Wednesday, 1 February 2017

*ಸರ್ಕಾರಿ ಕಾರ್ನರ್*

ದಿನದ ಪ್ರಶ್ನೆ

 Tuesday, 24.01.2017, 7:18 AM     ವಿಜಯವಾಣಿ ಸುದ್ದಿಜಾಲ


ನಾನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ವಾರ್ಡನ್ ಆಗಿ 2 ತಿಂಗಳ ಹಿಂದೆ ಕತ್ಯರ್ವಕ್ಕೆ ಹಾಜರಾಗಿದ್ದು ನನ್ನ ಮೂಲ ವೇತನ ರೂ. 14,550-00. ಪ್ರಸ್ತುತ ನಾನು ಕೆಪಿಎಸ್​ಸಿ ಅಂತಿಮ ಪಟ್ಟಿಯಲ್ಲಿ ಸಚಿವಾಲಯದ ಸಹಾಯಕ ಹುದ್ದೆಗೆ ಆಯ್ಕೆಯಾಗಿದ್ದು ಈ ಹುದ್ದೆಗೆ ಸೇರಲು ವಾರ್ಡನ್ ಹುದ್ದೆಗೆ ರಾಜೀನಾಮೆ ನೀಡಬೇಕಾ? ಅಥವಾ ನಾನು ಸಲ್ಲಿಸಿದ್ದ ಹುದ್ದೆಯ ಸೇವಾ ಭದ್ರತೆ ಲಭ್ಯವಾಗುತ್ತದೆಯೇ?

|ಆನಂದ್ ತುಮಕೂರು

ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ನಿಯಮ 252ಬಿ ರಂತೆ ನಿಮ್ಮ ವಾರ್ಡನ್ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಹೊಸ ಸಹಾಯಕರ ಹುದ್ದೆಗೆ ಕರ್ತವ್ಯಕ್ಕೆ ಹಾಜರಾಗಬೇಕಾಗುತ್ತದೆ. ಆಗ ನಿಮ್ಮ ರಾಜೀನಾಮೆಯು ಸರ್ಕಾರಿ ಸೇವೆಗೆ ನೀಡಿದ ರಾಜೀನಾಮೆಯಾಗಿರದೇ ನಿಮಗೆ ಸೇವಾ ಭದ್ರತೆ ಲಭ್ಯವಾಗುತ್ತದೆ. ನೀವು ಪ್ರಸ್ತುತ ಮಾಡಿಸಿರುವ ಕೆಜೆಡಿ, ಎನ್​ಪಿಎಸ್ ಮುಂತಾದವು ಮುಂದುವರೆದು ಅದೇ ಸೇವಾ ಪುಸ್ತಕವು ಸಹಾಯಕ ಹುದ್ದೆಗೂ ಮುಂದುವರಿಯುತ್ತದೆ.

No comments:

Post a Comment