೆ ಬಿತ್ತು. 'ಲಾ ಆಫ್ ಸೀಕ್ರೆಟ್ಸ್' ಅಂತೊಂದು ಪುಸ್ತಕ ಇದೆ. ನಾವು ಏನನ್ನು ಯೋಚಿಸ್ತಾ ಇರ್ತೀವೋ ಅದಕ್ಕೆ ಸಂಬಂಧಿಸಿದ್ದು ನಮ್ಮತ್ತ ಸೆಳೆಯಲ್ಪಡ್ತವಂತೆ. ಈ ಕತೆಯೂ ಹಾಗೇ ಬಂದಿರಬಹುದೆನೋ ಗೊತ್ತಿಲ್ಲ.

ವಿಶ್ವಾಸ

ಪ್ರಶ್ನೆ: ನನ್ನ ವಿಶ್ವಾಸವು ಅಲುಗಾಡಿದೆ. ಒಬ್ಬ ವ್ಯಕ್ತಿಯಾಗಿ ನಾನು, ಈ ಆಘಾತದಿಂದ ಹೊರಬರಲು ಇತರರಿಗೆ ಸಹಾಯ ಮಾಡಲು ಸಾಧ್ಯವೇ?




ಶ್ರೀ ಶ್ರೀ ರವಿ ಶಂಕರ್: ಹೇ! ಒಂದು ನೆರೆಯು ನಿನ್ನ ವಿಶ್ವಾಸವನ್ನು ಅಲುಗಾಡಿಸಲು ಸಾಧ್ಯವಿಲ್ಲ. ಹಾಗಿದ್ದಲ್ಲಿ ಅದು ವಿಶ್ವಾಸವೇ ಅಲ್ಲ. ಸಂಕಟದ ಪ್ರತಿ ಕ್ಷಣದಲ್ಲೂ ನಿನಗೆ ಸಹಾಯವು ದೊರಕುವುದು ಮತ್ತು ನಿನಗೆ ಸಹಾಯ ಮಾಡಲಾಗುವುದು ಎಂಬುದನ್ನು ಸುಮ್ಮನೇ ತಿಳಿ. ನಿನ್ನೊಂದಿಗೆ ನಿಲ್ಲುವ, ನಿನಗೆ ಸಹಾಯ ಮಾಡುವ ಒಂದು ಶಕ್ತಿಯಿದೆ. ಅಷ್ಟನ್ನೇ ನೀನು ಮನಸ್ಸಿನಲ್ಲಿಟ್ಟುಕೊಳ್ಳಬೇಕಾದುದು.

ಒಂದು ಧಾರಾಕಾರ ಮಳೆ ಅಥವಾ ಒಂದು ನೆರೆ ಅಥವಾ ಒಂದು ಕ್ಷಾಮವು ನಿನ್ನ ವಿಶ್ವಾಸವನ್ನು ಅಲುಗಾಡಿಸಬಲ್ಲದಾದರೆ, ಆಗ ಅದು ನಿಜವಾಗಿಯೂ ವಿಶ್ವಾಸವಲ್ಲ. ಅದೊಂದು ಪ್ರಾಸಂಗಿಕ ಪರಿಕಲ್ಪನೆ ಅಷ್ಟೇ. ಇದು ವಿಶ್ವಾಸಕ್ಕಿರುವ ಪರೀಕ್ಷೆಯ ಸಮಯವಾಗಿದೆ, ಹೀಗಾಗಿ ಅದನ್ನು ಅಚಲವಾಗಿರಿಸು

ಪ್ರಶ್ನೆ: ಗುರುದೇವ, ಸಂಕಟಕಾಲದಲ್ಲಿ ಭಾವನೆಗಳನ್ನು ನಿಯಂತ್ರಿಸುವುದು ಹೇಗೆ?



ಶ್ರೀ ಶ್ರೀ ರವಿ ಶಂಕರ್:ಉಸಿರಾಡುವುದು, ಉಸಿರಾಡುವುದು ಮತ್ತು ಉಸಿರಾಡುವುದು.
ಉಸಿರಾಟವೆಂಬುದು ಪ್ರಕೃತಿಯು ನಿಮ್ಮಲ್ಲಿ ಹಾಕಿರುವ ಅತ್ಯಂತ ದೊಡ್ದ ರಹಸ್ಯವಾಗಿದೆ. ಅದು ನಿಮ್ಮ ಭಾವನೆಗಳೊಂದಿಗೆ ಸಂಬಂಧ ಹೊಂದಿದೆ. ಉಸಿರಾಟದ ಅಭ್ಯಾಸದ ತಂತ್ರದ ಮೂಲಕ ನೀವು ನಿಮ್ಮ ಭಾವನೆಗಳನ್ನು ನಿಯಂತ್ರಿಸಬಹುದು. ನಿಮ್ಮಲ್ಲಿ ಹಲವರು ಇದನ್ನು ಅನುಭವಿಸಿರುವಿರಿ ಎಂದು ನನಗನಿಸುತ್ತದೆ, ಅಲ್ಲವೇ?

(ಹಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ)

ಯಾರು ಇದನ್ನು ಅನುಭವಿಸಿಲ್ಲವೋ ಅವರು ನಿಯಮಿತವಾಗಿ ಸ್ವಲ್ಪ ಉಸಿರಾಟದ ಅಭ್ಯಾಸಗಳನ್ನು ಮಾಡಬೇಕು. ಆಗ ನಿಮಗೆ ನಿಮ್ಮ ಮನಸ್ಸಿನ ಮೇಲೆ ಹೆಚ್ಚಿನ ಹಿಡಿತವಿರುವುದು.

ನಿಜವಾದ ಸೇವೆ ..


ಪ್ರಶ್ನೆ: ನಿಜವಾದ ಸೇವೆ ಯಾವುದು? ನನ್ನ ಪ್ರತಿಯೊಂದು ಕ್ರಿಯೆಯೂ ಹೇಗೆ ಸೇವೆಯಾಗಬಲ್ಲದು?




ಶ್ರೀ ಶ್ರೀ ರವಿ ಶಂಕರ್: ಸೇವೆಯೆಂದರೆ, ಅವನಂತೆ ಮಾಡುವುದು. ’ಅವನು’ ಎಂದರೆ, ಸೃಷ್ಟಿಕರ್ತ. ಅವನು ನಿಮಗಾಗಿ ಎಲ್ಲವನ್ನೂ ಮಾಡುತ್ತಾನೆ ಮತ್ತು ಅವನು ನಿಮ್ಮಿಂದ ಏನನ್ನೂ ನಿರೀಕ್ಷಿಸುವುದಿಲ್ಲ. ಆದುದರಿಂದ, ಪ್ರತಿಫಲವಾಗಿ ಏನನ್ನೂ ನಿರೀಕ್ಷಿಸದೆಯೇ, ನಿಮ್ಮಿಂದ ಏನು ಸಾಧ್ಯವೋ ಅದನ್ನು ಮಾಡುವುದು; ಇದು ಸೇವೆಯೆಂದು ಕರೆಯಲ್ಪಡುತ್ತದೆ.
ಖಂಡಿತವಾಗಿಯೂ ಅಲ್ಲೊಂದು ಪ್ರತಿಫಲವಿದೆ. ನಿಸ್ಸಂಶಯವಾಗಿ ಅದರಿಂದ ಒಂದು ಲಾಭವಿದೆ, ಆದರೆ ನೀವು ಪ್ರತಿಫಲವನ್ನು ನಿರೀಕ್ಷಿಸುವಾಗ, ಅದು ಸೇವೆಯಾಗುವುದಿಲ್ಲ. ಏನನ್ನೂ ನಿರೀಕ್ಷಿಸದೆಯೇ, ಏನನ್ನೂ ಬಯಸದೆಯೇ, ಕೇವಲ ಮಾಡುವುದಕ್ಕೋಸ್ಕರ ಮಾಡುವುದು ಸೇವೆಯೆಂದು ಕರೆಯಲ್ಪಡುತ್ತದೆ.

ಪ್ರಶ್ನೆ: ಗುರುದೇವ, ಯಾರನ್ನೂ ಕೆಟ್ಟವರೆಂದು ಪರಿಗಣಿಸಬಾರದೆಂದು ನೀವು ಈಗಷ್ಟೇ ಹೇಳಿದಿರಿ. ಇತರರು ನಮ್ಮ ಜೊತೆ ಕೆಟ್ಟದಾಗಿ ನಡೆದುಕೊಂಡರೆ, ಅದಕ್ಕೆ ನಾವು ಹೇಗೆ ಪ್ರತಿಕ್ರಿಯಿಸಬೇಕು?



ಶ್ರೀ ಶ್ರೀ ರವಿ ಶಂಕರ್: ಇತರರಿಗೆ ನಿಮ್ಮ ಬಗ್ಗೆ ಒಂದು ನಕಾರಾತ್ಮಕ ಅಭಿಪ್ರಾಯವಿದ್ದರೆ, ಅದು ಅವರ ಸಮಸ್ಯೆ, ನಿಮ್ಮದಲ್ಲ. ನಿಮ್ಮ ಕಡೆಯಿಂದ, ಯಾರನ್ನೂ ಕೆಟ್ಟವರಾಗಿ ಪರಿಗಣಿಸಬೇಡಿ. ಹೀಗೆ ಮಾಡುವುದರಿಂದ, ನಿಮ್ಮ ಮನಸ್ಸು ಸ್ಪಷ್ಟವಾಗಿಯೂ ಆಹ್ಲಾದಕರವಾಗಿಯೂ ಇರುವುದು ಮತ್ತು ನಿಮ್ಮ ಬುದ್ಧಿಯು ತೀಕ್ಷ್ಣವಾಗಿರುವುದು. ಇಲ್ಲದಿದ್ದರೆ, ಯಾವ ಜನರನ್ನು ನೀವು ಕೆಟ್ಟವರೆಂದು ಪರಿಗಣಿಸುವಿರೋ ಅವರು ಒಂದು ಭೂತದಂತೆ ನಿಮ್ಮ ಮನಸ್ಸನ್ನು ಕಾಡಲು ತೊಡಗುವರು. ಅಂತಹ ಯೋಚನೆಗಳು ನಿಮ್ಮ ಮನಸ್ಸನ್ನು ಹೊಕ್ಕಾಗ, ಸೃಜನಾತ್ಮಕವಾದ ಏನನ್ನಾದರೂ ಮಾಡಲು ನಿಮಗೆ ಸಾಧ್ಯವಾಗದು.

ನಾವು ಯಾರು?

#ಮಧುವಿದ್ಯಾ

ನಾವು ಯಾರು?

ಇದನ್ನು ಯಾರೂ ಸರಿಯಾಗಿ,
ಪೂರ್ಣವಾಗಿ ತಿಳಿಯರು.

ಪ್ರಾಸಂಗಿಕವಾಗಿ,
ಸಾಪೇಕ್ಷಿಕವಾಗಿ
ನಾವು ಯಾರು?
ಎಂಬುದನ್ನು ಜಗತ್ತು ಹೇಳುತ್ತದೆ.

ಆದರೆ ನಿಜವಾಗಿ ನಾವು ಯಾರು?
ಯಾರಿಗೂ ತಿಳಿಯದು.
ಎಲ್ಲ ಅಭಿಪ್ರಾಯ ಕಳೆದು ನೋಡಿದಾಗ ಎನು ಸತ್ಯವಾಗಿ ಉಳಿಯುತ್ತದೆಯೋ ಅದೇ "ನಾನು" ಎನ್ನುವುದರ ನಿಜ!

ಅದು ದೇವರು,
ಅದು ನಮ್ಮ ಸ್ವರೂಪ,
ಮಾನವ ತಳೆದ ಎಲ್ಲ ದೈವೀ ಕಲ್ಪನೆಗಳನ್ನು ಕಳೆದುಹಾಕಿದಾಗ ಏನು ಉಳಿಯುತ್ತದೆಯೋ ಅದು ದೇವರು.

ಘನ ಸತ್ಯ.
ಅದಕ್ಕೆ ಯೋಗ್ಯ ಶಬ್ದ
'ಬಯಲು! '
"ಶೂನ್ಯ!"

ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು

ಸಾಮಾನ್ಯ ಜ್ಞಾನಕ್ಕೂ ತಿಳಿಯುವ ವಾಸ್ತು

ಸಾಮಾನ್ಯ ಜ್ಞಾನಕ್ಕೂ ತಿಳಿಯುವ ವಾಸ್ತು




ವಾಸ್ತು ಶಾಸ್ತ್ರವು ಖಂಡಿತವಾಗಿಯೂ ಒಂದು ವಿಜ್ಞಾನ. ಪ್ರಾಚೀನ ಕಾಲದಲ್ಲಿ ಈ ವಿಜ್ಞಾನವನ್ನು ಅಭಿವೃದ್ಧಿಗೊಳಿಸಲಾಯಿತು ಮತ್ತು ಅದು ವೇದದ ಒಂದು ಭಾಗ. ಆದರೆ ಇಂದಿನ ದಿನದಲ್ಲಿ ಆ ವಿಜ್ಞಾನ ನಮಗೆ ಪೂರ್ಣವಾಗಿ ಲಭ್ಯವಾಗಿಲ್ಲ. ತಾಳೆಗರಿಗಳ ಮೇಲೆ ಅದನ್ನು ಬರೆದು ಪ್ರಾಚೀನ ವಿಶ್ವವಿದ್ಯಾಲಯಗಳಲ್ಲಿ ಮತ್ತು ಗ್ರಂಥಾಲಯಗಳಲ್ಲಿ ಅದನ್ನು ಇಡಲಾಗಿತ್ತು. ಆದರೆ ಕ್ರಿಮಿಗಳು ಮತ್ತು ಇಲಿಗಳು ಅವುಗಳನ್ನು ನಾಶ ಮಾಡಿಬಿಟ್ಟವು. ಇದರ ಸಾಕಷ್ಟು ಜ್ಞಾನ ಇಂದು ನಮಗೆ ಲಭ್ಯವಾಗಿಲ್ಲ. ಆದ್ದರಿಂದ ಇಂದಿನ ದಿನದಲ್ಲಿ ಜನರು ವಾಸ್ತು ಶಾಸ್ತ್ರದ ತಮ್ಮದೇ ಬ್ರ್ಯಾಂಡ್‌ಗಳನ್ನು, ಸಿದ್ಧಾಂತಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಒಂದನ್ನು ಮಾತ್ರ ನೆನಪಿನಲ್ಲಿಟ್ಟುಕೊಳ್ಳಿ. ಒಬ್ಬರು ವಾಸ್ತುವಿನ ದೋಷಗಳಿಂದ ಯಾವುದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿರಲಿ, ಎಲ್ಲದಕ್ಕಿಂತಲೂ ದೊಡ್ಡದಾದದ್ದು ಕೃಪೆ. ''ಓಂ ನಮಃ ಶಿವಾಯ''ದ ಮಂತ್ರೋಚ್ಚಾರಣೆಯಿಂದ ಎಲ್ಲವನ್ನೂ ನಿವಾರಿಸಬಹುದು. ಈ ಮಂತ್ರೋಚ್ಚಾರಣೆಯಿಂದ ಎಲ್ಲಾ ಸಮಸ್ಯೆಗಳು ಮತ್ತು ನಕಾರಾತ್ಮಕತೆಯು ಬಿದ್ದು ಹೋಗುತ್ತದೆ. ವಾಸ್ತುವಿನ ಕೆಲವು ಮೂಲಭೂತ ತತ್ವಗಳು ತಾವೇ ವಿವರಣೆಯನ್ನು ನೀಡುತ್ತವೆ. ಉದಾಹರಣೆಗೆ, ಸೂರ್ಯನು ಪೂರ್ವದಲ್ಲಿ ಉದಯಿಸುತ್ತಾನೆ. ಆದ್ದರಿಂದ ಮನೆಯ ಮುಖ್ಯ ದ್ವಾರವನ್ನು ಪೂರ್ವದೆಡೆಗೆ ಇಡಬೇಕು. ಆಗ ಉದಯಿಸುವ ಸೂರ್ಯನ ಕಿರಣಗಳು ಮನೆಯೊಳಗೆ ಪ್ರವೇಶಿಸುತ್ತದೆ. ಮನೆಯ ಮುಖ್ಯ ದ್ವಾರವನ್ನು ಪೂರ್ವಕ್ಕೆ ಅಥವಾ ಪಶ್ಚಿಮಕ್ಕೆ ಇಡಬಹುದು. ಮನೆಯ ಮುಖ್ಯದ್ವಾರ ದಕ್ಷಿಣಾಭಿಮುಖವಾಗಿ ಇರಬಾರದು. ಇದರ ಕಾರಣವೆಂದರೆ ಹಿಂದಿನ ಕಾಲದಲ್ಲಿ ಸ್ಮಶಾನಭೂಮಿಯು ಸದಾ ದಕ್ಷಿಣ ದಿಕ್ಕಿನಲ್ಲಿ ಇರುತ್ತಿತ್ತು. ಪ್ರತಿ ನಗರದ ಅಥವಾ ಪಟ್ಟಣದ ದಕ್ಷಿಣ ಭಾಗದಲ್ಲಿ ದೊಡ್ಡ ಸ್ಮಶಾನ ಭೂಮಿ ಇರುತ್ತಿತ್ತು ಮತ್ತು ಅದರಲ್ಲಿ ಹೆಣಗಳನ್ನು ಸುಡುತ್ತಿದ್ದರು. ಆ ಗಾಳಿಯು ಬೀಸಿ ಮನೆಯೊಳಗೆ ಬಾರದಿರಲೆಂದು ಮನೆಯ ಮುಖ್ಯದ್ವಾರಗಳನ್ನೆಂದಿಗೂ ದಕ್ಷಿಣ ದಿಕ್ಕಿನಲ್ಲಿ ಇಡುತ್ತಿರಲಿಲ್ಲ. ಇಂದು ವಿಷಯ ಹೀಗಿಲ್ಲ. ಕೆಲವು ನಗರಗಳಲ್ಲಿ ಸ್ಮಶಾನ ಭೂಮಿ ಮನೆಯ ಪೂರ್ವದಲ್ಲಿ ಅಥವಾ ಉತ್ತರ ಭಾಗದಲ್ಲಿದ್ದರೆ, ಮನೆಯ ಮುಖ್ಯದ್ವಾರ ಆ ದಿಕ್ಕುಗಳಲ್ಲಿ ಇರಲು ಸಾಧ್ಯವಿಲ್ಲ. ರಷ್ಯಾದ ಉದಾಹರಣೆಯನ್ನು ತೆಗೆದುಕೊಂಡರೆ, ರಷ್ಯಾದಲ್ಲಿ ಸೂರ್ಯನು ದಕ್ಷಿಣ ದಿಕ್ಕಿನಲ್ಲಿ ಉದಯಿಸುತ್ತಾನೆ. ಆದ್ದರಿಂದ ಆ ದೇಶಗಳಲ್ಲಿ ಮನೆಯ ಮುಖ್ಯ ದ್ವಾರಗಳು ದಕ್ಷಿಣಾಭಿಮುಖವಾಗಿರುತ್ತದೆ. ಆಗ ಅವರ ಮನೆಯೊಳಗೆ ಹೆಚ್ಚು ಬೆಳಕು ಬರುತ್ತದೆ. ಆದ್ದರಿಂದ ರಷ್ಯಾದ ಮನೆಗಳ ವಾಸ್ತುವೇ ಬೇರೆ. ಕೈಲಾಸ ಪರ್ವತವು ಭಾರತದ ಈಶಾನ್ಯ ಭಾಗದಲ್ಲಿದೆ. ಜನರು ಅದನ್ನು ಬಹಳ ಶುದ್ಧ ಮತ್ತು ಪವಿತ್ರ ಎಂದು ಭಾವಿಸುತ್ತಾರೆ ಮತ್ತು ಆ ದಿಕ್ಕಿಗೆ ಈಶಾನ್ಯ ಎಂಬ ದೇವತೆಯನ್ನು ಅಧಿಪತಿಯಾಗಿಸಿದರು. ಮುಸಲ್ಮಾನರಿಗೆ ಮೆಕ್ಕಾ ಮತ್ತು ಮೆಕ್ಕಾ ಇರುವ ದಿಕ್ಕಿನಂತೆಯೇ ಇದುವೂ ಸಹ. ಭಾರತದ ಮುಸಲ್ಮಾನರು ನಮಾಜನ್ನು ಮಾಡುವಾಗ ಪಶ್ಚಿಮ ದಿಕ್ಕಿನಲ್ಲಿ ಮಾಡುತ್ತಾರೆ. ಆದರೆ ಜಾರ್ದನ್‌, ಲೆಬಾನೆನ್‌, ಇತ್ಯಾದಿ ದೇಶಗಳ ಮುಸಲ್ಮಾನರು ಪೂರ್ವ ದಿಕ್ಕಿನಲ್ಲಿ ನಮಾಜ್‌ ಮಾಡುತ್ತಾರೆ, ಏಕೆಂದರೆ ಅವರಿಗೆ ಮೆಕ್ಕ, ಅವರ ಪೂರ್ವದ ದಿಕ್ಕಿನಲ್ಲಿದೆ. ವಾಸ್ತು ಶಾಸ್ತ್ರವು ಸೂರ್ಯ ಮತ್ತು ಸೂರ್ಯನ ದಿಕ್ಕಿನ ಮೇಲೆ ಬಹಳ ಒತ್ತೆಯನ್ನಿಡುತ್ತದೆ. ಈ ತಿಳಿವಳಿಕೆಯನ್ನು ಅನುಸರಿಸಿದಾಗ ಆಸ್ಪ್ರೇಲಿಯ ಅಥವಾ ದಕ್ಷಿಣ ಅಮೆರಿಕದ ವಾಸ್ತು ಪೂರ್ಣವಾಗಿ ಬೇರೆಯಾಗಿರುತ್ತದೆ. ಆ ದೇಶಗಳಲ್ಲಿ ಸೂರ್ಯನ ದಿಕ್ಕು ಪೂರ್ಣವಾಗಿ ಬೇರೆಯಾಗಿರುತ್ತದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಾಸ್ತು ಶಾಸ್ತ್ರವನ್ನು ನಿರೂಪಿಸಲಾಗಿದೆ. ಮತ್ತೊಂದು ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಒಂದು ಸಾರ್ವಜನಿಕದ ಸ್ಥಳದ ವಾಸ್ತುವು ಒಂದು ದೇವಸ್ಥಾನ, ಅಂಗಡಿ ಅಥವಾ ಆಶ್ರಮದ ವಾಸ್ತುವಿಗಿಂತಲೂ ಭಿನ್ನವಾಗಿರುತ್ತದೆ.

 ಶ್ರೀ ಶ್ರೀ ರವಿಶಂಕರ್‌ 
When everything seems to be going against you, remember that the airplane takes off against the wind, not with it …

Henry Ford





Best lesson of life is listen to everyone and learn from everyone ,because nobody knows everything  and every one knows something


ಏನಿದೆಯೋ ಅದನ್ನು ತಿಳಿಯುವುದು

ಏನಿದೆಯೋ ಅದನ್ನು ತಿಳಿಯುವುದು



 ಜೀವನ ಎನ್ನುವುದು ಸಂಘರ್ಷ. ಸಂಘರ್ಷ ಎಂದರೇನು ಎಂಬುದು ನಮಗೆ ಗೊತ್ತಿದೆ. ಸಂಘರ್ಷ ಅರ್ಥವಾದಾಗ 'ಏನಿದೆಯೋ', ಅದರ ಸತ್ಯ ತಿಳಿಯುತ್ತದೆ. ಈ ಸತ್ಯದ ಅವಲೋಕನದಿಂದಾಗಿ ಮನಸ್ಸು 'ಏನಿದೆಯೋ' ಅದರಿಂದ ಬಿಡುಗಡೆ ಹೊಂದುತ್ತದೆ. ಜೀವನದಲ್ಲಿ ತುಂಬಾ ದುಃಖವಿದೆ. ಆದರೆ ಅದನ್ನು ಪರಿಹರಿಸುವುದು ಹೇಗೆಂದು ತಿಳಿದಿಲ್ಲ. ದುಃದ ಪರಿಹಾರವೇ ವಿವೇಕದ ಉದಯ. ದುಃಖವೆಂದರೇನು? ಅದರ ಸ್ವರೂಪವೇನು? ರಚನೆಯೇನು? ಎಂಬುದನ್ನು ತಿಳಿಯದೆ ಪ್ರೇಮವೆಂದರೇನು? ಎಂಬುದು ನಮಗೆ ತಿಳಿಯದು. ಏಕೆಂದರೆ ನಮ್ಮ ಪಾಲಿಗೆ ಪ್ರೇಮವೆಂಬುದು ದುಃಖ, ನೋವು, ಯೋತನೆ, ಸುಖ ಹಾಗೂ ಅಸೂಯೆ. 'ನಾನು ನಿನ್ನನ್ನು ಪ್ರೀತಿಸುತ್ತೇನೆ' ಎಂದು ಹೆಂಡತಿಗೆ ಹೇಳುವ ಗಂಡ ಅದೇ ವೇಳೆಗೆ ಮಹತ್ವಾಕಾಂಕ್ಷಿಯು ಆಗಿದ್ದರೆ ಅಂಥ ಪ್ರೀತಿಗೆ ಅರ್ಥವಿದೆಯೇ? ಮಹತ್ವಾಕಾಂಕ್ಷೆ ಇರುವಾಗ ಪ್ರೀತಿಸಲು ಸಾಧ್ಯವೇ? ಪೈಪೋಟಿಯ ಮನುಷ್ಯ ಪ್ರೀತಿಸಬಲ್ಲನೇ? ಆದರೂ ನಾವು ಪ್ರೇಮ, ಮಾರ್ದವತೆ, ಯುದ್ಧಗಳನ್ನು ನಿಲ್ಲಿಸುವ ಬಗ್ಗೆ ಮಾತಾಡುತ್ತೇವೆ. ಇನ್ನೊಂದು ಕಡೆಯಿಂದ ಸ್ಪರ್ಧಾತ್ಮಕವಾಗಿದ್ದೇವೆ, ಮಹತ್ವಾಕಾಂಕ್ಷಿಗಳಾಗಿದ್ದೇವೆ. ನಮ್ಮ ಸ್ಥಾನಗಳ ಬಗ್ಗೆ ಕಾತರರಾಗಿದ್ದೇವೆ ಇತ್ಯಾದಿ. ಇದೆಲ್ಲವೂ ದುಃಖವನ್ನುಂಟುಮಾಡುತ್ತದೆ. ದುಃಖಕ್ಕೆ ಕೊನೆ ಇದೆಯೇ? ನಿಮ್ಮನ್ನು ನೀವು ಅರ್ಥಮಾಡಿಕೊಂಡಾಗ ಅಂದರೆ 'ಏನಿದೆಯೋ' ಅದನ್ನು ತಿಳಿದಾಗ ದುಃಖ ಮಾಯಾವಾಗುತ್ತದೆ. ಆಗ ನಿಮಗೇಕೆ ದುಃಖ ಒದಗಿತು, ಆ ದುಃಖವೆಂಬುದು ಆತ್ಮ ಮರುಕವೆ? ಅಥವಾ ಒಂಟಿತನದ ಭಯವೇ? ನಿಮ್ಮ ಬದುಕಿನ ಖಾಲಿತನವೇ? ಅಥವಾ ಪರರನ್ನು ಅವಲಂಬಿಸುವುದರಿಂದ ಬಂದ ದುಃಖವೇ ಎಂಬುದು ತಿಳಿಯುತ್ತದೆ. ಇದೆಲ್ಲ ನಮ್ಮ ಜೀವನದ ಒಂದು ಭಾಗ. ಇವುಗಳನ್ನು ಅರಿತಾಗ ಬದುಕಿನ ದೊಡ್ಡ ಸಮಸ್ಯೆ ಅದೇ ಸಾವಿನ ಬಗ್ಗೆ ಚಿಂತನೆಗಳು; ನಾವು ಪುನರ್ಜನ್ಮದ ಬಗ್ಗೆ, ಸಾವಿನ ಅನಂತರ ಏನಾಗುತ್ತದೆ ಎಂಬ ಬಗ್ಗೆ ಮಾತನಾಡುತ್ತಿಲ್ಲ ಅಥವಾ ಸಾವಿನ ಬಗ್ಗೆ ಭಯ ಪಡುವವರಿಗೆ ಆ ಬಗ್ಗೆ ಭರವಸೆಯನ್ನು ತುಂಬುತ್ತಿಲ್ಲ. ವೃದ್ಧಾಪ್ಯವಿದೆ ಅದರೊಂದಿಗೆ ಕಾಯಿಲೆ ಕಸಾಲೆ, ಸ್ಮೃತಿನಾಶ, ವಯಸ್ಸಾಗುತ್ತಿದೆ ಎಂಬ ಭಯ ಎಲ್ಲ ಇದೆ. ಈ ದೇಶದಲ್ಲಿ ವಯಸ್ಸಾದವರನ್ನು ತರುಣರೆಂದು ಕರೆಯಲಾಗುತ್ತಿದೆ! ಎಂಬತ್ತರ ಹರೆಯದ ಹೆಂಗಸನ್ನು ತರುಣಿ ಎಂದು ಸಂಬೋಧಿಸಲಾಗುತ್ತದೆ. ಜನರಿಗೆ ಭಯವಿದೆ. ಭಯವಿರುವಲ್ಲಿ ತಿಳಿವಳಿಕೆಯಿಲ್ಲ. ಆತ್ಮ ಮರುಕವಿರುವಲ್ಲಿ ದುಃಖದಿಂದ ಬಿಡುಗಡೆಯಿಲ್ಲ. ಹೀಗಾಗಿ ಸಾಯುವುದು ಎಂದರೇನು? ಜೀವಿಯ ಬದುಕು ಮುಗಿಯುತ್ತದೆ. ಮನುಷ್ಯ ಸುಮಾರು 90 ವರ್ಷ ಬದುಕಬಹುದು. ವಿಜ್ಞಾನಿಗಳು ಏನಾದರೊಂದು ಔಷಧ ಕಂಡು ಹುಡುಕಿದರೆ 150 ವರ್ಷ ಬದುಕಿದರೂ ಬದುಕಬಹುದು. ಈ ನೂರೈವತ್ತು ವರ್ಷ ಏಕೆ ಬದುಕಬೇಕು? ದೇವರಿಗೇ ಗೊತ್ತು! ನೂರೈವತ್ತು ವರ್ಷ ಬದುಕಿದರೂ ನಿಮ್ಮ ದೇಹ ಸವೆಯುತ್ತದೆ. ಏಕೆಂದರೆ ಸಂಘರ್ಷ, ಭಯ, ಉದ್ವಿಗ್ನತೆ, ಮನುಷ್ಯರು ಹಾಗೂ ಪ್ರಾಣಿಗಳನ್ನು ಕೊಲ್ಲುವುದು- ಹೀಗೆ ತೀರ ಕೆಟ್ಟದಾಗಿ ಬದುಕುತ್ತೇವೆ. ನಾವು ನಮ್ಮ ಬದುಕನ್ನು ಎಷ್ಟೊಂದು ಕೆಡೆಸಿಕೊಳ್ಳುತ್ತೇವೆ! ಹೀಗಾಗಿ ವೃದ್ಧಾಪ್ಯವೆಂಬುದು ಭಯಾನಕ ಸಂಗತಿಯಾಗುತ್ತದೆ. ಆದರೂ ಯುವಕರು, ಮಧ್ಯವಯಸ್ಕರು ಪ್ರಾಯದವರು ಸಾಯುತ್ತಾರೆ. ಭೌತಿಕ ಮರಣದ ಹೊರತಾಗಿ ಅನಿವಾರ‍್ಯವಾದ ಸಾಯುವುದು ಎಂದರೇನು? ಚರಮದೇಹದ ಅಂತ್ಯ ಎಂಬುದಕ್ಕಿಂತ ಆಳವಾದ ಅರ್ಥ ಮರಣಕ್ಕಿದೆ.

* ಜೆ. ಕೃಷ್ಣಮೂರ್ತಿ

☘🍁☘🍁☘🍁☘🍁☘

ನಮ್ಮ ನೈಜ ವ್ಯಕಿತ್ವ ಹೇಳಿಕೊಳ್ಳಬೇಕು

ನಮ್ಮ ನೈಜ ವ್ಯಕಿತ್ವ ಹೇಳಿಕೊಳ್ಳಬೇಕು


ನಮ್ಮ ವ್ಯಕ್ತಿತ್ವವನ್ನು ನಾವು ಹೇಗೆ ಬಿಂಬಿಸಿಕೊಳ್ಳುತ್ತೇವೆ. ಒಮ್ಮೆ ಯೋಚಿಸಿ ನೋಡಿ. ನಮ್ಮಲ್ಲಿರುವ ಸಾಮರ್ಥ್ಯ, ಕೌಶಲ, ಅರ್ಹತೆಗಳನ್ನು ಆಧರಿಸಿ ವ್ಯಕ್ತಿತ್ವ ಪ್ರಕಟಿಸಿಕೊಳ್ಳುತ್ತೇವೆಯೋ, ಇತರರನ್ನು ಹೀಯಾಳಿಸುವ ಮೂಲಕ ನಮ್ಮನ್ನು ನಾವು ಪ್ರಕಟಿಸಿಕೊಳ್ಳುತ್ತೇವೆಯೋ? ಈ ಪ್ರಶ್ನೆ ಏಕೆ ಕೇಳಬೇಕಾಯಿತೆಂದರೆ ಬಹಳಷ್ಟು ಜನ ತಮ್ಮ ಒಳಿತನ್ನು ಹೇಳಿಕೊಳ್ಳುವ ಮುನ್ನ ಬೇರೆಯವರ ಕೆಡುಕನ್ನು ಹೇಳಿಕೊಳ್ಳುವುದು ಒಂದು ಪ್ರವೃತ್ತಿಯೇ ಆಗಿಬಿಟ್ಟಿದೆ. ನಾವು ಉತ್ತಮ ವಾಗ್ಮಿ ಎಂದು ಹೇಳಿಕೊಳ್ಳುವ ಬದಲು ಬೇರೆಯವರಿಗೆ ಪದೋಚ್ಛಾರಣೆಯೇ ಸರಿಯಾಗಿ ಬರುವುದಿಲ್ಲ ಎನ್ನುವುದು. ನಾವು ಮಧುರವಾಗಿ ಹಾಡುತ್ತೇವೆ ಎಂದು ಹೇಳುವುದಕ್ಕಿಂತ ಬೇರೆಯವರು ಕರ್ಕಶವಾಗಿ ಹಾಡುತ್ತಾರೆ ಎಂದು ಮೂದಲಿಸುವುದು. ನಾವು ಚೆನ್ನಾಗಿ ಬರೆಯುತ್ತೇವೆ ಎಂದು ಹೇಳುವ ಬದಲಿಗೆ ಬೇರೆಯವರಿಗೆ ಕಾಗುಣಿತವೇ ಗೊತ್ತಿಲ್ಲ ಎಂದು ಟೀಕಿಸುವುದು. ನಮಗೆ ಬೇಕಾದ ವ್ಯಕ್ತಿ ಸಜ್ಜನ ಎಂದು ಹೇಳುವುದು, ಬೇಡದ ವ್ಯಕ್ತಿಗಳ ಚಾರಿತ್ರ್ಯಹರಣ ಮಾಡುವುದು... ಈ ಪ್ರವೃತ್ತಿ ಹೀಗೆ ಮುಂದುವರಿಯುತ್ತದೆ. ನೆಗಿಟಿವ್‌ ಚಿಂತನೆ, ಕ್ರಿಯೆಗಳಲ್ಲಿ ತಮ್ಮನ್ನು ಕಳೆದುಕೊಂಡವರ ಚಿಂತನೆಯ ದಾಟಿ ಹೀಗೆ ಇರುತ್ತದೆ. ಇದರ ಅಪಾಯ ಏನೆಂದರೆ, ಇವರು ಎಲ್ಲೂ ಪಾಸಿಟಿವ್‌ ಹುಡುಕುವುದಿಲ್ಲ. ನೀವು ಯಾರನ್ನೇ, ಯಾವುದೇ ಕಾರಣಕ್ಕೆ ಪ್ರಸ್ತಾಪಿಸಿ,' ಓ..., ಅವ್ರಾ...!' ಎಂದು ಉದ್ಗರಿಸುತ್ತಾರೆ. ಆ ಉದ್ಗಾರದಲ್ಲಿ ಪ್ರಸ್ತಾಪಿಸಿದ ವ್ಯಕ್ತಿಯ ಘನತೆ, ಸ್ಥಾನಮಾನ ಒಂದಿಷ್ಟು ಕುಗ್ಗುವಂತಿರುತ್ತದೆ. ಇಂಥವರ ಬಾಯಲ್ಲಿ ಎಂಥ ಗಣ್ಯರೂ ನಗಣ್ಯರಾಗಬಲ್ಲರು. ಎಂತಹ ವಿದ್ವಾಂಸರೂ ದಡ್ಡ ಶಿಖಾಮಣಿ ಆಗಬಲ್ಲರು. ಸಮರ್ಥರೂ ಅಸಮರ್ಥರಾಗಬಲ್ಲರು. ಮಾನವೀಯತೆಯ ಒರತೆಯಾಗಿರುವ ವ್ಯಕ್ತಿತ್ವವೊಂದನ್ನು ನಿಷ್ಕರುಣಿ ಎಂಬಂತೆ ಬಿಂಬಿಸುವರು. ನಮ್ಮ ದೈನಂದಿನ ಜೀವನದಲ್ಲಿ ಇಂತಹ ವ್ಯಕ್ತಿಗಳು ಬೇಡವೆಂದರೂ ಎಲ್ಲೋ ಒಂದು ಕಡೆ ಬಂದು ಹೋಗುತ್ತಾರೆ. ಇವರು ತುಂಬಾ ಆಪಾಯಕಾರಿ. ಇವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಇವರ ವಾಚಾಳಿತನ, ನೇತ್ಯಾತ್ಮಕ ಅಭಿಪ್ರಾಯ ಹೊರ ಹಾಕುವ ಸನ್ನಿವೇಶ ನಾವು ಸೃಷ್ಟಿಸಬಾರದು. ಸಾಧ್ಯವಾದರೆ, ಅಂತಹ ಕಡೆಯಿಂದ ನಿರ್ಗಮಿಸಿ ಅವರನ್ನು ನಾವು ನಗಣ್ಯ ಗೊಳಿಸುತ್ತಿದ್ದೇವೆ ಎನ್ನುವ ಸೂಚನೆ ಕೊಡುವುದು ಒಳ್ಳೆಯದು. ಇದರಿಂದ ಅವರು ಎಚ್ಚರವಾಗುತ್ತಾರೋ ಬಿಡುತ್ತಾರೋ ಗೊತ್ತಿಲ್ಲ. ಅವರಿಂದ ಪ್ರಭಾವಿತರಾಗುವವರ ಸಂಖ್ಯೆ ಕಡಿಮೆ ಮಾಡಬಹುದು. ಅಷ್ಟರಮಟ್ಟಿಗೆ ನಾವು ಕೂಡಾ ಸಾಮಾಜಿಕ ಸ್ವಾಸ್ಥ್ಯ ಕಾಪಾಡಬಹುದು. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ನಮ್ಮ ಸಾಮರ್ಥ್ಯ, ಅರ್ಹತೆ, ಕೌಶಲಗಳ ಕುರಿತು ನಮ್ಮ ಸ್ನೇಹಿತರಿಗೆ, ಹಿತೈಷಿಗಳಿಗೆ ಗೊತ್ತೇ ಇರುತ್ತದೆ. ಆದಾಗ್ಯೂ, ಕೆಲ ಸಂದರ್ಭಗಳಲ್ಲಿ ಇದನ್ನೆಲ್ಲ ಸ್ನೇಹಿತರ ವಲಯದಲ್ಲಿ ಮುಕ್ತವಾಗಿ ಹೇಳಿಕೊಳ್ಳಬೇಕು. ಇದು ಸ್ವಯಂ ಮುಖಸ್ತುತಿ ಎಂದು ಭಾವಿಸುವ ಅಗತ್ಯ ಇಲ್ಲ. ಬಹಳಷ್ಟು ಜನ ದಶಕಗಳ ಕಾಲ ಜತೆಯಲ್ಲಿದ್ದರೂ ಪರಸ್ಪರ ಪರಿಚಯ, ಒಡನಾಟ ಇರುತ್ತದೆಯೇ ಹೊರತು ಅವರವರ ಸಾಮರ್ಥ್ಯದ ಅರಿವು ಇರುವುದಿಲ್ಲ. ನಮ್ಮನ್ನು ಬೇರೆಯವರು ಕೆಟ್ಟದಾಗಿ ಬಿಂಬಿಸುವ ಮೊದಲು ನಮ್ಮ ನೈಜ ವ್ಯಕಿತ್ವ ಏನೆಂದು ನಾವೇ ಸುತ್ತಲಿನವರಿಗೆ ಮನವರಿಕೆ ಮಾಡಿಕೊಡುವುದು ಸೂಕ್ತ.

-ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ
A pessimist sees the difficulty in every opportunity;

An optimist sees the opportunity in every difficulty

If you change the way you look at things, the things you look at change.. Maintain Positive Thoughts, Look forward and see hope ….


🌿🍃☘🌿🍃☘🌿🍃☘
Those who bring sunshine to the lives of others cannot keep it from themselves…

Nothing in the nature lives for itself. Rivers don’t drink their own water. Trees don’t eat their own fruit.Sun doesn’t give heat for itself. Flowers don’t spread fragrance for themselves… Living for Others is the Rule of Nature and the path to happiness….

🌿🍃☘🌿🍃☘🌿🍃☘
💥💥💥💥💥💥💥💥💥

Sun rises every where but crop grows only where the farmer has worked hard. Similarly GOD  is everywhere but his grace is  for the one who works hard…

—-

✨💫✨💫✨💫✨💫✨
Collected..

✨ಶ್ರೀವಾಣಿ✨ ಸುಖ-ದುಃಖಗಳ ಸಮ್ಮಿಶ್ರಣ ಈ ಜಗಜೀವನ

✨ಶ್ರೀವಾಣಿ✨


ಸುಖ-ದುಃಖಗಳ ಸಮ್ಮಿಶ್ರಣ ಈ ಜಗಜೀವನ



ಪರಮಸತ್ಯ ಪರಮಾತ್ಮನನ್ನು ಅರಿತವರು ಜ್ಞಾನಿಗಳು. ಅನುಭವಿಸಿದವರು ಅನುಭಾವಿಗಳು, ಸಂತರು, ಶರಣರು, ಋುಷಿಮುನಿಗಳು. ಅವರ ಅನುಭವದ ನುಡಿಗಳನ್ನು ಕೇಳಿದಾಗ ನಮ್ಮ ಪ್ರಪಂಚದ ತಾಪತ್ರಯಗಳೆಲ್ಲ ಮರೆಯಾಗಿ ಮನದಲ್ಲಿ ಪರಮಶಾಂತಿಯು ನೆಲೆಸುತ್ತದೆ. ಅವರ ನುಡಿಗಳು ಅಮೂಲ್ಯ ಅನುಪಮ. ಅವರ ಜೀವನ ಪರಮಪಾವನ ಪರಮಾದರ್ಶ. ಈ ಜಗತ್ತಿನಲ್ಲಿ ಕೇವಲ ಸುಖ, ಅಥವಾ ಕೇವಲ ದುಃಖ ಎಂಬುದು ಎಲ್ಲಿಯೂ ಇಲ್ಲ. ಸುಖ-ದುಃಖಗಳ ಸಮ್ಮಿಶ್ರಣ ಈ ಜಗಜೀವನ. ಒಂದು ಕ್ಷ ಣ ಸುಖದ, ತೆರೆ ಮತ್ತೊಂದು ಕ್ಷ ಣ ದುಃಖದ ತೆರೆ; ಒಂದು ರೀತಿ ತೆರೆಯಾಡಿದಂತೆ. ಈ ಜಗತ್ತಿನಲ್ಲಿ ನಾವು ಯಾರೂ ನೂರಕ್ಕೆ ನೂರು ಸುಖದ ಕನಸನ್ನು ಕಾಣಲಾಗದು. ಬಡವ-ಬಲ್ಲಿದ ಸ್ತ್ರೀ-ಪುರುಷರೆಂಬ ಭೇದ ಭಾವವಿಲ್ಲದೆ ಎಲ್ಲರ ಜೀವನದಲ್ಲಿಯೂ ನೋವು-ನಲಿವು, ಹೂವು-ಮುಳ್ಳು, ಸುಖ-ದುಃಖ ಎರಡೂ ಇರುವುದು ಸ್ವಾಭಾವಿಕ. ಇದಕ್ಕೆ ಇತಿಹಾಸದ ಪುಟಗಳೇ ಸಾಕ್ಷಿ. ಮಹಾಭಾರತದಲ್ಲಿ ಬರುವ ಕೌರವ ಪಾಂಡವರು ಸಹೋದರರು. ರಾಜಮಹಾರಾಜರಾದ ಅವರಿಗೇನು ಕೊರತೆ ಇತ್ತು? ಸಿರಿ-ಸಂಪದ, ಧನ-ಕನಕ, ಮಾನ-ಮರ್ಯಾದೆ ಸಕಲ ಭೋಗಭಾಗ್ಯವಿತ್ತು. ಆದರೂ ಈ ಜಗತ್ತು ಅವರನ್ನು ನೆಮ್ಮದಿಯಿಂದ ಇರಲು ಬಿಡಲಿಲ್ಲ. ಇಬ್ಬರ ಮಧ್ಯದಲ್ಲಿ ಘನಘೋರ ಯುದ್ಧವಾಯಿತು. ಹದಿನೆಂಟು ಅಕ್ಷೋಹಿಣಿ ಸೈನ್ಯ ನೆಲಕ್ಕುರುಳಿತು. ರಥಕ್ಕೆ ಬಳಸಿದ ಅಸಂಖ್ಯ ಪಶುಗಳು ಪ್ರಾಣ ಕಳೆದುಕೊಂಡವು. ಇನ್ನುಳಿದ ಗಾಯಾಳುಗಳ ಆಕ್ರಂದನ ಮುಗಿಲು ಮುಟ್ಟಿತು. ಪಾಂಡವರು ಜಯಶೀಲರಾಗಿ ಸಿಂಹಾಸನವನ್ನೇರಿ ಅರಮನೆಯಲ್ಲಿ ವಿಜಯೋತ್ಸವ ಆಚರಿಸುತ್ತಿದ್ದರು. ಅಲ್ಲಿಗೆ ಓರ್ವ ವೃದ್ಧ ಹೆಣ್ಣು ಮಗಳು ಬಂದು ಧರ್ಮರಾಜನಿಗೆ ಕೇಳುತ್ತಾಳೆ 'ಯುದ್ಧದಲ್ಲಿ ಗೆದ್ದು ಬಂದವರು ನೀವೀಗ ಸಿಂಹಾಸನವನ್ನೇರಿ ರಾಜ್ಯವನ್ನಾಳಲು ಉತ್ಸುಕರಾಗಿದ್ದೀರಿ. ಆದರೆ ನಿಮ್ಮ ರಾಜ್ಯದಲ್ಲಿ ಯಾರಿದ್ದಾರೆ ? ಯುವಕರೆಲ್ಲ ನಿಮ್ಮ ರಾಜ್ಯದಾಹಕ್ಕೆ ಆಹುತಿಯಾಗಿದ್ದಾರೆ. ಈಗ ಉಳಿದಿರುವವರೆಲ್ಲರೂ ವಿಧವೆಯರು, ವೃದ್ಧರು, ಅನಾಥ ಮಕ್ಕಳು, ದರಿದ್ರರು, ರೋಗಿಗಳು, ನಿರ್ಗತಿಕರು. 'ವೃದ್ಧೆಯ ಅಳಲನ್ನು ಕೇಳಿದಾಗ ಧರ್ಮರಾಜನ ಕಣ್ಣು ತೆರೆದಿತ್ತು. ಆದರೆ ಕಾಲ ಮಿಂಚಿ ಹೋಗಿತ್ತು. ಬದುಕಿನ ಬೆಲೆಯನ್ನು ಅರಿಯದವರಿಗೆ ಆಗುವ ದುರ್ಗತಿ ಇಷ್ಟೇ. ಒಮ್ಮೆ ನಾಡನಲೆಗಾರನೊಬ್ಬನು ಜೀವನವೆಂದರೇನೆಂದು ಅರಿಯಲು ನಿಸರ್ಗದ ಮಡಿಲಿಗೆ ಹೋದ. ಅಲ್ಲಿರುವ ಪಶು-ಪಕ್ಷಿ, ಗಿಡ-ಮರ, ಮೊದಲಾದವುಗಳಿಗೆ 'ಜೀವನವೆಂದರೇನು' ಎಂದು ಕೇಳಿದ. 'ಸತ್ಯಂ ಶಿವಂ ಸುಂದರಂ ಸೃಷ್ಟಿಯನ್ನು ಕಂಡು ಎದೆ ತುಂಬಿ ಬಂದಾಗ ಹಾಡಿನ ಮಳೆಗರೆಯುವುದೇ ಜೀವನವೆಂದು' ಕೋಗಿಲೆ ಹೇಳಿತು. 'ಸವಿಯಾದ ಹಣ್ಣುಗಳನ್ನು ತಿಂದು ಸವಿ ನುಡಿಯುವುದೇ ಜೀವನ.' ಎಂದು ಗಿಳಿ ಹೇಳಿತು. 'ಮಕರಂದವನ್ನು ಹೀರುವುದಕ್ಕಾಗಿ ಹೂಬನವನ್ನು ಹುಡುಕುತ್ತಾ ಹೋಗುವುದೇ ಜೀವನ' ಎಂದು ಪತಂಗ ಹೇಳಿತು. 'ಈಸಬೇಕು ಇದ್ದು ಜುಸಬೇಕು'ಎಂದು ಮೀನು ಹೇಳಿತು. 'ಬದುಕಿನಲ್ಲಿ ಆನಂದದ ಸೆಲೆಯೊಡೆದಾಗ ಕುಣಿ-ಕುಣಿದು ತಣಿಯುವುದೇ ಜೀವನ' ಎಂದು ನವಿಲು ಹೇಳಿತು. ಯಾವ ಧರ್ಮಶಾಸ್ತ್ರವನ್ನೂ ಅರಿಯದ ಪಶು ಪಕ್ಷಿಗಳೇ ಇಷ್ಟೊಂದು ನೆಮ್ಮದಿಯಿಂದಿರುವಾಗ ಎಲ್ಲವನ್ನರಿತಿರುವ ಮನುಷ್ಯರೆæೕಕೆ ನೆಮ್ಮದಿಯಿಂದ ಬದುಕಬಾರದೆಂದು ಚಿಂತಿಸುತ್ತ ನಾಡನಲೆಗಾರನು ನಾಡಿನತ್ತ ಹೆಜ್ಜೆ ಹಾಕಿದ. ವಿದ್ಯಾಲಯದ ಕಟ್ಟೆಯನ್ನೇರಿದ ಮನುಷ್ಯ ವೈದ್ಯನಾಗಿ ಮಾರಕ ರೋಗಗಳಿಗೆ ಮದ್ದನ್ನು ಕಂಡು ಹಿಡಿದ, ವಕೀಲನಾಗಿ ಅನ್ಯಾಯದ ವಿರುದ್ಧ ಹೋರಾಡಿದ, ತಂತ್ರಜ್ಞಾನಿಯಾಗಿ ಗಗನಚುಂಬಿ ಕಟ್ಟಡವನ್ನು ನಿರ್ಮಿಸಿದ, ಪ್ರಗತಿಪರ ರೈತನಾಗಿ ಹಿಂದೆಂದೂ ಬೆಳೆಯದಷ್ಟು ದವಸಧಾನ್ಯಗಳನ್ನು ಬೆಳೆದ. ಇನ್ನೂ ಏನೇನೋ ಕಲಿತು ಪ್ರಪಂಚವೇ ಬೆರಗುಗೊಳ್ಳುವಂಥ ಸಂಶೋಧನೆಗಳನ್ನು ಮಾಡಿದ. ಆದರೆ ನೆಮ್ಮದಿಯಿಂದ ಬದುಕುವುದನ್ನೇ ಮರೆತ!

ಆಧಾರ : ಕೈವಲ್ಯ ಕುಸುಮ
ಶ್ರೀ ಶ್ರೀ ಸಿದ್ದೇಶ್ವರ ಸ್ವಾಮೀಜಿ

Take It Easy: few Ways to Kill Stress Before Stress Kills You!

Take It Easy: few Ways to Kill Stress Before Stress Kills You!


1.Make quiet time: Whether you meditate daily, go to the gym three times a week, practiceyoga, go hiking on the weekends, or just spend an hour a night with a book, you need to create a space where you can clear your mind of everything that’s dragging at you.



2.Stop procrastinating: You can put off important tasks, but you can’t put off worrying about them — and the stress that causes.

3.Write everything down: If forgetting something would cause you stress, make sure you’ve got it written down in a trusted system so you know you won’t forget.


4. Eat better: A good diet can help your body better deal with the effects of stress. A healthy diet isn’t all that complicated; as Michael Pollan, author of The Omnivore’s Dilemma, puts it, Eat food. Not too much. Mostly plants. As a general rule, eat as much as you can from the "edges" of your supermarket — produce, bakery, butcher counter, dairy case — and save the stuff in the "middle" for once-in-a-while — Twinkies, Pop Tarts, potato chips, canned foods, instant meals, etc.



5.Make family time: Try to eat at least one meal a day with your family (or with friends if you’re single). Better yet, eat at least one homecooked meal a day with your family/friends.
6.Talk it out: Bottling up your frustrations, even the little ones, leads to stress. Learn to express dissatisfaction (in a constructive, non-hurtful way) and to voice your worries and fears to someone close to you.


7. Prioritize: Figure out what in your life actually needs attention and what doesn’t. Know what you can easily let slide — and what you can drop entirely — and focus your energy on things that will actually make a difference in your life.


8. Have routines: Having a set routine means you don’t have to worry about what comes next; after a while, it becomes second nature.


9.Accept interruptions gracefully: Don’t let your rituals become so rigid that you can’t function if they’re interrupted. Leave yourself enough wiggle room to adapt to changing conditions.

ಹೋಗಲಿರುವ ಜೀವಕ್ಕೆ ಅದೆಷ್ಟು ಆಸೆಗಳೋ..........

ಹೋಗಲಿರುವ ಜೀವಕ್ಕೆ ಅದೆಷ್ಟು ಆಸೆಗಳೋ..........




       ನಮ್ಮ ಜೀವನ ಪ್ರಾರಂಭ ಅಗೋದೇ ಬಹುಶ ಆಸೆಗಳಿಂದ ಅನ್ಸುತ್ತೆ , ಎಲ್ರಿಗೂ ಅವರದ್ದೇ ಆದ ಅನೇಕ ಆಸೆ ಗಳಿರುತ್ತೆ . ತಮ್ಮ ಜೀವಕ್ಕಿಂತ ಹೆಚ್ಚಿನ ಆಸೆಗಳಿರೊ ಅಂತ ಅನೇಕರನ್ನ ನಾವ್ ನೋಡಬೋದು ... ಮರೆಯಾಗಿ ಹೋಗುವ ಈ ಜೀವಕ್ಕೆ ಅದೆಷ್ಟು ಆಸೆಗಳಿರುತ್ತೆ ಅಲ್ವಾ ...???
ನಾವು ಚಿಕ್ಕವರಾಗಿದ್ದಾಗ ಚಾಕೊಲೇಟ್ , ಗೊಂಬೆ ಗಳನ್ನೆಲ್ಲ ನೋಡ್ದಾಗ ಅದು ಬೇಕೇ ಬೇಕು ಅನ್ನೋ ಹಠ ,ಆಸೆ ಇರ್ತಿತ್ತು . ದೊಡ್ದವರಾಗ್ತಾ ಬಂದ್ ಹಾಗೆ ನಮ್ಮ ಆಸೆಗಳ ಲೋಕವೇ ಬದಲಾಗ್ತಾ ಹೋಗತ್ತೆ ... ನಮ್ಮ ಆಸೆ ಆಕಾಂಕ್ಷೆ ಗಳಿಗೆ ಮಿತಿನೇ ಇಲ್ವೇನೋ ಅನ್ಸತ್ತೆ . ನನಗು ಸಹ ತುಂಬಾ ಆಸೆಗಳಿದ್ವು ,ಬೆಟ್ಟದಷ್ಟು  ಆದ್ರೆ ಇವಾಗ ಅದೆಲ್ಲ ಬರಿ ಕನಸು ಅನ್ನಿಸ್ತಾ ಇದೆ.... :(
 ನಾನು ಅನೇಕರನ್ನ ನೋಡಿದೀನಿ ಅವರ ಜೀವನ ಶೈಲಿ , ಆಸೆಗಳನ್ನೆಲ್ಲ ನೋಡಿದ್ರೆ ನಗಬೇಕೋ , ಅಳಬೇಕೋ ಒಂದೂ ಗೊತ್ತಾಗಲ್ಲ ....  ತುಂಬಾ ವಿಷಯಗಳಿದೆ ಆದ್ರೆ ನನಗೆ ಗೊತ್ತಿರೋ ಸ್ವಲ್ಪ ವಿಷಯಗಳನ್ನ ನಾನ್ ನಿಮ್ ಜೊತೆ ಶೇರ್ ಮಾಡ್ಕೋತಾ ಇದೀನಿ.....

 ವಿದ್ಯಾರ್ಥಿ ಜೀವನದಲ್ಲಿ ಅನೇಕ ಆಸೆಗಳಿರುತ್ತೆ , ಎಲ್ರಿಗಿಂತ ಜಾಸ್ತಿ ಮಾರ್ಕ್ಸ್ ತಗೋಬೇಕು,ಕ್ಲಾಸ್ ನಲ್ಲಿ ಫಸ್ಟ್ ಬರಬೇಕು ಹೀಗೆ ಹಲವು ಆಸೆಗಳಿರುತ್ತೆ... ಅಯ್ಯೋ ಪರೀಕ್ಷೆ ಲಿ ಪಾಸ್ ಆದ್ರೆ ಸಾಕು ಅನ್ನೋ ನಮ್ ತರದವರೂ ಇದಾರೆ... ಪರೀಕ್ಷೇಲಿ ತುಂಬಾ ಕಡಿಮೆ ಮಾರ್ಕ್ಸ್ ಬಂತು , ಫೇಲ್ ಅದೆ ಅಂತ ಅದೆಷ್ಟೋ ಜನ ಆತ್ಮಹತ್ಯೆ ಮಾಡ್ಕೊಂಡಿರೋ ಹಾಸ್ಯದ ಸಂಗತಿಗಳೂ ಇದೆ.  ಜೀವನವೇ ಒಂದು ಪರೀಕ್ಷೆ ಅಂತ ಅವರೆಲ್ಲ ತಿಳ್ಕೊಂಡಿದ್ದಿದ್ರೆ ಅವರೆಲ್ಲ ಈ ರೀತಿ ಮಾಡ್ಕೋತಾ ಇರ್ಲಿಲ್ಲ....ನಮ್ಮ ಜೀವಿತಾವದಿಯಲ್ಲಿ ನಮಗೆ ಅದೆಷ್ಟೋ ಸಮಯವಿದೆ , ಏನ್ ಬೇಕಾದ್ರು ಸಾದಿಸ್ಬೋದು ಅಲ್ವಾ ?? ಇಷ್ಟು ಸಣ್ಣ ವಿಷಯಕ್ಕೆಲ್ಲ ಜೀವಾ ನೆ ನಾಶ ಮಾಡ್ಕೊಬೇಕಾ..?? ಒಂದ್ ಕ್ಷೇತ್ರದಲ್ಲಿ ಆಗ್ಲಿಲ್ಲ ಅಂದ್ರೆ ಇನ್ನೊಂದ್ ಕ್ಷೇತ್ರದಲ್ಲಿ ಸಾದನೆ ಮಾಡ್ಬೋದು , ಅದು ಬಿಟ್ಟು ನಮ್ಮನ್ನೇ ನಂಬಿಕೊಂಡಿರುವ ಜೀವಗಳಿಗೆ ನಾವ್ ಮೋಸ ಮಾಡಬಾರದು .....

      ಆರೋಗ್ಯ ದ ಮೇಲೆ ಹೆಚ್ಚು  ಕಾಳಜಿ ವಹಿಸೋ ಜನ ತುಂಬಾ ಇದಾರೆ. ಮಳೇಲಿ ನೆನೆದರೆ ಜ್ವರ ಬರುತ್ತೆ,ಶೀತ ಆಗುತ್ತೆ  ಅಂತಾ ತುಂಬಾ ಕಾಳಜಿ ತಗೊಳೋರು ದಿನಕ್ಕೆ ಐದು ಆರು ಸಿಗರೇಟ್ ಕಾಲಿ ಮಾಡ್ತಾ ಇರ್ತಾರೆ, ಯಾರಾದ್ರೂ ಸ್ಮೋಕ್ ಮಾಡ್ತಾ ಇರೋವಾಗ ತಮ್ಮ ಮೂಗುಗಳನ್ನು ಭದ್ರವಾಗಿ ಮುಚ್ಚಿಕೊಂಡು ಓಡಾಡುವವರೂ ಅನೇಕ !!!

 ಮುಂದೆ ನಮ್ಮ ಜೀವನಕ್ಕೆ ಬೇಕು ಅಂತ ,ಇವತ್ತಿನ ಜೀವನದ ಬಗ್ಗೆ ಯೋಚಿಸದೆ ಹಣ ಕೂಡಿಡುವ ಅದೆಷ್ಟೋ ಜನ ಇದ್ದಾರೆ, ಇವತ್ತು ಒಂದು ರೂಪಾಯಿ ಖರ್ಚು ಮಾಡಲು ಚಿಂತಿಸುವವರು ಮುಂದಿನ ಜೀವನದ ಬಗ್ಗೆ ಯೋಚಿಸುವುದು ಅದೆಷ್ಟು ಸರಿ ..???  ನಾನು ಒಂದು ವರ್ಷದ ಹಿಂದೆ  ಶಿವಮೊಗ್ಗ ದಿಂದ ಹಾಸನ ಕ್ಕೆ ರೈಲಿನಲ್ಲಿ ಹೋಗುವಾಗ ಕೇಳಿದ  ಒಂದು ನೈಜಗಟನೆ -
  " ತುಂಬಾ ಸಂತಸದ ಫ್ಯಾಮಿಲಿ, ಅಪ್ಪ ಅಮ್ಮ ಮಗ ಮಗಳು  ಕೇವಲ ನಾಲ್ಕು ಜನರ ಪುಟ್ಟ ಫ್ಯಾಮಿಲಿ , ಅತ್ಯಂತ ಸಂತೋಷದಿಂದಲೇ ಜೀವನ ನಡೀತಾ ಇತ್ತು.... ತಮ್ಮ ಮಗನ ವಿದ್ಯಾಭ್ಯಾಸಕ್ಕೆ ಅಪ್ಪ ತುಂಬಾ ಕಷ್ಟ ಪಟ್ಟು ಹಣ ಸಂಪಾದಿಸಿದ್ರಂತೆ , ಹಾಗೆ  ಅವನ ವಿದ್ಯಾಭ್ಯಸಾನೂ ನಡೀತಾ ಇತ್ತು. ಬೇರೆ ವಿಷಯಗಳಿಗೆ ಹಣ ಖರ್ಚು ಮಾಡೋಕೆ ಮೊದ್ಲು ಆತ ತುಂಬಾ ಯೋಚಿಸ್ತಾ ಇದ್ರು, ಮಗಳ ಮದುವೆಗೆ ಅಂತ ಸಹ ಹಣ ಕೂಡಿಟ್ಟಿದ್ರು. ಜನ ಅವರನ್ನ ಜಿಪುಣ ಅಂತ ಕರಿತಾ ಇದ್ರು..ಮುಂದಿನ ಜೀವನದ ಬಗ್ಗೆ ತುಂಬಾ ಯೋಚನೆಗಳಿದ್ದಿದ್ರಿಂದ ಅವ್ರು ಜಿಪುಣ ಆಗಿದ್ರು ಅನ್ಸತ್ತೆ. ಹೀಗೆ ಜೀವನ ನಡೀತಾ ಇತ್ತು , ಮಗಳು ಪಿ.ಯೂ.ಸಿ ಗೆ ವಿಧ್ಯಾಭ್ಯಾಸ ಮುಗ್ಸಿದ್ಲು , ನಂತರ ಎರಡು ವರ್ಷಗಳಲ್ಲಿ ಅವಳ ಮದುವೆನೂ ಆಯ್ತು.... ದುರದೃಷ್ಟ ಅಂದ್ರೆ ಮದುವೆ ಆಗಿ ಒಂದು ವರ್ಷದೊಳಗೆ ಭೀಕರ ರಸ್ತೆ ಅಪಘಾತದಲ್ಲಿ ಮಗಳು ಅಳಿಯ ಇಬ್ರೂ ವಿಧಿವಶರಾದರು... ಇತ್ತ ಮಗನ ವಿದ್ಯಾಭ್ಯಾಸನೂ ಮುಗಿತಾ ಬಂದಿತ್ತು .. ಮಗಳ ನೆನಪು ಮಾಸುತ್ತಾ ದಿನಗಳು ಉರುಳುತ್ತಿತ್ತು ..ಇವರ ಜೀವನದ ಅತ್ತ್ಯಂತ ಅಹಿತಕರ ಘಟನೆ ಅಂದ್ರೆ .. ಮಗ  ಎಂ.ಎ  ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದಾಗ ಅದೇನೋ ಜ್ವರ ಅಂತ ಬಂದು ಮೂರೇ ದಿನದಲ್ಲಿ ಇಹಲೋಕ ತ್ಯಜಿಸಿದ್ದು.... ನೋವಿನ ಮೇಲೆ ನೋವು ಅನುಭವಿಸುತ್ತ ಎರಡು ಜೀವಗಳು ಅದೆಷ್ಟು ದಿನ
ಬದುಕಿರಬಹುದು..... ಚಿಂತೆಯಲ್ಲೇ ಜೀವನ ಸಾಗುತ್ತಿದೆ ... ಕೂಡಿಟ್ಟ ಅಷ್ಟೊಂದು ಹಣ,ಆಸ್ತಿ ಪಾಸ್ತಿ ಯಾರ ಪಾಲಿಗೆ...?? ಅವರ ಕಡೆಯವರು ಅಂತ ಅವರಿಗೆ ಯಾರೂ ಇಲ್ವಂತೆ.. ಅವರ ಮುಂದಿನ ಗತಿ....?????? "
    ನೋಡಿದ್ರಾ ಆಸೆಗಳು  ಎಷ್ಟೊಂದು ಅಲ್ವಾ....???

         ಮತ್ತೊಂದು ಸಂಗತಿ ಅಂದ್ರೆ ಅನೇಕರು ನಮ್ ಫ್ರೆಂಡ್ಸ್ ನಮ್ ಜೊತೆ ನಾವ್ ಅಂದ್ಕೊಂಡಿರೋ ಹಾಗೆ ಇರ್ಬೇಕು ಅನ್ನೋ ಆಸೆ ಇಟ್ಕೊಂಡಿರ್ತಾರೆ ,ಅವರ ಜೀವನ ಶೈಲಿ ಇವರಿಗೋಸ್ಕರ ಬದಲಾಗಬೇಕೆ...?? ಇವರ ಆಸೆ ಆಕಾಂಕ್ಷೆ ಗಳಂತೆ ಅವರಿಗೂ ಇರುತ್ತೆ ಅನ್ನೋದನ್ನ ಮರೆತು  ಅವರ ಸ್ನೇಹವನ್ನೇ ದೂರ ಮಾಡಿಬಿಡ್ತಾರೆ ... ಸ್ನೇಹಿತರು ಒಬ್ರಿಗೊಬ್ರು ಅರ್ತ ಮಾಡ್ಕೊಂಡು , ಹೊಂದ್ಕೊಂಡು ತಮ್ಮ ಸ್ನೇಹನಾ ಶಾಶ್ವತವಾಗ್ ಇರೋಹಾಗ್ ಮಾಡ್ಕೋಬೇಕು , ಕೇವಲ ಆಸೆಗಲಿಗೋಸ್ಕರ ಸ್ನೇಹವನ್ನು ಬಲಿ ಕೊಡಬಾರದು... ಸ್ನೇಹ ಅತ್ಯಂತ  ಅಮೂಲ್ಯವಾದದ್ದು.. ಎಲ್ರಿಗೂ ಅಂತಹ ಅಮೂಲ್ಯ ವಾದ ಸ್ನೇಹ ಸಿಗೋದಿಲ್ಲ .... ಸೀಕ್ಕಿದ್ದನ್ನ ಹಾಳ್ಮಾಡ್ಕೋಬೇಡಿ ......

         ಪ್ರೀತಿ ವಿಷಯಕ್ಕೆ ಬಂದ್ರೆ ಅಲ್ಲೂ ಸಹ ಇಂತಹ ಹಲವು ಆಸೆಗಳಿಂದ ಆಗುವ ದುಷ್ಪರಿಣಾಮಗಳು ಅನೇಕ... ನಾನು ಪ್ರೀತಿಸಿದ ಹುಡುಗ/ಹುಡುಗಿ ಸಿಗ್ಲಿಲ್ಲ ಅಂತ ಅದೆಷ್ಟೋ ಜನ ಆತ್ಮಹತ್ಯೆ ಮಾಡ್ಕೊಂಡಿರೋ ಸಂಗತಿಗಳು ಹಲವಾರು...  ತಮ್ಮ ತಂದೆ ತಾಯಿ ಬಂಧು ಬಳಗ ದವರ ಯೋಚನೆ ಇಲ್ಲದೆ ಕೇವಲ ಕೆಲವು ಕೆಲವು ದಿನಗಳ ಹಿಂದೆ ಹುಟ್ಟಿಕೊಂಡ ಪ್ರೀತಿ ಸಿಗಲಿಲ್ಲ ವೆಂದು , ಜನ್ಮತಃ ವಾಗಿ ಸಿಕ್ಕ ಪ್ರೀತಿಯನ್ನೇ ದಿಕ್ಕರಿಸಿ ಆತ್ಮಹತ್ಯೆ ಮಾಡಿಕೊಳ್ಳುವುದು ಅದೆಷ್ಟು ಸರಿ..??? ನನ್ನ ಗೆಳೆಯನೂ ಸಹ ಇಂತಹ ಒಂದು ಹೀನ ಕೃತ್ಯಕ್ಕೆ ಸಾಕ್ಷಿ ಯಾಗಿದ್ದಾನೆ ಎಂದು ಹೇಳಿಕೊಳ್ಳುವುದಕ್ಕೆ ನನಗೆ ಬೇಸರ..... ಅವನ ಅಗಲಿಕೆಗಿಂತ ಅವನ ಪೋಷಕರ ಕಣ್ಣೀರಿನ ನೋವಿನ ದಿನಗಳು ನೆನೆಸಿಕೊಳ್ಳುವುದೇ ಕಷ್ಟದ ಸಂಗತಿ.......

                      ಹೀಗೆ ಹಲವು ಆಸೆಗಳ ನಡುವೆ ನಮ್ಮ ಜೀವನ ಸಾಗುತ್ತಿದೆ . ನಮ್ಮ ಆಸೆಗಳು ನಮ್ಮ ಜೀವನ ಏಳಿಗೆಗೆ ಕಾರಣವಾಗಬೇಕೇ ಹೊರತು ನಮ್ಮ , ಅವನತಿ ಗೆ ಕಾರಣವಾಗಬಾರದು ....  ನಮ್ಮನ್ನು ನಂಬಿಕೊಂಡಿರುವ ಅನೇಕ ಜೀವಗಳಿಗೆ ನಿರಾಸೆಯಾಗುವಂತಿರಬಾರದು ....

ಮರೆಯಾಗಲಿರುವ ಈ ಜೀವನದ ಆಸೆಗಳು ಮಿತಿಯಲ್ಲಿದ್ದರೆ  ಒಳಿತಲ್ಲವೇ......?????

ಸುದೀಪ್ ಎಸ್ 

ವ್ಯಕ್ತಿಪ್ರೀತಿ-ಲೋಕ ಪ್ರೀತಿ

✨ವ್ಯಕ್ತಿಪ್ರೀತಿ-ಲೋಕ ಪ್ರೀತಿ✨




ಪ್ರೇಮವು ಬದುಕನ್ನು ಬದಲಿಸುವ ಅತ್ಯಂತ ದೊಡ್ಡ ರಸವಿದ್ಯೆ. ಪ್ರೇಮ ಜೀವನವು ಅತಿದೊಡ್ಡ ಪಥ. ಪ್ರೇಮ ಜೀವನದ ದೊಡ್ಡ ಉತ್ತೇಜನ. ನೀವು ಒಂದು ವೇಳೆ ಪ್ರೇಮಿಯಾಗಿದ್ದರೆ, ರಸ್ತೆಯಲ್ಲಿ ಬಿದ್ದ ಯಾರನ್ನೋ ಎತ್ತಿಕೊಂಡು ಸೂಕ್ಷ ್ಮ ಶುಶ್ರೂಷೆಗೆ ವ್ಯವಸ್ಥೆ ಮಾಡುತ್ತೀರಿ. ನೀವು ಪ್ರೇಮಿಯಾಗಿದ್ದರೆ ನಿಮ್ಮೊಳಗಿನ ದನಿಗೆ ಅಂತ್ಯವೇ ಇರುವುದಿಲ್ಲ. ಆದ್ದರಿಂದ ಪ್ರೇಮದ ಕೃತ್ಯ ಎಂದಿಗೂ ಕೊನೆಯೇ ಆಗುವುದಿಲ್ಲ. ಅದು ಎಂದಿಗೂ ಅಪೂರ್ಣವಾಗಿಯೇ ಇರುತ್ತದೆ. ಪ್ರೇಮಿ ಯಾವಾಗಲೂ ನಾನು ಎಷ್ಟು ಮಾಡಬೇಕಿತ್ತೋ ಅಷ್ಟು ಮಾಡಲಾಗಿಲ್ಲ ಎಂದು ವೇದನೆ ಅನುಭವಿಸುತ್ತಲೇ ಇರುತ್ತಾನೆ. ನಾನು ಮಾಡಿರುವುದು ಅತ್ಯಲ್ಪ ಎಂಬ ಭಾವವೇ ಅವನನ್ನು ಲೋಕದ ಜತೆ ಹೆಚ್ಚು ಹೆಚ್ಚು ಆಪ್ತಗೊಳಿಸುತ್ತದೆ. ಪ್ರೇಮ ಎಂಬುದು ಸೀಮಿತ ಅರ್ಥದಲ್ಲಿ ತೆಗೆದುಕೊಂಡರೆ ಏನಾಗುತ್ತದೆ? ಪ್ರೇಮಿ ಮತ್ತು ಪ್ರೇಮಕ್ಕೆ ಒಳಪಟ್ಟವರ ಜಗತ್ತಿಗೆ ಮಾತ್ರ ಈ ಭಾವ ಸೀಮಿತಗೊಳ್ಳುತ್ತದೆ. ನಾವು ಯಾರನ್ನು ಪ್ರೇಮಿಸುತ್ತಿರುತ್ತೇವೆಯೋ ಅವರಿಗೆ ಏನಾಯ್ತು ಎಂದು ಆತಂಕಗೊಳ್ಳುತ್ತೇವೆ. ಅವರನ್ನು ಬಿಟ್ಟರೆ ನಮಗೆ ಬೇರೆ ಲೋಕ ಕಾಣಿಸುವುದಿಲ್ಲ ಇದನ್ನು ನಾನು ಅಪೂರ್ಣ ಪ್ರೇಮ ಎಂದೇ ಕರೆಯುವೆ. ಪರಿಪೂರ್ಣ ಪ್ರೇಮದಲ್ಲಿ ನಾನು, ನನ್ನದು ಎಂಬ ಅಹಂಕಾರ ಶೂನ್ಯವಾಗುತ್ತ ಹೋಗುತ್ತದೆ. ನಾನು ಇದ್ದೇನೆ ಎಂಬ ಅರಿವೂ ಹೊರಟು ಹೋಗುತ್ತದೆ. ಸರ್ವಪ್ರೇಮ, ಸರ್ವಮಂಗಳ, ಸರ್ವ ಕರುಣಾ ಭಾವ ಮೂಡುತ್ತದೆ. ಎಲ್ಲರೂ ಚೆನ್ನಾಗಿರಲಿ, ಎಲ್ಲರೂ ಆನಂದವಾಗಿರಲಿ, ಅನಂತದ ಕುರಿತು ಪ್ರೇಮಭಾವ ಮೂಡಿದ ಕೂಡಲೇ ಆಗ ಆ ವ್ಯಕ್ತಿ ಶೂನ್ಯವಾಗಿ ತಾನು ಇಲ್ಲವೇ ಇಲ್ಲ ಎಂದು ಕಂಡುಕೊಳ್ಳುತ್ತಾನೆ. ಏಕೆಂದರೆ ಪ್ರೇಮದಲ್ಲಿರುವಾಗ ಸ್ವಯಂ ಕುರಿತು ಸ್ಮರಣೆ ಮಾಡಲಾದರೂ ಪುರುಸೊತ್ತು ಎಲ್ಲಿರುತ್ತದೆ? ಅದಕ್ಕೆ ಅವಕಾಶ ಎಲ್ಲಿರುತ್ತದೆ? ಯಾರು ಪ್ರೇಮದಲ್ಲಿ ಇಲ್ಲವೋ ಅವರು ಮಾತ್ರವೇ ಸ್ವಯಂ ಕುರಿತು ಸ್ಮರಿಸಿಕೊಳ್ಳಲು ಸಾಧ್ಯ. ಸ್ವಲ್ಪ ಗಮನಿಸಿ. ನೀವು ಪ್ರೇಮದಲ್ಲಿರುವಾಗ ಅದೊಂದು ವ್ಯಕ್ತಿಯೊಡನಿರುವ ಸಾಧಾರಣವಾದ ಸಣ್ಣ ಪ್ರೇಮವೇ ಇರಬಹುದು. ಆದರೆ ನೀವು ಆ ಪ್ರೇಮದಲ್ಲಿರುವಾಗ, ಎಷ್ಟು ಹೊತ್ತಿನವರೆಗೆ ಪ್ರೇಮ ನಿಮ್ಮ ಪ್ರಾಣದಲ್ಲಿ ಮಿಲನವಾಗುತ್ತಿರುವುದೋ ಅಷ್ಟು ಹೊತ್ತಿನವರೆಗೂ ನಿಮ್ಮ ಇರುವಿಕೆ ನಿಮ್ಮ ಅರಿವಿಗೆ ಬಂದಿತ್ತೆ ಎಂಬುದನ್ನು ಗಮನಿಸಿರುವಿರಾ? ಆಗ ನೀವು ಇರುವುದಿಲ್ಲ. ಪ್ರೇಮಿ ಇರುತ್ತಾನೆ. ಆದರೆ ನೀವು ಇರುವುದಿಲ್ಲ. ನೀವು ಸಮಾಪ್ತರಾಗಿರುವಿರಿ. ಯಾರ ಕುರಿತು ನಿಮ್ಮ ಪ್ರೇಮ ಹರಿಯುತ್ತಿರುವುದೋ ಅವರು ಮಾತ್ರವೇ ಇರುವರು. ಯಾರ ಪ್ರೇಮ ಎಲ್ಲರೆಡೆಗೆ ಹರಿಯುತ್ತಿರುವುದೋ ಅವರು ಕಳೆದೇ ಹೋಗುತ್ತಾರೆ. ಇಲ್ಲವಾಗುತ್ತಾರೆ. ಶೂನ್ಯವಾಗುತ್ತಾರೆ. ಅವರ ಅಹಂಕಾರ ಸಮಾಪ್ತಿಯಾಗುತ್ತದೆ. ಪ್ರೇಮ ಅಹಂಕಾರದ ಮೃತ್ಯು. ಸ್ವಾರ್ಥಕ್ಕೆ ಕಂಟಕ. ಪ್ರೇಮಿ ಇವುಗಳನ್ನು ಕಳೆದುಕೊಳ್ಳುತ್ತಾನೆ. ಅವನು ವಿಲೀನವಾಗಿ ಹೋಗುತ್ತಾನೆ. ಪ್ರೇಮದಲ್ಲಿ ವಿಲೀನನಾಗುತ್ತಾನೆ. ಅದರಲ್ಲಿ ತೊರೆಯುವ, ಕಳೆದುಕೊಳ್ಳುವ ಭಾವ ಇರುವುದಿಲ್ಲ. ಅಹಿಂಸೆಯಲ್ಲಿ ಇಂಥ ವಿಲೀನತೆಯನ್ನು ಸಾಧಿಸುವುದು ಕಡು ಕಷ್ಟ. ನಾನು ಬೇರೆಯವರಿಗೆ ದುಃಖ ನೀಡಿದರೆ ಹಿಂಸೆ ಮಾಡಿದರೆ, ಹತ್ಯೆ ಮಾಡಿದರೆ, ನಾನು ನರಕಕ್ಕೆ ಹೋಗಬೇಕಾಗುತ್ತದೆ ಎಂಬ ಭಾವ ಮುಖ್ಯವಾದಾಗ ಏನಾಗುತ್ತದೆ? ಅಲ್ಲಿ ನಾನು ಎಂಬುದು ತಾನೇ ಮುಖ್ಯ. ಈ ನಾನು ಎಂಬುದನ್ನು ಪ್ರೇಮ ಭಾವದಲ್ಲಿ ಮಾತ್ರ ಕಳೆದುಕೊಳ್ಳುವುದಕ್ಕೆ ಸಾಧ್ಯ. ನಾನು ಎಂಬುದನ್ನು ಬಿಡಿಸಿಕೊಳ್ಳಲು ಆಗದಿದ್ದರೆ ಕ್ಷ ುದ್ರತೆಯನ್ನು ಗೆಲ್ಲಲು, ತಮವನ್ನು ಗೆಲ್ಲಲು ಆಗುವುದಿಲ್ಲ.


ಓಶೋ
☘🌿🍃☘🌿🍃☘🌿🍃

ನಮ್ಮ ಬದುಕು ನಮಗೆ

👍 ನಮ್ಮ ಬದುಕು ನಮಗೆ🌺

👉 ಅದೊಂದು ಬೆಟ್ಟದ ದಾರಿ. ದಾರಿಯ ಪಕ್ಕದಲ್ಲಿ ದೊಡ್ಡ ದೊಡ್ಡ ಬಂಡೆಗಳು. ಒಂದು ಬಂಡೆಯ ಸುತ್ತ ನೂರಾರು ಹೂವಿನ ಗಿಡಗಳು, ಬಳ್ಳಿಗಳು. ಅದಾರು ಈ ಗಿಡಗಳಿಗೆ ಬೀಜ ಹಾಕಿದ್ದರೋ. ಹೂ ಅರಳುವ ದಿನಗಳು ಬಂದಾಗ ಬಂಡೆಯನ್ನಪ್ಪಿಕೊಂಡು ಹೂವಿನ ಬಳ್ಳಿಗಳು ಕುಣಿಯುತ್ತಿದ್ದವು.

👉 ದಾರಿಹೋಕರಿಗೆ ಅವುಗಳನ್ನು ಕಂಡರೆ ತುಂಬ ಸಂತೋಷ. ಕೆಲವರು ಹೂಗಳನ್ನು ಆಯ್ದುಕೊಂಡು ಹೋಗುತ್ತಿದ್ದರು. ಹೂಗಳಿಗೆ ತಮ್ಮ ಬಣ್ಣಗಳ ಬಗ್ಗೆ, ಸುಗಂಧದ ಬಗ್ಗೆ ಬಲು ಹೆಮ್ಮೆ. ಅದಲ್ಲದೇ ಬಂಡೆಯ ನೀರಸ ಬದುಕಿನ ಬಗ್ಗೆ ತಾತ್ಸಾರ. ಬಂಡೆ ಕುರಿತು ಹೀಯಾಳಿಕೆಯ ಮಾತುಗಳನ್ನಾಡುತ್ತಿದ್ದವು.

👉 ಏನು ನಿನ್ನ ಹಣೆಯಬರಹ. ಹುಟ್ಟಿದಾಗಿನಿಂದ ಹೀಗೆಯೇ ಬಿದ್ದುಕೊಂಡಿದ್ದಿ. ಒಂದಿಂಚು ಬೆಳೆಯಲಿಲ್ಲ, ಯಾರಿಗೂ ಸಂತೋಷ, ಸುಖ ಕೊಡಲಿಲ್ಲ. ನಿನ್ನ ಜೀವನಕ್ಕೆ ಏನಾದರೂ ಅರ್ಥವಿದೆಯೇ.  ಬಂಡೆ ಬಲು ಬೇಜಾರಿನಿಂದ ಮನಸ್ಸು ಕುಗ್ಗಿಸಿಕೊಂಡು ಒಳಗೊಳಗೇ ನೋಯುತ್ತಿತ್ತು. ಕಾಲ ಹಾಗೆಯೇ ಇರುವುದಿಲ್ಲ.

👉 ಬೆಟ್ಟದ ಹತ್ತಿರದ ಊರಿನಲ್ಲಿ ಶ್ರೀಮಂತರೊಬ್ಬರು ಇದ್ದರು.  ದೇವಸ್ಥಾನ ಕಟ್ಟಿಸಲು ತೀರ್ಮಾನಿಸಿದರು. ಕಟ್ಟಡದ ಕೆಲಸ ಭರದಿಂದ ಸಾಗಿತು. ಅವರೊಬ್ಬ ಪ್ರಖ್ಯಾತ ಶಿಲ್ಪಿಯನ್ನು ಗೊತ್ತುಮಾಡಿ ವಿಗ್ರಹ  ನಿರ್ಮಿಸಲು ಕೇಳಿದರು. ಆತ ಬೆಟ್ಟವನ್ನೆಲ್ಲ ಸುತ್ತಾಡಿ ಬಂದ.

👉 ಅವನಿಗೆ ಹೂವಿನ ಗಿಡಗಳ ನಡುವೆ ಕಾಲುಚಾಚಿ ಬಿದ್ದಿದ್ದ ಈ ಬಂಡೆ ಇಷ್ಟವಾಯಿತು. ಸರಿ, ಜನರನ್ನು ಕರೆದುಕೊಂಡು ಬಂದು ಬಂಡೆಯನ್ನು ಅಲ್ಲಿಂದ ಎತ್ತಿದರು. ಹೀಗೆ ಎತ್ತುವಾಗ ಸುತ್ತಲಿದ್ದ ಹೂವಿನ ಗಿಡ ಬಳ್ಳಿಗಳೆಲ್ಲ ಜನರ ಕಾಲಿನ ತುಳಿತಕ್ಕೆ ಸಿಕ್ಕು ನುಗ್ಗಾಗಿ ಹೋದವು. ಅಳಿದುಳಿದ ಕೆಲ ಗಿಡಬಳ್ಳಿಗಳು ಮಳೆಗಾಲದಲ್ಲಿ ಮತ್ತೆ ಚಿಗುರಿಕೊಂಡವು.

👉  ಶಿಲ್ಪಿ ಕೆತ್ತನೆ ಪ್ರಾರಂಭಿಸಿದ. ಬಂಡೆ ನರಳಿತು. ಇಷ್ಟು ಶತಮಾನಗಳ ಕಾಲ ಹಾಗೆಯೇ ಬಿದ್ದುಕೊಂಡಿದ್ದ ಬಂಡೆಗೆ ಉಳಿ, ಸುತ್ತಿಗೆಗಳ ಹೊಡೆತ ವಿಪರೀತ ನೋವು ಕೊಟ್ಟಿತು. ಅಯ್ಯೋ ಈ ಹೊಡೆತಗಳಿಗಿಂತ ಆ ಗಿಡಬಳ್ಳಿಗಳ ಟೀಕೆಯ ಮಾತುಗಳೇ ಚೆನ್ನಾಗಿತ್ತಲ್ಲ ಎನ್ನಿಸಿತು. ತಾನು ಪಡೆಯುವ ಹೊಡೆತಗಳಿಗೆ ಮಿತಿಯೇ ಇಲ್ಲ ಎಂದು ಕೊರಗಿತು.

👉 ಅಂತೂ ಒಂದು ದಿನ ಈ ನೋವಿಗೆ ಮುಕ್ತಿ ದೊರಕಿತು. ನಂತರ ಅದಕ್ಕೆ ರಾಜೋಪಚಾರ. ಅದನ್ನು ಯಾರೋ ನೀರಿನಿಂದ ಚೆನ್ನಾಗಿ ತೊಳೆದರು, ಕೆಲವರು ಎಣ್ಣೆ ಹಾಕಿ ಮಾಲೀಶು ಮಾಡಿದರು. ಕೆಲದಿನ ನೀರಿನಲ್ಲಿ ಮುಳುಗಿಸಿ ತಂಪು ಮಾಡಿ, ನಂತರ ಧಾನ್ಯಗಳಲ್ಲಿ ಮುಳುಗಿಸಿಟ್ಟರು.

👉 ಒಂದು ವಿಶೇಷ ದಿನ ದೇವರ ವಿಗ್ರಹವಾಗಿ ನಿಂತ ಬಂಡೆಯನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ದೇವಸ್ಥಾನದ ಪೀಠದ ಮೇಲಿಟ್ಟರು. ಅದಕ್ಕೆ ನೀರಿನ, ಹಾಲಿನ, ಗಂಧದ ಎಳೆನೀರಿನ, ಜೇನುತುಪ್ಪದ, ಸಕ್ಕರೆಯ, ಹಣ್ಣಿನ ಅಭಿಷೇಕ. ಅದಾದ ನಂತರ ಬಂಗಾರದ ಆಭರಣಗಳನ್ನು ತೊಡಿಸಿದರು.

👉 ಚೆಂದದ ಹೂಗಳ ಹಾರಗಳನ್ನು ಹಾಕಿದರು. ಅತ್ಯಂತ ಸುಂದರವಾದ ಹೂಗಳನ್ನು ವಿಗ್ರಹದ ಪಾದದಲ್ಲಿಟ್ಟರು. ಆ ಹೂಗಳು ತಲೆ ಎತ್ತಿ ನೋಡಿದವು. ಅದೇ, ತಮ್ಮ ಪಕ್ಕದಲ್ಲಿದ್ದ ಬಂಡೆ ಅದು. ತಾವು ಟೀಕೆ ಮಾಡುತ್ತಿದ್ದ, ಯಾರಿಗೂ ಸಂತೋಷ ನೀಡುವುದಿಲ್ಲ ಎಂದುಕೊಂಡಿದ್ದ ಬಂಡೆ!

👉 ಆ ಬಂಡೆಯ ಮುಂದೆ ತಮ್ಮ ಅಪೇಕ್ಷೆಗಳನ್ನು ಪೂರೈಸಿಕೊಳ್ಳಲು ಸಾವಿರಾರು ಜನ ಕೈಮುಗಿದುಕೊಂಡು ನಿಂತಿದ್ದಾರೆ! ದೇವರಾದ ಬಂಡೆ ಹೇಳಿತು,  ಬೇಜಾರು ಮಾಡಿಕೊಳ್ಳಬೇಡಿ. ಯಾರಿಗೆ ಯಾವಾಗ ಯಾವ ಭಾಗ್ಯ ತೆರೆದುಕೊಳ್ಳುತ್ತದೆ ಎಂಬುದನ್ನು ಹೇಳುವುದು ಅಸಾಧ್ಯ. ನಾನು ಶತಮಾನಗಳ ಕಾಲ ಅಪ್ರಯೋಜಕವಾಗಿ ಬಿದ್ದಿದ್ದೆ.

👉 ಇನ್ನು ಮುಂದೆ ಶತಮಾನಗಳ ಕಾಲ ಜನರ ಶ್ರದ್ಧಾಕೇಂದ್ರವಾಗಿ ನಿಲ್ಲುತ್ತೇನೆ. ನಿಮ್ಮದು ಎಂದಿದ್ದರೂ ಒಂದು ದಿನದ ಬದುಕು. ಆದರೆ, ಆ ಒಂದು ದಿನವನ್ನೇ ಸಂಭ್ರಮದಿಂದ ಮತ್ತೊಬ್ಬರನ್ನು ಟೀಕಿಸದೇ ಬದುಕಿದರೆ ಅದು ಶತಮಾನದ ಬದುಕಿನಷ್ಟೇ ಸಾರ್ಥಕ.

👉 ನಮ್ಮ ಬದುಕನ್ನು ಮತ್ತೊಬ್ಬರ ಬದುಕಿನೊಡನೆ ಹೋಲಿಸಿ ಹಿಗ್ಗುವ, ಕುಗ್ಗುವ ಅವಶ್ಯಕತೆ ಇಲ್ಲ. ನಮ್ಮ ಜೀವನ ನಮಗೆ. ಅದನ್ನು ಸಂಭ್ರಮದಿಂದ ಇರುವಷ್ಟರಲ್ಲೆೀ ಸಂತೋಷದಿಂದ ಎಲ್ಲರೊಡನೆ ಹಂಚಿ ಬದುಕಿದಾಗ ಸಾರ್ಥಕ ಬದುಕಾಗುತ್ತದೆ.

🌺ನಿರೂಪಣೆ: ಡಾ. ಗುರುರಾಜ ಕರ್ಜಗಿ, ‘ಕರುಣಾಳು ಬಾ ಬೆಳಕೆ’,



➡ವಿಷಯ ಸಂಗ್ರಹ:-->ಪ್ರಜಾ ವಾಣಿ📰

ಮಾರ್ಗದರ್ಶನ ಮಾಡುವವರ ಅರ್ಹತೆಗಳು

ಮಾರ್ಗದರ್ಶನ ಮಾಡುವವರ ಅರ್ಹತೆಗಳು


ದೇಶ ವಿದೇಶಗಳಲ್ಲಿ ಖ್ಯಾತಿವೆತ್ತ ಧರ್ಮಗುರುವೊಬ್ಬರು ಇದ್ದರು. ಅವರ ಬಳಿ ವಿದ್ಯೆ ಕಲಿತವರೆಲ್ಲ ತಾವು ದೊಡ್ಡ ವಿದ್ವಾಂಸರು, ಪ್ರಜ್ಞಾವಂತರು ಎನ್ನುವ ಅಭಿದಾನಕ್ಕೆ ಪಾತ್ರರಾಗುತ್ತಿದ್ದರು. ಅಲ್ಲಿ ಕನಿಷ್ಠ ಮೂರು ವರ್ಷವಾದರೂ ಕಲಿಯಲೇಬೇಕಿತ್ತು. ಆದರೂ ಅಲ್ಲಿನ ಕಲಿಕೆಯ ಮಹತ್ವದ ಕಾರಣಕ್ಕೆ ನಾಮುಂದು ತಾಮುಂದು ಎಂದು ಆ ಗುರುವಿನ ಬಳಿ ಕಲಿಯಲು ಹಾತೊರೆಯುವವರ ದೊಡ್ಡ ಸಾಲು ಇತ್ತು.

ಈಗಾಗಲೇ ಒಂದಿಷ್ಟು ತಾತ್ವಿಕ ತಿಳುವಳಿಕೆ, ಧಾರ್ಮಿಕ ಜ್ಞಾನ ಬೋಧಿಸುವ ಸಾಮರ್ಥ್ಯವಿದ್ದವನೊಬ್ಬ ‘ಮೂರು ವರ್ಷ ನಾನೂ ಕೂಡಾ ಅಲ್ಲಿ ಹೋಗಿ ಕಲಿತು ಬಂದಲ್ಲಿ ನನಗೆ ಮಹಾಜ್ಞಾನಿಯ ಪಟ್ಟ ಸಿಗಬಹುದು’ ಎಂದು ಭಾವಿಸಿ, ಆ ಗುರು ಶಿಷ್ಯರಲ್ಲೊಬ್ಬನಾಗಿ ಸೇರ್ಪಡೆಯಾದ.

ಮೂರು ವರ್ಷ ತಾನೇ ಎಂದು ಸೇರಿದವನಿಗೆ ದಿನ ಕಳೆಯುವುದು ಕಷ್ಟ ಅನ್ನಿಸಿತು. ಅವನಿಗೆ ತಾನು ಎಲ್ಲ ಬಲ್ಲೆ. ಈತನಿಂದ ಬೋಧನೆಯ ಅರ್ಹತೆ ಪಡೆದರೇ ಸಾಕು ಎನ್ನುವ ಧೋರಣೆಯಲ್ಲೇ ಕಾಲ ಕಳೆದ. ಈ ಅವಧಿಯಲ್ಲಿ ನಾನು ಏನು ಮಾಡುತ್ತಿದ್ದೇನೆ? ನನ್ನ ಸಮಯ ಹೇಗೆ ವ್ಯಯಿಸುತ್ತಿದ್ದೇನೆ? ನನ್ನ ತಿಳುವಳಿಕೆ ಸಾಮರ್ಥ್ಯದ ಮಿತಿ ಏನು? ಹೀಗೆ ಏನೊಂದನ್ನೂ ಅವನು ಪರಾಮರ್ಶಿಸಿಕೊಳ್ಳುವ ಗೋಜಿಗೆ ಹೋಗಲಿಲ್ಲ. ಅಲ್ಲಿ ಪ್ರತಿಯೊಬ್ಬರು ತುಂಬಾ ಪ್ರಜ್ಞಾಪೂರ್ವಕವಾಗಿ ಕಲಿಕೆಯಲ್ಲಿ ತೊಡಗಿದ್ದವರಾದ್ದರಿಂದ ಈತನ ಚಲನವಲನ ಗಮನಿಸುವಷ್ಟು ಸಮಯ ಅವರಿಗಿರಲಿಲ್ಲ. ಮೂರನೇ ವರ್ಷದ ದಿನ ಮುಗಿಯುವುದನ್ನೇ ಕಾಯುತ್ತಿದ್ದ ಆತ ನಿಯಮಾವಳಿಯಂತೆ ಧರ್ಮಗ್ರಂಥವನ್ನಿಡಿದು ಅಲ್ಲಿದ್ದ ದೇವಸ್ಥಾನಕ್ಕೆ ತೆರಳಿ ದೇವರಿಗೆ ಪೂಜೆ ನೇರವೇರಿಸಿ, ಗುರುಗಳ ಬಳಿ ಬಂದು ತನ್ನ ಶಿಕ್ಷಣಾವಧಿ ಮುಗಿದಿರುವುದಾಗಿಯೂ ತಾವು ಆಶೀರ್ವದಿಸಿದಲ್ಲಿ ತಾನಿನ್ನು ಪೂರ್ಣ ಪ್ರಮಾಣದ ಧಾರ್ಮಿಕ ಬೋಧಕನಾಗಿ ಮುಂದಿನ ಜೀವನ ಕಳೆಯುವುದಾಗಿಯೂ ನಿವೇದಿಸಿಕೊಂಡ.


ಶಿಷ್ಯನ ಆತುರ ಗಮನಿಸಿದ ಗುರುಗಳು,‘‘ನೀನು ದೇವರಿಗೆ ನಮಿಸಿ ಬಂದೆಯಲ್ಲವೇ?,’’ ಎಂದು ಪ್ರಶ್ನಿಸಿದರು. ಶಿಷ್ಯ ‘‘ಹೌದು ಸ್ವಾಮಿ’’ ಎಂದು ಪ್ರತಿಕ್ರಿಯಿಸಿದ.‘‘ಹಾಗೆ ನಮಿಸುವಾಗ ಯಾವ ಬಗೆಯ ಮತ್ತು ಎಷ್ಟು ಹೂವನ್ನು ದೇವರಿಗೆ ಸಮರ್ಪಿಸಿದೆ?,’’ ಎಂದು ಕೇಳಿದರು. ‘‘ಶಿಷ್ಯ ಅದೂ...,’’ ಎಂದು ನಿರುತ್ತರನಾದ. ಹೋಗಲಿ ಬಿಡು. ‘‘ನೀನು ಧರ್ಮಗ್ರಂಥವನ್ನಿಡಿದು ಬಂದೆಯಲ್ಲವೇ?,’’ ಎಂದು ಗುರುಗಳು ಪ್ರಶ್ನಿಸುತ್ತಿದ್ದಂತೆ ‘‘ಗುರುಗಳೇ ಅದು ನಮಿಸುವಾಗ ಅಲ್ಲಿಯೇ ಬಿಟ್ಟು ಬಂದೆ,’’ ಎಂದು ಹೇಳಿ, ಅದನ್ನು ತರಲಿಕ್ಕೆಂದು ಎದ್ದು ನಿಲ್ಲಲು ಸಜ್ಜಾದ.

ಶಿಷ್ಯನನ್ನು ತಡೆದ ಗುರುಗಳು. ‘‘ಜನ ಯಾರ ಮಾರ್ಗದರ್ಶನವಿಲ್ಲದೆಯೂ ಅವರ ಪಾಡಿಗೆ ಅವರಿಗಿರುವ ತಿಳುವಳಿಕೆಯ ಮಿತಿಯಲ್ಲಿ ಬದುಕುತ್ತಿದ್ದಾರೆ. ಅವರ ಗ್ರಹಿಕೆ, ಕ್ರಿಯೆಗಳಲ್ಲಿ ಏನೇ ಏರುಪೇರುಗಳಾದರೂ ಸಹಿಸಿಕೊಂಡು ಮುನ್ನಡೆಯುತ್ತಾರೆ. ಅವರಿಗೆ ಮಾರ್ಗದರ್ಶನ ಮಾಡುವ ಹೆಸರಿನಲ್ಲಿ ಬೋಧಿಸುವ ನಾವು ಮೈಮರತರೇ ಹೇಗೆ?,’’ಎಂದು ಪ್ರಶ್ನಿಸಿದರು. ಶಿಷ್ಯನಿಗೆ ತನ್ನ ತಪ್ಪಿನ ಅರಿವು ಆಯಿತು. ಆತ ಮತ್ತೆ ಕಲಿಯುವ ಶಿಷ್ಯರ ಜತೆ ಸೇರಿಕೊಂಡ.

ಸಮಾಜದಲ್ಲಿ ಮಾರ್ಗದರ್ಶನ ಬೇಕಾಗಿರುವುದೇ ಪ್ರಜ್ಞಾವಂತಿಕೆಯ ಕೊರತೆ ಇರುವವರಿಗೆ. ಹಾಗಾಗಿ, ಮಾರ್ಗದರ್ಶನ, ಬೋಧನೆ ಮಾಡುವವರು ತುಂಬಾ ಪ್ರಜ್ಞಾವಂತರಾಗಿರಬೇಕು. ಅನುದಿನ, ಅನುಕ್ಷಣದ ಕ್ರಿಯೆ ಮತ್ತು ಪ್ರತಿಕ್ರಿಯೆಗಳ ಅರಿವು ಇರುವವರು ಮಾತ್ರ ಈ ಸಮಾಜದ ಬದುಕನ್ನು ನಿರ್ದೇಶಿಸಬಲ್ಲರು. ಅಂತಹವರಿಗೆ ನಿರಂತರ ಎಚ್ಚರ, ಜಾಗೃತಿ, ಪ್ರಜ್ಞೆ ಬೇಕು. ಆಚರಣೆಗಿಂತ ಬೋಧಿಸುವವರ ಸಂಖ್ಯೆ ಹೆಚ್ಚಳವಾಗುತ್ತಿರುವ ಸಂದರ್ಭದಲ್ಲಿ ಈ ನಿದರ್ಶನ ಎಲ್ಲರನ್ನೂ ಎಚ್ಚರಿಸುವಂತಿದೆ ಅಲ್ಲವೇ?

-ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ

Happiness Is Related to What You Are

Happiness Is Related to What You Are



“Happiness has nothing to do with what you have or don’t have. Happiness is related to what you are. However many things you may collect, perhaps they may increase your worries, your troubles, but happiness will not increase because of them. Certainly unhappiness will increase with them, but they have no relation to an increase in your happiness.



“I am not saying that you should renounce things, that you should escape from your home and renounce the marketplace. No, don’t misunderstand my statement. What is, is good. Nothing will happen either by dropping things and escaping from them or by clinging to them. Remain where you are, but begin the search within. Much outer searching has already been done, now go within. Now know the one, in this knowing one attains all. All desires are at once fulfilled.”



Osho, Die O Yogi Die, Talk #6
🌿🍃☘🍃🌿☘🍃🌿☘
🍃Happiness Needs No Explanation🍃



“If you are happy, you are happy; nobody asks you why you are happy. Yes, if you are miserable, a question is relevant. If you are miserable, somebody can ask why you are miserable, and the question is relevant – because misery is against nature, something wrong is happening. When you are happy, nobody asks you why you are happy, except for a few neurotics. There are such people; I cannot deny the possibility.



“I have heard about a patient – the psychiatrist was bored with him. Of course, he was getting enough money out of him, but he was getting bored by and by – three, four, five years of psychoanalysis, and the man was repeating the same again and again and again. The psychiatrist said, ‘Do one thing: go to the mountains for a few days. That will be very helpful.’



“So the patient went to the mountains, and do you know what? Next day a telegram arrived for the psychiatrist. The patient said in the telegram, ‘I am feeling very happy – why?’



"Feeling very happy – why? An explanation is needed. No, happiness needs no explanation, happiness is its own explanation. God is creating because that is the only way he can be happy, that is the only way he loves, that is the only way he sings, that’s the only way he can be at all. Creation is his innermost nature, no why is needed.



Osho, The Path of Love, Talk #8
🍁🍂🍃🍂🍁🍃🍂🍁🍃

ಸ್ವಾಮಿ ವಿವೇಕಾನಂದರು ವಿಶ್ವ ಧರ್ಮ ಸಮ್ಮೇಳನದಲ್ಲಿ ಮಾಡಿದ ಭಾಷಣದ ಅನುವಾದ ಇಂತಿದೆ :

ಸ್ವಾಮಿ ವಿವೇಕಾನಂದರು ವಿಶ್ವ ಧರ್ಮ ಸಮ್ಮೇಳನದಲ್ಲಿ ಮಾಡಿದ ಭಾಷಣದ ಅನುವಾದ ಇಂತಿದೆ :

‘‘ಅಮೇರಿಕೆಯ ಸೋದರಿಯರೇ ಮತ್ತು ಸೋದರರೇ!

ನೀವು ನಮಗಿತ್ತ ಪ್ರೀತಿಯ, ಹೃತ್ಪೂರ್ವಕ ಸ್ವಾಗತವನ್ನು (ಕರತಾಡನರೂಪೀ ಸ್ವಾಗತವನ್ನು) ಕಂಡಾಗ, ಶಬ್ದಗಳಿಂದ ಬಣ್ಣಿಸಲು ಅಸಾಧ್ಯಾವಾದ ಸಂತಸದಿಂದ ನನ್ನ ಹೃದಯ ತುಂಬಿ ಬಂದಿದೆ. ಅತ್ಯಂತ ಪುರಾತನವಾದ ಸನಾತನ ಧರ್ಮ ಪ್ರತಿನಿಧಿಸುವ ಸನ್ಯಾಸಿಯಾದ ನಾನು ನಿಮಗೆಲ್ಲ ಕೃತಜ್ಞ. ಸರ್ವ ಧರ್ಮಗಳ ಮಹಾಮಾತೆಯ ಹೆಸರಿನಲ್ಲಿ ನಿಮಗೆ ಕೃತಜ್ಞ. ಎಲ್ಲ ವರ್ಗ ಮತ್ತು ಮತಗಳನ್ನು ಪ್ರತಿನಿಧಿಸುವ ಲಕ್ಷಾವಧಿ ಹಿಂದೂ ಜನತೆಯ ಪರವಾಗಿ ನಾನು ನಿಮಗೆ ಕೃತಜ್ಞ.

ಈ ವೇದಿಕೆಯ ಮೇಲೆ ಭಾಷಣ ಮಾಡಿದ ಪೌರ್ವಾತ್ಯ ದೇಶಗಳ ಪ್ರತಿನಿಧಿಗಳಿಗೆ ನಾನು ಕೃತಜ್ಞ. ದೂರ ದೂರದ ರಾಷ್ಟ್ರಗಳಿಂದ ಇಲ್ಲಿಗೆ ಬಂದ ಜನತೆ, ಅವರು ಕೂಡ ಸೌಹಾರ್ದ ಭಾವ ತಾಳಿದವರಾಗಿದ್ದಾರೆ. ಜಗತ್ತಿಗೆ ಸಹಿಷ್ಣುತೆಯನ್ನು, ಒಪ್ಪಿಗೆಯ ಸ್ವೀಕಾರವನ್ನು ಕಲಿಸಿದ ಧರ್ಮದ ಪ್ರತಿನಿಧಿ ನಾನು ಎಂದು ಹೇಳಿಕೊಳ್ಳುವುದರಲ್ಲಿ ನನಗೆ ಅಭಿಮಾನವಿದೆ. ನಾವು ವಿಶ್ವದ ಸಹಿಷ್ಣುತೆಯಾಡನೆ ನಾವು ವಿಶ್ವದ ಎಲ್ಲ ಧರ್ಮಗಳನ್ನು ಸತ್ಯವೆಂದು ಒಪ್ಪಿಕೊಳ್ಳುತ್ತೇವೆ, ಸ್ವೀಕರಿಸುತ್ತೇವೆ.

ಈ ಭೂಮಂಡಲದ ಎಲ್ಲ ಧರ್ಮಾನುಯಾಯಿ ಸಂತ್ರಸ್ತರನ್ನು, ಅವರು ಪೀಡೆಗೆ ಒಳಗಾದಾಗ ಅಶ್ರಯ ಕೊಟ್ಟು, ರಕ್ಷಣೆ ನೀಡಿದ ಭಾರತದೇಶದವನು ನಾನು ಎಂಬ ಅಭಿಮಾನ ನನಗಿದೆ. ರೋಮನ್‌ ದಬ್ಬಾಳಿಕೆಯ ಪರಿಣಾಮದಿಂದ ತಮ್ಮ ಪವಿತ್ರ ಗುಡಿಗಳು ನಾಶಗೊಂಡಾಗ ಇಸ್ರೇಲ್‌ ವಾಸಿಗಳು ದಕ್ಷಿಣ ಭಾರತಕ್ಕೆ ಬಂದು ಆಶ್ರಯ ಪಡೆದಿದ್ದರು ಎಂಬ ಮಾತನ್ನು ಅಭಿಮಾನದಿಂದ ನೆನೆಯುತ್ತೇನೆ. ಝರತುಷ್ಟ್ರ ದೇಶದ ನಿವಾಸಿಗಳಿಗೂ ಆಶ್ರಯ ನೀಡಿದ ಧರ್ಮದ ಅನುಯಾಯಿ ನಾನು ಎಂದು ಅಭಿಮಾನದಿಂದ ಹೇಳುತ್ತೇನೆ.

ಬಂಧುಗಳೇ, ನಾನು ಬಾಲ್ಯದಲ್ಲಿ ಪಠಣಮಾಡುತ್ತಿದ್ದ ಸ್ತೋತ್ರದ ಸಾಲುಗಳನ್ನು ಇಲ್ಲಿ ಉದಾಹರಿಸುತ್ತೇನೆ. ಈ ಸ್ತೋತ್ರವನ್ನು ಲಕ್ಷಾವಧಿ ಮನೆಗಳಲ್ಲಿ ಇಂದು ಕೂಡ ಪ್ರತಿನಿತ್ಯ ಪಠಿಸಲಾಗುತ್ತದೆ. ‘ಎಲ್ಲ ದಿಶೆಗಳಿಂದ ಹರಿದು ಬಂದ ತೊರೆಗಳ ನೀರು ಸಾಗರವನ್ನು ಸೇರುವಂತೆ, ಓ ದೇವರೇ, ಬೇರೆ ಬೇರೆ ದಿಕ್ಕಿನಿಂದ ನಿನ್ನೆಡೆಗೆ ಬರುವ ಜನರ ದಾರಿಗಳು ಸರಳವಾಗಿರಲಿ, ವಕ್ರವಾಗಿರಲಿ, ಅವೆಲ್ಲ ಕೊನೆಗೆ ನಿನ್ನೆಡೆಗೇ ಬರುತ್ತವೆ.’

ಇಂದು ಇಲ್ಲಿ ನಡೆದ ಸಮಾವೇಶದಂತಹದು ಹಿಂದೆಂದೂ ನಡೆದಿರಲಿಲ್ಲ. ಇದು ಅತಿ ಮಹತ್ವದ ಸಮಾವೇಶ. ಇದು ಭಗವದ್ಗೀತೆ ಸಾರಿದಂತಹ ಮಹಾನ್‌ ತತ್ವದ ಘೋಷಣೆಯಾಗಿದೆ, ಸಮರ್ಥನೆಯಾಗಿದೆ. ‘‘ನನ್ನೆಡೆಗೆ ಯಾವನೇ ಬರಲಿ, ಯಾವ ರೂಪದಿಂದಲೇ ಬರಲಿ, ನಾನು ಅವನನ್ನು ತಲುಪುತ್ತೇನೆ. ಹಲವಾರು ದಾರಿ ತುಳಿದು ಕಷ್ಟಪಟ್ಟು ಬರುವ ಜನರು ಕೊನೆಯಲ್ಲಿ ನನ್ನ ಕಡೆಗೇ ಬರುತ್ತಾರೆ.’’

ಕೋಮುವಾದ, ಮತಾಭಿಮಾನ ಇವುಗಳ ಸಂತಾನ ಮತಾಂಧತೆ. ಇವು ನಮ್ಮ ಸುಂದರ ನೆಲದಲ್ಲಿ ಭೂತದಂತೆ ಹಮ್ಮಿಕೊಂಡಿವೆ. ಇವುಗಳಿಂದ ಜಗದಲ್ಲಿ ಹಿಂಸಾಚಾರ ನಡೆದಿದೆ, ಈ ನೆಲ ಮಾನವ ರಕ್ತದಿಂದ ಸಿಕ್ತವಾಗಿದೆ. ಈ ಭಯಂಕರ ಭೂತಗಳು ನಮ್ಮನ್ನು ಕಾಡಿರದಿದ್ದರೆ ಮಾನವ ಸಮಾಜ ಇನ್ನಷ್ಟು ಪ್ರಗತಿ ಸಾಧಿಸಬಹುದಾಗಿತ್ತು. ಈ ಭೂತಗಳ ಕಾಲ ಇನ್ನು ಮುಗಿದಿದೆ. ಇಂದು ಮುಂಜಾನೆ ಬಾರಿಸಿದ ಘಂಟಾನಾದ ಧರ್ಮಾಂಧತೆಯ ಸಾವಿನ ಗಂಟೆಯಂತಿತ್ತು, ಖಡ್ಗದಿಂದ ಅಥವಾ ಲೆಕ್ಕಣಿಕೆಯಿಂದ ಈ ನೆಲದಲ್ಲಿ ನಡೆದ ಹಿಂಸಾಚಾರಗಳ ಕೊನೆಯ ಹಾಡಿನಂತಿತ್ತು, ಮನುಷ್ಯ ಮನುಷ್ಯರ ನಡುವೆ ಇರುವ ಕುತ್ಸಿತ ಭಾವನೆಗಳಿಗೆ ಅಂತ್ಯದ ಕರೆಯಂತಿತ್ತು, ಎಲ್ಲರೂ ತಲುಪಬೇಕಾದ ಒಂದೆ ಗುರಿಯ ದಿಕ್ಸೂಚಿಯಂತಿತ್ತು.’’

ಅರ್ಥವಾಗಿದೆ ಎಂದರೇನು?

✨ಅರ್ಥವಾಗಿದೆ ಎಂದರೇನು?✨


''ಆಲೋಚನೆಯ ಸ್ವರೂಪ ಮತ್ತು ರಚನೆಯನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ,'' ಎಂದು ಯಾರಾದರೂ ಹೇಳಿದರೆ ಏನರ್ಥ? ''ನಾನು ಅರ್ಥಮಾಡಿಕೊಂಡಿದ್ದೇನೆ ನನಗೆ ತಿಳಿದಿದೆ,'' ಎಂದಲ್ಲವೇ? ''ನನಗೆ ಅರ್ಥವಾಗಿದೆ,'' ಎಂದು ಹೇಳುವ ಮನಸ್ಸಿನ ಸ್ಥಿತಿ ಏನು? ಯಾವುದು? ದಯವಿಟ್ಟು ಎಚ್ಚರಿಕೆಯಿಂದ ಅನುಸರಿಸಿ. ಯಾವುದನ್ನು ಸ್ಥಾಪಿಸಲು ಹೋಗಬೇಡಿ. ಆಲೋಚನೆ ಅರ್ಥವಾಗುವುದೇ? ಎಂದು ನಾನು ಪ್ರಶ್ನಿಸುತ್ತಿದ್ದೇನೆ. ನೀವೇನು ಹೇಳುತ್ತೀರಿ, ಉದಾಹರಣೆಗೆ ನೀವು ಆಧುನಿಕ ಜೀವನದ ಸಂಕೀರ್ಣತೆಯನ್ನು ತುಂಬಾ ಸೂಕ್ಷ ್ಮವಾಗಿ ಬಣ್ಣಿಸುತ್ತೀರಿ- ಆಗ 'ನನಗೆ ಅರ್ಥವಾಯಿತು' ಎನ್ನುತ್ತೇನೆ. ಬರೀ ವರ್ಣನೆ ಮಾತ್ರವಲ್ಲದೆ, ಅದರ ವಸ್ತು, ವಿಷಯದ ಆಳ ಇದೆಲ್ಲ ಅರ್ಥವಾಯಿತು. ಎನ್ನುತ್ತೇನೆ. ಆಗ ನನಗೆ ಆಧುನಿಕ ಜೀವನದಲ್ಲಿ ಸಿಲುಕಿಕೊಂಡ ಮನುಷ್ಯರು ಹೇಗೆ ನರದೌರ್ಬಲ್ಯ ಪೀಡಿತರಾಗಿದ್ದಾರೆ, ಎಂಥ ದುಃಖಸ್ಥಿತಿ ಅವರದ್ದು ಎಂಬುದು ತಿಳಿಯುತ್ತದೆ. ನಾನು ನನ್ನ ಕಿವಿಗಳು, ನರಗಳು ಭಾವಗಳೊಂದಿಗೆ ಅರ್ಥ ಮಾಡಿಕೊಂಡಿದ್ದೇನೆ. ಹೀಗಾಗಿ ನಾನು ಅದರಲ್ಲಿ ಸಿಲುಕಿಕೊಂಡಿಲ್ಲ. ಸರ್ಪವು ಅಪಾಯಕಾರಿ ಎಂಬುದು ನನಗೆ ಅರ್ಥವಾದಾಗ ನಾನು ಅದರ ಹತ್ತಿರ ಸುಳಿಯುವುದಿಲ್ಲ. ಒಂದು ವೇಳೆ ಅದು ನನ್ನೆದುರಿಗೆ ಬಂದಾಗ ನನ್ನ ವರ್ತನೆ ಸಂಪೂರ್ಣ ಭಿನ್ನವಾಗಿರುತ್ತದೆ. ಏಕೆಂದರೆ ಈಗ ನನಗೆ ಆ ಬಗ್ಗೆ ಅರ್ಥವಾಗದೆ. ಹಾಗಾದರೆ ವ್ಯಕ್ತಿಯು ಆಲೋಚನೆಯ ಸ್ವರೂಪ ಮತ್ತು ಆಲೋಚನೆಯ ಫಲವನ್ನು ಅಂದರೆ ಭಯ ಮತ್ತು ಸುಖವನ್ನು ಅರ್ಥಮಾಡಿಕೊಳ್ಳುವ ಸ್ಥಿತಿಯಲ್ಲಿದ್ದಾನೆಯೇ? ವ್ಯಕ್ತಿ ಅದನ್ನು ಹಿಡಿತಕ್ಕೆ ತಂದುಕೊಂಡಿದ್ದಾನಾ? ಅದು ಹೇಗೆ ಕೆಸಲ ಮಾಡುತ್ತದೆ ಎಂಬುದನ್ನು ಯಥಾರ್ಥವಾಗಿ ನೋಡಿದ್ದಾನಾ? ಅಥವಾ ನಾನಿನ್ನೂ ಆ ವರ್ಣನೆ, ವಾದ, ತಾರ್ಕಿಕತೆ ಜೊತೆಗೇ ಇದ್ದೇನಾ? ವಸ್ತುಸ್ಥಿತಿಯೊಂದಿಗಿಲ್ಲವಾ? ನನಗೆ ವರ್ಣನೆಯಿಂದ ಸಂತೋಷವಷ್ಟೇ ಅದರೆ, ಅದೂ ಶಾಬ್ದಿಕ ವಿವರಣೆಯಿಂದ ಖುಷಿಯಾಗಿದ್ದರೆ, ಆಗ ನಾನು ಅದರೊಂದಿಗೆ ಆಲೋಚನೆ ಮಾಡುತ್ತಿದ್ದೇನಷ್ಟೆ. ವರ್ಣನೆಯ ವರ್ಣಿಸಲ್ಪಟ್ಟ ವಸ್ತುವನ್ನು ನಿಜಕ್ಕೂ ದರ್ಶಿಸಲು ಸಾಧ್ಯವಾದರೆ ಅದರ ಪ್ರತ್ಯಕ್ಷ ಪರಿಭಾವನೆ ಸಾಧ್ಯವಾದರೆ, ಆಗ ಸಂಪೂರ್ಣ ಭಿನ್ನವಾದ ಕ್ರಿಯೆ ನೆರವೇರುತ್ತದೆ. (ಹಸಿದವನಿಗೆ ಅನ್ನ ಬೇಕೇ ಹೊರತು ಅನ್ನದ ಬಣ್ಣನೆಯಲ್ಲ. ಅವನಿಗೆ ಅನ್ನಬೇಕು; ಅನ್ನ ತಿಂದರೆ ಏನಾಗುತ್ತದೆ ಎಂಬ ತೀರ್ಮಾನವಲ್ಲ.) ಆಲೋಚನೆಯು ಭಯವನ್ನು ಹೇಗೆ ಸೃಷ್ಟಿಸುತ್ತದೆ ಎಂಬುದನ್ನು ವ್ಯಕ್ತಿ ಕಂಡುಕೊಂಡಾಗ ಏನಾಗುತ್ತದೆ? ಹಸಿದವನ ಮುಂದೆ ಊಟ ಎಷ್ಟು ರುಚಿಯಾಗಿದೆ ಎಂದು ಯಾರಾದರೂ ಬಣ್ಣಿಸಿದರೆ ಆಗ ಅವನ ಪ್ರತಿಕ್ರಿಯೆ ಏನು? ಏನು ಮಾಡುತ್ತಾನೆ? ''ಅನ್ನವನ್ನು ಬಣ್ಣಿಸಬೇಡ ಅನ್ನವನ್ನಿಕ್ಕು'' ಎಂದು ಹೇಳಬಹುದು. ಅಲ್ಲಿ ನೇರಕ್ರಿಯೆ ಇದೆ; ಅದು ತಾತ್ತ್ವಿಕವಲ್ಲ. ಹೀಗಾಗಿ 'ನನಗೆ ಅರ್ಥವಾಗಿದೆ' ಎಂದು ಯಾರಾದರೂ ಹೇಳಿದಾಗ ಆಲೋಚನೆ, ಭಯ ಹಾಗೂ ಸುಖದ ಬಗೆಗೆ ನಿರಂತರವಾದ ಕಲಿಕೆಯ ಚಲನೆ ನಡೆದಿದೆ ಎಂದು ಅರ್ಥ. ಈ ನಿರಂತರ ಚಲನೆಯಿಂದಾಗಿ ವ್ಯಕ್ತಿ ಕರ್ತವ್ಯದಲ್ಲಿ ಮಗ್ನನಾಗುತ್ತದೆ. ಕಲಿಕೆಯ ಚಲನೆಯಲ್ಲೇ ಅವನು ಕರ್ಮ ಮಾಡುತ್ತಾನೆ. ಭಯದ ಬಗೆಗೆ ಕಲಿಕೆ ನೆರವೇರಿದಾಗ ಭಯವೂ ಕೊನೆಗೊಳ್ಳುತ್ತದೆ.

* ಜೆ. ಕೃಷ್ಣಮೂರ್ತಿ
🍃☘🌿🍃☘🌿🍃☘🌿

ವಿರಳವಾದ ಸರಳತೆ

ವಿರಳವಾದ ಸರಳತೆ

ಚಿಂತನ -


ಉಡುಗೆ ತೊಡುಗೆಗಳಲ್ಲಿ, ರೀತಿನೀತಿಗಳಲ್ಲಿ ಅಥವಾ ಸಾಮಾಜಿಕ ನಡವಳಿಕೆಗಳಲ್ಲಿ ಸರಳತೆಯನ್ನು ರೂಢಿಸಿಕೊಂಡು ಬರುವುದು ತುಂಬ ಕಷ್ಟದ ಕೆಲಸ.ಏಕೆಂದರೆ ಮಾನವ ಸಮಾಜದಲ್ಲಿ ಪ್ರತಿಯೊಬ್ಬರೂ ಪ್ರದರ್ಶನಪ್ರಿಯತೆಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಾರೆ.ಶ್ರೀಮಂತಿಕೆ, ಸ್ಥಾನಮಾನ, ಅಧಿಕಾರ ಉಳ್ಳವರಂತೂ ಅವುಗಳಿಗೆ ತಕ್ಕುದಾಗಿ ಅಥವಾ ಅವುಗಳಿಗೂ ಮಿಕ್ಕಿದ್ದಾಗಿ ಮೆರೆಯಲು ಕಾತುರಪಡುತ್ತಾರೆ. ಒಂದು ವೇಳೆ ಒಳ್ಳೆಯ ಹುದ್ದೆಯಲ್ಲಿ ಇದ್ದವರು ಸರಳವಾಗಿ ವ್ಯವಹರಿಸಲು ಹೊರಟರೆ ಅವರನ್ನು ಕಡು ಬಡವರೆಂದೂ ಏನೂ ಗತಿಯಿಲ್ಲದವರೆಂದೂ ತಪ್ಪಾಗಿ ಭಾವಿಸುವವರೇ ಹೆಚ್ಚು.ಸುತ್ತಮುತ್ತ ಸರಳತೆಯೇ ವಿರಳವಾಗಿರುವಾಗ ಅದನ್ನು ನಿಜಜೀವನದಲ್ಲಿ ಆಚರಿಸಿಕೊಂಡು ಬರುವುದು ಎಷ್ಟು ಕಷ್ಟದ ಸಂಗತಿ ಎನ್ನುವುದನ್ನು ತೋರಿಸಿಕೊಡುವ ಕಥೆಯೊಂದು ಮನಸ್ಸನ್ನು ತಟ್ಟುವಂತಿದೆ.

ಪೇಶ್ವೆ ಮಾಧವರಾಯನ ಗುರು ರಾಮಾಶಾಸ್ತ್ರಿಯವರು ರಾಜ್ಯದ ವರಿಷ್ಠ ನ್ಯಾಯಾಧೀಶರೂ ಆಗಿದ್ದು ತುಂಬ ಗೌರವಾನ್ವಿತ ವ್ಯಕ್ತಿಯಾಗಿದ್ದರು. ಆದರೆ ಅವರು ತಮ್ಮ ಉನ್ನತ ಪದವಿಗೆ ತಕ್ಕಂತೆ ವೈಭವದಿಂದ ಮೆರೆಯದೆ ಅತ್ಯಂತ ಸರಳರೀತಿಯ ಜೀವನ ವಿಧಾನಕ್ಕೆ ಅಂಟಿಕೊಂಡಿದ್ದರು. ಅಲ್ಲದೆ ತಮ್ಮ ಕುಟುಂಬದ ಸದಸ್ಯರು ಕೂಡ ನಿರಾಡಂಬರವನ್ನು ಅನುಸರಿಸುವಂತೆ ತಾಕೀತು ಮಾಡಿದ್ದರು.

ಹೀಗಿರಲು ಒಮ್ಮೆ ಶಾಸ್ತ್ರಿಯವರ ಧರ್ಮಪತ್ನಿ ಯಾವುದೋ ಒಂದು ಹಬ್ಬದ ದಿನ ರಾಜನ ಅರಮನೆಗೆ ಹೋಗಬೇಕಾಯಿತು. ಆಕೆಯ ವೇಷಭೂಷಣಗಳನ್ನು ಕಂಡು ಅಚ್ಚರಿ ಹಾಗೂ ಬೇಸರಗೊಂಡ ರಾಣಿ ಒತ್ತಾಯಪೂರ್ವಕವಾಗಿ ಅವರಿಗೆ ಅಮೂಲ್ಯವಾದ ಉಡುಪುಗಳನ್ನು ಉಡಿಸಿದಳು. ರತ್ನ ಖಚಿತವಾದ ಆಭರಣಗಳನ್ನು ತೊಡಿಸಿದಳು. ‘‘ವರಿಷ್ಠ ನ್ಯಾಯಾಧೀಶರ ಪತ್ನಿ ರಾಜೋಚಿತ ಪಲ್ಲಕಿಯಲ್ಲಿ ಸಂಚರಿಸಬೇಕಲ್ಲದೆ ಸಾಮಾನ್ಯರಂತೆ ನಡೆದುಕೊಂಡು ಹೋಗಬಾರದು’’ ಎಂದು ತಾಕೀತು ಮಾಡಿದಳು. ಆದ್ದರಿಂದ ಅವರನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಮನೆಗೆ ಕರೆತರಲಾಯಿತು.

ತನ್ನ ಪತ್ನಿಯ ಪೋಷಾಕು ಅಲಂಕಾರಗಳಾಗಲಿ, ಪಲ್ಲಕ್ಕಿಯ ಮೆರವಣಿಗೆಯಾಗಲಿ ರಾಮಾಶಾಸ್ತ್ರಿಯವರಿಗೆ ಎಳ್ಳಷ್ಟೂ ಹಿಡಿಸಲಿಲ್ಲ. ‘‘ನನ್ನ ಪತ್ನಿ ಇಂತಹ ದುಬಾರಿ ಬೆಲೆಯ ಅರಿವೆಗಳನ್ನು ಉಡಲಾರಳು. ಚಿನ್ನರನ್ನಗಳ ಒಡವೆ ಧರಿಸಲಾರಳು. ಆದ್ದರಿಂದ ನೀವು ವಾಪಸ್ ಹೋಗಿ’’ ಎಂದು ಅವರು ಪಲ್ಲಕ್ಕಿಯವರಿಗೆ ಹೇಳಿದರು.

ಪತಿಯ ಸ್ವಭಾವವನ್ನು ಚೆನ್ನಾಗಿ ಬಲ್ಲ ಶಾಸ್ತ್ರಿಯವರ ಹೆಂಡತಿ ಅರಮನೆಗೆ ಹೋಗಿ ರಾಜೋಚಿತ ಪೋಷಾಕು -ಆಭರಣಗಳನ್ನು ಕಳಚಿಟ್ಟರು. ತಮ್ಮ ದೈನಂದಿನ ಸೀದಾ ಸಾದಾ ಬಟ್ಟೆಯನ್ನು ಧರಿಸಿ ಕಾಲ್ನಡಿಗೆಯಲ್ಲೇ ಮನೆಗೆ ಹಿಂತಿರುಗಿದರು.

ಆಗ ಶಾಸ್ತ್ರೀಜಿ, ‘‘ಬಹಳ ಬೆಲೆಯ ಮಿರುಗುವ ಬಟ್ಟೆಯ -ಒಡವೆಗಳನ್ನು ರಾಜ ಮನೆತನದವರು ಪ್ರದರ್ಶನಕ್ಕಾಗಿ ತೊಟ್ಟುಕೊಳ್ಳುತ್ತಾರೆ. ಮೂರ್ಖರು ತಮ್ಮ ದೋಷ ಮುಚ್ಚಿಡಲು ಬಳಸುತ್ತಾರೆ. ಆದರೆ ನಮ್ಮಂತಹ ಸಜ್ಜನರಿಗೆ ಸರಳತೆಯೇ ಶೋಭೆ’’ ಎಂದರು. ಪತ್ನಿ ಇದಕ್ಕೆ ಹ್ಞೂಗುಟ್ಟಿದರು.

ಅರ್ತಿಕಜೆ

Very nice poem about Life

Very nice poem about Life




Very nice poem about Life



Very nice poem … Read it slowly

“Ahista chal zindagi, abhi kai karz chukana baaki hai.

Kuch dard mitana baaki hai, kuch farz nibhana baaki hai.

Raftaar mein tere chalne se kuchh rooth gaye, kuch chhut gaye.

Roothon ko manana baaki hai, roton ko hasana baki hai.

Kuch hasraatein abhi adhuri hain, kuch kaam bhi aur zaroori hai.

Khwahishen jo ghut gayi iss dil mein, unko dafnana baki hai.

Kuch rishte ban kar toot gaye, kuch judte-judte chhut gaye.

Unn tootte-chhutte rishton ke zakhmon ko mitana baki hai.

Tu aage chal main aata hoon, kya chhod tujhe ji paunga?

In saanson par haqq hai jinka, unko samjhana baaki hai.

Aahista chal zindagi, abhi kai karz chukana baki hai…


🌱Happiness Is One Pole, Sadness Is Another🌱

The truth might surprise you !!!



TOUCHING STORY:

A 24 year old boy seeing out from the train’s window

shouted,

“Dad, look the trees are going behind!”

Dad smiled and a young couple

sitting nearby, looked at the 24 year old’s

childish behaviour with pity.



Suddenly he again exclaimed,

“Dad, look the clouds are running with us!



” The couple couldn’t resist and

said to the old man,

“Why don’t you take your son to a good

doctor?”

The old man smiled and said,

“I did and we are just coming

from the hospital, my son was

blind from birth, he just got his

eyes today”



MORAL LESSON:

Every single person on the

planet has a story.

Don’t judge people before you

truly know them.

The truth might surprise you !!!






🌱Happiness Is One Pole, Sadness Is Another🌱



“Happiness is one pole, sadness is another. Blissfulness is one pole, misery is another. Life consists of both, and life is richer because of both. A life only of blissfulness will have extension, but will not have depth. A life of only sadness will have depth, but will not have extension.



"A life of both sadness and blissfulness is multi-dimensional; it moves in all dimensions together. Watch the statue of Buddha or sometimes look into my eyes and you will find both together – a blissfulness, a peace, a sadness also.



"You will find a blissfulness which contains in it sadness also, because that sadness gives it depth. Watch Buddha’s statue – blissful, but still sad. The very word sad gives you wrong connotations – that something is wrong. This is your interpretation. To me, life in its totality is good.”

Osho
✨🍁✨🍁✨🍁✨🍁✨

ಮೂರ್ಖರು ಯಾರು?

ಮೂರ್ಖರು ಯಾರು?



ಈ ಜಗತ್ತಿನಲ್ಲಿ ಮಾನವನ ಬದುಕಿನಲ್ಲಿ ಅನೇಕ ತರದ ಅನಿರೀಕ್ಷಿತ ಪ್ರಸಂಗಗಳು ಎದುರಾಗುವುದುಂಟು. ಮನುಷ್ಯನು ಬಹಳಷ್ಟು ಶಿಕ್ಷ ಣ, ಅನುಭವ ಪಡೆದಿದ್ದರೂ ಕೂಡ, ತಾನೆಂದೂ ಊಹಿಸಿಯೇ ಇಲ್ಲದಿರುವ ಘಟನೆಗಳೋ, ಸಮಸ್ಯೆಗಳೋ ಸಂಭವಿಸಿ ಕಂಗಾಲಾಗಬೇಕಾದ ಪರಿಸ್ಥಿತಿ ಉಂಟಾಗುವುದೂ ಇದೆ. ಆಗ ಜಾಣರೂ, ದೂರದರ್ಶಿಗಳೂ ಆದ ವಿವೇಕಿ ಪುರುಷರು ಸಮಸ್ಯೆಗಳನ್ನು ನಿವಾರಿಸುವಲ್ಲಿ ಸಮರ್ಥರಾಗುತ್ತಾರೆಂಬ ಮನೋಜ್ಞ ನಿದರ್ಶನವೊಂದು ಇಲ್ಲಿದೆ. ನೂರಾರು ವರ್ಷಗಳ ಹಿಂದಿನ ಒಂದು ಸಂಗತಿ. ಒಬ್ಬ ಬಡ ಕೂಲಿಕಾರನು ತನ್ನ ಕತ್ತೆಯೊಂದಿಗೆ ಕಾಡಿನ ಹಾದಿಯಲ್ಲಿ ಮುಂದೆ ಸಾಗುತ್ತಿದ್ದ. ಆಗ ಅಕಸ್ಮಾತ್ತಾಗಿ ಆತನ ದೃಷ್ಟಿ ರಸ್ತೆಯಲ್ಲಿ ಫಳಫಳನೆ ಹೊಳೆಯುತ್ತಿದ್ದ ಸಣ್ಣ ಕಲ್ಲಿನ ಮೇಲೆ ಬಿತ್ತು. ತುಂಬಾ ಚೆನ್ನಾಗಿದೆ ಅನ್ನಿಸಿದಾಗ ಅದನ್ನು ಎತ್ತಿಕೊಂಡು ದಾರಕ್ಕೆ ಪೋಣಿಸಿ, ತನ್ನ ಕತ್ತೆಯ ಕುತ್ತಿಗೆಗೆ ನೇತು ಹಾಕಿ ಮುಂದೆ ಸಾಗಿದ. ತುಸು ಹೊತ್ತು ಮುಂದೆ ಸಾಗುವಷ್ಟರಲ್ಲಿ ಆ ನಗರದ ಪ್ರಸಿದ್ಧ ವಜ್ರ ವ್ಯಾಪಾರಿ ಕಾಣ ಸಿಕ್ಕಿದ. ಕತ್ತೆಯ ಕುತ್ತಿಗೆಯಲ್ಲಿರುವ ಅಮೂಲ್ಯ ರತ್ನವನ್ನು ಗುರುತಿಸಿದ. ಬಳಿಕ ಕೂಲಿಕಾರನೊಡನೆ ನುಡಿದ 'ಲೋ ತಮ್ಮ, ನಾನು ಈ ಕಲ್ಲನ್ನು ಖರೀದಿಸಬಯಸುತ್ತೇನೆ. ಎಷ್ಟು ರೂಪಾಯಿಗೆ ಕೊಡುತ್ತೀಯಾ?' ಆ ಕೂಲಿಕಾರನಿಗೆ ಅಂಥ ಮುತ್ತು-ರತ್ನಾದಿಗಳ ಬೆಲೆಯ ಪರಿಜ್ಞಾನ ಇರಲಿಲ್ಲ. ಆದರೂ ಭಾರಿ ಸಂತಸದಿಂದ ಹೇಳಿದ. 'ಕನಿಷ್ಠ ನೂರು ರೂಪಾಯಿ ಕೊಡಬೇಕಾಗುತ್ತದೆ'. ವಜ್ರ ವ್ಯಾಪಾರಿಯು ಯೋಚಿಸಿ ಕೇಳಿದ. 'ನೂರು ರೂಪಾಯಿ ಹೆಚ್ಚಾಯ್ತು. ನಾನು ಐವತ್ತು ರೂಪಾಯಿಗಿಂತ ಹೆಚ್ಚು ಕೊಡಲಾರೆ'. ಹೀಗೆಂದ ವಜ್ರ ವ್ಯಾಪಾರಿಯು ತನ್ನ ಹೊರತು ಬೇರಾರೂ ಈ ಅಮೂಲ್ಯ ಕಲ್ಲನ್ನು ಖರೀದಿಸಬಲ್ಲ ಗಿರಾಕಿಯು ಸಿಗಲಿಕ್ಕಿಲ್ಲ ಎಂದೇ ಆಲೋಚಿಸಿದ್ದ ಮತ್ತು ಆ ಕೂಲಿಕಾರನು ತನ್ನ ಬಳಿಗೇ ಬರುತ್ತಾನೆಂದು ಯೋಚಿಸಿದ್ದ. ಆದರೆ ಆ ಕೂಲಿಯು ತುಸು ದೂರ ಮುಂದೆ ಹೋಗುವಷ್ಟರಲ್ಲಿ ಇನ್ನೊಬ್ಬ ವಜ್ರ ವ್ಯಾಪಾರಿ ಸಿಕ್ಕಿದ. ಆತನೂ ಆ ಅಮೂಲ್ಯ ಕಲ್ಲನ್ನು ಗುರುತಿಸಿ ಕೂಲಿಕಾರನೊಡನೆ ಕೇಳಿದ- 'ಲೋ ತಮ್ಮ, ನಿನ್ನ ಕತ್ತೆಯ ಕುತ್ತಿಗೆಯಲ್ಲಿರುವ ಆ ಕಲ್ಲನ್ನು ಮಾರುತ್ತೀಯೇನು?' ಚಕಿತನಾದ ಕೂಲಿಕಾರನು ಅದರ ಬೆಲೆ ಇನ್ನೂರು ರೂಪಾಯಿಗಳೆಂದು ಬಿಟ್ಟ. ಆ ಹೊಸ ವಜ್ರ ವ್ಯಾಪಾರಿ ತಕ್ಷ ಣವೇ ಇನ್ನೂರು ರೂಪಾಯಿಗಳನ್ನು ಕೊಟ್ಟು ಅಮೂಲ್ಯ ರತ್ನವನ್ನು ಖರೀದಿಸಿ ಹೊರಟು ಹೋದ. ಇಷ್ಟರಲ್ಲಿ ಮೊದಲ ವ್ಯಾಪಾರಿಗೆ ಚಿಂತೆಯುಂಟಾಗಿ ಮತ್ತೆ ಓಡಿ ಬಂದು, 'ಆ ಕಲ್ಲು ಕೊಡು, ನಿನಗೆ ನೂರು ರೂಪಾಯಿ ಕೊಡಲು ನಾನು ತಯಾರು' ಎಂದು ಹೇಳಿದಾಗ, ಕೂಲಿಕಾರ 'ನಾನು ಇನ್ನೂರು ರೂಪಾಯಿಗಳಿಗೆ ಮಾರಿಯಾಯಿತು' ಎಂದು ನುಡಿದಾಗ, ಸಿಟ್ಟಾದ ವ್ಯಾಪಾರಿಯೆಂದ. 'ಲೋ ಪೆದ್ದ, ನೀನೆಂಥ ಮೂರ್ಖ? ಇನ್ನೂರು ರೂಪಾಯಿಗೆ ಲಕ್ಷ ಬೆಲೆಯ ರತ್ನ ಮಾರಿದೆಯಲ್ಲಾ?' ಎಂದಾಗ ಕೂಲಿಕಾರನು ಮುಗುಳು ನಗುತ್ತಾ ಉತ್ತರಿಸಿದ, 'ಮೂರ್ಖ ನಾನಲ್ಲ, ನೀನೆ. ಆ ಅಮೂಲ್ಯ ರತ್ನದ ಬೆಲೆ ಅರಿಯದ ನಾನು ಅದನ್ನು ಇನ್ನೂರು ರೂಪಾಯಿಗೆ ಮಾರಿದೆ. ಆದರೆ ಬೆಲೆಯರಿತ ನೀವು ನಾನು ನೂರು ರೂಪಾಯಿಗೆ ಕೊಡಲು ತಯಾರಾದಗಲೂ, ಐವತ್ತು ರೂಪಾಯಿ ಉಳಿಸಲು ಹೋಗಿ, ಲಕ್ಷ ರೂಪಾಯಿ ಕಳೆದುಕೊಂಡ ಮೂರ್ಖರು ನೀವಾದಿರಿ' ಎಂದಾಗ ವಜ್ರ ವ್ಯಾಪಾರಿ ಪಶ್ಚಾತ್ತಾಪದಿಂದ ಹೊರಟು ಹೋದ. ಹಳ್ಳಿಯ ಜನರು ಮುಗ್ಧರು. ಓದು ಬರಹ ಕಲಿಯದ ಅಜ್ಞಾನಿಗಳೆಂದು ತಿಳಿದು, ಅವರನ್ನು ಮೋಸಗೊಳಿಸುವಂಥ ಪ್ರಯತ್ನ ನಡೆಸಬಾರದು. ವಾಣಿಜ್ಯ-ವ್ಯಾಪಾರ ಪ್ರಪಂಚದಲ್ಲಿ ಗಿರಾಕಿಗಳು, ಮುಗ್ಧರು, ಪೆದ್ದರು, ಅಶಿಕ್ಷಿತರೆಂದು, ಮೂರ್ಖರೆಂದು ಭಾವಿಸಿ, ಅವರ ಶೋಷಣೆ ನಡೆಸುವುದು ಸಜ್ಜನರ ಲಕ್ಷ ಣವಲ್ಲ. ಭಗವಂತನಿಗೂ ಅಪ್ರಿಯವಾದ ಕೃತ್ಯ. ನಾವೆಲ್ಲರೂ ಸಜ್ಜನರಾಗಿ, ಭಗವಂತನ ಕೃಪೆಗೆ ಪಾತ್ರರಾಗಬೇಕಾಗಿದೆ.

-ಡಾ. ಡಿ. ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ
✨💥✨💥✨💥✨💥✨

The Fruit Is Created within You☘

☘The Fruit Is Created within You☘



“Spread compassion all around you. Look around you – people are so unhappy, don’t add to their unhappiness. Your compassion will lessen their unhappiness; just one word of compassion will lessen their unhappiness. Don’t add to their unhappiness.



"You are all adding to each other’s unhappiness; you are all helping each other to be more unhappy. Every single man has many people behind him making him unhappy. If an understanding of compassion is there, then you will change all the ways that you cause unhappiness in others. And if you can bring happiness to someone’s life, you will find a way to do it.



“Remember one thing: the one who brings unhappiness to others in the end becomes unhappy himself, and the one who brings happiness to others in the end reaches to the heights of happiness. That’s why I am saying that someone who tries to give happiness develops the center of happiness inside himself, and someone who tries to bring unhappiness to others develops the center of unhappiness inside himself.



"The fruit does not come from the outside, the fruit is created within you. Whatever you do, you develop receptivity for it inside yourself. Someone who wants love should give his love. Someone who wants bliss should start sharing his bliss. Someone who wants flowers to shower in his home should shower flowers in other people’s homes. There is no other way. So compassion is an emotion that each person has to develop in order to enter into meditation.”



Osho, The Path of Meditation, Talk #5

☘🌿☘🌿☘🌿☘🌿☘

ಕೋಮಲತೆಯ ಶಕ್ತಿ ಮತ್ತು ಭಸ್ಮಾಸುರ

ಕೋಮಲತೆಯ ಶಕ್ತಿ ಮತ್ತು ಭಸ್ಮಾಸುರ



ನಿಮ್ಮನ್ನು ಸುಂದರವನ್ನಾಗಿ ಮಾಡುವ ನಿಮ್ಮೊಳಗಿರುವ ಸೂಕ್ಷ ್ಮ ಗುಣಗಳು ನಿಮ್ಮ ಹತೋಟಿಯಲ್ಲಿಲ್ಲ. ಕೆಲವೊಮ್ಮೆ ನಿಮ್ಮೊಳಗೆ ಒರಟು ಎಂದೆನಿಸಿದಾಗ ''ಈ ಒರಟುತನವನ್ನು ಹೇಗೆ ಹೋಗಲಾಡಿಸಲಿ?'' ಎಂದು ಕೇಳುತ್ತೀರಿ. ಸ್ವಲ್ಪ ಉಸಿರಾಟವನ್ನು, ಧ್ಯಾನವನ್ನು ಮಾಡಿ ಅದನ್ನು ಹೋಗಲಾಡಿಸಬಹುದಾದರೂ, ಅದನ್ನು ಕೋಮಲವಾಗಿ ಗಮನಿಸುತ್ತಾ ಬಂದಾಗಲೂ ಒರಟುತನ ಹಾಗೇ ಕರಗಿ ಹೋಗಿಬಿಡುವುದನ್ನು ಅನುಭವಿಸಬಹುದು. ಪುರಾಣಗಳಲ್ಲಿ, ದೇವಿ ಭಾಗವತದಲ್ಲಿ ಅತಿ ಕೋಮಲವಾದ, ಅತಿ ಸುಂದರಳಾದ, ಅತೀ ಆಕರ್ಷಕವಾದ ರೂಪವನ್ನುಳ್ಳ ಜಗನ್ಮಾತೆಯು ಎಲ್ಲಾ ದುಷ್ಟವಾದ ರಾಕ್ಷ ಸಿ ಶಕ್ತಿಗಳನ್ನು ಸೋಲಿಸಿಬಿಡುವ ಕಥೆಯಿದೆ. ಇದರಲ್ಲಿ ದೊಡ್ಡ ಸತ್ಯವೇ ಅಡಗಿದೆ. ಯಾವುದೇ ನಕಾರಾತ್ಮಕತೆಯನ್ನು ಕೋಮಲವಾಗಿ, ಮೃದುವಾಗಿ ಗಮನಿಸುತ್ತಾ ಬಂದಾಗ ಅದು ಮಾಯವಾಗಿ ಬಿಡುತ್ತದೆ. ಅದೇ ಸೌಂದರ್ಯ. ಪುರಾಣಗಳಲ್ಲಿನ ಮತ್ತೊಂದು ಕಥೆಯು, ದುಷ್ಟ ಮನಸ್ಕನಾದ ಓರ್ವ ಅಸುರನು ಬಹಳ ಧ್ಯಾನವನ್ನು ಮಾಡಿ ಬ್ರಹ್ಮನಿಂದ ಒಂದು ವರವನ್ನು ಪಡೆದನು. ಅವನು ಏನನ್ನೇ ಮುಟ್ಟಲಿ ಅದೆಲ್ಲವೂ ಭಸ್ಮವಾಗಿಬಿಡಬೇಕು ಎಂಬ ವರವನ್ನು ಪಡೆದನು. ಅವನು ಏನು ಮುಟ್ಟಿದರೂ ಅದು ಭಸ್ಮವಾಗಿಬಿಡುತ್ತಿದ್ದರಿಂದ ಅವನಿಗೆ ಭಸ್ಮಾಸುರ ಎಂಬ ಹೆಸರು ಬಂದಿತು. ರಾಜ ಮಿಡಾಸನು ಏನು ಮುಟ್ಟಿದರೂ ಬಂಗಾರವಾಗಿಬಿಡುತ್ತಿದ್ದಂತೆಯೇ ಭಸ್ಮಾಸುರನೂ ಆಗಿದ್ದನು. ಈ ವರವನ್ನು ಪಡೆದ ಭಸ್ಮಾಸುರನು ಏನೇನು ಕಂಡನೊ ಅದನ್ನೆಲ್ಲಾ ಮುಟ್ಟುತ್ತಾ ಹೋದನು. ಜನರಲ್ಲಿ ಈತ ಎಷ್ಟೊಂದು ಭೀತಿಯನ್ನು ಹುಟ್ಟಿಸಿದನೆಂದರೆ, ಎಲ್ಲರೂ ಶಿವನ ಬಳಿ ಸಹಾಯವನ್ನು ಕೋರಿ ಓಡಿದರು. ಶಿವನು, ''ನನಗೆ ವಿನಾಶ ಮಾಡಲು ಮಾತ್ರ ಗೊತ್ತು. ಭಸ್ಮಾಸುರನು ಮಾಡುವ ಅದೇ ಕೆಲಸವನ್ನು ನಾನೂ ಮಾಡುತ್ತೇನೆ. ನಿಮ್ಮನ್ನು ರಕ್ಷಿಸುವುದು ಹೇಗೆಂದು ನನಗೆ ಗೊತ್ತಿಲ್ಲ. ಬನ್ನಿ, ಎಲ್ಲರೂ ವಿಷ್ಣುವಿನ ಬಳಿಗೆ ಹೋಗೋಣ,'' ಎಂದನು. ಅತೀವ ಚಾಣಕ್ಯನಾದ ವಿಷ್ಣುವು ಅತೀ ಸುಂದರಳಾದ, ಅತೀ ಆಕರ್ಷಕಳಾದ ಮೋಹಿನಿಯ ರೂಪವನ್ನು ಧರಿಸಿದನು. ''ಮೋಹಿನಿ'' ಎಂದರೆ ''ಆಕರ್ಷಿಸುವವಳು, ಮೋಹಕಳಾಗಿರುವವಳು'' ಎಂದರ್ಥ. ಆಕೆಯನ್ನು ಕಂಡ ಭಸ್ಮಾಸುರನು ಆಕೆಯ ಪ್ರೇಮದಲ್ಲಿ ಬಿದ್ದನು. ತನ್ನನ್ನು ಮದುವೆಯಾಗುವಂತೆ ಅಂಗಲಾಚಿದನು. ಅದಕ್ಕೆ ಮೋಹಿನಿಯು, ''ನೀನು ನನ್ನೊಡನೆ ನರ್ತಿಸಿದರೆ ನಾನು ನಿನ್ನನ್ನು ಮದುವೆಯಾಗುವೆ'' ಎಂಬ ಷರತ್ತನ್ನಿಟ್ಟಳು. ಭಸ್ಮಾಸುರನು ಇದಕ್ಕೆ ಒಪ್ಪಿದನು. ಮೋಹಿನಿಯು ಮಾಡಿ ತೋರಿಸಿದ ಎಲ್ಲಾ ನೃತ್ಯದ ಭಂಗಿಗಳನ್ನೂ ಭಸ್ಮಾಸುರನು ಮಾಡಬೇಕಾಯಿತು. ಹೀಗೆ ನರ್ತಿಸುತ್ತಾ ನರ್ತಿಸುತ್ತಾ, ಒಂದು ಭಂಗಿಯ ನಂತರ ಮತ್ತೊಂದು ಭಂಗಿಗೆ ತೆರಳುತ್ತಾ ಕೊನೆಗೆ ಮೋಹಿನಿಯು ತನ್ನ ತಲೆಯ ಮೇಲೆ ತನ್ನ ಕೈಯನ್ನಿಟ್ಟಳು. ಭಸ್ಮಾಸುರನೂ ತನ್ನ ತಲೆಯ ಮೇಲೆ ತನ್ನ ಕೈಯನ್ನಿಟ್ಟನು. ಆ ಕ್ಷ ಣದಲ್ಲೇ ಅವನು ಭಸ್ಮವಾಗಿ ಹೋದನು. ಒಂದು ಹಂತದಲ್ಲಿ ನೋಡಿದರೆ, ಮಕ್ಕಳಿಗೆ ಅತೀ ರಂಜಕವಾದ ಕಥೆಯಿದು. ಭಸ್ಮಾಸುರನು ಬಹಳ ಎಚ್ಚರಿಕೆಯಿಂದ, ಜಾಗರೂಕನಾಗಿ ಇದ್ದಿದ್ದರಿಂದ ಮೋಹಿನಿಯು ನಿಧಾನವಾಗಿ ಹೇಗೆ ನರ್ತಿಸಿದಳು. ಕೊನೆಗೆ ತನ್ನ ತಲೆಯನ್ನು ತನ್ನ ಕೈಗಳಿಂದ ಮುಟ್ಟಿದ್ದಾಗ ಭಸ್ಮಾಸುರನೂ ಹಾಗೆಯೇ ಮಾಡಿ ತಾನೂ ಭಸ್ಮವಾಗಿಬಿಟ್ಟನು ಎಂದು ಮಕ್ಕಳಿಗೆ ಕೇಳಲು ಖುಷಿಯಾಗುತ್ತದೆ. ಆದರೆ ಈ ಕಥೆಯು ಆಳವಾದ ಅರ್ಥವನ್ನು ಹೊಂದಿದೆ. ಎಲ್ಲವನ್ನೂ ಭಸ್ಮವನ್ನಾಗಿ ಮಾಡಿಬಿಡುವ ನಮ್ಮ ಪ್ರವೃತ್ತಿಯನ್ನು ಭಸ್ಮಾಸುರನ ಸ್ವಭಾವವು ಪ್ರತಿನಿಧಿಸುತ್ತದೆ. ಈ ಜಗತ್ತಿನಲ್ಲಿರುವ ಯಾವುದೂ ನಮಗೆ ಹಿಡಿಸುವುದಿಲ್ಲ, ಜೀವನದಲ್ಲಿ ಯಾವ ಆಸಕ್ತಿಯೂ ಇರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ದಿವ್ಯಸುಂದರಿಯಾದ ಮೋಹಿನಿಯು ನಮ್ಮೊಳಗೆಲ್ಲೋ ಆಳವಾಗಿ ಬಂದು ನಮ್ಮನ್ನೆಬ್ಬಿಸುತ್ತಾಳೆ. ಸೌಂದರ್ಯವು ಒಂದು ಆಂತರಿಕ ಸಂಭಾವನೆ. ಸೌಂದರ್ಯವು ವಸ್ತುಗಳಲ್ಲಿಲ್ಲ, ಜನರಲ್ಲಿಲ್ಲ, ಕಾಣುವವರ ಕಣ್ಣೋಟದಲ್ಲೂ ಇಲ್ಲ. ಅದು ಪ್ರತಿಯೊಬ್ಬರ ಹೃದಯದೊಳಗೂ ಇದೆ. ನಿಮ್ಮೊಳಗಿರುವ ಎಲ್ಲಾ ನಕಾರಾತ್ಮಕತೆ, ಬಿಗಿತನವೆಲ್ಲವೂ ಸುಟ್ಟು ಹೋದಾಗ, ಆಗ ಸೌಂದರ್ಯದ ಸಾರವೇ ಆಗಿರುವ ಜೀವನವನ್ನು ಗ್ರಹಿಸಿ, ಮೆಚ್ಚುತ್ತೀರಿ

ಶ್ರೀ ಶ್ರೀ ರವಿಶಂಕರ್‌

🍂🍁🍃🍂🍁🍃🍂🍁🍃

ಶ್ರೀ ರವಿಶಂಕರ್ ಗುರೂಜಿ ..

ಪ್ರ : ಪ್ರೀತಿಯ ಗುರುದೇವ, ನಾನು ಪ್ರತಿಫಲನದ ಬಗ್ಗೆ ಸ್ವಲ್ಪ ತಿಳಿದಿದ್ದೇನೆ. ಎಷ್ಟು ಪ್ರತಿಫಲನಗಳು ಇವೆ ಮತ್ತು ಅದರ ಅರ್ಥವೇನು?




ಶ್ರೀ ಶ್ರೀ : ನೀವು ಒಂದು ಪದ ಹೇಳಿದಾಗ ನೀವು ಅದಕ್ಕೆ ಅರ್ಥವನ್ನೂ ಹಚ್ಚುತ್ತೀರಿ. ಪ್ರತಿಫಲನ ಎಂದರೆ ಪ್ರತಿಫಲನ. ನೀವು ಏನು ಹೊರಗಡೆ ನೋಡುತ್ತೀರೊ ಅದು. ನೀವು ಏನಾಗಿದ್ದೀರೋ ಅದು ನಿಮ್ಮ ಕ್ರಿಯೆಯ ಪ್ರತಿಫಲನ. ನಿಮ್ಮ ಆಲೋಚನೆಗಳು, ನಿಮ್ಮ ಮನಸ್ಸು, ನಿಮ್ಮ ಭಾವನೆಗಳು ಎಲ್ಲವೂ ನೀವು ಏನಾಗಿದ್ದೇರೋ ಅದರ ಪ್ರತಿಫಲನ. ಇನ್ನೊಂದರ್ಥದಲ್ಲಿ ನಿಮ್ಮ ದೇಹವೂ ನೀವೇನಾಗಿದ್ದೀರೋ ಅದರ ಪ್ರತಿಫಲನ.

ನೀವು ಈ ಸತ್ಯದ ಬಗ್ಗೆ ಚಿಂತನೆ ನಡೆಸಿದಾಗ ಅದು ಮತ್ತಷ್ಟು ಚೆನ್ನಾಗಿ ತಿಳಿಯುತ್ತದೆ.

ನಾವು ಹೇಳುತ್ತೇವೆ – “ಅಸಂಗೋಹಮ್ ಅಸಂಗೋಹಮ್ ಪುನಃ ಪುನಃ (ಮತ್ತೆ ಮತ್ತೆ ನಾನು ನಿರ್ಮಮಕಾರಿ)". ಇದರ ಅರ್ಥ – ‘ನಾನು ಇದಲ್ಲ, ನಾನು ಇದಲ್ಲ. ನಾನು ಇದೆಲ್ಲದರಿಂದ ಬೇರೆ ಮತ್ತು ಅಸ್ಪರ್ಶಿ. ನಾನು ನನ್ನ ದೇಹವಲ್ಲ, ಆಲೋಚನೆಗಳಲ್ಲ, ಭಾವನೆಗಳಲ್ಲ, ಮತ್ತು ನಾನು ಮಾಡಿರುವ ಎಲ್ಲ ಕ್ರಿಯೆಗಳು ನಾನಲ್ಲ.“

ಆಗ ನಾವು ‘ಸಾಕ್ಷಿ’ ಆಗಲು ಆರಂಭಿಸುತ್ತೇವೆ ಮತ್ತು ಏನೆಲ್ಲಾ ನಡೆಯುತ್ತದೋ ಅವುಗಳಿಂದ ದೂರವಿರಲು ತೊಡಗುತ್ತೇವೆ.

ಶ್ರೀವಾಣಿ ✨ ಆತ್ಮಜ್ಞಾನ ಅಂತರಂಗದ ಕಣ್ಣು✨

ಶ್ರೀವಾಣಿ


✨ ಆತ್ಮಜ್ಞಾನ ಅಂತರಂಗದ ಕಣ್ಣು✨



ಭಾರತ ದೇಶದಲ್ಲಿ ಸಾವಿರಾರು ವರುಷಗಳಿಂದಲೂ ಆಧ್ಯಾತ್ಮಿಕ ಜ್ಞಾನಗಂಗೆ ಪ್ರವಹಿಸುತ್ತಿದೆ. ಲಕ್ಷಾಂತರ, ಕೋಟ್ಯಾಂತರ ಹೃದಯಗಳನ್ನು ಅರಳಿಸಿದೆ. ನದಿಯ ದಡದ ಕುಟೀರದಲ್ಲಿ ಋುಷಿಗಳ ವಾಸ. ಆ ಕುಟೀರದ ಎದುರಿನ ಮರದಡಿಯಲ್ಲಿ ಪ್ರಶಾಂತ ಪರಿಸರದಲ್ಲಿ ಆಬಾಲ ವೃದ್ಧರಿಗೆ ಋುಷಿಗಳು ಉಪದೇಶಾಮೃತ ಎಡೆಮಾಡಿದರು. ಜೀವ ಜಗತ್ತು ಜಗದೀಶನ ಕುರಿತು ಸುದೀರ್ಘವಾದ ಚಿಂತನ-ಮಂಥನ ಮಾಡಿದರು, ಸಂಶೋಧನೆ ನಡೆಸಿದರು. ಪ್ರತಿಫಲವಾಗಿ ವಿಶ್ವಮಾನ್ಯವಾದ ಉಪನಿಷತ್‌ ಸಾಹಿತ್ಯ ನಿರ್ಮಾಣವಾಯಿತು. ಉಪನಿಷತ್‌ ಎಂದರೆ ಶಾಂತವಾಗಿ ಕುಳಿತು ಹೇಳಿದ್ದು, ಕೇಳಿದ್ದು. ಆ ಋುಷಿಗಳ ವಾಣಿಯಲ್ಲಿ ಆತ್ಮ- ಪರಮಾತ್ಮನ ದಿವ್ಯ ಬೆಳಗು ತುಂಬಿ ತುಳುಕಿದೆ. ನಮ್ಮ ಬದುಕಿನ ಸೊಬಗು-ಸೌಭಾಗ್ಯ ಶಾಂತಿ-ಕಾಂತಿ ಎಲ್ಲವೂ ಉಷಿಪನಿಷತ್ತಿನಲ್ಲಿದೆ. ಶರಣರು ಹೇಳುವಂತೆ ಮಹಾತ್ಮರ ಮಾತೆಂಬುದು ಜ್ಯೋತಿರ್ಲಿಂಗ. ಅದರಲ್ಲಿ ಪ್ರಪಂಚ ಪರಮಾರ್ಥ ಎರಡನ್ನೂ ಬೆಳಗುವ ಭವ್ಯ ದಿವ್ಯ ಬೆಳಗಿದೆ. ಹಣತೆ ತೀರ ಚಿಕ್ಕದು ಅದರ ಬೆಲೆಯೂ ಬಹಳಲ್ಲ. ಆದರೆ ಅದೇ ಹಣತೆಯು ವಿಶಾಲವಾದ ಮನೆಯನ್ನೆಲ್ಲ ಬೆಳಗುತ್ತದೆ. ಆ ಹಣತೆುಂದ ಮನೆಗೆ ಕಳೆ ! ಅದೇ ರೀತಿ ನಮ್ಮ ಹೃದಯದ ಅರಮನೆಯನ್ನು ಮನೋಮಂದಿರವನ್ನು ಬೆಳಗುವ ಹಣತೆಯೇ ಋುಷಿಮುನಿಗಳು, ಸಂತರು, ಶರಣರು ನೀಡಿರುವ ಶ್ಲೋಕ, ಅಭಂಗ, ವಚನಗಳು. ಅವು ನೋಡಲು ತೀರ ಚಿಕ್ಕವು ಆದರೆ ಅವುಗಳಲ್ಲಿರುವ ಆಧ್ಯಾತ್ಮಿಕ ಪ್ರಕಾಶ ಅನುಪಮ, ಅದ್ವಿತೀಯ ! ದೂರ ದೂರದಿಂದ ತೇಲಿ ಬರುವ ಮೇಘಗಳು ನಮ್ಮ ಹೊಲ ಗದ್ದೆಗಳ ಮೇಲೆ ನಿರ್ಮಲ ಜಲಬಿಂದುಗಳನ್ನು ಸುರಿಸುತ್ತವೆ. ಭೂಮಿಯನ್ನೆಲ್ಲಾ ಹಸಿರು ಹಸಿರು ಮಾಡಿ ನಮಗೆ ಮುತ್ತಿನಂಥ ಜೋಳದ ಕಾಳುಗಳನ್ನು ಬೆಳೆದು ಕೊಡುತ್ತವೆ. ಮಹಾತ್ಮರು ಧರ್ಮಮೇಘವಿದ್ದಂತೆ. ದೇಶ ದೇಶಾಂತರ ಸುತ್ತಿ ನಾವಿರುವಲ್ಲಿಯೇ ಬಂದು ಆಧ್ಯಾತ್ಮಿಕ ಜ್ಞಾನದ ಮಳೆಯನ್ನು ಸುರಿಸುತ್ತಾರೆæ. ನಮ್ಮ ಹೃದಯ ಭೂಮಿಯಲ್ಲಿ ಭಕ್ತಿಯ ಬೆಳೆಯನ್ನು ಬೆಳೆದು ಮುಕ್ತಿಯ ಫಲವನ್ನು ಪರಮಶಾಂತಿಯನ್ನು ಕರುಣಿಸುತ್ತಾರೆ ಸದ್ಗುರುಗಳು. ಉಪನಿಷತ್ತುಗಳು ನೂರಾರು. ಅವುಗಳಲ್ಲಿ ಕೈವಲ್ಯ ಉಪನಿಷತ್ತು ಒಂದು. 'ಕೇವಲಸ್ಯ ಭಾವಃ ಕೈವಲ್ಯಃ' ಕೈವಲ್ಯ ಎಂದರೆ ನಮ್ಮ ನಿಜಸ್ವರೂಪದರಿವು. ಅಖಂಡ ಅದ್ವಿತೀಯ ಅನುಪಮ ಸಚ್ಚಿದಾನಂದ ನಿತ್ಯ ಪರಿಪೂರ್ಣವಾದ ನಮ್ಮ ಆತ್ಮನ ಅರಿವನ್ನು ಮಾಡಿಸಿಕೊಡುವ ಗ್ರಂಥವೇ ಕೈವಲ್ಯೋಪನಿಷತ್ತು ! ಇದರಲ್ಲಿ ಬರುವ ಮೊದಲನೆಯ ಮಂತ್ರ ಅಥವಾ ಶಾಂತಿ ಪಾಠವೇ ಅದೆಷ್ಟು ಸೊಗಸಾಗಿದೆ ನೋಡಿ. ಓಂ ಭದ್ರಂ ಕರ್ಣೇಭಿಃ ಶೃಣಯಾಮ ದೇವಾಃ | ಭದ್ರಂ ಪಶ್ಯೇಮಾಕ್ಷ ಭಿರ್ಯಜತ್ರಾಃ | ಸ್ಥಿರೈರಂಗೈಸ್ತುಷ್ಟುವಾಂ ಸಸ್ತನೂಭಿಃ | ವ್ಯಶೇಮ ದೇವವಿತಂ ಯದಾಯುಃ | ಸ್ವಸ್ತಿ ನ ಇಂದ್ರೋ ವೃದ್ಧಶ್ರವಾಃ | ಸ್ವಸ್ತಿ ನಸ್ತಾಕ್ಷೋರ್‍ ಅರಿಷ್ಟನೇಮಿಃ| ಸ್ವಸ್ತಿನೋ ಬೃಹಸ್ಪತಿರ್ದಧಾತು|| ಕೈ.ಉ.1 ಭದ್ರವೆಂದರೆ ವಿತವಾದುದು ಒಳ್ಳೆಯದು ಮಂಗಲಕರವೂ ಶಾಂತಿದಾಯಕವೂ ಆದುದು. ನಾವು ನಮ್ಮ ಕಿವಿಗಳಿಂದ ಒಳ್ಳೆಯದನ್ನೇ ಕೇಳೋಣ, ಕಣ್ಣುಗಳಿಂದ ಒಳ್ಳೆಯದನ್ನೇ ನೋಡೋಣ, ಸದೃಢವಾದ ಅಂಗಾಂಗಗಳಿಂದ ಸತ್ಕಾರ್ಯಗಳನ್ನೇ ಮಾಡೋಣ. ಬದುಕಿರುವವರೆಗೂ ನಾವು ದೇವನಿಗೆ ಮೆಚ್ಚುಗೆಯಾಗುವ ಹಾಗೇ ನಡೆಯೋಣ, ದುಡಿಯೋಣ. ಜಗದೈಸಿರಿಯ ಒಡೆಯನಾದ ಇಂದ್ರ, ಸಕಲ ಕಂಟಕಗಳನ್ನು ಪರಿಹಾರ ಮಾಡುವ ಗರುಡ, ಜ್ಞಾನದಾತನಾದ ಬೃಹಸ್ಪತಿ, ಹಗಲೊಡೆಯನಾದ ರ'' ಇವರೆಲ್ಲರೂ ನಮಗೆ ಒಳಿತನ್ನು ಮಂಗಲವನ್ನು ಉಂಟುಮಾಡಲಿ. ದೇವನು ಕರುಣಿಸಿರುವ ಹಣ್ಣು, ಹಂಪಲ ಭೂಲೋಕದ ಅಮೃತ, ಕಬ್ಬಿನ ಹಾಲು ಕೂಡಾ ಪಂಚಾಮೃತ. ಆ ಹಾಲು ಕುಡಿಯದೇ ಹುಳಿಗೊಳಿಸಿ ಅಲ್ಕೋಹಾಲು ಕುಡಿದು ದಾರಿತಪ್ಪಿ ನಡೆಯುವದು ನ್ಯಾಯವೇ ? ಬಂಧು ಮಿತ್ರರು ಪ್ರೀತಿಯಿಂದ ಕೊಟ್ಟಿರುವ ಉಡುಗೊರೆಗಳನ್ನು ಚೆನ್ನಾಗಿ ಬಳಸಿದರೆ ಅವರಿಗೆಂಥ ಸಂತಸ. ನಮ್ಮ ಬದುಕೊಂದು ದೇವನ ದಿವ್ಯ ದೇಣಿಗೆ, ಅಮೂಲ್ಯ ಉಡುಗೊರೆ! ಅದನ್ನು ಸತ್ಕಾರ್ಯಕ್ಕೆ, ದೇವ ಕಾರ್ಯಕ್ಕೆ ಬಳಸಿದರೆ ಆ ಮಹಾದೇವನಿಗೆ ಆಗುವ ಆನಂದ ಅವರ್ಣನೀಯ !

 ಆಧಾರ : ಕೈವಲ್ಯ ಕುಸುಮ ಶ್ರೀ ಸಿದ್ದೇಶ್ವರ ಸ್ವಾಮೀಜಿ
🌱🌿🍃🌱🌿🍃🌱🌿🍃

GOD

💫GOD💫

I don´t see that there is any God who created the world. I certainly experience a quality of godliness in existence, but it is a quality, not a person. It is more like love, more like silence, more like joy – less like a person. You are never going to meet God and say hello to him, how are you? I have been looking for you for thousands of years; where have you been hiding?

God is not a person but only a presence.

And when I say "presence," be very attentive, because you can go on listening according to your own conditioning. You can even make "presence" something objective – you have again fallen into the same trap. God is a presence at the innermost core of your being: it is your own presence. It is not a meeting with somebody else.

Osho, The Goose is Out, Talk #7
✨⭐️✨⭐️✨⭐️✨⭐️✨