http://ecostatt.com/income-tax/tax-calculator/
Thursday, 30 August 2018
ರಜಾ ನಿಯಮಗಳು
ರಜಾ ನಿಯಮಗಳು ಪೂರ‍್ಣ ವಿವರಣೆಯೊಂದಿಗೆ
ರಜಾ ನಿಯಮಗಳು
( ಕೆ.ಸಿ.ಎಸ್.ಆರ್.ನಿಯಮ105 ರಿಂದ 206)
ಸರ್ಕಾರಿ ನೌಕರರು ಈ ಕೆಳಕಂಡ ನಿಬಂಧನೆಗೆ ಒಳಪಟ್ಟು ರಜ ಸೌಲಭ್ಯ ಪಡೆಯಬಹುದು.
- ಸಕ್ಷಮ ಪ್ರಾಧಿಕಾರದಿಂದ ಪೂರ್ವ ಅನುಮತಿ
ಪಡೆದುಕೊಳ್ಳಬಹುದು.
- ರಜೆಯ ಸರ್ಕಾರಿ ನೌಕರನ ಹಕ್ಕಲ್ಲ ( ನಿ. 107 )
- ಸಾರ್ವಜನಿಕ ಸೇವಾ ಅಗತ್ಯತೆಯಲ್ಲಿ ರಜ
ಮಂಜೂರು ಮಾಡುವ ಪ್ರಾಧಿಕಾರವು ಕೋರಿರುವ
ರಜವನ್ನು, ತಿರಸ್ಕರಿಸಬಹುದು, ಈಗಾಗಲೇ
ಮಂಜೂರಾಗಿದ್ದರೆ ರದ್ದುಪಡಿಸಬಹುದು (ನಿ.107)
- ಸಮರ್ಥನೀಯ ಕಾರಣಗಳಿಲ್ಲದಿದ್ದಲ್ಲಿ ಅನಧಿಕೃತ
ಗೈರು ಹಾಜರಿ ಎಂದು ತೀರ್ಮಾನಿಸಬಹುದು ಹಾಗೂ
ದುರ್ನಡತೆಗೆ ಇಲಾಖಾ ವಿಚಾರಣೆ ಹೂಡಬಹುದು
(ನಿ.106A)
- ಮುಷ್ಕರದಲ್ಲಿ ಭಾಗವಹಿಸಿದ್ದಲ್ಲಿ ಕಾನೂನು ಬಾಹಿರವೆಂದು
ಪರಿಗಣಿಸಿ ಕ್ರಮ ಜರುಗಿಸಬಹುದು (ನಿ. 106ಬಿ)
- 4 ತಿಂಗಳಿಗೂ ಮೀರಿದ ಅನಧಿಕೃತ ಗೈರು
ಹಾಜರಿಯಾದ ನೌಕರನನ್ನು ಕೆ.ಸಿ.ಎಸ್. (ಸಿ.ಸಿ.ಎ.)
- ಒಂದು ರಜೆಯನ್ನು ಮತ್ತೊಂದು ರಜೆಯೊಂದಿಗೆ
ಸಂಯೋಜಿಸಬಹುದು. ಆದರೆ ಆಕಸ್ಮಿಕ ರಜೆಯನ್ನು
ಸಂಯೋಜನೆಗೊಳಿಸಲು ಅವಕಾಶವಿಲ್ಲ. ( ನಿ. 109 )
ವಿವಿಧ ಬಗೆಯ ರಜಗಳು
1. ಸಾಂದರ್ಭಿಕ ರಜ (ಆಕಸ್ಮಿಕ ರಜ) ಅನುಬಂಧ ಬಿ
2. ವಿಶೇಷ ಸಾಂದರ್ಭಿಕ ರಜ ಅನುಬಂಧ ಬಿ
3. ಗಳಿಕೆ ರಜ ನಿಯಮ ೧೧೨ (ಬಿಡುವು ಇಲ್ಲದ ಇಲಾಖೆ)
ನಿಯಮ 113 (ಬಿಡುವು ಇಲ್ಲದ ಇಲಾಖೆ)
4. ಅರ್ಧವೇತನ ರಜ ನಿಯಮ 114.
5. ಪರಿವರ್ತಿತ ರಜ ನಿಯಮ 114.
6. ಹಕ್ಕಿನಲ್ಲಿಲ್ಲದ ರಜ (ಎಲ್.ಎನ್.ಡಿ), ನಿಯಮ 114,
ನಿಯಮ 115(6).
7. ಅಸಾಧಾರಣ ರಜ - ನಿಯಮ 117.
8. ಪರೀಕ್ಷಾ ರಜ - ನಿಯಮ 130 ರಿಂದ 134a.
9. ಹೆರಿಗೆ ರಜ - ನಿಯಮ 135 ಮತ್ತು 135a.
10. ಪಿತೃತ್ವ ರಜ - ನಿಯಮ 135ಬಿ.
11. ವಿಶೇಷ ದುರ್ಬಲತೆ ರಜ - ನಿಯಮ
(136, 137, 138)
ಸಾಂದರ್ಭಿಕ ರಜೆ ( ಅನುಬಂಧ ಬಿ )
- ಸರ್ಕಾರಿ ನೌಕರನ ಸೇವೆಯ ಮೊದಲ ಒಂದು
ವರ್ಷದ ಸೇವಾವಧಿಯಲ್ಲಿ ಒಂದು ತಿಂಗಳ
ಕರ್ತವ್ಯ ನಂತರ ಒಂದು ದಿನದ ರಜೆ.
- ಆ ನಂತರ ಪ್ರತಿ ಕ್ಯಾಲೆಂಡರ್ ವರ್ಷಕ್ಕೆ 15
ದಿನಗಳು ಮುಂಗಡವಾಗಿ ಜಮೆ.
- ಅವಿರತವಾಗಿ ಗರಿಷ್ಟ 7 ದಿನ, ಸಾರ್ವಜನಿಕ
ರಜೆಯೊಂದಿಗೆ ಸಂಯೋಜಿಸಿದಾಗ ಗರಿಷ್ಟ
10 ದಿನ.
- ಡಿಸೆಂಬರ್ ಅಂತ್ಯದೊಳಗೆ ಉಪಯೋಗಿಸಿಕೊಳ್ಳದಿದ್ದಲ್ಲಿ ವ್ಯಯವಾಗುವುದು.
- ಇತರೇ ಹಕ್ಕಿನ ರಜೆಯೊಂದಿಗೆ ಸಂಯೋಜಿಸಲು
ಅವಕಾಶವಿಲ್ಲ.
- ಕಛೇರಿ ಮುಖ್ಯಾಧಿಕಾರಿ ಮಂಜೂರಾತಿ ಪ್ರಾಧಿಕಾರಿ.
ವಿಶೇಷ ಸಾಂದರ್ಭಿಕ ರಜೆ
ಸರ್ಕಾರಿ ನೌಕರರಿಗೆ ನಿರ್ದಿಷ್ಟ ಸಂದರ್ಭಗಳಿಗೆ ಅನುಗುಣವಾಗಿ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿದೆ. ಕೆಲವು ವಿಶೇಷ ಸಂದರ್ಭಗಳು ಎಂದರೆ,
ಹುಚ್ಚುಪ್ರಾಣಿಗಳ ಕಡಿತದಿಂದ ವೈದ್ಯಕೀಯ ಚಿಕಿತ್ಸಾ
ದಿನಗಳಿಗೆ ಗರಿಷ್ಟ ಮಿತಿ 14 ದಿನಗಳು.
ಸರ್ಕಾರಿ ನೌಕರನು ಕಡ್ಡಾಯ ಜೀವ ವಿಮಾ
ಪಾಲಿಸಿ ಹೊಂದಲು ವೈದ್ಯಕೀಯ ಪರೀಕ್ಷೆಗೆ
ಹಾಜರಾಗಲು.
ಸರ್ಕಾರಿ ನೌಕರನಿಗೆ ಈ ಕೆಳಕಂಡ ಸಂದರ್ಭ
ಗಳಿಗೆ ವಾರ್ಷಿಕವಾಗಿ ಗರಿಷ್ಠ 30 ದಿನಗಳ
ಮಿತಿಗೊಳಪಟ್ಟು,
1) ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ
ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು.
2. ರಾಜ್ಯ ಅಥವಾ ವಲಯ ಮಟ್ಟದಲ್ಲಿ ಏರ್ಪಡಿಸುವ ಕ್ರೀಡಾ ಚಟುವಟಿಕೆಗಳಲ್ಲಿ ರಾಜ್ಯ ಕ್ರೀಡಾ
ಪ್ರಾಧಿಕಾರದಿಂದ ಆಯ್ಕೆಯಾದ ಕ್ರೀಡಾಪಟುಗಳಿಗೆ.
3. ರಾಜ್ಯದ ವಿವಿಧ ಕ್ರೀಡಾ ಮಂಡಳಿ/ಪ್ರಾಧಿಕಾರಗಳು
ಏರ್ಪಡಿಸುವ ರಾಜ್ಯ ಅಥವಾ ಅಂತರ ರಾಜ್ಯ
ಮಟ್ಟದ ಕ್ರೀಡಾಸ್ಪರ್ಧೆಗಳಲ್ಲಿ ರಾಜ್ಯ ಸರ್ಕಾರಿ
ನೌಕರರ ತಂಡವನ್ನು ಪ್ರತಿನಿಧಿಸುವ ನೌಕರರಿಗೆ
ವಾರ್ಷಿಕ 15 ದಿನಗಳ ಮಿತಿಗೊಳಪಟ್ಟು ರಜೆ.
4. ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳು ಏರ್ಪಡಿಸುವ ವಿವಿಧ
ಕ್ರೀಡಾ ತರಬೇತಿ ಅಥವಾ ಕೋಚಿಂಗ್ ಕ್ಯಾಂಪುಗಳಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ.
5. ರಾಷ್ಟ್ರೀಯ ಪರ್ವತಾರೋಹಣ ಸಂಸ್ಥೆಯು
ಏರ್ಪಡಿಸುವ ಪರ್ವತಾರೋಹಣ ಚಟುವಟಿಕೆಗಳಲ್ಲಿ ಭಾಗವಹಿಸುವ ನೌಕರರು.
ಮೇಲ್ಕಂಡ ಸಂದರ್ಭಗಳಲ್ಲಿ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡುವ ಪ್ರಾಧಿಕಾರಿಯು ಆಯಾ ಇಲಾಖೆಯ ಆಡಳಿತಾತ್ಮಕ ಇಲಾಖಾ ಮುಖ್ಯಾಧಿಕಾರಿಗಳು, ಈ ವಿಶೇಷ ಸಾಂದರ್ಭಿಕ ರಜೆಗಳೊಂದಿಗೆ, ನೌಕರರು ಸರ್ಕಾರಿ ರಜಾ ದಿನಗಳು ( 3 ದಿನಗಳ ಮಿತಿಗೊಳಪಟ್ಟು) ಮತ್ತು ತಮ್ಮ ಹಕ್ಕಿನ ಇತರೆ ರಜೆಗಳೊಂದಿಗೆ ಸಂಯೋಜಿಸಬಹುದು.
ವಿವಾಹಿತ ಸರ್ಕಾರಿ ನೌಕರರು ಪ್ರಾಸೆಕ್ಟಮಿ ಶಸ್ತ್ರಚಿಕಿತ್ಸೆಗೆ ಒಳಗಾದಲ್ಲಿ ವೈದ್ಯಕೀಯ ಪ್ರಮಾಣಪತ್ರದೊಂದಿಗೆ ಗರಿಷ್ಟ 7 ದಿನಗಳು.
ಸರ್ಕಾರಿ ನೌಕರನ ಪತ್ನಿಯು ಹೆರಿಗೆ ಸಂದರ್ಭದಲ್ಲಿ ಟುಬೆಕ್ಟಮಿ ಶಸ್ತ್ರ ಚಿಕಿತ್ಸೆಗೆ ಒಳಗಾದಲ್ಲಿ, ಆ
ಸಂದರ್ಭದಲ್ಲಿ ವೈದ್ಯಾಧಿಕಾರಿಯು ಪ್ರಮಾಣಪತ್ರದ ಅನ್ವಯ ಪತ್ನಿಯ ಆರೋಗ್ಯ ದೃಶ್ಟಿಯಿಂದ ಸರ್ಕಾರಿ ನೌಕರನ ಹಾಜರಾತಿ ಅಗತ್ಯವೆಂದು ದೃಢೀ ಕರಿಸಿದರೆ ಗರಿಷ್ಟ 7 ದಿನಗಳು.
ವೈದ್ಯಾಧಿಕಾರಿಗಳ ಪ್ರಮಾಣ ಪತ್ರದ ಅನ್ವಯ
ನೌಕರರಿಗೆ ಮೊದಲ ಶಸ್ತ್ರ ಚಿಕಿತ್ಸೆಯು
ವಿಫಲವಾಗಿದೆಯೆಂದು ದೃಢೀಕರಿಸಿ,
ಎರಡನೇ ಬಾರಿ ವ್ಯಾಸೆಕ್ಟಮಿ ಶಸ್ತ್ರ ಚಿಕಿತ್ಸೆಗೆ ಒಳಗಾದಲ್ಲಿ ಗರಿಷ್ಠ 6 ದಿನಗಳು.
ಮಹಿಳಾ ನೌಕರರು
sಣeಡಿiಟisಚಿಣioಟಿ ಚಿಕಿತ್ಸೆಗೆ ಒಳಗಾದಲ್ಲಿ ಗರಿಷ್ಠ 14
ದಿನಗಳು ( ಮೊದಲ ಚಿಕಿತ್ಸೆ ವಿಫಲಗೊಂಡಲ್ಲಿ
ಎರಡನೇ ಬಾರಿ ಚಿಕಿತ್ಸೆಗೆ ಒಳಗಾದಲ್ಲಿ ).
ಸರ್ಕಾರಿ ನೌಕರನು ಅವಿವಾಹಿತನಾಗಿದ್ದು, ಅಥವಾ
ಎರಡಕ್ಕಿಂತ ಕಡಿಮೆ ಮಕ್ಕಳನ್ನು ಹೊಂದಿದ್ದು ಶಸ್ತ್ರ
ಚಿಕಿತ್ಸೆಗೆ ಒಳಪಟ್ಟ ನಂತರ ಮಕ್ಕಳ ಮರಣ
ಅಥವಾ ಇನ್ನಿತರ ಸಮರ್ಥನೀಯ ಕಾರಣಗಳಿಗಾಗಿ
ಪುನಃ ಖeಛಿoಟಿಟisಚಿಣioಟಿ ಔಠಿeಡಿಚಿಣioಟಿ
ಒಳಗಾದಲ್ಲಿ, ಕನಿಷ್ಟ 21 ದಿನಗಳು.
ವಿವಾಹಿತ ಸರ್ಕಾರಿ ನೌಕರರು ವ್ಯಾಸಕ್ಟಮಿ
ಅಥವಾ ಟುಬೆಕ್ಟಮಿ ಶಸ್ತ್ರ ಚಿಕಿತ್ಸೆಯ ನಂತರ
ಆರೋಗ್ಯ ಸ್ಥಿತಿ ವಿಷಮಗೊಂಡಲ್ಲಿ, ಚಿಕಿತ್ಸಾ
ಅವಧಿಗೆ ವೈದ್ಯಕೀಯ ಅಧಿಕಾರಿಗಳ ಪ್ರಮಾಣಪತ್ರದ ಅನ್ವಯ, ಹೆಚ್ಚಿನ ಅವಧಿಗೆ ವಿಶೇಷ ರಜೆ.
ಮಹಿಳಾ ಸರ್ಕಾರಿ ನೌಕರರಿಗೆ ಚಿಕಿತ್ಸೆಗೆ
ಒಳಗಾಗಲು ಒಂದು ದಿನದ ರಜೆ.
ರಾಜ್ಯ ಸರ್ಕಾರಿ ನೌಕರರ ಸಂಘದ / ರಾಷ್ಟ್ರೀಯ
ಸೆಕೆಂಡರಿ ಶಾಲೆಗಳ ಶಿಕ್ಷಕರ ಮಂಡಳಿಯ,
ಪದಾಧಿಕಾರಿಗಳು ಮತ್ತು ಕಾರ್ಯಕಾರಿ
ಸಮಿತಿಯ ಸದಸ್ಯರು ಸಂಘ/ಮಂಡಳಿಯ ಸಭೆ
ಕಾರ್ಯಾಗಾರ
ಸೆಮಿನಾರ್ ಇತ್ಯಾದಿಗಳಲ್ಲಿ ಭಾಗವಹಿಸಲು
ವಾರ್ಷಿಕವಾಗಿ ಗರಿಷ್ಟ 15 ದಿನಗಳು.
ಸರ್ಕಾರಿ ನೌಕರನು ರಕ್ತದಾನ ಶಿಬಿರಗಳಲ್ಲಿ
ಉಚಿತ ರಕ್ತದಾನ ಮಾಡಿದಲ್ಲಿ, ಒಂದು ದಿನದ
ರಜೆ.
ವಿವಿಧ ವಿಶ್ವವಿದ್ಯಾನಿಲಯಗಳು ಏರ್ಪಡಿಸುವ
ಶೈಕ್ಷಣಿಕ ಸಭೆಗಳಲ್ಲಿ ಭಾಗವಹಿಸುವ ಮತ್ತು
ವಿವಿಧ ಕ್ಷೇತ್ರದಲ್ಲಿ ನಡೆಸುವ ಶೈಕ್ಷಣಿಕ ಪರೀಕ್ಷೆಗಳಲ್ಲಿ ಪರೀಕ್ಷಾಕಾರರು ಅಥವಾ ಮೇಲ್ವಿಚಾರಕರಾಗಿ ಭಾಗವಹಿಸುವ ನೌಕರರಿಗೆ ವಾರ್ಷಿಕ
ಗರಿಷ್ಠ 30 ದಿನಗಳು.
ನವದೆಹಲಿಯ ಭಾರತೀಯ ಸಾರ್ವಜನಿಕ
ಆಡಳಿತ ಸಂಸ್ಥೆಯು ಏರ್ಪಡಿಸುವ ವಿಶೇಷ
ಚಟುವಟಿಕೆಗಳಲ್ಲಿ ಭಾಗವಹಿಸುವ ನೌಕರರಿಗೆ
ವಾರ್ಷಿಕ ಗರಿಷ್ಠ 6 ದಿನಗಳು
ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಹಾಗೂ ರಾಜ್ಯ
ಯುವಜನ ಸೇವೆ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ವಾರ್ಷಿಕ ಗರಿಷ್ಠ 15
ದಿನಗಳು.
ಕರ್ನಾಟಕ ವಾಣಿಜ್ಯ ಪರೀಕ್ಷೆಗಳ ಮಂಡಳಿಯು
ಏರ್ಪಡಿಸುವ ಶೀಘ್ರಲಿಪಿ/ಬೆರಳಚ್ಚು ಪರೀಕ್ಷೆಗಳಲ್ಲಿ
- ಕರ್ತವ್ಯವಲ್ಲದ ಅವಧಿಯ ಪ್ರತಿ 10 ದಿನಗಳಿಗೆ
ಒಂದು ದಿನದ ರಜೆ, ಮುಂದಿನ ಅರ್ಧವರ್ಷದ
ಅವಧಿಯಲ್ಲಿ ಲೆಕ್ಕಕ್ಕೆ ನೀಡುವಾಗ ಮಿತಿಗೊಳಿಸುವುದು.
- ಲೆಕ್ಕದಲ್ಲಿ ಹೊಂದಿರಬಹುದಾದ ಗರಿಷ್ಠ ಮಿತಿ
300 ದಿನಗಳು.
- ಅಧ್ಯರ್ಪಣೆ ಮತ್ತು ನಗಧೀಕರಣದ ಸೌಲಭ್ಯ.
- ಗಳಿಕೆ ರಜೆಯನ್ನು ಒಂದು ಅರ್ಧ ವರ್ಷದಿಂದ
ಮುಂದಿನ ಅರ್ಧ ವರ್ಷದ ಅವಧಿವರೆಗೆ
ಉಪಯೋಗಿಸಿದರೆ ( 26/6/2007 ರಿಂದ 10/7/2007
ರವರೆಗೆ ಅಥವಾ 26/12/2007 ರಿಂದ 9/1/2008
ರವರೆಗೆ ಬಳಸಿಕೊಂಡಿದ್ದರೆ )
ರಜೆ ಉಪಯೋಗಿಸಿದ ಅರ್ಧ ವರ್ಷಕ್ಕೆ ಮೊದಲು ಉಪಯೋಗಿಸಿಕೊಂಡ ರಜೆಯನ್ನು ನೌಕರನ ಹಕ್ಕಿನಲ್ಲಿರುವ ರಜೆಯನ್ನು ಕಳೆಯತಕ್ಕದ್ದು, ಹಾಗೂ 1/7/2007 ಅಥವಾ 1/1/2008 ರ ಗಳಿಕೆ ರಜೆ ಜಮೆ ಮಾಡಿ ನಂತರದ ಅವಧಿಯಲ್ಲಿ ಉಪಯೋಗಿಸಿಕೊಂಡ ರಜೆಯನ್ನು ಲೆಕ್ಕದಿಂದ ಕಳೆಯುವುದು.
ಉದಾ:- 30/6/2007 ಗಳಿಕೆ ರಜೆ 120 ದಿನಗಳು, 15 ದಿನಗಳು ಉಪಯೋಗಿಸಿಕೊಂಡ ಗಳಿಕೆ ರಜೆ ( 26/6/2007 ರಿಂದ 30/6/2007 ರಜೆ ಉಪಯೋಗಿಸಿಕೊಂಡಿದ್ದು, ಭಾಕಿ 120-5=115 ) 1/7/2007 ರಲಿ ಲೆಕ್ಕಕ್ಕೆ ನೀಡಿಕೆ ದಿನಗಳು, ಒಟ್ಟು ಶಿಲ್ಕು 115+15=130 ದಿನಗಳು.
ಉಪಯೋಗಿಸಿಕೊಂಡ ರಜೆ 1/7/2007 ರಿಂದ 10/7/2007 ರವರೆಗೆ 10 ದಿನಗಳು ಉಳಿಕೆ 130-10=120 ದಿನಗಳು.
- ಗಳಿಸಿದ ರಜೆ ಗರಿಷ್ಠ 300 ದಿನಗಳು, ದಿನಾಂಕ 1/7/95
ರಿಂದ ಗರಿಷ್ಟ ಮಿತಿ 300 ಅಥವಾ 225 ಕ್ಕಿಂತ ಹೆಚ್ಚಿನ ರಜೆ ಹೊಂದಿದ್ದಲ್ಲಿ ಅರ್ಧವರ್ಷದ 15 ದಿನಗಳನ್ನು ಪ್ರತ್ಯೇಕವಾಗಿ ಜಮೆ ಮಾಡತಕ್ಕದ್ದು. ಆ ಅರ್ಧವರ್ಷದ ಅವಧಿಯಲ್ಲಿ ಉಪಯೋಗಿಸಿಕೊಂಡ ರಜೆಯನ್ನು ಕಳೆದು ಉಳಿದ ರಜೆಯನ್ನು 300 ದಿನಗಳಿಗೆ ಮಿತಿಗೊಳಿಸತಕ್ಕದ್ದು.
ಉದಾ:- 30/6/2007 ಅಂತ್ಯಕ್ಕೆ 240 ದಿನಗಳು, ದಿನಾಂಕ 1/7/95 ರಂದು ಲೆಕ್ಕದ್ದೆ ನೀಡಿಕೆ. 15 ದಿನಗಳು 240+15 ದಿನಗಳು ಆದರೆ, ದಿನಾಂಕ 31/12/2007 ರಂದು ಲೆಕ್ಕದರುವ ಶಿಲ್ಕು 240 ದಿನಗಳಿಗೆ ಮಿತಿಗೊಳಿಸಿ ದಿನಾಂಕ 1/1/2008 ರಂದು 15 ದಿನಗಳ ರಜೆ ನೀಡಿಕೆ ನಂತರ 240+15 ದಿನಗಳು.
- ಗಳಿಕೆ ರಜೆಯನ್ನು ಮುಂಗಡವಾಗಿ ಜಮೆ ಮಾಡಿದ ನಂತರ ಆ ಅರ್ಧವರ್ಷದ ಅವಧಿಯಲ್ಲಿ ಗೈರು ಹಾಜರಿ / ಅಸಾಧಾರಣ ರಜೆ ಬಳಸಿದರೆ ಅದರ 1/10 ಭಾಗ ವನ್ನು ಲೆಕ್ಕಮಾಡಿ ಗರಿಷ್ಟ 15 ದಿನಗಳು ಮೀರದಂತೆ, ಮುಂದಿನ ಅರ್ಧವರ್ಷದ ಗಳಿಕೆ ರಜೆ ಜಮೆ ಮಾಡುವಾಗ ಕಳೆಯತಕ್ಕದು.
-
ಉದಾ:- ೩೧/೧೨/೨೦೦೬ ರ ಅಂತ್ಯಕ್ಕೆ ಲೆಕ್ಕದಲ್ಲಿರುವ ಗಳಿಕೆ ರಜೆ, ೧೨೨ ದಿನಗಳು, ೧/೧/೦೭ ರಂದು ೧೫ ದಿನಗಳು ನೀಡಿಕೆ (೧೨೨+೧೫) ೧೩೭ ದಿನಗಳು, ನೌಕರನು ದಿನಾಂಕ ೧/೪/೨೦೦೭ ರಿಂದ ೩೦/೪/೨೦೦೭ ಗೈರು ಹಾಜರಿ ೩೦ ದಿನಗಳು ೧/೧೦ ರಂತೆ ೩ ದಿನಗಳು ರಜೆಯನ್ನು ೧/೭/೨೦೦೭ ರಂದು ಲೆಕ್ಕಕ್ಕೆ ನೀಡುವ ರಜೆಯ ಮಿತಿಗೊಳಿಸಿ
( ೧೫-೩೦ * ೧/೧೦ ರಂತೆ ) = ೧೨ ದಿನಗಳು ನೀಡಿಕೆ, ಲೆಕ್ಕದಲ್ಲಿರುವ ರಜೆಯ ಶಿಲ್ಕು
೧೩೭+೧೨=೧೪೯ ದಿನಗಳು.
ಬಿಡುವು ಇಲಾಖೆ ನೌಕರರಿಗೆ
ಸರ್ಕಾರಿ ನೌಕರನು ಕರ್ತವ್ಯದ ಅವಧಿಯಲ್ಲಿ ಅರ್ಜಿಸಿದ ರಜೆ (ನಿ. 113)
- ಪ್ರತಿ ಅರ್ಧವರ್ಷದ ಪ್ರಾರಂಭದಲ್ಲಿ ಮುಂಗಡ 5
ದಿನಗಳು ಲೆಕ್ಕಕ್ಕೆ ಜಮೆ.
- ಅರ್ಧವರ್ಷದ ಸೇವೆಯ ಪ್ರಾರಂಭ ಅಥವಾ ಪೂರ್ಣಗೊಳಿಸಿದ ಸಂದರ್ಭದಲ್ಲಿ ಪ್ರತಿ ತಿಂಗಳ ಕರ್ತವ್ಯದ
ಅವಧಿಗೆ 5/6 ಅನುಪಾತದಲ್ಲಿ.
- ಕರ್ತವ್ಯವಲ್ಲದ ಅವಧಿಯ ಪ್ರತಿ ತಿಂಗಳಿಗೆ 5/6
ಅನುಪಾತದಲ್ಲಿ ಮುಂದಿನ ಅರ್ಧವರ್ಷದ ಅವಧಿಯಲ್ಲಿ
ಲೆಕ್ಕಕ್ಕೆ ನೀಡುವಾಗ ಮಿತಿಗೊಳಿಸುವುದು.
- ಲೆಕ್ಕದಲ್ಲಿ ಹೊಂದಿರಬಹುದಾದ ಗರಿಷ್ಠ ಮಿತಿ 240+5
ದಿನಗಳು.
- ಅಧ್ಯರ್ಪಣೆ ಮತ್ತು ನಗಧೀಕರಣದ ಸೌಲಭ್ಯ.
ಉದಾ:- ಒಬ್ಬ ಸರ್ಕಾರಿ ನೌಕರನು ದಿನಾಂಕ ೫/೩/೨೦೦೭ ರಂದು ಸೇವೆಗೆ ಸೇರಿದ್ದರೆ, ೧/೪/೨೦೦೭ ರಿಂದ ೩೦/೬/೨೦೦೭ ರವರೆಗೆ ೩ ತಿಂಗಳ ಪೂರ್ಣಗೊಂಡ ಸೇವೆಗೆ ಗಳಿಕೆ ರಜೆ ೩*೫/೬=೨ ಳಿ ದಿನಗಳು ಲೆಕ್ಕಕ್ಕೆ ನೀಡಿ, ದಿನಾಂಕ ೧/೭/೦೭ ರಂದು ೫ ದಿನಗಳು ಮುಂಗಡ ನೀಡಿಕೆ, ಒಟ್ಟು ೫*೩=೮ ದಿನಗಳು ಗಳಿಕೆ ರಜೆಯನ್ನು ಹೊಂದಿರುವರು.
ಉದಾ:- ಒಬ್ಬ ಸರ್ಕಾರಿ ನೌಕರನು ದಿನಾಂಕ ೩೧/೧೦/೨೦೦೭ ರಂದು ವಯೋನಿವೃತ್ತಿ ಹೊಂದಿದ್ದಲ್ಲಿ, ೧/೭/೨೦೦೭ ರಿಂದ ೩೧/೧೦/೨೦೦೭ ರವರೆಗೆ ೪ ತಿಂಗಳಿಗೆ ೪*೫/೬= ೩.೩ ಒಟ್ಟು ೩ ದಿನಗಳು ರಜೆಯನ್ನು ಜಮೆ ಮಾಡಬಹುದು.
ಗಳಿಕೆ ರಜೆ ನಗದೀಕರಣ ಸೌಲಭ್ಯ
( ನಿಯಮ 118 ಅನುಬಂಧ ಸಿ )
ಸರ್ಕಾರಿ ನೌಕರರು, ನಿವೃತ್ತಿ ನಂತರ ಕನಿಷ್ಠ ಒಂದು ವರ್ಷದ ಅವಧಿಗೆ ಪುನರ್ ನೇಮಕಾತಿ ಹೊಂದಿರುವ ಸರ್ಕಾರಿ ನೌಕರರು ಒಂದು ವರ್ಷದ ಅವಧಿಗೆ ಮೀರದಂತೆ ಗುತ್ತಿಗೆಯಾಧಾರದ ಮೇಲೆ ನೇಮಕ ಮಾಡಲ್ಪಟ್ಟಿರುವ ಸರ್ಕಾರಿ ನೌಕರರು, ನಿಯಮ 112 ರನ್ವಯ ಸೇವಾವಧಿಯಲ್ಲಿ ಅರ್ಜಿಸಿರುವ ಗಳಿಕೆ ರಜೆಯನ್ನು,
ದಿನಾಂಕ 1/8/1981 ರಿಂದ ಪ್ರಾರಂಭವಾಗದಂತೆ ಪ್ರತಿ ಎರಡು ಕ್ಯಾಲೆಂಡರ್ ವರ್ಷಗಳ ಬ್ಲಾಕ್ ಅವಧಿಯಲ್ಲಿ ಒಮ್ಮೆ ಗರಿಷ್ಠ 30 ದಿನಗಳ ಗಳಿಕೆ ರಜೆಯನ್ನು ಅಧ್ಯರ್ಪಿಸಲು ಅಭಿಮತ ನೀಡಿ, ರಜೆಯ ಸಂಬಳ ನಗದೀಕರಣ ಸೌಲಭ್ಯವನ್ನು ಪಡೆಯಬಹುದು.
ಈ ರಜೆ ನಗದೀಕರಣ ಸೌಲಭ್ಯವನ್ನು ನೌಕರರು ಕರ್ತವ್ಯದ ಅವಧಿಯಲ್ಲಿ ಅಥವಾ ನಿವೃತ್ತಿ ಪೂರ್ವಾವಧಿಯ ರಜೆಯ ಅವಧಿ ವಿನಹ, ಉಳಿದ ರಜೆ ಅವಧಿಯಲ್ಲಿ ಪಡೆಯಬಹುದು. ರಜೆ ನಗದೀಕರಣ ಸೌಲಭ್ಯವನ್ನು ಉಪಯೋಗಿಸಿಕೊಳ್ಳಲು ನಿಗದಿತ 1-ಎ ನಮೂನೆಯಲ್ಲಿ ಒಂದು ತಿಂಗಳ ಮುಂಚಿತವಾಗಿ ಅರ್ಜಿಯನ್ನು ಸಲ್ಲಿಸಬೇಕು.
ಗಳಿಕೆ ರಜೆ ಮಂಜೂರಾತಿ ನೀಡುವ ಅಧಿಕಾರಿಯು ರಜೆ ಸೌಲಭ್ಯವನ್ನು ಮಂಜೂರು ಮಾಡುವ ಅಧಿಕಾರ ಹೊಂದಿರುತ್ತಾರೆ. ರಜೆ ನಗದೀಕರಣ ಸೌಲಭ್ಯವನ್ನು ಮಂಜೂರಾತಿ ನೀಡುವ ಆದೇಶದಲ್ಲಿ ಯಾವ ದಿನಾಂಕದಲ್ಲಿ ರಜೆಯನ್ನು ಆದ್ಯರ್ಪಿಸಲು ಅನುಮತಿ ನೀಡಲಾಗಿದೆ ಎಂಬುದನ್ನು ಸ್ಪಷ್ಟವಾಗಿ ನಮೂದಿಸಬೇಕು. ಹಾಗೂ ಆ ಸಂಬಂಧವಾಗಿ ನೌಕರರ ರಜೆ ಲೆಕ್ಕದಿಂದ ಆ ದಿನಾಂಕದಲ್ಲಿ ಆಧ್ಯರ್ಪಿಸಿದ ರಜೆಯನ್ನು ಕಳೆಯಬೇಕು. ರಜೆ ನಗದೀಕರಣ ಸೌಲಭ್ಯ ಮಂಜೂರಾತಿ ನೀಡದ ಸಂಬಂಧವಾಗಿ ನೌಕರರ ಸೇವಾ ಪುಸ್ತಕದ ಭಾಗ 3 ರಲ್ಲಿ ಮತ್ತು ರಜೆ ಲೆಕ್ಕದಲ್ಲಿ ಅಗತ್ಯ ದಾಖಲೆ ನಮೂದಿಸಿ ದೃಡೀಕರಿಸಬೇಕು.
ಪರಿವೀಕ್ಷಣಾ ಅವಧಿಯಲ್ಲಿಯೂ ಸರ್ಕಾರಿ ನೌಕರರು ತಮ್ಮ ಹಕ್ಕಿನಲ್ಲಿರುವ ಗಳಿಕೆ ರಜೆಯನ್ನು ಅಧ್ಯರ್ಪಿಸಿ, ರಜೆ ನಗದೀಕರಣ ಸೌಲಭ್ಯವನ್ನು ಪಡೆಯಬಹುದಾಗಿದೆ. ಆದರೆ, ಅನಧಿಕೃತವಾಗಿ ಗೈರು ಹಾಜರಿಯಾಗಿರುವ ನೌಕರರು ಮತ್ತು ಸೇವೆಯಿಂದ ನಿಲಂಭನೆಗೊಳಿಸಿರುವ ನೌಕರರಿಗೆ ರಜೆ ನಗದೀಕರಣ ಸೌಲಭ್ಯವನ್ನು ಪಡೆಯಲು ಅರ್ಹತೆಯಿರುವುದಿಲ್ಲ. ಸ್ಥಳೀಯ ಅಭ್ಯರ್ಥಿಗಳು ರಜೆ ನಗದೀಕರಣ ಸೌಲರ್ಭಯವನ್ನು ಪಡೆಯಲು ಅರ್ಹರಲ್ಲ.
ರಜೆ ನಗದೀಕರಣ ಸೌಲಭ್ಯ ಪಡೆಯುವ ನೌಕರರಿಗೆ ರಜೆ ಸಂಬಳ ಎಂದರೆ,
ನೌಕರರು ಪಡೆಯುತ್ತಿರುವ ಮೂಲವೇತನ ( ಹೆಚ್ಚುವರಿ ವೇತನ ಬಡ್ತಿ ಮತ್ತು ಸ್ಥಗಿತ ವೇತನ ಬಡ್ತಿ ಸೇರಿದಂತೆ ) - ಹುದ್ದೆಗೆ ಮಂಜೂರಾಗಿರುವ ವಿಶೇಷ ವೇತನ, ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ ಮತ್ತು ನಗರ ಪರಿಹಾರ ಭತ್ಯೆ ಸೇರ್ಪಡೆಯಾಗುವುದು. ಪ್ರತಿ ದಿನದ ರಜೆ ಸಂಬಳ ಎಂದರೆ ನೌಕರರ ಸಂಬಳದ 1/30 ರ ಅನುಪಾತದಲ್ಲಿ ಲೆಕ್ಕಹಾಕತಕ್ಕದ್ದು.
ನಿವೃತ್ತಿ ಪೂರ್ವ ಗಳಿಕೆ ರಜೆ ನಗದೀಕರಣ
ನಿವೃತ್ತಿ ವಯಸ್ಸು ತಲುಪಿದ ನಂತರ ಸೇವಕ ಷರತ್ತುಗಳಿಗೆ ಅನುಸಾರ ವಯೋಮಿತಿಯನ್ವಯ ನಿವೃತ್ತಿ ಹೊಂದುವ ಸರ್ಕಾರಿ ನೌಕರರಿಗೆ,
ರಜೆ ಮಂಜೂರ‍್ಮಾಡುವ ಅಧಿಕಾರಿಯು ಸ್ವಪ್ರೇರಣಯಿಂದ, ನಿವೃತ್ತಿ ದಿನಾಂಕದಲ್ಲಿ ನೌಕರನ ಲೆಕ್ಕದಲ್ಲಿ ಹೊಂದಿರುವ ಗಳಿಕೆಯ ರಜೆಯ ಗರಿಷ್ಟ ಮಿತಿ 300 ದಿನಗಳಿಗೆ ಒಳಪಟ್ಟು ರಜೆ ಸಂಬಳವನ್ನು ರಜೆ ಸಂಬಳವನ್ನು ಮಂಜೂರ‍್ಮಾಡಬೇಕು
(118-a) (1-a) ಆ ಪ್ರಕಾರ ಪಾವತಿ ಮಾಡುವ ರಜೆ ಸಂಬಳವು ಒಂದು ಅವಧಿಯ ಇತ್ಯರ್ಥವಾಗಿದ್ದು, ಪೂರ್ವಾನ್ವಯ ವೇತನ ಅಥವಾ ತುಟ್ಟೀಭತ್ಯೆ ಪರಿಷ್ಕರಣೆಯ ಸಂದರ್ಭದಲ್ಲಿ ವ್ಯತ್ಯಾಸದ ಮೊಬಲಗು ಪಾವತಿ ಮಾಡುವಂತಿಲ್ಲ. ಮನೆ ಬಾಡಿಗೆ ಭತ್ಯೆ ಮತ್ತು ನಗರ ಪರಿಹಾರ ಭತ್ಯೆಯು ಈ ರಜೆ ಸಂಬಳದಲ್ಲಿ ಸೇರ್ಪಡೆಯಾಗುವುದಿಲ್ಲ.
ರಜೆ ಸಂಬಳ ನಿವೃತ್ತಿ ದಿನಾಂಕದಲ್ಲಿ ನೌಕರನು ನೌಕರನು ಉಪಯೋಗಿಸಿಕೊಳ್ಳದೇ
ಮೊಬಲಗು = ಪಡೆಯುತ್ತಿರುವ ಮೂಲವೇತನ * ನಿವೃತ್ತಿ ದಿನಾಂಕದಲ್ಲಿ ಲೆಕ್ಕದಲ್ಲಿ
ಹೊಂದಿದ್ದ ಗಳಿಕೆ ರಜೆ ಗರಿಷ್ಟ
ಮಿತಿ 300 ದಿನಗಳಿಗೆ ಒಳಪಟ್ಟು.
ಆ ದಿನಾಂಕದಲ್ಲಿದ್ದ ತುಟ್ಟಿ
ಭತ್ಯೆಯ ಮೊಬಲಗು.
----------------------------------------------------------
30
ನಿವೃತ್ತ ನೌಕರನ ವಿರುದ್ಧ ದುರ್ನಡತೆ, ಅಥವಾ ಆರೋಪಗಳ ಸಂಬಂಧ ವಿಚಾರಣೆಗಾಗಿ ನಿಲಂಬನೆಯಲ್ಲಿದ್ದು, ಅಥವಾ ಶಿಸ್ತಿನ ವಿಚಾರಣೆಯು ಇತ್ಯರ್ಥವಾಗದೇ ಬಾಕಿ ಉಳಿದಿದ್ದು, ಸರ್ಕಾರಕ್ಕೆ ನಿವೃತ್ತ ನೌಕರನಿಂದ ಪ್ರಕರಣದ ಇತ್ಯರ್ಥವಾದ ನಂತರ ಸರ್ಕಾರಕ್ಕೆ ನೌಕರನಿಂದ ಉಂಟಾದ
ಆರ್ಥಿಕ ನಷ್ಟ ಪರಿಹಾರಾರ್ಥವಾಗಿ ಹಣದ ವಸೂಲಾತಿಯೂ ಅಗತ್ಯವಿರುವುದೆಂಬ ಸಾಧ್ಯತೆಯು ಅರಿವು ಉಂಟಾದಲ್ಲಿ ನೌಕರನಿಗೆ ಪಾವತಿಮಾಡಬಹುದಾದ ರಜೆಯ ಸಂಬಳದ ಪೂರ್ಣ ಮೊಬಲಗು ಅಥವಾ ಭಾಗಾಂಶವನ್ನು ತಡೆಹಿಡಿದು, ಪ್ರಕರಣದ ಇತ್ಯರ್ಥವಾದ ನಂತರ, ನೌಕರನಿಂದ ವಸೂಲ್ಮಾಡಬೇಕಾದ ಹಣವನ್ನು ಹೊಂದಾಣಿಕೆ ಮಾಡಿ, ಉಳಿದ ಮೊಬಲಗನ್ನು ಪಾವತಿಮಾಡಬೇಕು.
(ನಿಯಮ 118(a) (2)
ನಿವೃತ್ತಿ ಅವಧಿಯ ನಂತರ ನೌಕರನ ಸೇವೆಗೆ ನೇಮಕಾತಿಯಾಗಿದ್ದಲ್ಲಿ, ನೌಕರನು ನಿವೃತ್ತಿ ದಿನಾಂಕದಲ್ಲಿ
ಲೆಕ್ಕದಲ್ಲಿ ಹೊಂದಿದ್ದ ಗಳಿಕೆ ರಜೆ ಮತ್ತು ಪುನರ್ ನೇಮಕಾತಿ ಅವಧಿಯಲ್ಲಿ ಗಳಿಸಿದ ರಜೆಯನ್ನು ಒಟ್ಟು ಗರಿಷ್ಠ 300 ದಿನಗಳು ಮಿತಿಗೊಳಪಟ್ಟು ನಿಯಮ 118 (a) (1) ಪ್ರಕಾರ ರಜೆ ಸಂಬಳವನ್ನು ಪಾವತಿಮಾಡಬಹುದು.
ನಿಯಮ 285 ರನ್ವಯ ಸ್ವಇಚ್ಛೆ ಮೇರೆ ಸೇವೆಯಿಂದ ನಿವೃತ್ತಿ ಹೊಂದುವ ಕ.ಸಿ.ಸೇ (ವ.ನಿ.ಮೇ) ನಿಯಮ 1957ರ ಪ್ರಕಾರ ವಿಚಾರಣೆಯ ನಂತರ ಸೇವೆಯಿಂದ ಕಡ್ಡಾಯವಾಗಿ ನೌಕರರನ್ನು ನಿವೃತ್ತಿಗೊಳಿಸಿ, ಅಂತಹ ಪ್ರಕರಣದಲ್ಲಿ ನಿಯಮ 218 ರನ್ವಯ ನಿವೃತ್ತಿ ವೇತನ ಮತ್ತು ಉಪದಾನದಲ್ಲಿ ಕಡಿಮೆಗೊಳಿಸುವ ದಂಡನೆ ವಿಧಿಸದಿದ್ದಲ್ಲಿ, ದೈಹಿಕ ಅಥವಾ
ಮಾನಸಿಕ ವಿಕಲತೆಯಿಂದಾಗಿ ವೈದ್ಯಕೀಯ ಅಧಿಕಾರಿಯ ವರದಿಯನ್ನು ಆಧರಿಸಿ ಸೇವೆಗೆ ಅನರ್ಹವೆಂದು ಸೇವೆ
ಯಿಂದ ವಿಕಲತಾ ನಿವೃತ್ತಿ ಪಡೆಯುವ ನೌಕರ ಮತ್ತು ಸೇವಾವಧಿಯಲ್ಲಿ ಮೃತಹೊಂದಿದ ಸರ್ಕಾರಿ ನೌಕರರ ಕುಟುಂಬಕ್ಕೂ ಗರಿಷ್ಟ 300 ದಿನಗಳ ಮಿತಿಗೊಳಪಟ್ಟು ಗಳಿಕೆ ರಜೆ ಸಂಬಳವನ್ನು ಪಾವತಿ ಮಾಡಬಹುದು.
ಅರ್ಧವೇತನ ರಜೆ ( ನಿಯಮ 114 )
- ಪ್ರತಿ ಅರ್ಧವರ್ಷದ ಪ್ರಾರಂಭದಲ್ಲಿ 10 ದಿನಗಳ
ರಜೆ ಲೆಕ್ಕಕ್ಕೆ ಜಮೆ.
- ಅರ್ಧವರ್ಷದ ಮಧ್ಯದ ಅವಧಿಯಲ್ಲಿ ಸೇವೆಯ
ಪ್ರಾರಂಭ / ಅಂತ್ಯಗೊಂಡರೆ ಪ್ರತಿ 18 ದಿನಗಳ
ಸೇವಾವಧಿಗೆ ಒಂದು ದಿನದ ರಜೆ.
- ಕರ್ತವ್ಯವಲ್ಲದ ಪ್ರತಿ 18 ದಿನಗಳ ಅವಧಿಗೆ
ಒಂದು ದಿನದ ರಜೆ ಮುಂದಿನ ಅರ್ಧವರ್ಷದ

- ಲೆಕ್ಕದಲ್ಲಿ ಹೊಂದಿರಬಹುದಾದ ಅವಧಿಗೆ
ಗರಿಷ್ಟ ಮಿತಿಯಿರುವುದಿಲ್ಲ. ( ನಿ. 114 ).
ಅರ್ಧವೇತನ ರಜೆಯನ್ನು ಒಂದು ಕ್ಯಾಲೆಂಡರ್ ವರ್ಷದಲ್ಲಿ ಎರಡು ಕಂತುಗಳಲ್ಲಿ ಪ್ರತಿ ಜುಲೈ ಹಾಗೂ ಜನವರಿ ಒಂದರಂದು ಮುಂಗಡವಾಗಿ 10 ದಿನಗಳ ಅರ್ಧವೇತನ ರಜೆಯನ್ನು ಜಮೆ ಮಾಡತಕ್ಕದ್ದು.
ಅರ್ಧವೇತನ ರಜೆ ಒಂದು ಅರ್ಧ ವರ್ಷದಲ್ಲಿ ಪೂರಕಗೊಂಡ ಪ್ರತಿಯೊಂದು ಕ್ಯಾಲೆಂಡರ್ 5/3 ದಿನ ದರದಲ್ಲಿ ಜಮೆ ಮಾಡಬಹುದು.
ಉದಾ:- ದಿನಾಂಕ: ೧೦/೩/೨೦೦೮ ರಂದು ಸೇವೆಗೆ ಸೇರಿದ ನೌಕರನಿಗೆ ದಿನಾಂಕ ೧೦/೩/೨೦೦೮ ರವರೆಗೆ ಅವಧಿಗೆ ಪೂರ್ಣಗೊಂಡ ೩ ತಿಂಗಳ ಸೇವೆಗೆ ೩*೫/೩=೫ ದಿನಗಳು ಲೆಕ್ಕಕ್ಕೆ ನೀಡಿಕೆ.
ಉದಾ:- ದಿನಾಂಕ: ೪/೯/೨೦೦೮ ರಂದು ನಿವೃತ್ತಿ ಹೊಂದುವ ನೌಕರನಿಗೆ ದಿನಾಂಕ ೧/೭/೨೦೦೮ ರವರೆಗೆ ಅವಧಿಗೆ ೩ ತಿಂಗಳ ಅವಧಿಗೆ ೩*೫/೩=೫ ದಿನಗಳು ಲೆಕ್ಕಕ್ಕೆ ನೀಡಿಕೆ.
ಪರಿವರ್ತಿತ ರಜೆ
- ನೌಕರನ ಲೆಕ್ಕದಲ್ಲಿರುವ ಅರ್ಧವೇತನ ರಜೆಯನ್ನು
ಪೂರ್ಣ ವೇತನ / ಭತ್ಯೆಗೆ ಲೆಕ್ಕದಲ್ಲಿ
ಮಿತಿಗೊಳಿಸುವುದು.
- ಪರಿವರ್ತಿತ ರಜೆಯ ನಂತರ ಸೇವೆಗೆ ಹಾಜರಾಗದಿದ್ದಲ್ಲಿ, ಪೂರ್ಣ ಅವಧಿ ಅರ್ಧವೇತನ ರಜೆ ಎಂದು
ಪರಿಗಣನೆ, ಹೆಚ್ಚಿನ ವೇತನ ಸರ್ಕಾರಕ್ಕೆ
ಮರುಪಾವತಿ.
- ರಜೆಯ ಅವಧೀಯಲ್ಲಿ ನೌಕರನ ಮರಣ ಅಥವಾ
ಅನಾರೋಗ್ಯ ಕಾರಣ ಸ್ವಯಂ ನಿವೃತ್ತಿ
ಹೊಂದಿದ್ದಲ್ಲಿ ವೇತನ ಕಟಾಯಿಸುವುದರಿಂದ
ವಿನಾಯಿತಿ ( ನಿ. 114 ).
ಒಬ್ಬ ಸರ್ಕಾರಿ ನೌಕರನು ಪರಿವರ್ತಿತ ರಜೆಯನ್ನು ಉಪಯೋಗಿಸಿದ್ದರೆ - ಪರಿವರ್ತಿತ ರಜೆಯರೆಡರಷ್ಟು ಅರ್ಧ ವೇತನ ರಜೆ ಲೆಕ್ಕದಲ್ಲಿ ಕಳೆಯಬೇಕು.
ಉದಾ:- ೩೦/೬/೨೦೦೭ ರಂದು ಅಂತ್ಯಕ್ಕೆ ೨೨೮ ಅರ್ಧ ವೇತನದ ೧/೩/೦೭ ರಿಂದ ೨೦/೩/೦೭ ರವರೆಗೆ ೨೦ ದಿನಗಳು ಪರಿವರ್ತಿತ ರಜೆ ಉಪಯೋಗಿಸಿಕೊಂಡರೆ ೨೦*೨ = ೪೦ ದಿನಗಳು ಅರ್ಧ ವೇತನ ರಜೆಯಿಂದ ಕಳೆಯುವುದು. ಉಳಿಕೆ ೨೨೮-೨೦*೨=೧೧೮ ದಿನಗಳು.
- ಅರ್ಧವೇತನ ರಜಕ್ಕೆ ಗರಿಷ್ಟ ಮಿತಿಯಿಲ್ಲ.
- ಈ ರಜೆಯನ್ನು ನಗಧೀಕರಿಸುವಂತಿಲ್ಲ.
ಹಕ್ಕಿನಲ್ಲಿಲ್ಲದ ರಜೆ ನಿಯಮ 114 (6)
ಹಕ್ಕಿನಲ್ಲಿ ಯಾವುದೇ ರಜೆ ಹೊಂದಿಲ್ಲದಿದ್ದರೆ, ಸೇವಾವಧಿಯಲ್ಲಿ ಮುಂದೆ ಅರ್ಜಿಸುವ ಅರ್ಧವೇತನ ರಜೆ ಮುಂಗಡವಾಗಿ ಮಂಜೂರಾತಿ.
- ರಜೆಯ ನಂತರ ಸೇವೆಗೆ ಹಿಂದಿರುಗುವ
ಸಾದ್ಯತೆಯಿರಬೇಕು.
- ಮಂಜೂರ‍್ಮಾಡಿದ ರಜೆ ಸೇವೆಯಲ್ಲಿ ಅರ್ಜಿಸುವ
ಭರವಸೆಯಿರಬೇಕು.
- ರಜೆಯ ಅವಧಿಯಲ್ಲಿ ಅರ್ಧವೇತನ ಮತ್ತು
ಭತ್ಯೆ ಮಾತ್ರ ಪಾವತಿ.
- ಗರಿಷ್ಟ ಸೇವಾವಧಿಯಲ್ಲಿ 360 ದಿನಗಳು,
ಏಕಕಾಲದಲ್ಲಿ ಗರಿಷ್ಟ 90 ದಿನ.
- ದೀರ್ಘಕಾಲದ ಖಾಯಿಲೆಗಳ ಕಾರಣ ಏಕಕಾಲ
ದಲ್ಲಿ ಗರಿಷ್ಟ 180 ದಿನ.
- ಒಂದು ವರ್ಷಕ್ಕೆ ಕಡಿಮೆಯಿಲ್ಲದೆ ನಿರಂತರ
ಸೇವೆ ಪೂರ್ಣಗೊಳಿಸಿರಬೇಕು.
ಅಸಾಧಾರಣ ರಜೆ (ನಿಯಮ 117 )
ವಿಶೇಷ ಸಂದರ್ಭದಲ್ಲಿ, ನೌಕರನ ಹಕ್ಕಿನಲ್ಲಿ ಯಾವುದೇ ರಜೆ ಲಭ್ಯವಿಲ್ಲದಿದ್ದಲ್ಲಿ, ಅಥವಾ ನೌಕರನ ಕೋರಿಕೆ ಮೇರೆ ವಿಶೇಷ ವೇತನ ರಹಿತ ರಜೆ ನೀಡಬಹುದು.
- ವೇತನ ಮತ್ತು ಭತ್ಯೆ ಲಭ್ಯವಿರುವುದಿಲ್ಲ.
( ನಿ. 171 ರನ್ವಯ ಮ.ಭಾ.ಭತ್ಯೆ ಪಾವತಿ )
- ಏಕಕಾಲದಲ್ಲಿ ಗರಿಷ್ಟ 90 ದಿನಗಳು, ಧೀರ್ಘಕಾಲದ
ಖಾಯಿಲೆಯ ಕಾರಣ ಗರಿಷ್ಟ 180 ದಿನಗಳು,
ಸೇವಾವಧಿಯಲ್ಲಿ ಗರಿಷ್ಟ 3 ವರ್ಷ.
- ನೇಮಕ ಪ್ರಾಧಿಕಾರದಿಂದ ಪೂರ್ವ ಅನುಮತಿ
ಪಡೆದುಕೊಂಡು ಉನ್ನತ ವ್ಯಾಸಂಗಕ್ಕೆ ತೆರಳಲು
2 ವರ್ಷ, ಡಾಕ್ಟರೇಟ್ ಪದವಿಗಾಗಿ 3 ವರ್ಷ.
(ನಿ. 117)
ಪರೀಕ್ಷೆ ರಜೆ (ನಿಯಮ 130 ರಿಂದ 134 a)
ಹುದ್ದೆಗೆ ನಿಗದಿತ ಇಲಾಖಾ ಪರೀಕ್ಷೆಗಳ ಹಾಜರಾತಿ
ಗಾಗಿ ಪರೀಕ್ಷೆ ರಜೆ ನೀಡಬಹುದು.
- ವಾ.ವೇ. ಬಡ್ತಿ ಮತ್ತು ಪದೋನ್ನತಿ ಪಡೆಯಲು
ಕಡ್ಡಾಯವೆಂದು ನಿಗದಿತ ಇಲಾಖಾ ಪರೀಕ್ಷೆಗಳಿಗೆ
ಮಾತ್ರ ಅನ್ವಯ.
- ಎರಡು ಪ್ರಯತ್ನಗಳಿಗೆ ಮಾತ್ರ ಅವಕಾಶ ಲಭ್ಯ.
- ಪರೀಕ್ಷೆಗೆ ಹಾಜರಾದ ಪ್ರಮಾಣ ಪತ್ರ
ಒದಗಿಸಬೇಕು.
- ಸೇವಾವಹಿಯಲ್ಲಿ ರಜೆ ಮಂಜೂರಾತಿ
ದಾಖಲಿಸಬೇಕು.
- ಬಟವಾಡೆ ಅಧಿಕಾರಿಯಿಂದ ಮಂಜೂರಾತಿ
ಪಡೆದುಕೊಳ್ಳಬೇಕು.
ಹೆರಿಗೆ ರಜೆ (ನಿಯಮ 135 ಮತ್ತು 135a)
ಒಂದಕ್ಕಿಂತ ಹೆಚ್ಚಿನ ಜೀವಂತ ಮಕ್ಕಳನ್ನು ಹೊಂದಿರದ ಮಹಿಳಾ ಸರ್ಕಾರಿ ನೌಕರರುಗಳಿಗೆ ಎರಡು ಮಕ್ಕಳ ಸಂದರ್ಭದಲ್ಲಿ ಮಾತ್ರ ಅರ್ಹತೆ.
- ಗರಿಷ್ಟ 180 ದಿನಗಳು.
- ಬಟವಾಡೆ ಅಧಿಕಾರಿ ಮಂಜೂರಾತಿ ಪ್ರಾಧಿಕಾರಿ.
- 180 ದಿನಗಳ ಅವಧಿ ಅವಿರತವಾಗಿ ಉಪಯೋಗ.
- ಇತರೇ ಹಕ್ಕಿನ ರಜೆಯೊಂದಿಗೆ ವೈದ್ಯಕೀಯ
ಕಾರಣದ ಮೇಲೆ ಸಂಯೋಜಿಸಿ ಬಳಕೆ.
- ಗರ್ಭಪಾತವಾದ ಸಂದರ್ಭದಲ್ಲಿ ವೈದ್ಯಕೀಯ
ಪ್ರಮಾಣ ಪತ್ರ ಆಧರಿಸಿ ಗರಿಷ್ಟ 6 ವಾರಗಳ ರಜೆ.
(ನಿ.135a)
ಪಿತೃತ್ವ ರಜೆ ( ನಿಯಮ 135 ಬಿ )
- ಸರ್ಕಾರಿ ನೌಕರನಿಗೆ, ಪತ್ನಿಯ ಹೆರಿಗೆ ಸಂದರ್ಭದಲ್ಲಿ
ನೆರವು ನೀಡಲು ಗರಿಷ್ಟ 15 ದಿನಗಳ ಪಿತೃತ್ವ ರಜೆ
ಲಭ್ಯ. ಇದು ಎರಡು ಮಕ್ಕಳ ಸಂದರ್ಭಕ್ಕೆ ಮಾತ್ರ
ಅನ್ವಯ.
ವಿಶೇಷ ದುರ್ಬಲತೆ ರಜೆ (ನಿಯಮ 136 ರಿಂದ 138)
ನೌಕರನಿಗೆ ಕರ್ತವ್ಯದ ಅವಧಿಯಲ್ಲಿ ಉಂಟಾದ ದೈಹಿಕ ವಿಕಲತೆ ಅಥವಾ ಮಾನಸಿಕ ಅಸ್ವಸ್ಥತೆಗಾಗಿ ಘಟನಾವರದಿ ಹಾಗೂ ವೈದ್ಯಕೀಯ ಮಂಡಳಿ ನೀಡುವ
ಪ್ರಮಾಣ ಪತ್ರ ಆಧರಿಸಿ ನೀಡಲಾಗುವುದು.
- ಗರಿಷ್ಟ 24 ತಿಂಗಳಾವಧಿ.
- ಮೊದಲ 4 ತಿಂಗಳ ರಜೆ ಅವಧಿಯಲ್ಲಿ ಪೂರ್ಣ
ವೇತನ / ಭತ್ಯೆ ಪಾವತಿ.
- 4 ತಿಂಗಳ ನಂತರದ ಅವಧಿಗೆ ಅರ್ಧವೇತನ ರಜೆ
ಅವಧಿಯ ವೇತನ / ಭತ್ಯೆ ಲಭ್ಯ.
- ಮಂಜೂರಾತಿ ಪ್ರಾಧಿಕಾರಿ - ಸರ್ಕಾರ. (ನಿ. 136-138)
ರಜೆ ಅವಧಿಯಲ್ಲಿ ವೇತನ ಭತ್ಯೆಗಳು (ನಿ.118)
ಗಳಿಕೆ ರಜೆ - ಪ್ರಾರಂಭದ ನಿಕಟ ಪೂರ್ವದಲ್ಲಿ ಪಡೆಯುತ್ತಿದ್ದ
ಸಮಾನ ವೇತನ ಮತ್ತು ಭತ್ಯೆಗಳು.
ಅರ್ಧವೇತನ ರಜೆ - ರಜೆಯ ಪ್ರಾರಂಭದ ಪೂರ್ವದಲ್ಲಿ
ಪಡೆಯುತ್ತಿದ್ದ ಮೂಲವೇತನ ಮತ್ತು
ಅದಕ್ಕನುಗುಣವಾಗಿ ಭತ್ಯೆಗಳು.
ಪರಿವರ್ತಿತ ರಜೆ - ಗಳಿಕೆ ರಜೆ ಪಡೆಯಬಹುದಾದ
ದರದಲ್ಲಿ ವೇತನ ಮತ್ತು ಭತ್ಯೆಗಳು
(ಷರತ್ತಿಗೊಳಪಟ್ಟು).
ಹಕ್ಕಿನಲ್ಲಿಲ್ಲದ ರಜೆ ಅರ್ಧ ವೇತನ ರಜೆ ಸಂದರ್ಭದಲ್ಲಿ
ಪಡೆಯಬಹುದಾದ ವೇತನ / ಭತ್ಯೆಗಳು.
ಅಸಾಧಾರಣ ರಜೆ - ವೇತನ : ಭತ್ಯೆ ಲಭ್ಯವಿರುವುದಿಲ್ಲ,
ಆದರೆ ನಿ. 171ರ ಷರತ್ತಿಗೊಳಪಟ್ಟು
ಮ.ಬಾ.ಭತ್ಯೆ : ನ. ಪ. ಭತ್ಯೆ
ಪಾವತಿಸಬಹುದು.
ಹೆರಿಗೆ ರಜೆ - ಗಳಿಕೆ ರಜೆ ಅವಧಿಯಲ್ಲಿ ಪಡೆಯ
ಬಹುದಾದ ವೇತನ : ಭತ್ಯೆಗಳು.
ವಿಶೇಷ ದುರ್ಬಲತೆ ರಜೆ _ ಮೊದಲ 4 ತಿಂಗಳ ಅವಧಿಗೆ
ಗಳಿಕೆ ರಜೆ ಅವಧಿಯಲ್ಲಿ ಪಡೆಯ
ಬಹುದಾದ ವೇತನ : ಭತ್ಯೆಗಳು,
ನಂತರ ಅವಧಿಗೆ ಅರ್ಧವೇತನ
ರಜೆಯ ಅವಧಿಯ ವೇತನ :
ಭತ್ಯೆಗಳು.
ಗಳಿಕೆ ರಜೆ - 120 ದಿನಗಳು, ಗೆಜೆಟೆಡ್ ಅಧಿಕಾರಿಗಳಿಗೆ
ವಿದೇಶಿ ಪ್ರಯಾಣಕ್ಕೆ 180 ದಿನಗಳು.
- ನಿವೃತ್ತಿ ಪೂರ್ವ 300 ದಿನಗಳು.
ಪರಿವರ್ತಿತ ರಜೆ - 120 ದಿನಗಳು, ಇತರೆ ರಜೆ
ಗಳೊಂದಿಗೆ ಸಂಯೋಜಿಸಿದರೆ 180 ದಿನಗಳು.
ಹಕ್ಕಿನಲ್ಲಿಲ್ಲದ ರಜೆ - 90 ದಿನಗಳು, ವೈದ್ಯಕೀಯ
ಕಾರಣದ ಮೇರೆ 180 ದಿನಗಳು,
ಸೇವಾವಧಿಯಲ್ಲಿ 360 ದಿನಗಳು.
ಅಸಾಧಾರಣ ರಜೆ - 90 ದಿನಗಳು, ವೈದ್ಯಕೀಯ
ಕಾರಣದ ಮೇರೆ 180 ದಿನಗಳು,
ದೀರ್ಘ ಅವಧಿಯ ಶುಶ್ರೂಷೆಯ
ರೋಗಿಗಳಿಗೆ 18 ತಿಂಗಳು.
ಸೇವಾವಧಿಯಲ್ಲಿ ಉನ್ನತ ವ್ಯಾಸಂಗ
ಕ್ಕಾಗಿ 3 ವರ್ಷಗಳು.
ಹೆರಿಗೆ ರಜೆ - 180 ದಿನಗಳು.
ವಿಶೇಷ ದುರ್ಬಲತೆ ರಜೆ - 24 ತಿಂಗಳು.
ಮಂಜೂರಾತಿ ಅಧಿಕಾರ (ನಿ. 192) ವಿಶೇಷ ದುರ್ಬಲತೆಯ ರಜೆ ಹೊರತುಪಡಿಸಿ, ಇತರೇ ರಜೆ ಮಂಜೂರ‍್ಮಾಡುವ ಸಕ್ಷಮ ಪ್ರಾಧಿಕಾರವೆಂದರೆ.
___________________________________
ಪ್ರಾಧಿಕಾರ ರಜೆ ಮಂಜೂರ‍್ಮಾಡಬಹುದಾದ ನೌಕರರ ಹುದ್ದೆಯ ವೇತನ ಶ್ರೇಣಿ
ರೂ. ೭೪೦೦- ರೂ. ೫೫೭೫ ೧೦೬೨೦ ರೂ. ೨೫೦೦ - ೩೮೫೦
೩೧೨೦ ಮತ್ತು ಮತ್ತು ಹೆಚ್ಚು ಆದರೆ ಮತ್ತು ಹೆಚ್ಚು ಆದರೆ
ಹೆಚ್ಚು ರೂ. ೭೪೦೦-೧೩೧೨೦ಕ್ಕೆ ರೂ. ೫೫೭೫ ೧೦೨೬ಕ್ಕೆ
ಕಡಿಮೆ ಕಡಿಮೆ
___________________________________
೧. ಇಲಾಖಾ ಮುಖ್ಯಾಧಿಕಾರಿಗಳು ೪ ತಿಂಗಳು ೬ ತಿಂಗಳು ಪೂರ್ಣಅಧಿಕಾರ
೨. ವಿಭಾಗ ಮಟ್ಟದ ಅಧಿಕಾರಿಗಳು ೩ ತಿಂಗಳು ೪ ತಿಂಗಳು ಪೂರ್ಣಅಧಿಕಾರ
೩. ಜಿಲ್ಲಾ ಮಟ್ಟದ ಅಧಿಕಾರಿಗಳು ೨ ತಿಂಗಳು ೩ ತಿಂಗಳು ಪೂರ್ಣಅಧಿಕಾರ
೪. ಉಪವಿಭಾಗ ಮಟ್ಟದ ಅಧಿಕಾರಿಗಳು ೨ ತಿಂಗಳು ೨ ತಿಂಗಳು ಪೂರ್ಣಅಧಿಕಾರ
೫. ತಾಲ್ಲೂಕು ಮಟ್ಟದ ಅಧಿಕಾರಿಗಳು ೨ ತಿಂಗಳು ೨ ತಿಂಗಳು ಪೂರ್ಣಅಧಿಕಾರ
___________________________________
ಕಾರ್ಯವಿಧಾನ
ರಜೆ ಮಂಜೂರಾತಿ ಕೋರಿ ನಮೂನೆ 1 ರಲ್ಲಿ,
ಪೂರ್ವಭಾವಿಯಾಗಿ ಅರ್ಜಿ ಸಲ್ಲಿಸಬೇಕು.
ಗೆಜೆಟೆಡ್ ಅಧಿಕಾರಿಗಳು ಕನಿಷ್ಟ ಒಂದು ತಿಂಗಳು
ಮುಂಚಿತವಾಗಿ ದ್ವಿಪ್ರತಿಯಲ್ಲಿ ಅರ್ಜಿ ನೀಡಿಕೆ.
ವೈದ್ಯಕೀಯ ಕಾರಣದ ಮೇರೆ ರಜೆ ಕೋರಿದಲ್ಲಿ
ಸಕ್ಷಮ ವೈದ್ಯಾಧಿಕಾರಿಯಿಂದ ಪ್ರಮಾಣ ಪತ್ರ.
(ನಿ. 187)
( * ಸಕ್ಷಮ ವೈದ್ಯಕೀಯ ಪ್ರಾಧಿಕಾರಿಗಳು )
- ನೌಕರರಿಗೆ ಚಿಕಿತ್ಸೆ ನೀಡಿದ ವೈದ್ಯಕೀಯ ಚಿಕಿತ್ಸಕ ವೈದ್ಯ,
ಹಕೀಮ್, - ಗರಿಷ್ಟ 15 ದಿನಗಳ ಅವಧಿ.
- ವೈದ್ಯಕೀಯ ಕೌನ್ಸಿಲ್ನಲ್ಲಿ ನೋಂದಾಯಿತ ವೈದ್ಯಕೀಯ
ಸಲಹೆಗಾರರು ಗರಿಷ್ಟ 2 ತಿಂಗಳು.
- ಅಂಗೀಕೃತ ವೈದ್ಯಕೀಯ ಪದವಿಹೊಂದಿದ, ನೋಂದಾಯಿತ
ವೈದ್ಯಕೀಯ ಅಧಿಕಾರಿ - ಗರಿಷ್ಟ 6 ತಿಂಗಳು. )
ಮಂಜೂರಾತಿ ಪ್ರಾಧಿಕಾರಿ ಅಗತ್ಯವೆಂದು ಪರಿಗಣಿಸಿ
ದಲ್ಲಿ 6 ತಿಂಗಳ ಅವಧಿ ಮೀರಿದ ರಜೆ ಮಂಜೂ
ರಾತಿ ಕೋರಿ ವೈದ್ಯಕೀಯ ಪ್ರಮಾಣ ಪತ್ರ
ಹಾಜರ‍್ಪಡಿಸಿದ್ದಲ್ಲಿ ಜಿಲ್ಲಾ ವೈದ್ಯಾಧಿಕಾರಿಯಿಂದ
ಮೇಲುಸಹಿ ಪಡೆಯಲು ಸೂಚಿಸಬಹುದು.
ಪತ್ರಾಂಕಿತರಲ್ಲದ ಸಿಬ್ಬಂದಿಗೆ ಮಂಜೂರಾತಿ
ಪ್ರಾಧಿಕಾರಿ ನೌಕರರ ಸೇವಾದಾಖಲೆ ಪರಿಶೀಲಿಸಿ
ರಜೆ ಲಭ್ಯತೆಯಾಧಾರದ ಮೇಲೆ ಮಂಜೂರಾತಿ
ನೀಡಿ ಆದೇಶ ( ನಿ. 195 ).
ಮಹಾಲೇಖಪಾಲಕರಿಂದ ರಜೆ ಲಭ್ಯತೆ
ದೃಢೀಕರಣ ಸ್ವೀಕೃತಿ ನಂತರ ಸಕ್ಷಮ
ಪ್ರಾಧಿಕಾರಿಯಿಂದ ಮಂಜೂರಾತಿ (ನಿ.192).
ಪರಿವೀಕ್ಷಣ ಅವಧಿಯ ನೌಕರರು ತಾತ್ಕಾಲಿಕ
ನೌಕರರು ರಜೆಗೆ ಅರ್ಹರು ( ನಿ.145 ).
ಅರೆಕಾಲಿಕ ಸರ್ಕಾರಿ ನೌಕರರು ಸಾಂದರ್ಭಿಕ
ರಜೆ ಹೊರತುಪಡಿಸಿ, ಇತರೇ ರಜೆಗೆ ಅರ್ಹರಲ್ಲ
( ನಿ. 147 ).
ದುರ್ನಡತೆಗಾಗಿ ಶಿಸ್ತು ಪ್ರಾಧಿಕಾರಿಯಿಂದ
ಕಠಿಣ ದಂಡನೆಗೊಳಪಡಿಸಲು ನಿರ್ಧರಿಸಿರುವ
ನೌಕರರು ರಜೆ ಮಂಜೂರಾತಿಗೆ ಅರ್ಹರಲ್ಲ
( ನಿ. 144 ).
ಷರತ್ತಿಗೊಳಪಟ್ಟು, ರಜೆಯನ್ನು ಸಾರ್ವಜನಿಕ
ರಜಾ ದಿನಗಳೊಂದಿಗೆ ಸಂಯೋಜಿಸಲು
ಅನುಮತಿಸಬಹುದು.
ವೈದ್ಯಕೀಯ ಕಾರಣದ ಮೇರೆ ರಜಾ
ಮಂಜೂರಾತಿ ಪಡೆದ ನೌಕರರು,
ಕರ್ತವ್ಯಕ್ಕೆ ಹಾಜರಾಗಲು, ವೈದ್ಯಕೀಯವಾಗಿ
ಸೇವೆ ಮುಂದುವರಿಸಲು ಅರ್ಹರೆಂದು
ವೈದ್ಯಾಧಿಕಾರಿಯಿಂದ ಪ್ರಮಾಣಪತ್ರ
ಹಾಝರ‍್ಪಡಿಸುವುದು ಅಗತ್ಯ. ( ನಿ. 160 ).
ರಜಾ ಮಂಜೂರಾತಿ ಪಡೆದು, ರಜಾ ಅವಧಿ
ಯಲ್ಲಿರುವ ನೌಕರರನ್ನು ಸಾರ್ವಜನಿಕ ಹಿತಾ
ಸಕ್ತಿಯಿಂದ ಕರ್ತವ್ಯಕ್ಕೆ ಹಾಜರಾಗುವಂತೆ
ಕರೆಪತ್ರ ನೀಡಬಹುದು. ( ನಿ. 161 ).
ಸಾಂದರ್ಭಿಕ ರಜೆ ಹೊರತು ಪಡಿಸಿ, ನೌಕರರ
ಹಕ್ಕಿನಲ್ಲಿರುವ ಯಾವುದೇ ರಜೆ ಸಂಯೋಜಿಸಿ
ಮಂಜೂರಾತಿಗೆ ಅರ್ಹರು ( ನಿ. 165 ).
ರಜೆ ಲಭ್ಯತೆ ಷರತ್ತಿಗೊಳಪಟ್ಟು, ಈಗಾಗಲೇ
ಉಪಯೋಗಿಸಿಕೊಂಡ ರಜೆಯನ್ನು ಇತರೇ
ರಜೆಗಳೆಂದು ಪರಿವರ್ತಿಸಲು ಅವಕಾಶವಿದೆ.
( ನಿ. 165 ).
ರಜೆ ವೇತನ
* ರಜೆ ಅವಧಿಯಲ್ಲಿ ನೌಕರರಿಗೆ ಆಯಾ ಮಾಹೆಯ
ಅಂತ್ಯದಲ್ಲಿ ರಜೆ ವೇತನ ಪಾವತಿ ( ನಿ. 197 ).
* ಪತ್ರಾಂಕಿತ ಅಧಿಕಾರಿಗಳು ರಜಾ ವೇತನವನ್ನು, ರಜೆ
ಪೂರ್ವಾವಧಿಯಲ್ಲಿ ವೇತನ ಪಡೆಯುತ್ತಿದ್ದ ಖಜಾನೆಯಲ್ಲಿ
ಪಡೆಯಲು ಅರ್ಹರು. ( 120 ದಿನಗಳ ರಜೆ ಮೀರಿದ
ಅವಧಿಗೆ ಮಹಾಲೇಖಪಾಲಕರಿಂದ ರಜೆ ವೇತನ
ದೃಢೀಕರಣ ಪತ್ರ ಪಡೆದು ಹಾಜರ‍್ಪಡಿಸಬೇಕು).
( ನಿ. 199 ).
ರಜಾ ಮಂಜೂರಾತಿ ವಿವೇಚನಾತ್ಮಕ ಅಧಿಕಾರ (ನಿಯಮ 143)
ಹೆಚ್ಚಿನ ಸಿಬ್ಬಂದಿ ರಜಾ ಕೋರಿಕೆ ಸಲ್ಲಿಸಿದ್ದು, ಸಾರ್ವಜನಿಕ ಹಿತಾಸಕ್ತಿಯಿರುವ ಎಲ್ಲಾ ನೌಕರರ ಮನವಿ ಪುರಸ್ಕರಿಸಲಾಗದಿದ್ದಲ್ಲಿ, ವಿವೇಚನಾತ್ಮಕ ನಿರ್ಧಾರ ಕೈಗೊಳ್ಳಲು ಪರಿಗಣಿಸುವ ಅಂಶಗಳು.
ಸಾರ್ವಜನಿಕ ಹಿತದೃಷ್ಟಿಯಿಂದ
v ಯಾವ ನೌಕರರಿಗೆ, ರಜಾ ಉಪಯೋಗಿಸಿ
ಕೊಳ್ಳಲು ಅವಕಾಶ ನೀಡಿಕೆ.
v ಅರ್ಜಿದಾರರಿಗೆ ಲಭ್ಯವಿರುವ ರಜೆ ಪ್ರಮಾಣ.
v ಅರ್ಜಿದಾರರು, ಪೂರ್ಣಗೊಳಿಸಿರುವ
ಸೇವಾವಧಿ.
v ಹಿಂದೆ ರಜಾವಧಿಯಲ್ಲಿ ಕರ್ತವ್ಯಕ್ಕೆ ಕರೆ
ನೀಡಿ, ರಜೆ ಮೊಟಕುಗೊಳಿಸಲ್ಪಟ್ಟ ನೌಕರರು.
v ಹಿಂದೆ ಸಾರ್ವಜನಿಕ ಹಿತಾಸಕ್ತಿಯಿಂದ ರಜೆ
ತಿರಸ್ಕರಿಸಿರುವ ಸಂದರ್ಭ.
--)(0*0)(--
>>>>

Saturday, 24 February 2018
ಮೂಗುತಿ ಧರಿಸುವುದರಿಂದಾಗುವ ಲಾಭಗಳು
ಮೂಗುತಿ ಧರಿಸುವುದರಿಂದಾಗುವ ಲಾಭಗಳು
೧. ‘ಮೂಗುತಿಯನ್ನು ಧರಿಸುವುದರಿಂದ ಮೂಗಿನ ಬಿಂದುವಿನ ಮೇಲೆ ಒತ್ತಡವು ನಿರ್ಮಾಣವಾಗಿ ‘ಬಿಂದುಒತ್ತಡದ (ಆಕ್ಯುಪ್ರೆಶರ್)’ ಉಪಚಾರವಾಗುವುದರಿಂದ ಅಲ್ಲಿನ ಕಪ್ಪು ಶಕ್ತಿಯು ಕಡಿಮೆಯಾಗುತ್ತದೆ.
೨. ಕೆಟ್ಟ ಶಕ್ತಿಗಳಿಂದ ಉಸಿರಾಟದ ಮಾರ್ಗದಿಂದ ಹಲ್ಲೆಯಾಗದಂತೆ ಮೂಗುತಿಯು ಮೂಗು ಮತ್ತು ಶ್ವಾಸಮಾರ್ಗವನ್ನು ರಕ್ಷಿಸುತ್ತದೆ.’
೩. ‘ಮೂಗುತಿಯಲ್ಲಿರುವ ಸಾತ್ತ್ವಿಕತೆ ಮತ್ತು ಚೈತನ್ಯದಿಂದ ಮೂಗಿನ ಸುತ್ತಲೂ ಚೈತನ್ಯದ ವಲಯವು ನಿರ್ಮಾಣವಾಗುತ್ತದೆ ಮತ್ತು ಮೂಗಿನ ಸುತ್ತಲಿನ ವಾಯುಮಂಡಲವು ಶುದ್ಧವಾಗುತ್ತದೆ. ಇದರಿಂದ ಶ್ವಾಸಮಾರ್ಗದಿಂದ ಶುದ್ಧಗಾಳಿಯು ದೇಹವನ್ನು ಪ್ರವೇಶಿಸಬಲ್ಲದು.’
*ಸ್ತ್ರೀಯರಿಗೆ ಮಾತ್ರ ಮೂಗುತಿ ಹಾಕಲು ಹೇಳಿರುವುದರ ಹಿಂದೆಯೂ ಶಾಸ್ತ್ರವಿದೆ.
ಸ್ತ್ರೀಯರ ಮನಸ್ಸು ಚಂಚಲವಾಗಿರುತ್ತದೆ. ಮೂಗುತಿಯನ್ನು ಧರಿಸುವುದರಿಂದ ಸ್ತ್ರೀಯರ ಚಂದ್ರನಾಡಿ ಕಾರ್ಯನಿರತವಾಗಿ ಮನಸ್ಸು ಸ್ಥಿರವಾಗುತ್ತದೆ. ಸ್ತ್ರೀಯರು ಯಾವುದೇ ಕಾರ್ಯವನ್ನು ಮಾಡುವಾಗ ಯೋಗ್ಯ ನಿರ್ಣಯ ತೆಗೆದುಕೊಳ್ಳಲು ಅನುಕೂಲವಾಗುತ್ತದೆ. ಇದರಿಂದಲೇ ಹಿಂದೂ ಧರ್ಮದ ಮಹಾನತೆಯು ಗಮನಕ್ಕೆ ಬರುತ್ತದೆ! ಹಿಂದೂ ಧರ್ಮವು ಪ್ರತಿಯೊಂದು ವಿಷಯದಿಂದ ಅಂದರೆ ಆಚಾರಧರ್ಮದಿಂದ ಮಾನವನಿಗೆ ಆಧ್ಯಾತ್ಮಿಕ, ಶಾರೀರಿಕ ಮತ್ತು ಮಾನಸಿಕವಾಗಿ ಯೋಗ್ಯವಾದ ಕೃತಿಯನ್ನೇ ಮಾಡಲು ಕಲಿಸುತ್ತದೆ. ಮನುಷ್ಯನಿಗೆ ಅದರ ಶಾಸ್ತ್ರ ತಿಳಿಯದಿದ್ದರೂ, ಶ್ರದ್ಧೆಯಿಂದ ಅದೇ ರೀತಿ ಪಾಲನೆ ಮಾಡಿದರೆ ಅವನ ಐಹಿಕ ಮತ್ತು ಪಾರಮಾರ್ಥಿಕ ಜೀವನವು ಆನಂದದಲ್ಲಿರುವುದು. ಇದಕ್ಕೆ ಸಂದೇಹವೇ ಇಲ್ಲ.

ಹುಲ್ಲುಕಡ್ಡಿ ಶಕ್ತಿ
ಶ್ರೀವಾಣಿ
ಹುಲ್ಲುಕಡ್ಡಿ ಶಕ್ತಿ
ಶ್ರೀ ಸಿದ್ಧೇಶ್ವರ ಸ್ವಾಮೀಜಿ
ಸ್ವಯಂಭು ಎಂದರೆ ಸತ್ಯವು ಸ್ವತಃ ಸಿದ್ಧವಾಗಿದೆ. ಅದನ್ನು ಯಾರೂ ನಿರ್ಮಿಸಿಲ್ಲ. ನಿರ್ಮಾಣವಾದುದು ನಿರ್ನಾಮವಾಗುತ್ತದೆ, ನಾಶ ಹೊಂದುತ್ತದೆ. ಗಡಿಗೆ ಒಡೆಯುತ್ತದೆ ವಿನಾ ಮಣ್ಣು ಒಡೆಯುವುದಿಲ್ಲ. ಗಡಿಗೆಯಂತಿರುವ ಸುಳ್ಳಿನ ಜಗತ್ತು ನಾಶವಾಗುತ್ತದೆ ವಿನಾ ಸತ್ಯ ಸಾಯುವುದಿಲ್ಲ! ನಾಶವಾಗುವುದಿಲ್ಲ. ಓರ್ವ ಮುದುಕಿ ಒಂದು ದೇವರ ಮೂರ್ತಿಯನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸುತ್ತಿದ್ದಳು. ಅರ್ಧ ಆಯುಷ್ಯವನ್ನು ಆ ಮೂರ್ತಿಯ ಆರಾಧನೆಯಲ್ಲಿ ಕಳೆದಿದ್ದಳು. ಒಂದು ದಿನ ಆಕೆಯ ಮೊಮ್ಮಗನು ಬಂದು ''ನಿನ್ನ ಆಯುಷ್ಯವೆಲ್ಲ ವ್ಯರ್ಥವಾಯಿತು,'' ಎಂದು ಹೇಳಿದ. ''ಏಕೆ?'' ಎಂದು ಮುದುಕಿ ಕೇಳಿದಳು. ''ದೇವರಿಲ್ಲವೆಂದು ಇಂದು ವಿದ್ವಾಂಸರು ಸಿದ್ಧ ಮಾಡಿದ್ದಾರೆ,'' ''ದೇವರೇಕೆ ಇಲ್ಲ?.'' ಎಂದಳು ಮುದುಕಿ ''ದೇವರು ಕಾಣುವುದಿಲ್ಲ ಆದ್ದರಿಂದ ಅವನು ಇಲ್ಲ!,'' ಎಂದ ಮೊಮ್ಮಗ. ಮುದುಕಿ ಹೇಳಿದಳು-''ಕಣ್ಣಿಲ್ಲದವರಿಗೆ ದೇವರು ಹೇಗೆ ಕಾಣುತ್ತಾನೆ?,'' ಮೊಮ್ಮಗ ಹೇಳಿದ- ''ವಿದ್ವಾಂಸರಿಗೆ ನೀನು ಕಣ್ಣಿಲ್ಲವೆಂದು ಹೇಗೆ ಹೇಳುತ್ತೀ?,'' ಮುದುಕಿ ಹೇಳಿದಳು-''ಅವರಿಗೆ ಹೊರಗಿನ ಕಣ್ಣಿರಬಹುದು ಆದರೆ ಒಳಗಿನ ಕಣ್ಣು ಅರಿವಿನ ಕಣ್ಣಿಲ್ಲ. ಅರಿವಿನ ಅನುಭಾವದ ಕಣ್ಣಿಗೆ ಮಾತ್ರ ದೇವನು ಕಾಣುತ್ತಾನೆ!,'' ಮುದುಕಿಯ ಈ ಮಾತನ್ನು ಕೇಳಿದಾಗ ನಿರ್ಗುಣ, ನಿರಾಕಾರ, ನಿರಂಜನನಾದ ಆ ಮಹದೇವನ ಅರಿವಿನ ಬೆಳಕು ಮೊಮ್ಮಗನ ಮನದಲ್ಲಿ ಚೆಲ್ಲವರಿದಿತ್ತು.
ಕೆಲವು ನಾಸ್ತಿಕರು ನಮ್ಮ ಪ್ರಸಿದ್ಧ ದೇವಾಲಯಗಳ ಮೂರ್ತಿಯನ್ನು ಒಡೆದು ಹಾಕಿದರು. ಭಾರತೀಯರ ದೇವರ ಕಥೆ ಮುಗಿಯಿತೆಂದು ಕುಣಿದಾಡಿದರು. ಆದರೆ ಅವರು ಒಡೆದುದು ದೇವರ ಮೂರ್ತಿಯನ್ನೇ ವಿನಾ ದೇವರನ್ನಲ್ಲ ಎಂಬ ಸರಳ ಸತ್ಯ ಅವರಿಗೆ ತಿಳಿಯಲಾರದುದೇ ಪರಮಾಶ್ಚರ್ಯ. ಹಲಗೆಯ ಮೇಲೆ ಬರೆದ ಅಕ್ಷ ರಗಳನ್ನು ಅಳಿಸಿದರೆ ಮೂಲ ಅಕ್ಷ ರಗಳೆಂದಾದರೂ ನಾಶವಾಗುತ್ತವೆಯೇ? ಪರಮಾತ್ಮನನ್ನು ನಾಶಮಾಡುವ ಶಕ್ತಿ ಈ ಜಗತ್ತಿನಲ್ಲಿ ಇನ್ನೊಂದಿಲ್ಲ.
ಒಂದುದಿನ ಅಗ್ನಿ ದೇವತೆ, ಜಲದೇವತೆ, ವಾಯುದೇವತೆ ಮೂವರಲ್ಲಿ ನಾ ಶ್ರೇಷ್ಠ, ನೀ ಶ್ರೇಷ್ಠ ಎಂಬ ವಾದ ಎದ್ದಿತು. ಅಲ್ಲೆ ಇದ್ದ ಒಂದು ಹುಲ್ಲು ಕಡ್ಡಿ ಹೇಳಿತು- ''ನಾನು ಹೇಳುತ್ತೇನೆ ನಿಮ್ಮಲ್ಲಿ ಯಾರು ಶ್ರೇಷ್ಠರೆಂದು. ಆಗಿಯೇ ಹೋಗಲಿ, ನಿಮ್ಮ ಶಕ್ತಿಯ ಪ್ರಯೋಗ ನನ್ನ ಮೇಲೆ!,'' ವಾಯು ದೇವತೆ ಬಿರುಗಾಳಿ ಬೀಸಿದರೆ ಹೆಮ್ಮರಗಳೇ ಉರುಳಿದವು. ಹುಲ್ಲುಕಡ್ಡಿ ಸ್ವಲ್ಪ ಹೊತ್ತು ಬಾಗಿ ಮತ್ತೆ ಮೊದಲಿನಂತೆ ನಿಂತಿತು. ಜಲದೇವತೆ ಜಲಪ್ರಳಯವನ್ನು ಮಾಡಿದ. ಆಗಲೂ ಹುಲ್ಲು ಸ್ವಲ್ಪ ಹೊತ್ತು ಬಾಗಿ ಮತ್ತೆ ಹಾಗೇ ನಿಂತಿತು. ಕೊನೆಗೆ ಅಗ್ನಿ ದೇವತೆ ಬೆಂಕಿಯ ಮಳೆಗರೆದರೆ ಆ ಕರಕಿ ಹುಲ್ಲಿನ ಮೇಲಿನ ಎರಡೆಲೆ ಕರಕಾಗಿದ್ದವು. ಮತ್ತೆ ಸ್ವಲ್ಪ ಸಮಯದ ನಂತರ ನೆಲದೊಳಗಿಂದ ಮೊಳಕೆಯೊಡೆದು ಮೇಲೆ ಬಂದಿತ್ತು ಅಷ್ಟೊತ್ತಿಗೆ ತ್ರಿಮೂರ್ತಿಗಳು ಬೆವತು ಸೋತು ಹೋಗಿದ್ದರು! ಆಗ ಆ ಹುಲ್ಲು ಕಡ್ಡಿ ಹೇಳಿತು-''ತ್ರಿಮೂರ್ತಿಗಳೇ ನಿಮ್ಮನ್ನು ಸೋಲಿಸಿದವ ನಾನಲ್ಲ ನನ್ನೊಳಗಿರುವ ಆ ಪರಮಾತ್ಮ ಶಕ್ತಿ. ಅದೇ ಶಕ್ತಿ ನಿಮ್ಮಲ್ಲಿಯೂ ಇದೆ. ಆದರೆ ನೀವು ಅಹಂಕರಿಸಿದ್ದರಿಂದ ನಿಮಗೆ ಸೋಲಾಗಿದೆ. ನಿರಹಂಕಾರಿಗಳು ವಿನಯಶೀಲರೂ ಆಗಿ ನೀವು ನಡೆದುಕೊಂಡರೆ ಆ ಮಹಾದೇವನ ಕರುಣೆಯಿಂದ ನೀವು ಮತ್ತೆ ವಿಜಯಶಾಲಿಗಳಾಗಿ ಮೆರೆಯುತ್ತೀರಿ!.'' ಆ ಹುಲ್ಲುಕಡ್ಡಿಯ ಉಪದೇಶದಿಂದ ತ್ರಿಮೂರ್ತಿಗಳ ಅಹಂಕಾರ ಅಳಿದಿತ್ತು. ಅರಿವಿನ ಕಣ್ಣು ತೆರೆದಿತ್ತು. ಪ್ರಪಂಚಕ್ಕೆಲ್ಲ ಸರ್ವಶಕ್ತನು ಸ್ವಯಂಸಿದ್ಧನು ಆಗಿರುವ ಆ ಪರಮಸತ್ಯ ಪರಮಾತ್ಮನೇ ಸ್ವಯಂಭು.
ಆಧಾರ : ಈಶ ಪ್ರಸಾದ
🔸🔸🔸🔸🔸🔸🔸🔸🔸🔸🔸
ಮನಸ್ಸಿನ ಆಂತರ್ಯದ ಆಕಾಶ
ಮನಸ್ಸಿನ ಆಂತರ್ಯದ ಆಕಾಶ
ಶ್ರೀ ಶ್ರೀ ರವಿಶಂಕರ್
ಲೀಟರ್‌ಗಳನ್ನು ಹೇಗೆ ಲೆಕ್ಕ ಮಾಡುತ್ತೀರಿ? ಪಾತ್ರೆಯ ಸಾಮರ್ಥ್ಯ ಒಂದು ಲೀಟರ್, ಎರಡು ಲೀಟರ್ ಅಥವಾ ಅರ್ಧ ಲೀಟರ್ ಎಂದು ಲೆಕ್ಕ ಮಾಡುತ್ತೇವೆ. ಕಾರಣ ಎಂದರೆ ಎಲ್ಲಾ ಕಾರಣಗಳ ಕಾರಣ. ಅದು ಯಾವುದರ ಪ್ರಭಾವವೂ ಅಲ್ಲ. ಪ್ರಭಾವ ಎಂದರೆ ಅದರ ಹಿಂದೆ ಏನೋ ಒಂದು ಕಾರಣ ಇರುತ್ತದೆ. ಕಾರಣ ಎಂದರೆ ಅಂತಿಮವಾದ ಕಾರಣ. ಅದರ ಹಿಂದೆ ಬೇರೆ ಯಾವ ಕಾರಣವೂ ಇರುವುದಿಲ್ಲ.
ವಿವಿಧ ಜಾತಕಗಳನ್ನು ನೋಡಿ ಜನರು ವಿವಿಧ ರೀತಿಯ ಚಿತ್ತಾಕಾಶವನ್ನು ತಿಳಿಯುತ್ತಾರೆ. ಕುಂಡಲಿಯಿಂದ ಕೆಲವು ಗುಣಗಳನ್ನು ಕಂಡುಹಿಡಿಯಬಹುದು. ಇದು ಚಿತ್ತಾಕಾಶವನ್ನು ಸೂಚಿಸುತ್ತದೆ. ಒಂದು ವ್ಯಕ್ತಿಯಲ್ಲಿರುವ ಆಲೋಚನೆಗಳ, ಭಾವನೆಗಳ ರೀತಿ. ಕಾಲವೂ ಮುಖ್ಯ. ಆದರೆ ಜಾತಕದ ಭವಿಷ್ಯ ಧೂಮಕೇತುವಿನ ಭವಿಷ್ಯದಂತೆ. ಅವು ಸದಾ ಸರಿಯಾಗಿರುತ್ತವೆಂದಲ್ಲ. ಧೂಮಕೇತುವಿನ ಭವಿಷ್ಯ ಸದಾಕಾಲ ಕೆಲಸ ಮಾಡುವುದಿಲ್ಲ. ಗುಡುಗು ಮಿಂಚು ಇರುತ್ತದೆನ್ನುತ್ತಾರೆ, ಆದರೆ ಸೂರ್ಯನು ಹೊಳೆಯುತ್ತಾನೆ! ಆದ್ದರಿಂದ ಜ್ಯೋತಿಷ್ಯವು ಒಂದು ಸಾಧ್ಯತೆಯಷ್ಟೆ.
ಭಾವನೆಗಳೂ ಚಂದ್ರಮನ ಮೇಲೆ ಅವಲಂಬಿತವಾಗಿವೆ. ಚಂದ್ರಮನು ಒಂದು ಸ್ಥಳದಲ್ಲಿ ಎರಡು ಕಾಲ ದಿವಸಗಳಿಗಿಂತಲೂ ಹೆಚ್ಚಾಗಿ ಇರುವುದಿಲ್ಲ. ಆ ಸ್ಥಳದಿಂದ ಚಂದ್ರಮನು ಜರುಗಿದಾಗ ನಿಮ್ಮ ಭಾವನೆಯೂ ಬದಲಿಸುತ್ತದೆ. ಚಂದ್ರಮ ಮತ್ತು ಶನಿಯು ಒಂದಾದಾಗ ಜನರು ಖಿನ್ನರಾಗುತ್ತಾರೆ. ಈ ಭಾವನೆಗಳು ಬರುತ್ತವೆ, ಹೋಗುತ್ತವೆ. ಯಾವುದೂ ಶಾಶ್ವತವಲ್ಲ. ಯಾವ ಗ್ರಹವೂ ಸ್ಥಿರವಾಗಿ ಒಂದೇ ಕಡೆ ನಿಲ್ಲುವುದಿಲ್ಲ. ಎಲ್ಲವೂ ಚಲಿಸುತ್ತವೆ. ಆದರೆ ಈ ಯಾವುದೇ ಭಾವನೆಗಳೊಡನೆ ನೀವು ಗುರುತಿಸಿಕೊಂಡಾಗ ನೀವು ಸಿಲುಕಿಕೊಳ್ಳುತ್ತೀರಿ. ಆಗ ನೀವು ಮುಂದಕ್ಕೆ ಹೋಗುವುದಿಲ್ಲ. ಆಗ ಅದು ನಿಮ್ಮ ದೇಹದೊಳಗೆ ಹೊಕ್ಕುತ್ತದೆ, ಖಾಯಿಲೆ ಬೀಳುತ್ತೀರಿ. ಎಲ್ಲವೂ ಅದ್ಭುತವಲ್ಲವೆ? ಆದ್ದರಿಂದ ದಾರಿಯೇನು? ಇಲ್ಲಿಂದ ಮುಂದಕ್ಕೆ ಹೇಗೆ ಹೋಗುವುದು?
ಮೋಡವಿರುವ ದಿನದಂದು ವಿಮಾನವು ಹೇಗೆ ಹಾರುತ್ತದೆ? ಮೋಡಗಳ ಮೇಲಕ್ಕೆ ಹಾರುತ್ತದೆ ಮತ್ತು ಸೂರ್ಯನು ಹೊಳೆಯುತ್ತಾನೆ. ಆಧ್ಯಾತ್ಮಿಕ ಅಭ್ಯಾಸಗಳು ಇರುವುದೇ ಅದಕ್ಕಾಗಿ. ಆಧ್ಯಾತ್ಮಿಕ ಅಭ್ಯಾಸಗಳು ನಮ್ಮನ್ನು ಚಿತ್ತಾಕಾಶದಿಂದ ಚಿದಾಕಾಶಕ್ಕೆ ಕೊಂಡೊಯ್ಯುತ್ತದೆ. ಎಲ್ಲಾ ಭಾವನೆಗಳನ್ನೂ ದಾಟಿ ಹೊರಬರುತ್ತೇವೆ.
ಬಹಳ ಹಿಂದೆಯೆ ಋುಷಿಗಳು ಒಂಭತ್ತು ಗ್ರಹಗಳು ಹನ್ನೆರಡು ರಾಶಿಗಳಲ್ಲಿ ಚಲಿಸಿ 108 ಬದಲಾವಣೆಗಳು ಆಗುತ್ತವೆ. ಇದರಿಂದ ಒಳ್ಳೆಯ ಪ್ರಭಾವಗಳು ಹೆಚ್ಚುತ್ತದೆ ಮತ್ತು ಕೆಟ್ಟ ಪ್ರಭಾವವು ಕುಗ್ಗುತ್ತಾ ಹೋಗುತ್ತದೆ. ಓಂ ನಮಃ ಶಿವಾಯ 108 ಸಲ ಉಚ್ಚರಿಸಿದರೆ ನಿಮ್ಮ ಆತ್ಮವನ್ನು ಉತ್ಥಾಪಿಸಿ, ಅದರಿಂದ ಹೊರಗೆ ಕರೆದೊಯ್ದು ಚಿದಾಕಾಶದೊಡನೆ ಸಂಬಂಧ ಕಲ್ಪಿಸುತ್ತದೆ.
ತಮಿಳುನಾಡಿನಲ್ಲಿ ''ಚಿತ್ತಂಬಲಂ ಶಿವ'' ಎನ್ನುತ್ತಾರೆ. ಇದು ಚಿದಾಕಾಶವನ್ನು ಸೂಚಿಸುತ್ತದೆ. ''ನಾನು ಶಿವ ಎಂದೊಡನೆಯೇ ಚಿದಾಕಾಶದೊಳಗೆ ಹೊಕ್ಕುತ್ತೇನೆ, ಚೈತನ್ಯದ ಆಕಾಶದೊಳಗೆ ಹೊಕ್ಕುತ್ತೇನೆ'' ಎಂಬುದು ಇದರ ಅರ್ಥ. ಶಿವ ಚಿತ್ತಂಬಲಂ ಎಂದರೆ ಗುರು ತತ್ತ್ವ ಅಥವಾ ಶಿವತತ್ತ್ವ ಅಥವಾ ನಮ್ಮದೇ ಆತ್ಮ. ಎಲ್ಲವೂ ಅದೇ ಮತ್ತು ಅದೇ ಧ್ಯಾನ. ಉನ್ನತ ಸ್ಥಿತಿಗೇರಿದಾಗ ಆಗುವ ಅನುಭವವಿದು. ಎಲ್ಲಾ ಆಲೋಚನೆಗಳೂ ಹೊರಟು ಹೋಗುತ್ತವೆ. ಭಾವನೆಗಳು ನೆಲೆನಿಲ್ಲುತ್ತವೆ ಅತಿ ಪ್ರಶಾಂತವಾದ, ಅತಿ ಮಂಗಳವಾದ, ಅತ್ಯಂತ ಆಂತರ್ಯದ ಆಕಾಶವನ್ನು ಅನುಭವಿಸುತ್ತೇವೆ. ಸುದರ್ಶನ ಕ್ರಿಯೆಯಿಂದ ಆಗುವುದೇ ಇದು. ನಿಮ್ಮನ್ನು ಸುತ್ತಲೂ ಕೊಂಡೊಯ್ದು ಕೊಂಡೊಯ್ದು ನಂತರ ನಿಮ್ಮನ್ನು ಈ ವಲಯದಿಂದ ಹೊರಕ್ಕೆ ಕೊಂಡೊಯ್ಯುತ್ತದೆ. ಆಗ ಚಿದಾಕಾಶದೊಳಗೆ ಹೊಕ್ಕುತ್ತೀರಿ. ಶಿವ ತಿರು ಚಿತ್ತಂಬಲಂ!

ಮಲಗುವಾಗ ಉತ್ತರಕ್ಕೆ ಏಕೆ ತಲೆ ಹಾಕುವುದಿಲ್ಲ???

ಈ ಸಂಪೂರ್ಣ ಸೂರ್ಯ ಮಂಡಲವೇ ಒಂದು ಅಗಾಧವಾದ ವಿದ್ಯುತ್ ಕಾಂತೀಯ ಪ್ರಭಾವಕ್ಕೆ ಒಳಗಾಗಿದೆ. ನಿಮಗೆ ತಿಳಿದಿರುವಂತೆ ಈ ಭೂಮಿಯೆ ಒಂದು ಭೃುಹತ್ ಅಯಸ್ಕಾಂತವಾಗಿದೆ, ನಾವು ಉತ್ತರಕ್ಕೆ ತಲೆ ಹಾಕಿ ಮಲಗಿದಾಗ ನಮ್ಮ ದೇಹದ ಕಾಂತೀಯ ದಿಕ್ಕು ಹಾಗೂ ಭೂಮಿಯ ಕಾಂತೀಯ ದಿಕ್ಕು, ಎರಡರ ನಡುವೆಯು ಅಸಮಾನವಾದ ಸಂಬಂಧ ಏರ್ಪಟ್ಟು ದೇಹದ ಮೇಲೆ ಅನೇಕ ದುಷ್ಪರಿಣಾಮಗಳನ್ನು ಬೀರುತ್ತದೆ.
ಅವುಗಳಲ್ಲಿ ಮುಖ್ಯವಾಗಿ ಹೃದಯದ ಕೆಲಸಕ್ಕೆ ತೊಂದರೆಗಳನ್ನು ಉಂಟುಮಾಡುತ್ತದೆ, ಅದಲ್ಲದೆ ದೇಹದಲ್ಲಿರುವ ಕಬ್ಬಿಣದ ಅಂಶ ಕೂಡ ಭೂಮಿಯ ವಿದ್ಯುತ್ ಕಾಂತೀಯತೆಗೆ ಸ್ಪಂದಿಸುವದರಿಂದ ಈ ದಿಕ್ಕಿನಲ್ಲಿ ಮಲಗುವುದರಿಂದ ತಲೆ ಭಾಗದ ಕಡೆ ರಕ್ತದ ಕಬ್ಬಿಣದ ಅಂಶದ ಚಲನೆ ಕೇಂದ್ರೀಕೃತ ಆಗುವುದರಿಂದ ಅಲ್ಜೈಮರ್, ಪಾರ್ಕಿನ್ಸನ್ ಮುಂತಾದ ಕಾಯಿಲೆಗಳಿಗೆ ಹಾಗೂ ರಕ್ತದೋತ್ತಡ ಕೂಡ ಜಾಸ್ತಿಯಾಗುತ್ತದೆ, ಹಾಗಾಗಿ ಇಂತಹ ಆಚರಣೆ ನಮ್ಮ ಸಂಸ್ಕೃತಿಯ ಮೌಢ್ಯವಲ್ಲ, ವೈಜ್ಞಾನಿಕ ಸಂಶೋಧನೆ.

ಮಂಗಳಸೂತ್ರದ ಮಹತ್ವವೇನು?
ಮಂಗಳಸೂತ್ರದ ಮಹತ್ವವೇನು?
*ಮಂಗಳಸೂತ್ರ*
ಎಂಬುದು ಒಂದು ಆಭರಣ ಎಂದು ಪರಿಗಣಿಸಿದರೆ ಅದು ತಪ್ಪಾಗುತ್ತದೆ. ಮಂಗಳಸೂತ್ರವನ್ನು ತೊಡುವುದರಿಂದ ಆಕೆಯ ಸೌಂದರ್ಯ ಹೆಚ್ಚುವುದಲ್ಲದೇ ಆಕೆಗೆ ಅದು ಸೌಭಾಗ್ಯದ ಸಂಕೇತ ಕೂಡ.
ಶ್ರೀಆದಿಶಂಕರರು ತಮ್ಮ ಸೌಂದರ್ಯಲಹರಿಯಲ್ಲಿ ಅದರ ಪ್ರಾಮುಖ್ಯತೆಗೆ ಒತ್ತುಕೊಟ್ಟಿದ್ದಾರೆ.
*ಹಿಂದೂ ಸಂಸ್ಕೃತಿಯಲ್ಲಿ ಮಂಗಳಸೂತ್ರಕ್ಕೆ ಬಹಳ ಪ್ರಾಮುಖ್ಯತೆ ಇದೆ.*
ಅದನ್ನು ತೊಡುವುದು ಗಂಡ-ಹೆಂಡತಿಯ ಸಂಬಂಧವನ್ನು ವೈಭವೀಕರಿಸಲಾಗಿದೆ. ಅದು ಗಂಡನ ಆಯಸ್ಸು ಹೆಚ್ಚಲಿ ಎಂಬ ಆಶಯದ ಸಂಕೇತ. ಮದುವೆಯಲ್ಲಿ ವರ ಅದನ್ನು ಕನ್ಯೆಯ ಕೊರಳಿಗೆ ಕಟ್ಟುತ್ತಾನೆ. ಹಾಗೆ ಕಟ್ಟುವಾಗ ಹೀಗೆಂದು ಪ್ರಮಾಣ ಮಾಡುತ್ತಾನೆ “ನಾನು ಈ ಮಗಳಸೂತ್ರವನ್ನು ಕಟ್ಟುತ್ತಿರುವುದರ ಮೂಲ ಉದ್ಧೇಶ ನೀನು ಧೀರ್ಘಕಾಲ ಸುಮಂಗಲಿಯಾಗಿ ಬಾಳು.”
ಮದುವೆಯಾದ ಮಹಿಳೆಯರು ಮಂಗಳಸೂತ್ರವನ್ನು ತಮ್ಮ ಜೀವನಪೂರ್ತಿ ತೊಡುತ್ತಾರೆ.
ಹೀಗೆ ತೊಡುವುದರ ಹಿಂದಿನ ಉದ್ಧೇಶ ತಮ್ಮ ಪತಿ ಮತ್ತು ಕುಟುಂಬದ ಸದಸ್ಯರು ಚೆನ್ನಾಗಿ ಬಾಳಲಿ ಮತ್ತು ದುಷ್ಟ ಜನರ ಕೆಟ್ಟ ದೃಷ್ಟಿ ಅವರ ಮೇಲೆ ಬೀಳದಿರಲಿ ಎಂದು.
ಮಂಗಳಸೂತ್ರದಲ್ಲಿ ಮೂರು ಗಂಟುಗಳಿರುತ್ತವೆ. ಆ ಮೂರು ಗಂಟುಗಳು ಹೆಣ್ಣಿನ ಮೂರು ಸ್ಥಿತಿಗಳನ್ನು ಸೂಚಿಸುತ್ತವೆ. ಅವುಗಳ ಅರ್ಥ ಹೀಗಿದೆ.—-
೧) ಮೊದಲ ಗಂಟು ಅವಳು ತನ್ನ ಗಂಡನಿಗೆ ವಿಧೇಯಳಾಗಿರುವುದರ ಸಂಕೇತ,
೨) ಎರಡನೆಯ ಗಂಟು ಕುಟುಂಬದ ಸದಸ್ಯರಿಗೆ ಸೇರಿದವಳಾಗಿರುವುದರ ಸಂಕೇತ,ಇನ್ನು
೩) ಮೂರನೆಯ ಗಂಟು ತಾನು ದೇವರಿಗೆ ಅರ್ಪಿತಳು ಎಂಬುದರ ಸಂಕೇತ.
ಅರಿಷಿನಕುಂಕುಮ ಹಚ್ಚಿಕೊಳ್ಳುವಾಗ ಮೊದಲು ಅದಕ್ಕೆ ಹಚ್ಚಿ ನಂತರ ಹಣೆಗೆ ಇಟ್ಟುಕೊಳ್ಳುವುದರಿಂದ ಮಹಿಳೆ ಅದರ ಪಾವಿತ್ರತೆಯನ್ನು ಹೆಚ್ಚು ಎಂದು ತೋರಿಸುವುದಲ್ಲದೇ ತಾನೂ ಮುತ್ತೈದೆಯಾಗಿ ಸಮಾಜದಲ್ಲಿ ಗೌರವಾನ್ವಿತಳು ಎಂಬುದನ್ನು ಸೂಚಿಸುತ್ತದೆ.
ಕೆಲವ ಮಹಿಳೆಯರು ರಾತ್ರಿ ಮಲಗುವಾಗ ಚಿನ್ನದ ಮಂಗಳಸೂತ್ರವನ್ನು ಗೂಟಕ್ಕೆ ಹಾಕಿ ಮಲಗುವುದುಂಟು. ಅದು ಧಾರ್ಮಿಕವಾಗಿ ತಪ್ಪು.
ಆದರೆಅವರ ಸಮಜಾಯಿಷಿ ಏನೆಂದರೆ ಮಲಗಿದಾಗ ಹೊರಳಾಡುವುದರಿಂದ ಚಿನ್ನದ ಸೂತ್ರ ಕೆಡಬಹುದು ಎಂಬುದಾಗಿದೆ.
ಇದು ತಪ್ಪಾದರೂ ಅವರವರ ವಿವೇಚನೆಗೆ ಬಿಟ್ಟಿದ್ದು !!
ಪದಗಳಿಗೆ ಕಟ್ಟುಬಿದ್ದಾಗ
ಪದಗಳಿಗೆ ಕಟ್ಟುಬಿದ್ದಾಗ
ಜಿಡ್ಡು ಕೃಷ್ಣಮೂರ್ತಿ
ನಾವು ಮಾತುಗಳನ್ನು ಕಲಿತಿದ್ದೇವೆ; ಆದರೆ ಪದಗಳಿಗೆ ದಾಸರಾಗಿದ್ದೇವೆ. ನಾವು ಪದಗಳ ಆಚೆಗೆ ಸರಿಯಲು ಉತ್ಸುಕರಾಗಿದ್ದೇವೆ. ಪದಗಳನ್ನು ಬುಡಮೇಲು ಮಾಡಿ, ಚಿಂದಿ ಚಿಂದಿ ಮಾಡಿ, ಪದಗಳಿಂದ ಬಿಡುಗಡೆ ಹೊಂದುವುದಿದೆಯಲ್ಲ ಅದು ಅಸಾಧಾರಣ ಪರಿಭಾವನೆ ಮತ್ತು ಶಕ್ತಿಯನ್ನು ತುಂಬುತ್ತದೆ.
ಇದು ಸುಲಭವಾಗಿ ಕಳಚಿಕೊಳ್ಳುವ ಸಂಗತಿಯಲ್ಲ; ಏಕೆಂದರೆ ಪದ- ಸಂಕೇತ- ವಿಚಾರಕ್ಕೆ ಮನಸ್ಸಿನ ಮೇಲೆ ಅಪಾರ ಹಿಡಿತವಿದೆ. ನಾವು ಮನಸ್ಸಿನಲ್ಲೊಂದು ಪರಿವರ್ತನೆ ಉಂಟುಮಾಡುವ ಬಗ್ಗೆ ಮಾತನಾಡುತ್ತಿದ್ದೇವೆ. ಹಾಗೆ ಮಾಡಲು ಶಬ್ದ ಸ್ಥಗಿತಗೊಳ್ಳಬೇಕು. ಸಮಾಪ್ತಿಯಾಗಬೇಕು. ಶಬ್ದವನ್ನು ತೆಗೆದುಬಿಟ್ಟರೆ, ಉಳಿದಿದ್ದೇನು? ಪದವು ಗತವನ್ನು ಪ್ರತಿನಿಧಿಸುತ್ತದೆ, ಅಲ್ಲವೆ? ಅಸಂಖ್ಯ ಚಿತ್ರಗಳು, ಬಿಂಬಗಳು, ಅನುಭವಗಳ ಪದರಗಳು ಇವೆಲ್ಲ ಶಬ್ದ, ವಿಚಾರ, ಸ್ಮ ೃತಿಯನ್ನು ಆಧರಿಸಿವೆ. ದೇವರು ಎಂಬ ಪದವನ್ನು ತೆಗೆದುಕೊಳ್ಳಿ. ದೇವರು ಎಂಬ ಪದ ದೇವರಲ್ಲ; ಶಬ್ದ, ಸಂಕೇತ ಅದಲ್ಲದಿರುವಾಗ, ನಂಬಿಕೆ, ವಿಚಾರ ಇಲ್ಲದಿರುವಾಗ ವ್ಯಕ್ತಿಗೆ ದೇವರು ಎಂಬ ಆ ಅಗಾಧತೆ, ಅಪ್ರಮೇಯ ಗುಣ ಅಥವಾ ಅದು ಏನೇ ಆಗಲಿ ಅದರ ಅರಿವು ಮೂಡುತ್ತವೆ.
ನೋಡಿ, 'ಯಾತನಾಮಯ' ಎಂಬ ಶಬ್ದವನ್ನು ನಾವು ಉಪಯೋಗಿಸುತ್ತೇವೆ. ಆದರೆ ಆ ಶಬ್ದವೇ ಸಮಸ್ಯೆಯನ್ನು ಪರಿಶೀಲಿಸದಂತೆ ನಿರ್ಬಂಧ ಒಡ್ಡುತ್ತದೆ. ಸ್ವಿಸ್ ಎಂಬ ಪದ ಕೇಳಿದೊಡನೆಯೆ ಸ್ವಿಸ್ ವ್ಯಕ್ತಿ ಪುಳಕಗೊಳ್ಳುತ್ತಾನೆ. ಅಂತೆಯೇ ಕ್ರಿಸ್ತ ಎಂಬ ಪದ ಕೇಳಿದ ಕೂಡಲೆ ಕ್ರಿಶ್ಚಿಯನ್ ರೋಮಾಂಚಿತನಾಗುತ್ತಾನೆ. ಇಂಗ್ಲೆಂಡ್ ಎಂಬ ಪದ ಕೇಳಿದಾಗ ಇಂಗ್ಲಿಷನಿಗೆ ಖುಷಿಯಾಗುತ್ತದೆ. ನಾವು ಶಬ್ದಗಳಿಗೆ, ಸಂಕೇತಗಳಿಗೆ ಮತ್ತು ವಿಚಾರಗಳಿಗೆ ಗುಲಾಮರು.
ಯಾವುದೇ ಅನುಭವವನ್ನು, ಮನಸ್ಸಿನ ಯಾವುದೇ ಸ್ಥಿತಿಯನ್ನು ಏನಿದೆಯೋ ವಸ್ತು ಸ್ಥಿತಿಯನ್ನು, ಯಥಾರ್ಥವನ್ನು ಗ್ರಹಿಸಲು ಪದಗಳಿಗೆ ದಾಸರಾಗಬಾರದು. ನಾಮಕರಣ, ಶಬ್ದ ಹಲಬಗೆಯ ನೆನಪುಗಳನ್ನು ಬಡಿದೆಬ್ಬಿಸುತ್ತದೆ. ಈ ನೆನಪುಗಳು ವಸ್ತುಸ್ಥಿತಿ, ನಿಯಂತ್ರಣ, ರೂಪವನ್ನು ಆಕ್ರಮಿಸಿಕೊಂಡು ವಸ್ತುಸ್ಥಿತಿಗೆ ಏನಿದೆಯೋ ಅದಕ್ಕೆ ಮಾರ್ಗದರ್ಶನ ಮಾಡುತ್ತವೆ.
ಪ್ರತಿಯೊಂದು ಶಬ್ದ, ಯೋಚನೆ ಮನಸ್ಸನ್ನು ರೂಪಿಸುತ್ತದೆ. ಯೋಚನೆಯನ್ನು ಅರಿಯದೆ ಮನಸ್ಸು ಶಬ್ದಗಳಿಗೆ ದಾಸನಾಗುತ್ತದೆ. ಹೀಗಾದಾಗ ದುಃಖ ಹೊಮ್ಮುತ್ತದೆ.
ಧ್ಯಾನ ಅರಳಬೇಕಾದರೆ ಎಲ್ಲ ಬಗೆಯ ಬಿಂಬ, ಶಬ್ದ, ಸಂಕೇತ ಕೊನೆಗೊಳ್ಳಬೇಕು. ಆದರೆ ಶಬ್ದದ ಅಭ್ಯಾಸ, ಶಬ್ದ ಭಾವಕೋಶ, ಹುದುಗಿರುವ ಅರ್ಥಗಳು ಶಬ್ದದಿಂದ ಬಿಡುಗಡೆ ಹೊಂದುವುದನ್ನು ತಡೆಯುತ್ತವೆ. ಈ ಬಿಡುಗಡೆಯಿಲ್ಲದಿದ್ದರೆ ನೀವು ಶಬ್ದಗಳಿಗೆ, ತೀರ್ಮಾನಗಳಿಗೆ ವಿಚಾರಗಳಿಗೆ ದಾಸರಾಗುತ್ತೀರಿ. ಶಬ್ದವು ಮಧ್ಯಪ್ರವೇಶಿಸದೆ ನೀವು ಆಲಿಸಲು ಸಾಧ್ಯವೆ? ನಾನು ನಿಮ್ಮನ್ನು ಪ್ರಿತಿಸುತ್ತೇನೆ ಎಂದು ನೀವು ನನಗೆ ಹೇಳುತ್ತಿರಿ. ಆಗ ಏನಾಗುತ್ತದೆ? ಶಬ್ದಗಳು ಯಾವ ಅರ್ಥವನ್ನೂ ಹೊರಹೊಮ್ಮಿಸುವುದಿಲ್ಲ. ಸಂಬಂಧದ ಭಾವವನ್ನು ಯೋಚನೆಯೇ ಶಬ್ದವಾಗಿ ಮಧ್ಯಪ್ರವೇಶಿಸುತ್ತದೆ. ಮುಕ್ತವಾಗಿ ಆಲಿಸುತ್ತದೆ ಮತ್ತು ನಾನು ನಿನ್ನನ್ನು ಪ್ರಿತಿಸುತ್ತೇನೆ ಎಂದಾಗ ಯಾವುದೇ ಪೂರ್ವಾಗ್ರಹ ಹೊಂದಿರುವುದಿಲ್ಲ ಎಂಬ ಎಚ್ಚರವನ್ನೂ ಮನಸ್ಸು ಹೊಂದಿರುತ್ತದೆ.
ಪದಗಳು ಸಂವಹನ ಸಾಧನಗಳು. ಆದರೆ ಕೆಲವು ನಿರ್ದಿಷ್ಟ ಪದಗಳು ನಮ್ಮಲ್ಲಿ ನರ ಸಂಬಂಧಿ ಅಥವಾ ಮಾನಸಿಕ ಸ್ಪಂದನವನ್ನುಂಟು ಮಾಡಿದಾಗ ಸಂವಹನ ನಡೆಸುವುದು ಕಷ್ಟವಾಗುತ್ತದೆ. ಅದಕ್ಕಾಗಿಯೇ ಪದಗಳಿಂದ ಆಚೆಗೆ ಜಿಗಿಯಬೇಕು ಎಂದು ನಾನು ಹೇಳುವುದು.
🔹🔹🔹🔹🔹🔹🔹🔹🔹🔹🔹

ನಿಜ ಮರ್ಮ
🌺
*ನಿಜ ಮರ್ಮ
ನಾವೆಲ್ಲರೂ ಒಂದು ರೀತಿಯಲ್ಲಿ ಮಣ್ಣಿನ ಗೊಂಬೆಗಳೇ. ಮಾನವನ ಶರೀರ ಪಂಚಮಹಾಭೂತಗಳಿಂದ ನಿರ್ಮಿತವಾದದ್ದು ಎಂಬುದಾಗಿ ನಮ್ಮ ಶಾಸ್ತ್ರ ಹೇಳುತ್ತದೆ. ಈ ಮಣ್ಣಿನಲ್ಲೆ ಹುಟ್ಟಿ, ಈ ಮಣ್ಣಿನಲ್ಲೆ ಹೊರಳಾಡಿ, ಈ ಮಣ್ಣಿನಲ್ಲೆ ಓಡಾಡಿ ಒಂದು ದಿನ ಈ ಮಣ್ಣಿನಲ್ಲೆ ಮಣ್ಣಾಗುವ ಮನುಷ್ಯ ಮಣ್ಣಿನ ಗೊಂಬೆಯಲ್ಲವೆ? ಮಣ್ಣಿನಿಂದಲೇ ಜನನ, ಮಣ್ಣಿನಲ್ಲೆ ಮರಣ. ಮಾತ್ರವಲ್ಲ, ಮನುಷ್ಯನ ಬದುಕಿಗೂ ಆಧಾರ ಈ ಮಣ್ಣೇ. ಈ ಮಣ್ಣಿಲ್ಲದಿದ್ದರೆ ಮನುಷ್ಯನ ಜೀವನಕ್ಕೆ ಆಧಾರವಾದ ಆಹಾರ ಉತ್ಪಾದನೆ ಸಾಧ್ಯವೆ?
ಒಬ್ಬ ಬೆಳೆಗಾರ ಎದ್ದು ಒಂದು ಅಂಗಡಿಗೆ ಹೋದ. ಅಂಗಡಿ ಮಾಲೀಕ ಅಂಗಡಿಯ ಬಾಗಿಲು ಆಗತಾನೆ ತೆರೆದು ದೇವರಿಗೆ ಕೈಮುಗಿದು ಕೂತಿದ್ದ ಮಾತ್ರ. ಬಂದವ ಅಂಗಡಿಯವನ ಹತ್ತಿರ ಒಂದು ರೂಪಾಯಿ ಕೊಟ್ಟು ಅಂಗಡಿಯಲ್ಲಿದ್ದ ಎಲ್ಲ ಸಾಮಾನುಗಳನ್ನು ಕೊಡು ಎಂದು ಕೇಳಿದ. ಆದರೆ ಆ ಅಂಗಡಿಯಲ್ಲಿ ಮಾರಾಟಕ್ಕಿದ್ದ ಯಾವ ವಸ್ತುವೂ ಒಂದು ರೂಪಾಯಿಗೆ ಸಿಗುವುದಲ್ಲ. ಅಂಗಡಿ ಮಾಲೀಕ ತುಂಬಾ ಯೋಚನೆಮಾಡಿ ಒಂದು ಮುಷ್ಟಿ ಮಣ್ಣನ್ನು ಆ ಗ್ರಾಹಕನಿಗೆ ಕೊಟ್ಟು ಹೇಳಿದ: ನೋಡು, ನೀನು ಬಯಸಿದಂತೆ ಈ ಒಂದು ಹಿಡಿ ಮಣ್ಣಲ್ಲಿ ಎಲ್ಲವೂ ಇದೆ. ಯಾಕೆಂದರೆ ಈ ಅಂಗಡಿಯಲ್ಲಿರುವ ಎಲ್ಲ ಸಾಮಾನುಗಳೂ ಕೂಡ ಮಣ್ಣಿನಿಂದಲೇ ಸೃಷ್ಟಿಯಾದದ್ದು. ನಿನ್ನ ಒಂದು ರೂಪಾಯಿಗೆ ಮಣ್ಣನ್ನು ತೆಗೆದುಕೊಂಡು ಹೋಗಿ ನಿನಗೆ ಬೇಕಾದುದನ್ನು ಪಡೆದುಕೋ. ಆಗ ಗ್ರಾಹಕನಿಗೆ ಮಣ್ಣಿನ ಮಹತ್ತ್ವ ಅರ್ಥವಾಯಿತು.
ಮಣ್ಣಿನಿಂದ ಹುಟ್ಟಿದ ನಾವೆಲ್ಲರೂ ನಿಜವಾದ ಮಣ್ಣಿನ ಗೊಂಬೆಗಳೇ. ಆದರೆ ಮಣ್ಣಿನ ಗೊಂಬೆಗೆ ಜೀವತುಂಬುವು ದೆಂದರೇನು? ಜಗತ್ತಿನಲ್ಲಿ ನಡೆದಾಡುವ ವ್ಯಕ್ತಿಗಳನ್ನು ನೋಡಿದರೆ ಎಲ್ಲರೂ ಮಣ್ಣಿನ ಗೊಂಬೆಗಳಂತೆ ಕಂಡುಬರುತ್ತಾರೆ. ಯಾರಲ್ಲಿಯೂ ಜೀವಂತಿಕೆಯಿಲ್ಲ, ಲವಲವಿಕೆ ಇಲ್ಲ. ಹೆಚ್ಚಿನವರಿಗೆ ಜೀವನದ ಉದ್ದೇಶವೇ ಗೊತ್ತಿಲ್ಲ. ಜೀವನದ ದಾರಿಯೂ ಗೊತ್ತಿಲ್ಲ. ಪ್ರತಿಯೊಬ್ಬನೂ ಹೊಟ್ಟೆಪಾಡಿಗಾಗಿ ಪಡಬಾರದ ಕಷ್ಟವನ್ನು ಪಡುತ್ತಾನೆ. ಜೀವನ ಹೋರಾಟದ ಜಂಜಾಟದಲ್ಲಿ ಆತ ಸ್ಪಂದನಶಕ್ತಿಯನ್ನೆ ಕಳೆದುಕೊಂಡಿದ್ದಾನೆ. ಇಂದಿನ ಮನುಷ್ಯ ಒಬ್ಬ ವ್ಯಕ್ತಿಯಾಗಿ ಬದುಕುತ್ತಾನೆಯೇ ವಿನಾ ಸಮಷ್ಟಿಯಾಗಿ ಬದುಕುವ ಬಗ್ಗೆ ಯೋಚಿಸುವುದೇ ಇಲ್ಲ. ಹೀಗೆ ಸಮಾಜದ ಸಮಸ್ಯೆಯ ಬಗ್ಗೆ, ದೇಶದ ತೊಂದರೆಯ ಬಗ್ಗೆ ಆತ ನಿರ್ಲಿಪ್ತನಾಗುತ್ತಿದ್ದಾನೆ; ಸಮಾಜ, ದೇಶದ ಬಗ್ಗೆ ಮಣ್ಣಿನ ಗೊಂಬೆಯಂತೆ ವರ್ತಿಸುತ್ತಾನೆ.
ಇಂತಹ ಮಣ್ಣಿನ ಗೊಂಬೆಯಲ್ಲಿ ಜೀವತುಂಬುವುದೆಂದರೆ ನಮ್ಮ ನಮ್ಮ ಸ್ವಭಾವಕ್ಕನುಗುಣವಾಗಿ ನಮ್ಮ ಜೀವನದ ಉದ್ದೇಶವನ್ನು ತಿಳಿದುಕೊಂಡು ಅದಕ್ಕೆ ತಕ್ಕಂತೆ ಬಾಳುವುದು. ಒಂದು ಧ್ಯೇಯಕ್ಕಾಗಿ, ಉದ್ದೇಶಕ್ಕಾಗಿ ಬದುಕಿದರೆ ನಮ್ಮ ಬಾಳು ಸಾರ್ಥಕ ಆಗುತ್ತದೆ. ನಮ್ಮ ಸಮಾಜ, ನಮ್ಮ ಪರಂಪರೆಯನ್ನು ತಿಳಿದುಕೊಂಡು ಅದರ ಉಳಿವು ಮತ್ತು ಬೆಳವಣಿಗೆಗೆ ಕಟಿಬದ್ಧರಾಗುವುದೇ ನಮ್ಮಲ್ಲಿ ಜೀವತುಂಬಿಸುವ ಕೆಲಸ. ಅಂದು ಶಾಲಿವಾಹನ ಮಾಡಿದಂತೆ ಇಂದು ಕೂಡ ಈ ದೇಶದ, ಧರ್ಮದ ಬಗ್ಗೆ ಅರಿವು ಉಂಟುಮಾಡಿ, ನಮ್ಮ ಸಂಸ್ಕೃತಿ, ಸಮಾಜದ ಬಗ್ಗೆ ಅಭಿಮಾನ ಉಂಟುಮಾಡುವ ಕೆಲಸ ಆಗಬೇಕಿದೆ. ಮನುಷ್ಯನನ್ನು ಕ್ರಿಯಾಶೀಲನನ್ನಾಗಿ, ಸಮಾಜಮುಖಿಯನ್ನಾಗಿ ಮಾಡಿ ಆತನಲ್ಲಿ ಜೀವತುಂಬಿಸುವ ಕೆಲಸ ಆಗಬೇಕಿದೆ. ರಾತ್ರಿಯೆಲ್ಲ ಕುಡಿದು ತೂರಾಡುವ ಹೊಸವರ್ಷದ ಆಚರಣೆಗಿಂತ ಉಂಡು, ಉಟ್ಟು ಸಂಭ್ರಮಿಸುವ ಯುಗಾದಿ ಹಬ್ಬದ ಆಚರಣೆ ಮನುಷ್ಯನಲ್ಲಿ ನವೋಲ್ಲಾಸವನ್ನು ತಂದುಕೊಡುತ್ತದೆ.

★★
ಒಬ್ಬ ಹುಡುಗನಿದ್ದ. ಸಾಮಾನ್ಯ ಹುಡುಗ. ಅವನು ಒಂದು ವಿಷಯದಲ್ಲೂ ಪಾಸಾಗುತ್ತಿರಲಿಲ್ಲ. ಕ್ರೀಡೆಗೆ ನಿಂತರೆ ಅವನ ಕಳಪೆ ಪ್ರದರ್ಶನದಿಂದಲೇ ತಂಡ ಸೋತುಹೋಗುತ್ತಿತ್ತು. ತಂಡವಾಗಿ ಹೋದರೂ ಅವನು ಉತ್ತಮ ಎನಿಸಿಕೊಳ್ಳಲಿಲ್ಲ. ವೈಯಕ್ತಿಕವಾಗಿ ಕೂಡ ಅಷ್ಟಕ್ಕಷ್ಟೆ. ಇನ್ನು ಶಾಲೆಯಲ್ಲಂತೂ ಶಿಕ್ಷಕರೂ ಅವನನ್ನು ಅಷ್ಟಾಗಿ ಗಮನಿಸುತ್ತಿರಲಿಲ್ಲ. ಈ ಹುಡುಗನ ಬುದ್ಧಿಯೇ ಇಷ್ಟು. ಇವನನ್ನು ಸುಧಾರಿಸಲು ಸಾಧ್ಯವಿಲ್ಲ ಎಂದು ಕೈ ಚೆಲ್ಲಿದ್ದರು. ಸ್ನೇಹಿತರೂ ಅವನನ್ನು ಹತ್ತಿರ ಸೇರಿಸುತ್ತಿರಲಿಲ್ಲ. ಯಾರಾದರೂ ಅವನನ್ನು ಮಾತನಾಡಿಸಿಬಿಟ್ಟರೆ ಅವನಿಗೇ ಆಶ್ಚರ್ಯವಾಗಿ ಬಿಡುತ್ತಿತ್ತು. ತಾನು ಯಾವತ್ತಿದ್ದರೂ ಹೀಗೆಯೇ, ತಾನೊಬ್ಬ ಕೈಲಾಗದವ. ತನ್ನ ಯಾರೂ ಇಷ್ಟಪಡುವುದಿಲ್ಲ. ಇರಲಿ, ನಾನಿರುವುದೇ ಹೀಗೆ ಅಂದುಕೊಂಡು ಆತ ಕಾಲೇಜು ತಲುಪಿದ. ಅಲ್ಲಿಯೂ ಯಾವ ಹುಡುಗಿಯರೂ ಅವನನ್ನು ಇಷ್ಟಪಡಲಿಲ್ಲ. ಅವನೂ ಪ್ರಯತ್ನಿಸಲಿಲ್ಲ. ಅಲ್ಲಿಯೂ ಫೇಲ್ ಆಗುತ್ತಿದ್ದ. ಒಂದೇ ಒಂದು ಹುಡುಗಿಯ ಹತ್ತಿರವೂ ನಗುತ್ತಿರಲಿಲ್ಲ. ಯಾವಾಗಲೂ ತನ್ನ ಲೋಕದಲ್ಲಿ ತಾನಿದ್ದು ಬಿಡುತ್ತಿದ್ದ. ಯಾರನ್ನೂ ಇಂಪ್ರೆಸ್ ಮಾಡಲೂ ಹೋಗುತ್ತಿರಲಿಲ್ಲ. ತನ್ನ ಬಗ್ಗೆಯೂ ಬೇಸರಪಟ್ಟುಕೊಳ್ಳುತ್ತಿರಲಿಲ್ಲ. ನಾನಿರುವುದೇ ಹೀಗೆ ಎಂದು ಒಪ್ಪಿಕೊಂಡಿದ್ದು ಬಿಟ್ಟ.
ಆ ಹುಡುಗನ ಒಂದೇ ಒಂದು ಪ್ರತಿಭೆ ಏನೆಂದರೆ ಆತನಿಗೆ ತುಂಬ ಸುಂದರವಾಗಿ ಚಿತ್ರ ಬಿಡಿಸಲು ಬರುತ್ತಿತ್ತು. ಒಂದಿಷ್ಟು ಕಾರ್ಟೂನ್ ಬಿಡಿಸಿ ಶಾಲೆಯ ಮ್ಯಾಗಜಿನ್‌ಗೆ ಕೊಟ್ಟ. ದುರಾದೃಷ್ಟವೆಂದರೆ ಅಲ್ಲಿಯೂ ಕಾರ್ಟೂನ್‌ಗಳನ್ನು ನಿರಾಕರಿಸಲಾಯಿತು. ಆದರೆ ಈ ಬಾರಿ ಅವನು ಬಿಡಲಿಲ್ಲ. ತಾನು ಉಳಿದೆಲ್ಲಕ್ಕಿಂತ ಚೆನ್ನಾಗಿ ಚಿತ್ರ ಬಿಡಿಸಬಲ್ಲೆ ಎಂಬುದು ಗೊತ್ತಿತ್ತು. ವಾಲ್ಟ್ ಡಿಸ್ನಿ ಸ್ಟುಡಿಯೋಗೆ ಕಳಿಸಿದ. ಅವನಿಗೆ ಈ ಬಾರಿ ಬಹಳ ನಿರೀಕ್ಷೆಯಿತ್ತು. ಆದರೆ ಈ ಸಲವೂ ಅವರಿಂದ ತಿರಸ್ಕೃತನಾದ ! ಅಲ್ಲಿಗೆ ಅವನೊಬ್ಬ ಕೈಲಾಗದವ ಎಂಬುದು ಸ್ಪಷ್ಟವಾಯಿತು. ಹುಡುಗ ಈಗ ತೀರ್ಮಾನಿಸಿದ. ಆಯಿತು. ಇನ್ನೂ ಏನಾಗುವುದಿದೆ? ಸೋತಾಯಿತಲ್ಲ. ಇನ್ನು ಪ್ರಯತ್ನ ಮಾಡುತ್ತಲೇ ಇರುತ್ತೇನೆ. ಈ ಸಲ ನನ್ನ ಕಥೆಯನ್ನೇ ಹೇಳುತ್ತೇನೆ. ನನ್ನ ಸೋಲಿನ ಕಥೆ ಹೇಳುತ್ತೇನೆ ಅಂದುಕೊಂಡು ತನ್ನದೇ ಬಿಡಿಸಿ, ತನ್ನದೇ ತಳಮಳಗಳನ್ನು ಕಾಮಿಕ್‌ಸ್ ಮಾಡಿದ. ಜನರು ಆತನ ಸೋಲಿನ ಜತೆಗೆ ತಮ್ಮನ್ನು ಹೋಲಿಸಿ ನೋಡಿಕೊಳ್ಳತೊಡಗಿದರು. ನೋಡನೋಡುತ್ತಿದ್ದಂತೆ ಆತ ಜನಪ್ರಿಯತೆ ಗಳಿಸತೊಡಗಿದ. ಆತನೇ ಅಮೆರಿಕದ ಪ್ರಸಿದ್ಧ ಕಾರ್ಟೂನಿಸ್‌ಟ್ ಚಾರ್ಲಸ್ ಸ್ಕಲ್‌ಸ್. ಅವನ ಪೀನಟ್ ಪುಸ್ತಕವನ್ನು ನಾವು ನೀವೆಲ್ಲ ನೋಡಿರುತ್ತೇವೆ.
ಜೀವನ ಎಲ್ಲರಿಗೂ ಒಂದೇ ಕಾಲಕ್ಕೆ ಒಳ್ಳೆಯ ಸಮಯವನ್ನು ಕೊಡುವುದಿಲ್ಲ. ಎಲ್ಲರಂತೆ ಯಶಸ್ಸು ಸಿಗಲಿಲ್ಲ ಎಂದರೆ ನಾವು ಯಾವಾಗಲೂ ಸೋಲುಣ್ಣುವವರು ಎಂದಲ್ಲ. ನಮ್ಮ ಸಮಯ ಬರುವವರೆಗೂ ಪ್ರಯತ್ನಿಸುತ್ತಲೇ ಇರಬೇಕು. ಪ್ರಯತ್ನಕ್ಕೆ ಕೊಡದೆ ಜೀವನ ಯಾರನ್ನೂ ಕಳುಹಿಸದು. ಸೋಲುಂಡರೂ ಪ್ರಯತ್ನಿಸುತ್ತಲೇ ಇರುವುದನ್ನು ಮರೆಯಬಾರದು. ಒಂದಲ್ಲ ಒಂದು ದಿನ ಫಲ ಸಿಕ್ಕೇ ಸಿಗುತ್ತದೆ. ಕಷ್ಟ, ಹತಾಶೆಗಳು ಎಲ್ಲರಿಗೂ ಕಟ್ಟಿಟ್ಟಿದ್ದೇ, ಆದರೆ ನಾವದನ್ನು ಹೇಗೆ ತೆಗೆದುಕೊಳ್ಳಬೇಕು ಎಂಬ ಆಯ್ಕೆ ಸದಾ ನಮಗಿರುತ್ತದೆ. ಕಷ್ಟ ಬಂದಾಗ, ಸೋಲುತ್ತಿದ್ದಾಗ ಅತ್ತು, ಕರೆದು ರಂಪ ಮಾಡಿ, ಅಸಹಾಯಕರಾಗಿ ಕೂರದೆ ಸಹನೆಯಿಂದಿದ್ದು ನಾವು ಮಾಡುವುದನ್ನು ಮಾಡುತ್ತ ಹೋದರೆ ನಮ್ಮ ಪಾಲಿನದು ನಮಗೆ ಸಿಕ್ಕೇ ಸಿಗುತ್ತದೆ. ಭಗವಂತ ಕೊಟ್ಟ ಪ್ರತಿಭೆಯನ್ನು ಬೆಳೆಸಿಕೊಳ್ಳಲು ತೆಗೆದುಕೊಂಡಷ್ಟೂ ನಮ್ಮ ಯಶಸ್ಸಿನ ದಿನಗಳು ದೂರವಾಗುತ್ತ ಹೋಗುತ್ತವೆ.*
ಗೌರ ಗೋಪಾಲ ಪ್ರಭು
☘☘☘☘☘☘☘☘☘☘☘

ದುಷ್ಕರ್ಮ ಕತ್ತಲೆ ಲೋಕಕ್ಕೆ ದಾರಿ
ಶ್ರೀವಾಣಿ
ದುಷ್ಕರ್ಮ ಕತ್ತಲೆ ಲೋಕಕ್ಕೆ ದಾರಿ
ಸಿದ್ದೇಶ್ವರ ಶ್ರೀ ಸಂದೇಶ
ಈ ಪ್ರಪಂಚದಲ್ಲಿ ಎರಡು ಬಗೆಯ ಜನರು 1.ವಿದ್ಯೆಯ ಉಪಾಸಕರು 2.ಅವಿದ್ಯೆಯ ಉಪಾಸಕರು. ವಿದ್ಯೆ ಎಂದರೆ ಜ್ಞಾನ. ಅವಿದ್ಯೆ ಅಥವಾ ನ ವಿದ್ಯೆ ಎಂದರೆ ವಿದ್ಯೆ ಇಲ್ಲದವರು, ವಿದ್ಯೆ ಅಲ್ಲದ್ದು ಎಂದು ಅಥೈರ್‍ಸಬಹುದು. ಅದನ್ನೇ ಕರ್ಮ ಮಾರ್ಗ ಎಂದು ಕರೆಯುತ್ತಾರೆ. ಆದುದರಿಂದ ವಿದ್ಯೆಯ ಉಪಾಸಕರು ಎಂದರೆ ಜ್ಞಾನೋಪಾಸಕರು. ಅವಿದ್ಯೆಯ ಉಪಾಸಕರು ಎಂದರೆ ಕರ್ಮೋಪಾಸಕರು. ನಮ್ಮ ಬದುಕಿಗೆ ವಿದ್ಯೆ ಮತ್ತು ಕರ್ಮ ಎರಡೂ ಅಷ್ಟೇ ಅವಶ್ಯ. ಬಹಿರಂಗದಲ್ಲಿ ಇರುವುದು ಕರ್ಮ ಮಾರ್ಗವಾದರೆ ನಮ್ಮ ಅಂತರಂಗದಲ್ಲಿ ಇರುವುದು ಜ್ಞಾನಮಾರ್ಗ. ಎಣ್ಣೆ, ಬತ್ತಿ ಎರಡೂ ಒಂದಾಗಿ ದೀಪವು ಬೆಳಗಿದಂತೆ. ಜ್ಞಾನ ಮಾರ್ಗ ಮತ್ತು ಕರ್ಮ ಮಾರ್ಗ ಎರಡೂ ಒಂದಾಗಿ ನಮ್ಮ ಜೀವನ ಜ್ಯೋತಿಯು ಸುಂದರವಾಗಿ ಬೆಳಗಬೇಕು. ಗುರು-ಹಿರಿಯರ ಉಪದೇಶವನ್ನು ಕೇಳುವ, ಹೇಳುವ, ಓದುವ, ಬರೆಯುವ ಮೊದಲಾದ ಕರ್ಮಗಳನ್ನು ಮಾಡುವುದರಿಂದ ಜ್ಞಾನೋದಯವಾಗುತ್ತದೆ. ಎಂಥ ಕರ್ಮಗಳನ್ನು ಎಲ್ಲಿ, ಹೇಗೆ, ಯಾವಾಗ, ಏಕೆ ಮಾಡಬೇಕೆಂಬುವುದು ಜ್ಞಾನೋದಯವಾದ ನಂತರ ತಿಳಿಯುತ್ತದೆ. ಹೀಗೆ ಜ್ಞಾನಮಾರ್ಗ, ಕರ್ಮಮಾರ್ಗ ಎರಡೂ ಪರಸ್ಪರ ಅವಲಂಬಿತವಾಗಿವೆ. ಒಂದು ಸುಂದರವಾದ ಹೂವಿನ ಮರವನ್ನು ಬೆಳೆಸುವುದು ಕರ್ಮ ಮಾರ್ಗವಾದರೆ, ಆ ಹೂವಿನ ಗುಣಧರ್ಮಗಳನ್ನು ತಿಳಿದುಕೊಳ್ಳುವುದು ಜ್ಞಾನಮಾರ್ಗವಾಗಿದೆ. ಕರ್ಮ ಮಾರ್ಗ ಮತ್ತು ಜ್ಞಾನ ಮಾರ್ಗ ಎಂಬ ಎರಡು ಭದ್ರವಾದ ದಡಗಳ ನಡುವೆ ನಮ್ಮ ಜೀವನದಿಯು ನಿರಂತರ ಹರಿಯುತ್ತಿದ್ದರೆ ಮಾತ್ರ ದೇವಸಾಗರವನ್ನು ಸೇರಿ, ಅದು ಚಿರಶಾಂತಿ ಪಡೆಯುತ್ತದೆ.
ಜಪ-ತಪ, ಪೂಜೆ-ಭಜನೆ ಮೊದಲಾದ ಧಾರ್ಮಿಕ ವೃತಾಚರಣೆಗಳು ಕರ್ಮಮಾರ್ಗದಲ್ಲಿ ಬರುತ್ತವೆ. ಕರ್ಮಗಳಲ್ಲಿ ಎರಡು ಪ್ರಕಾರ 1. ಬಂಧನಕಾರಿ, 2.ಮುಕ್ತಿದಾಯಕ. ನಾವು ಮಾಡುವ ಕರ್ಮಗಳ ಹಿಂದಿನ ಉದ್ದೇಶ ಚೆನ್ನಾಗಿದ್ದರೆ, ಜ್ಞಾನಸಹಿತವಾಗಿದ್ದರೆ ಅಂಥ ಕರ್ಮಗಳು ಮುಕ್ತಿದಾಯಕ ಕರ್ಮಗಳೆನಿಸುತ್ತವೆ. ಕರ್ಮದ ಹಿಂದಿನ ಉದ್ದೇಶ ಚೆನ್ನಾಗಿರದೇ ಇದ್ದರೆ, ಜ್ಞಾನರಹಿತವಾಗಿದ್ದರೆ ಅದು ಬಂಧನಕಾರಿ ಕರ್ಮವಾಗುತ್ತದೆ. ಒಂದು ಬೆಂಕಿ ಕಡ್ಡಿಯನ್ನು ಕೊರೆಯುವುದು ಕರ್ಮ. ಅದರಿಂದ ದೀಪ ಬೆಳಗಿಸಿದರೆ ಅದು ಸತ್ಕರ್ಮ. ಅದೇ ಕಡ್ಡಿಯಿಂದ ಬೀಡಿ ಹೊತ್ತಿಸಿದರೆ ಅದು ದುಷ್ಕರ್ಮ.
ಮಾತನಾಡಲು ಬರುತ್ತದೆಂದು ಆಡಬಾರದ ಮಾತನ್ನು ಆಡಿದರೆ, ಆಗಬಾರದ್ದು ಆಗುತ್ತದೆ. ಅದಕ್ಕೆಂದೇ ಹಿರಿಯರು 'ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು' ಎಂದು ಎಚ್ಚರಿಸಿದರು. ಅನ್ಯರ ಜೀವನದ ಹಾಲಿನಲ್ಲಿ ನಾವು ಹುಳಿ ಹಿಂಡುವ ಕೆಲಸವನ್ನು ಎಂದೂ ಮಾಡಬಾರದು. ಮಾಡಿದರೆ ಅದು ದುಷ್ಕರ್ಮದ ಪರಮಾವಧಿಯಾಗುತ್ತದೆ. ಅದೇರೀತಿ ಕರ್ಮದ ಉದ್ದೇಶ ಚೆನ್ನಾಗಿರದಿದ್ದರೆ ಅದು ದುಷ್ಕರ್ಮವೇ ಆಗಿದೆ. ಒರ್ವ ಸಿರಿವಂತನು ವಕೀಲರನ್ನು ಮನೆಗೆ ಕರೆಯಿಸಿ ಹೊಟ್ಟೆತುಂಬ ಊಟ ಮಾಡಿಸಿದ. ವಕೀಲರಿಗೆ ಹಿಡಿಸಲಾರದಷ್ಟು ಸಂತೋಷವಾಯಿತು. ವಕೀಲರ ಊಟವಾದ ನಂತರ ಸಿರಿವಂತ ಹೇಳಿದ- 'ನಮ್ಮ ಅಣ್ಣನ ಆಸ್ತಿಯೂ ನನಗೇ ಆಗಬೇಕೆಂದು ಒಂದು ಬಲಿಷ್ಠವಾದ ಕಾರಣವನ್ನು ಕೊಟ್ಟು ದಾವೆ ಹೂಡಿದ್ದೇನೆ. ಅದನ್ನಷ್ಟು ನೀವು ಏನಾದರೂ ಮಾಡಿ ಗೆಲ್ಲಿಸಿ ಕೊಡಿ!' ಸಿರಿವಂತನ ಈ ಮೋಸದ ಮಾತನ್ನು ಕೇಳಿದ ವಕೀಲರಿಗೆ ಏತಕ್ಕಾದರೂ ಈ ಸಿರಿವಂತನ ಮನೆಗೆ ಬಂದೆ ಎಂದು ಬೇಸರವೆನಿಸಿತು. ಆದರೆ ಕಾಲ ಮಿಂಚಿತ್ತು. ಊಟ ಮಾಡಿಸುವುದು ಒಳ್ಳೆಯ ಕಾರ್ಯವೇ, ಆದರೆ ಅದರ ಹಿಂದಿನ ಉದ್ದೇಶ ಒಳ್ಳೆಯದಾಗಿರಲಿಲ್ಲ. ಇದರಿಂದಾಗಿ ಅನ್ನದಾನದಂಥ ಪವಿತ್ರ ಕಾರ್ಯವೂ ಈ ಸಂದರ್ಭದಲ್ಲಿ ದುಷ್ಕರ್ಮವಾಗಿ ತೋರುತ್ತದೆ. ಇಂಥ ದುಷ್ಕರ್ಮಗಳನ್ನು ಮಾಡುವವರು ಚಿಂತೆ, ಭ್ರಾಂತಿ, ಭಯದಿಂದ ಕೂಡಿದ ಕತ್ತಲೆಯ ಲೋಕವನ್ನು ಪ್ರವೇಶಿಸುತ್ತಾರೆ.
ಆಧಾರ : ಈಶ ಪ್ರಸಾದ
🔸🔸🔸🔸🔸🔸🔸🔸🔸🔸🔸
Like your own company
Like your own company ….
ULTIMATELY I’ve Learned
~ I came alone and i’ve to go alone
~ People r with u only when they need u,
not otherwise
~ Extra care of anyone by you will ultimately
bring a blame for you, not appreciation
~ A simple LIE of ur close one can break you
more than anything
~ Its very hard to weep alone when there is no
shoulder to support U
ULTIMATELY I’ve Learned:
~ Help people but not up to the point beyond
ur dignity!
By R.jain
🔸🔸🔸🔸🔸🔸🔸🔸🔸🔸🔸
ಮಾನವೀಯತೆ ಆಸ್ತಿ ಅಂತಸ್ತಿನಲ್ಲಿಲ್ಲ. . ಮನಸ್ಸಿನಲ್ಲಿದೆ
ಒಂದು ಕುಟುಂಬವಿತ್ತು. ಅದರಲ್ಲಿ ಹದಿನೆಂಟಕ್ಕಿಂತ ಹೆಚ್ಚು ಮಂದಿ ಇದ್ದರು. ಊರಿನಿಂದ ಹೊರ ಬಂದ ಅವರು ರಸ್ತೆ ಬದಿಯಲ್ಲೇ ಇರುತ್ತಿದ್ದರು. ಅಲ್ಲೇ ಇದ್ದ ಪುಟ್ಟ ಟೆಂಟ್‌ಗಳಲ್ಲಿ ವಾಸವಿದ್ದರು. ದಿನ ಬರುತ್ತಿದ್ದಂತೆ ಒಂದು ಕುಟುಂಬ ಇದ್ದದ್ದು ಮೂರು ನಾಲ್ಕು ಕುಟುಂಬ ಆಗಿತ್ತು. ಅವರ ಮನೆ ಶ್ರೀಮಂತರೊಬ್ಬರು ಅವರ ಜೀವನ ಶೈಲಿ ದಿನವೂ ನೋಡುತ್ತಿದ್ದರು. ಆ ದಿನ ದುಡಿದರೆ, ಆ ದಿನ ತಿನ್ನಲು ಅನ್ನ ಸಿಗುತ್ತಿತ್ತು. ಒಂದು ದಿನ ಅವರಿಗೆ ಯಾವ ಕೆಲಸವೂ ಸಿಗದೆ ಖಾಲಿ ಕೈಲಿ ವಾಪಾಸಾದರು. ಮನೆ ಹೊರಗೆ ದಿನವೂ ಅಡುಗೆ ಮಾಡುತ್ತಿದ್ದವರು ಒಂದು ದಿನ ಸುಮ್ಮನಿದ್ದರೆ ಕಂಡೇ ಕಾಣುತ್ತದೆ.
ಅವರ ಸ್ಥಿತಿ ನೋಡಲಾರದೆ, ಇವರೇ ಅಡುಗೆ ಮಾಡಿಕೊಂಡು ಹೋಗಿ ಕೊಟ್ಟು ಬರಲು ನಿರ್ಧರಿಸಿದರು. ಅಂತೆಯೇ ಅಡುಗೆ ಮಾಡಿ ಹದಿನೆಂಟಕ್ಕಿಂತ ಹೆಚ್ಚು ಮಂದಿ ಮನೆಗೆ ನೀಡಿದರು. ಹತ್ತಿರದಿಂದ ಅವರನ್ನು ನೋಡಿದಾಗ ಅವರ ಕಣ್ಣಲ್ಲಿದ್ದ ಹೊಳಪು ಕಂಡಿತು. ಹಸಿವಿನಿಂದ ಅವರ ಮುಖ ಸುಸ್ತಾದಂತೆ ಕಾಣುತ್ತಿತ್ತೇ ಹೊರತು ಬೇರಾವುದಕ್ಕೂ ಕೊರತೆ ಇದ್ದಂತೆ ಕಾಣುತ್ತಿರಲಿಲ್ಲ. ಮನೆಯ ಹೆಣ್ಣು ಮಗಳೊಬ್ಬಳು ಎಲ್ಲರಿಗೂ ಊಟ ಬಡಿಸಿ, ಅರ್ಧ ಆಹಾರ ಮಿಕ್ಕಿಸಿ ಅದನ್ನು ಹೊರಗೆ ತೆಗೆದುಕೊಂಡು ಹೋದಳು. ಇದನ್ನು ಗಮನಿಸಿದ ಶ್ರೀಮಂತರು. ಇವರು ವಿಧಿ ವಿಧಾನಗಳನ್ನು ಮಾಡುತ್ತಾರೆ ಎನಿಸುತ್ತದೆ.
ಎಡೆಯ ಹೆಸರಿನಲ್ಲೋ, ಬೇರೆ ಯಾವುದೋ ರೀತಿ ನೀತಿ ಹೆಸರಿನಲ್ಲಿ ಊಟ ಚೆಲ್ಲಬಹುದು ಇವರ ಆಲೋಚನೆ. ಅಂತೆಯೇ ಆಕೆ ಬರುವಾಗ ಪಾತ್ರೆ ಖಾಲಿಯಾಗಿತ್ತು. ಶ್ರೀಮಂತರಿಗೆ ಕೋಪ ಬಂತು. ‘ ಕೊಟ್ಟದ್ದನ್ನು ಹೀಗೆ ವೇಸ್‌ಟ್ ಮಾಡುತ್ತೀರಲ್ಲಾ, ಅದೇ ಇದ್ದಿದ್ದರೆ ನಾಳೆಗೆ ಬರುತ್ತಿರಲಿಲ್ಲವಾ? ಅಥವಾ ಹೊಟ್ಟೆ ತುಂಬ ಎಲ್ಲರೂ ತಿನ್ನುತ್ತಿರಲಿಲ್ಲವಾ? ಎಂದರು. ಅದಕ್ಕೆ ಆಕೆ‘ ನಾನು ಆಹಾರ ಚೆಲ್ಲಲಿಲ್ಲ. ಅದರ ಬಗ್ಗೆ ಆಲೋಚಿಸುವುದು ಮಹಾಪಾಪ. ಅರ್ಧ ಆಹಾರವನ್ನು ಪಕ್ಕದ ಮನೆಯವರಿಗೆ ನೀಡಿ ಬಂದೆ. ಅವರೂ ನಮ್ಮಂತೆ ಏನೂ ತಿಂದಿರಲಿಲ್ಲ’ ಎಂದರು. ಮಾನವೀಯತೆ ಆಸ್ತಿ ಅಂತಸ್ತಿನಲ್ಲಿಲ್ಲ. ಮನಸ್ಸಿನಲ್ಲಿದೆ. ಆಹಾರದ ಬೆಲೆ ಹೆಚ್ಚಾಗಿ ಕಾಣುತ್ತದೆ ಅಲ್ಲವೆ?
Gour Gopal prabhu
➖➖➖➖➖➖➖➖➖➖➖

ಜ್ಞಾನ ಸಂಚಯಕ್ಕಿಂತ, ಬಳಕೆ ಮುಖ್ಯ
ಜ್ಞಾನ ಸಂಚಯಕ್ಕಿಂತ, ಬಳಕೆ ಮುಖ್ಯ
ಡಾ. ಡಿ. ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ
ಈ ಪ್ರಪಂಚದಲ್ಲಿ ಜನರಿಗೆ ಅನೇಕ ಕಡೆಗಳಿಂದ ಜ್ಞಾನದ ಕೊಡುಗೆ ದೊರೆಯುತ್ತದೆ. ಬಹಳ ಮಂದಿ ಸಲಹೆ, ಉಪದೇಶ, ಪ್ರವಚನಗಳನ್ನು ನೀಡುತ್ತಾರೆ. ಅನೇಕ ಗ್ರಂಥಗಳು ಮತ್ತು ಪತ್ರಿಕೆಗಳಲ್ಲಿ ಅನೇಕ ಅಮೂಲ್ಯ ತತ್ವ ಸಿದ್ಧಾಂತ ವಿಚಾರಗಳು ದೊರೆಯುತ್ತವೆ. ಇಂತಹ ಜ್ಞಾನದ ರಾಶಿಯನ್ನು ಸಂಗ್ರಹಿಸಿದರೆ ಸಾಲದು. ಅವುಗಳನ್ನು ಅರಗಿಸಿಕೊಂಡು ಸೂಕ್ತ ಕಾಲದಲ್ಲಿ ಸಮರ್ಪಕವಾಗಿ ಬಳಸಿಕೊಳ್ಳುವಂತಹ ಚಾತುರ್ಯ ಕೂಡ ಇರುವುದು ಅತ್ಯವಶ್ಯಕ ಎಂಬುದನ್ನು ನಿರೂಪಿಸುವಂತಹ ಒಂದು ಪ್ರಸಂಗ ಇಲ್ಲಿದೆ.
ರಾಜಸ್ಥಾನದ ಜೈಪುರದಲ್ಲಿ ಭಾನು ಪ್ರತಾಪನೆಂಬ ಒಬ್ಬ ರಾಜನಿದ್ದನು. ಒಮ್ಮೆ ಆತನು ಅರಮನೆ ಬಳಿಯ ಉದ್ಯಾನದಲ್ಲಿ ಅಡ್ಡಾಡುತ್ತಿದ್ದನು. ಅಲ್ಲೊಂದು ಹಕ್ಕಿಯು ಬಳ್ಳಿಯ ಬಳಿಗೆ ಬಂದು ಸಿಹಿ-ಸಿಹಿ ದ್ರಾಕ್ಷಿಗಳನ್ನು ಆರಿಸಿ ತಿನ್ನುವುದನ್ನು, ಹುಳಿ ದ್ರಾಕ್ಷಿಗಳನ್ನು ಉದುರಿಸುವುದನ್ನೂ ಕಂಡರು. ಅಲ್ಲಿದ್ದ ತೋಟಗಾರನು
ಹಕ್ಕಿಯನ್ನು ಹಿಡಿಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಆಗ ಆತ ರಾಜನಿಗೇ ವರದಿ ನೀಡಿದ. ಆಗ ರಾಜನು ತಾನೇ ಆಸಕ್ತಿಯಿಂದ ಅದನ್ನು ಹಿಡಿದು ಪಾಠ ಕಲಿಸಲು ನಿಶ್ಚಯಿಸಿದ.
ಮರು ದಿನ ರಾಜನು ತೋಟದಲ್ಲಿ ಆ ಬಳ್ಳಿಯ ಮರೆಯಲ್ಲಿ ಅಡಗಿ ಕುಳಿತನು ಮತ್ತು ಆ ಹಕ್ಕಿ ದ್ರಾಕ್ಷಿಯ ಬಳಿಗೆ ಬಂದಾಗ ಅದರ ಕುತ್ತಿಗೆಯನ್ನು ಬಲವಾಗಿ ಹಿಡಿದುಕೊಂಡನು. ಅದರ ಕುತ್ತಿಗೆ ಹಿಚುಕುವ ಮೊದಲೇ ಆ ಹಕ್ಕಿಯು ಹೇಳಿತು- ''ಹೇ ರಾಜನ್, ನಾನು ನಿಮಗೆ ಜ್ಞಾನದ ನಾಲ್ಕು ಮುಖ್ಯ ವಿಷಯಗಳನ್ನು ಹೇಳುತ್ತೇನೆ. ನನ್ನನ್ನು ಕೊಲ್ಲಬೇಡಿ,'' ರಾಜ ನುಡಿದನು- ''ಆಗಲಿ ಬೇಗ ಹೇಳು,''. ಹಕ್ಕಿ ಹೇಳಿತು- ''ಮೊದಲನೆಯದಾಗಿ ಕೈಗೆ ಬಂದ ಶತ್ರುವನ್ನು ಎಂದೂ ಬಿಡಬೇಡ,'' ರಾಜ ಕೇಳಿದ- ''ಸರಿ, ಎರಡನೇ ಸಂಗತಿ?,'' ಹಕ್ಕಿ ನುಡಿಯಿತು- 'ಅಸಂಭವ ವಿಷಯವನ್ನು ನಂಬಬೇಡ,ಮೂರನೇ ಸಂಗತಿಯೆಂದರೆ ಕಳೆದ ವಿಷಯಗಳ ಬಗ್ಗೆ ಪಶ್ಚಾತ್ತಾಪ ಬೇಡ,'' ಆಗ ರಾಜ ಪ್ರಶ್ನಿಸಿದ- ''ಸರಿ ನಾಲ್ಕನೇ ವಿಷಯವೇನು?,'' ಆಗ ಹಕ್ಕಿ ಹೇಳಿತು- ''ಇದು ಬಹಳ ಗೂಢವೂ, ರಹಸ್ಯಪೂರ್ಣವೂ ಆಗಿದೆ. ನನಗೆ ಉಸಿರು ಗಟ್ಟಿದಂತಾಗಿದೆ. ನನ್ನ ಕುತ್ತಿಗೆ ಸ್ವಲ್ಪ ಸಡಿಲ ಮಾಡಿರಿ,''
ರಾಜನು ಹಕ್ಕಿಯ ಮಾತು ನಂಬಿ ಕೈ ಸಡಿಲ ಮಾಡಿದ. ಆಗ ಹಕ್ಕಿ 'ಬದುಕಿದೆಯಾ ಬಡ ಜೀವಾ' ಎಂದು ಹಾರಿ ಒಂದು ಕೊಂಬೆಯ ಮೇಲೆ ಕುಳಿತಿತು. ರಾಜನು ಅಚ್ಚರಿಯಿಂದ ನೋಡಿದ ಆಗ ಹಕ್ಕಿ ನುಡಿಯಿತು- ''ಹೇ ರಾಜನ್, ನಾಲ್ಕನೆ ಸಂಗತಿಯೇನೆಂದರೆ, ಜ್ಞಾನದ ಮಾತು ಕೇಳಿ, ಓದಿದರೆ ಏನೇನೋ ಫಲವಿಲ್ಲ. ಆಚರಣೆಗೆ ತರುವುದು ಮುಖ್ಯ. ನಾನು ನಿಮ್ಮ ಬಳಿ ಬಂದಾಗ ನನ್ನನ್ನು ಹಿಡಿದಿರಿ. ನನ್ನ ಸವಿಸವಿ ಮಾತುಗಳನ್ನು ನಂಬಿ ನನ್ನನ್ನು ಬಿಟ್ಟು ಬಿಟ್ಟಿರಿ. ಪಡೆದ ಜ್ಞಾನವನ್ನು ಬಳಸಿಕೊಳ್ಳಲಿಲ್ಲ,'' ಎಂದು ನುಡಿದ ಹಕ್ಕಿ ಹಾರಿ ಹೋಯಿತು. ನಾಚಿಕೊಂಡ ರಾಜನು ಸುಸ್ತಾಗಿ ಬಿಟ್ಟ.
ಇಡೀ ವಿಶ್ವಕ್ಕೇ ಇಲ್ಲೊಂದು ಅಮೂಲ್ಯ ಸಂದೇಶವಿದೆ-'ಜ್ಞಾನವನ್ನು ಸಂಗ್ರಹಿಸಲು ಪರಿಶ್ರಮ ವಹಿಸಿದರೆ ಸಾಲದು. ಸಂಗ್ರಹಿಸಿದ ಜ್ಞಾನವನ್ನು ಸೂಕ್ತ ಕಾಲದಲ್ಲಿ ಸಮರ್ಪಕವಾಗಿ ಬಳಸಿಕೊಳ್ಳುವಂತಹ ಚಾತುರ್ಯವೂ ನಮ್ಮಲ್ಲಿರಬೇಕು. ನಮ್ಮ ಪಾಲಾಗಬೇಕು. ವಿಶ್ವವಿದ್ಯಾಲಯಗಳಲ್ಲಿ ಜ್ಞಾನ ವಿತರಣೆ ಮಾಡುವಾಗ, ಇಂತಹ ಬಳಕೆಯ ಪ್ರಾಯೋಗಿಕ ಅನುಭವ ಮುಖ್ಯವಾಗಿದೆ.

ಪ್ರೇಮವೆಂದರೆ ಅಹಿಂಸೆಯಲ್ಲ
▪
ಪ್ರೇಮವೆಂದರೆ ಅಹಿಂಸೆಯಲ್ಲ
ಓಶೋ
ಪ್ರೇಮಿಸುವುದೆಂದರೆ ಇನ್ನೊಬ್ಬರನ್ನು ಹಿಂಸೆ ಮಾಡದಿರುವುದಷ್ಟೇ ಅಲ್ಲ. ಪ್ರೇಮ ಮತ್ತು ಅಹಿಂಸೆ ಎರಡೂ ಒಂದೇ ಅಲ್ಲ. ಪ್ರೇಮ ಒಂದು ಜೀವಂತ ಘಟನೆ. ಅಹಿಂಸೆ ಒಂದು ವ್ಯಾಖ್ಯೆ. ಪ್ರೇಮ ಮತ್ತು ಅಹಿಂಸೆಯ ನಡುವೆ ಆಕಾಶ ಭೂಮಿಯ ಅಂತರವಿದೆ. ಇದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ.
ಪ್ರೇಮ ಸಕಾರಾತ್ಮಕವಾದುದು. ಪ್ರೇಮ ಒಂದು ರಚನಾತ್ಮಕ ಸಂಬಂಧ. ಅಹಿಂಸೆ ನಕಾರಾತ್ಮಕವಾದುದು. ಪ್ರೇಮಕ್ಕೊಂದು ಅರ್ಥವಿದೆ- ನಾನು ಬೇರೆಯವರು ಚೆನ್ನಾಗಿರುವುದನ್ನು ಬಯಸುತ್ತೇನೆ. ಅವರಿಗೆ ಮಂಗಳವಾಗುವುದನ್ನು ಬಯಸುತ್ತೇನೆ. ಅವರ ಕಲ್ಯಾಣವನ್ನು ಬಯಸುತ್ತೇನೆ. ಮತ್ತೊಬ್ಬರ ಬದುಕಿನಲ್ಲಿ ಆನಂದವನ್ನು ಬಯಸುತ್ತೇನೆ. ಮತ್ತೊಬ್ಬರ ಮಾರ್ಗದಲ್ಲಿ ಹೂವು ಹರಡುತ್ತೇನೆ- ಇದು ಪ್ರೇಮ.
ಅಹಿಂಸೆಯ ಅರ್ಥವೇ ಬೇರೆ. ಬೇರೆಯವರಿಗೆ ದುಃಖ ನೀಡುವುದಿಲ್ಲ ಎಂಬುದರೊಂದಿಗೆ ಅಹಿಂಸೆ ಪೂರ್ಣವಾಗುತ್ತದೆ. ಆದರೆ ಪ್ರೇಮ ಪೂರ್ಣವಾಗುವುದಿಲ್ಲ. ಪ್ರೇಮ ಎಲ್ಲಿಯವರೆಗೆ ಬೇರೆಯವರಿಗೆ ಸುಖ ನೀಡುವುದಿಲ್ಲವೋ ಅಲ್ಲಿಯವರೆಗೂ ಅದು ಸುಮ್ಮನೇ ಕೂರಲಾಗುವುದಿಲ್ಲ. ಪ್ರೇಮ ಬೇರೆಯವರ ರಸ್ತೆಯಲ್ಲಿ ಹೂವು ಹರಡುತ್ತದೆ. ಅಹಿಂಸೆ ಬೇರೆಯವರ ರಸ್ತೆಯಲ್ಲಿ ಮುಳ್ಳು ಹರಡದಂತಿರಲು ಪ್ರಯತ್ನಿಸುತ್ತದೆ. ಅದು ಅಷ್ಟೇ ಆಗಿರುತ್ತದೆ. ಬೇರೆಯವರ ರಸ್ತೆಯಲ್ಲಿ ಈಗಾಗಲೇ ಮುಳ್ಳುಗಳಿದ್ದರೆ ಅಹಿಂಸೆ ಅದನ್ನು ತೆಗೆಯಲು ಹೋಗುವುದಿಲ್ಲ. ಅಹಿಂಸೆಗೂ ಅದಕ್ಕೂ ಯಾವುದೇ ಸಂಬಂಧ ಇರುವುದಿಲ್ಲ.
ಒಂದು ವೇಳೆ ಬೇರೆಯವರ ರಸ್ತೆ ಖಾಲಿ ಇದ್ದು ನಿಮ್ಮ ಕೈಯಲ್ಲಿ ಹೂವು ಇದ್ದರೆ ಅಹಿಂಸೆಗೂ ಅದಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ಅವರ ರಸ್ತೆಯಲ್ಲಿ ಹೂವು ಹರಡಬೇಕೇ ಬೇಡವೇ ಎಂಬುದನ್ನು ಅಹಿಂಸೆ ಹೇಳುವುದಿಲ್ಲ. ಅಹಿಂಸೆ ನಕಾರಾತ್ಮಕವಾದುದು. ನಾನು ದುಃಖವನ್ನು ನೀಡಬಾರದು ಎಂಬುದುರಲ್ಲೇ ಅದು ಮುಕ್ತಾಯವಾಗುತ್ತದೆ. ಇದರ ಆಚೆಗೆ ಅಹಿಂಸೆ ಯಾವುದೇ ಪ್ರೇರಣೆ ನೀಡುವುದಿಲ್ಲ. ಆದರೆ ಪ್ರೇಮದ ಪ್ರೇರಣೆ ಅನಂತವಾದುದು. ಬೇರೆಯವರ ಹಾದಿಯಲ್ಲಿ ಮುಳ್ಳು ಹರಡಬಾರದು ಎಂಬುದಂತೂ ಇದ್ದೇ ಇರುತ್ತದೆ. ಅದರೊಡನೆ ಅವರ ಹಾದಿಯಲ್ಲಿ ಈಗಾಗಲೇ ಮುಳ್ಳುಗಳಿದ್ದರೆ ಅದನ್ನು ತೆಗೆಯಲು ಪ್ರೇರಣೆ ನೀಡುತ್ತದೆ. ಅಲ್ಲಿಗೂ ನಿಲ್ಲದೇ ಸಾಧ್ಯವಾದರೆ ಅವರ ಹಾದಿಯಲ್ಲಿ ಹೂಗಳನ್ನು ಹರಡಲು ಪ್ರೇಮ ಪ್ರೇರಣೆ ನೀಡುತ್ತದೆ.
ಪ್ರೇಮದಲ್ಲಿ ಅಹಿಂಸೆ ಅಂತರ್ಗತವಾಗಿರುತ್ತದೆ. ಪ್ರೇಮದ ಹಂತ ಅಹಿಂಸೆಯಾಗಿರುತ್ತದೆ. ಬೇರೆಯವರ ರಸ್ತೆಯಲ್ಲಿ ಮುಳ್ಳು ಹಾಕಬಾರದು, ಬೇರೆಯವರಿಗೆ ದುಃಖ ನೀಡಬಾರದು. ಈ ಮಾತುಗಳು ಆರಂಭಿಕವಾಗಿರುತ್ತವೆ ಪ್ರೇಮದಲ್ಲಿ. ಅದರಲ್ಲಿ ಅಹಿಂಸೆ ಇದ್ದೇ ಇರುತ್ತದೆ. ಆದರೆ ಅಹಿಂಸೆಯ ವಿಸ್ತಾರ ತುಂಬಾ ಸಂಕುಚಿತವಾದುದು. ಅದರಲ್ಲಿ ಪೂರ್ಣ ಪ್ರೇಮದ ವಾಸ್ತವ್ಯ ಇರುವುದಿಲ್ಲ.
ಪ್ರೇಮ, ಬದುಕನ್ನು ಬದಲಾಯಿಸುವಲ್ಲಿ ಅತ್ಯಂತ ದೊಡ್ಡ ರಸವಿದ್ಯೆ. ಪ್ರೇಮ, ಜೀವನದ ಅತಿ ದೊಡ್ಡ ಪಥ. ಪ್ರೇಮ, ಜೀವನದ ಅತಿ ದೊಡ್ಡ ಉತ್ತೇಜನ. ಆದರೆ ಅಹಿಂಸೆ ಪಥವಲ್ಲ. ಅಹಿಂಸೆ ಉತ್ತೇಜನ ನೀಡುವಂತಹುದಲ್ಲ. ಅದಕ್ಕಾಗಿ ನಿಮ್ಮ ಬದುಕನ್ನು ಬದಲಿಸಿಕೊಳ್ಳಬೇಕಾದ ತುರ್ತು ಅವಶ್ಯಕತೆಯೇನೂ ಇರುವುದಿಲ್ಲ. ನೀವು ಒಂದು ನಕಾರಾತ್ಮಕ ಭಾವದೃಷ್ಟಿಯನ್ನು ಹೊಂದಿದರೆ ಸಾಕು. ನೀವು ಒಂದು ರಸ್ತೆಯಲ್ಲಿ ಹೋಗುತ್ತಿರುವಾಗ ಆ ರಸ್ತೆಯಲ್ಲಿ ಒಬ್ಬ ವ್ಯಕ್ತಿ ಬಿದ್ದಿದ್ದರೆ, ನೀವು ಒಂದು ವೇಳೆ ಪ್ರೇಮಿಯಾಗಿದ್ದರೆ ಆಗ ನೀವು ಆ ವ್ಯಕ್ತಿಯನ್ನು ಎತ್ತಿಕೊಂಡು ಸೂಕ್ತ ಶುಶ್ರೂಷೆಗೆ ವ್ಯವಸ್ಥೆ ಮಾಡಬೇಕು. ಆದರೆ ನೀವು ಕೇವಲ ಅಹಿಂಸಕರಾಗಿದ್ದರೆ ನಿಮಗೂ ಅದಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ಯಾವುದೇ ಪ್ರಯೋಜನವೂ ಇರುವುದಿಲ್ಲ.

Here are 5 of Swami Vivekananda’s most inspiring quotes, that stand true even today.

*“Who is helping you, don’t forget them. Who is loving you, don’t hate them. Who is believing you, don’t cheat them.”
*“Anything that makes you weak physically, intellectually and spiritually, reject as poison.”*
*“Relationships are more important than life, but it is important for those relationships to have life in them.”
*“Like me or hate me, both are in my favor. If you like me I am in your heart, if you hate me I am in your mind.”
*“Fill the brain with high thoughts, highest ideals, place them day and night before you, and out of that will come great work.”

ಮೊಬೈಲ್ ಸಿಗ್ನಲ್ ಸುತ್ತಮುತ್ತ
ಮೊಬೈಲ್ ಸಿಗ್ನಲ್ ಸುತ್ತಮುತ್ತ
ಟಿ.ಜಿ. ಶ್ರೀನಿಧಿ
ಮೊಬೈಲ್ ಫೋನ್ ಯಾರಿಗೆ ತಾನೆ ಗೊತ್ತಿಲ್ಲ? ಹಿರಿಯ-ಕಿರಿಯ, ಬಡವ-ಶ್ರೀಮಂತರೆಂಬ ಯಾವುದೇ ಭೇದಭಾವವಿಲ್ಲದೆ ಎಲ್ಲರೂ ಯಾವಾಗಲೂ ಬಳಸುವ ಸಾಧನ ಅದು. ಇಂತಹ ಸರ್ವಾಂತರ್ಯಾಮಿ ಮೊಬೈಲನ್ನು ಹಲವಾರು ಮಂದಿ ಸೆಲ್ ಫೋನ್ ಎಂದು ಕರೆಯುತ್ತಾರೆ. ಕೆಲವರಂತೂ ಈ ಹೆಸರನ್ನು ಇನ್ನೂ ಹೃಸ್ವಗೊಳಿಸಿ ‘ಸೆಲ್’ ಎಂದಷ್ಟೇ ಕರೆಯುವುದೂ ಉಂಟು.
ಈ ಅಭ್ಯಾಸಕ್ಕೆ ಕಾರಣ ಮೊಬೈಲ್ ಜಾಲಗಳ (ನೆಟ್ವರ್ಕ್) ವಿನ್ಯಾಸ. ಊರಿನ ತುಂಬ ಹರಡಿರುವ ಮೊಬೈಲ್ ಟವರ್ಗಳು ತಮ್ಮ ಸುತ್ತಲಿನ ಒಂದು ಸೀಮಿತ ಪ್ರದೇಶಕ್ಕೆ ಮೊಬೈಲ್ ಸೇವೆ ಒದಗಿಸುತ್ತವೆ. ಈ ಪ್ರದೇಶ ಬಹುತೇಕ ಆರು ಮೂಲೆಯ (ಹೆಕ್ಸಾಗನ್) ಆಕೃತಿಯಲ್ಲಿರುತ್ತದೆ; ಅಂದರೆ, ಮೊಬೈಲ್ ಜಾಲದ ಚಿತ್ರವನ್ನೇನಾದರೂ ಬರೆದರೆ ಅದು ಜೇನುಗೂಡಿನ ಒಂದು ಹಲ್ಲೆಯಂತೆ ಕಾಣುತ್ತದೆ! ಮೊಬೈಲ್ ಜಾಲವೆಂಬ ಈ ಜೇನುಗೂಡು ಟವರ್ ಸುತ್ತಲಿನ ‘ಕೋಶ’, ಅಂದರೆ ’ಸೆಲ್’ಗಳ ಜೋಡಣೆಯಿಂದ ರೂಪುಗೊಂಡಿರುತ್ತದಲ್ಲ, ಆ ಕೋಶಗಳೇ ಇದಕ್ಕೆ ‘ಸೆಲ್’ ಫೋನ್ ಎಂದು ಹೆಸರು ಬರಲು ಕಾರಣ.
ತಮ್ಮ ಸುತ್ತಲಿನ ‘ಸೆಲ್’ನಲ್ಲಿರುವ ಗ್ರಾಹಕರಿಗೆ ಕರೆಮಾಡುವ, ಕರೆ ಸ್ವೀಕರಿಸುವ, ಅಂತರ್ಜಾಲ ಬಳಸುವ ಸೌಲಭ್ಯಗಳನ್ನೆಲ್ಲ ಒದಗಿಸುವುದು ನಿರ್ದಿಷ್ಟ ಮೊಬೈಲ್ ಟವರ್ನ ಜವಾಬ್ದಾರಿ. ನಾವು ಮಾತನಾಡುತ್ತಿರುವಾಗ ಒಂದು ‘ಸೆಲ್’ನಿಂದ ಇನ್ನೊಂದಕ್ಕೆ ಹೋದರೆ ನಮ್ಮ ಕರೆಯೂ ಮೊದಲ ಟವರ್ನಿಂದ ಇನ್ನೊಂದಕ್ಕೆ ವರ್ಗಾವಣೆಯಾಗುತ್ತದೆ. ಒಂದಕ್ಕಿಂತ ಹೆಚ್ಚು ಸೆಲ್ಗಳು ಸಮೀಪದಲ್ಲಿದ್ದರೆ ಎಲ್ಲಿ ಹೆಚ್ಚು ಶಕ್ತಿಶಾಲಿ ಮೊಬೈಲ್ ಸಂಕೇತ ಲಭ್ಯವಿದೆಯೋ ಅಲ್ಲಿಗೆ ನಮ್ಮ ಕರೆಯನ್ನು ವರ್ಗಾಯಿಸುವ ಸೌಲಭ್ಯ ಕೂಡ ಇರುತ್ತದೆ. ಮೊಬೈಲ್ ಪರದೆಯ ಬಲಭಾಗದ ಮೇಲ್ತುದಿಯಲ್ಲಿ ಕಾಣಿಸುವ ಸಣ್ಣ ಗೆರೆಗಳು ಮೊಬೈಲ್ ಸಂಕೇತದ ಶಕ್ತಿ ಎಷ್ಟಿದೆಯೆಂದು ತಿಳಿಸುತ್ತವೆ ಎನ್ನುವುದು ನಮಗೆ ಗೊತ್ತಿದೆಯಲ್ಲ, ಅಲ್ಲಿ ಹೆಚ್ಚು ಗೆರೆಗಳಿದ್ದರೆ ನಮ್ಮ ಮೊಬೈಲಿಗೆ ಸಿಗುತ್ತಿರುವ ಸಂಕೇತದ ಶಕ್ತಿ (ಸಿಗ್ನಲ್ ಸ್ಟ್ರೆಂಥ್) ತೃಪ್ತಿಕರವಾಗಿದೆ ಎಂದು ಅರ್ಥ. ಹಾಗಿದ್ದಾಗ ಮೊಬೈಲ್ ಕರೆ ಮಾಡುವುದು, ಇಂಟರ್ನೆಟ್ ಬಳಸುವುದೆಲ್ಲ ಸರಾಗ. ಕಾಣಿಸುವ ಗೆರೆಗಳ ಸಂಖ್ಯೆ ಕಡಿಮೆಯಾದಷ್ಟೂ ಸಂಕೇತದ ಶಕ್ತಿ ಕಡಿಮೆಯಾಗಿದೆ ಎಂದು ತಿಳಿದುಕೊಳ್ಳಬಹುದು.
ಮೊಬೈಲ್ ಸಂಕೇತದ ಶಕ್ತಿಯನ್ನು ಡಿಬಿಎಂ ಎಂಬ ಏಕಮಾನದಲ್ಲಿ ಅಳೆಯಲಾಗುತ್ತದೆ. ಡಿಬಿಎಂ ಎನ್ನುವುದು ಡೆಸಿಬಲ್-ಮಿಲಿವ್ಯಾಟ್ಸ್ ಎಂಬ ಹೆಸರಿನ ಹ್ರಸ್ವರೂಪ. ಈ ಸಂಖ್ಯೆ ಸಾಮಾನ್ಯವಾಗಿ ಋಣಾತ್ಮಕವಾಗಿರುತ್ತದೆ (ನೆಗೆಟಿವ್). ಇದು ಸೊನ್ನೆಗೆ ಸಮೀಪವಿದ್ದಷ್ಟೂ (-60, -80, -90 ಹೀಗೆ) ಮೊಬೈಲ್ ಸಂಕೇತ ಸಾಕಷ್ಟು ಶಕ್ತಿಶಾಲಿಯಾಗಿದೆ ಎಂದರ್ಥ. -100 ಅಥವಾ ಅದಕ್ಕೂ ಕಡಿಮೆಯಾದಾಗ (-110, -120 ಹೀಗೆ) ಮೊಬೈಲಿನಲ್ಲಿ ಸಿಗ್ನಲ್ ಇಲ್ಲವೆಂದು ದೂರುವ ಪರಿಸ್ಥಿತಿ ಬರುತ್ತದೆ!
ಹಾಗೆಂದು ನಮ್ಮ ಮೊಬೈಲ್ ಬಳಕೆಯ ಅನುಭವದ ಮೇಲೆ ಪ್ರಭಾವ ಬೀರುವುದು ಇದೊಂದೇ ಅಂಶ ಎಂದೇನೂ ಹೇಳುವಂತಿಲ್ಲ. ಏಕೆಂದರೆ ಮೊಬೈಲ್ ಜಾಲಗಳ ಪ್ರಸಾರ ವ್ಯಾಪ್ತಿ (ಕವರೇಜ್) ಮತ್ತು ಧಾರಣಶಕ್ತಿ (ಕೆಪ್ಯಾಸಿಟಿ) ಕೂಡ ಮೊಬೈಲ್ ಸೇವೆಯ ಗುಣಮಟ್ಟವನ್ನು ಪ್ರಭಾವಿಸಬಲ್ಲವು. ಮೊಬೈಲ್ ಜಾಲದ ಸಂಕೇತಗಳು (ಸಿಗ್ನಲ್) ಯಾವೆಲ್ಲ ಪ್ರದೇಶಗಳನ್ನು ತಲುಪಬಲ್ಲವು ಎನ್ನುವುದನ್ನು ಅದರ ಪ್ರಸಾರ ವ್ಯಾಪ್ತಿ ಸೂಚಿಸುತ್ತದೆ. ಪಕ್ಕದೂರಿನಲ್ಲಿರುವ ಮೊಬೈಲ್ ಟವರಿನ ಕವರೇಜ್ ನಮ್ಮ ಹಳ್ಳಿಯವರೆಗೆ ಮಾತ್ರ ಇದೆ ಎನ್ನುವುದಾದರೆ ನಮ್ಮೂರ ಪಕ್ಕದ ಇನ್ನೊಂದು ಹಳ್ಳಿಯಲ್ಲಿ ಮೊಬೈಲ್ ಬಳಸುವುದು ಸಾಧ್ಯವಾಗುವುದಿಲ್ಲ. ಯಾವುದೇ ಮೊಬೈಲ್ ಜಾಲ ನಿರ್ದಿಷ್ಟ ಸಮಯದಲ್ಲಿ ಎಷ್ಟು ಕರೆಗಳನ್ನು, ಎಷ್ಟು ಪ್ರಮಾಣದ ದತ್ತಾಂಶ (ಡೇಟಾ) ವಿನಿಮಯ ನಿಭಾಯಿಸಬಲ್ಲದು ಎಂಬುದನ್ನು ಸೂಚಿಸುವುದು ಅದರ ಧಾರಣಶಕ್ತಿ. ಇದು ಆ ಸ್ಥಳದಲ್ಲಿ ಮೊಬೈಲ್ ಜಾಲದ ಪ್ರಸಾರ ವ್ಯಾಪ್ತಿ ಹೇಗಿದೆ ಎನ್ನುವುದರ ಮೇಲೂ ಅವಲಂಬಿತವಾಗಿರುತ್ತದೆ.
ನಾವಿರುವ ಪ್ರದೇಶ ಮೊಬೈಲ್ ಜಾಲದ ಪ್ರಸಾರ ವ್ಯಾಪ್ತಿಯ ಅಂಚಿನಲ್ಲೋ, ಹೊರಗೋ ಇದ್ದರೆ ಕರೆಮಾಡಲು –
ಅಂತರ್ಜಾಲ ಸಂಪರ್ಕ ಬಳಸಲು ಕಷ್ಟವಾಗುತ್ತದೆ. ನಮ್ಮಲ್ಲಿ ಕವರೇಜ್ ಚೆನ್ನಾಗಿದ್ದರೂ ಮೊಬೈಲ್ ಬಳಸುತ್ತಿರುವವರ ಸಂಖ್ಯೆ ವಿಪರೀತ ಜಾಸ್ತಿಯಿದ್ದರೆ (ಕೆಪಾಸಿಟಿ ಪೂರ್ಣವಾಗಿ ಬಳಕೆಯಾಗುತ್ತಿದ್ದರೆ) ಆಗಲೂ ಕರೆಮಾಡಲು – ಅಂತರ್ಜಾಲ ಸಂಪರ್ಕ ಬಳಸಲು ಪರದಾಡುವ ಪರಿಸ್ಥಿತಿ ಬರುವ ಸಾಧ್ಯತೆಯಿದೆ.
*ವಿಕಿಪೀಡಿಯಕ್ಕೆ ಹ್ಯಾಪಿ ಬರ್ತ್ಡೇ*
ಯಾವ ವಿಷಯದ ಕುರಿತು ಗೂಗಲ್ ಸರ್ಚ್ ಮಾಡಲು ಹೊರಟರೂ ಅದರ ಫಲಿತಾಂಶಗಳಲ್ಲಿ ವಿಕಿಪೀಡಿಯ ತಾಣದ ಕೊಂಡಿಗಳು ಕಾಣಸಿಗುವುದು ಸಾಮಾನ್ಯ ಸಂಗತಿ. ಯಾರು ಬೇಕಾದರೂ ಮಾಹಿತಿ ಸೇರಿಸಬಹುದಾದ, ಇರುವ ಮಾಹಿತಿಯನ್ನು ಉತ್ತಮಪಡಿಸಬಹುದಾದ, ತಪ್ಪುಗಳನ್ನು ತಿದ್ದಬಹುದಾದ ವಿಶಿಷ್ಟ ವಿಶ್ವಕೋಶವೇ ಈ ವಿಕಿಪೀಡಿಯ. ಕನ್ನಡ, ತುಳು ಸೇರಿ ಪ್ರಪಂಚದ ನೂರಾರು ಭಾಷೆಗಳಲ್ಲಿ ಲಭ್ಯವಿರುವುದು ಈ ವಿಶ್ವಕೋಶದ ಹೆಗ್ಗಳಿಕೆ. ಜಗತ್ತಿನ ಅತ್ಯಂತ ಜನಪ್ರಿಯ ಜಾಲತಾಣಗಳ ಪೈಕಿ ಇದಕ್ಕೂ ಸ್ಥಾನವಿದೆ. ವಿಕಿಮೀಡಿಯ ಫೌಂಡೇಶನ್ ಆಶ್ರಯದಲ್ಲಿ ನಡೆಯುವ ಈ ತಾಣವನ್ನು ರೂಪಿಸಿದ ಕೀರ್ತಿ ಜಿಮ್ಮಿ ವೇಲ್ಸ್ ಹಾಗೂ ಲ್ಯಾರಿ ಸ್ಯಾಂಗರ್ ಅವರದ್ದು. ಅವರು ಈ ತಾಣ ರೂಪಿಸಿ ಇದೇ ಜನವರಿ 15ಕ್ಕೆ ಹದಿನೇಳು ವರ್ಷಗಳು ಪೂರ್ತಿಯಾಗುತ್ತವೆ. ನಿಮ್ಮ ಆಸಕ್ತಿಯ ವಿಷಯದ ಕುರಿತು ನಿಮ್ಮದೇ ಭಾಷೆಯ ವಿಕಿಪೀಡಿಯಕ್ಕೆ ಮಾಹಿತಿ ಸೇರಿಸುವ ಮೂಲಕ ನೀವೂ ಅದಕ್ಕೆ ಹುಟ್ಟುಹಬ್ಬದ ಶುಭಾಶಯ ಕೋರಬಹುದು. ಮಾಹಿತಿ ಸೇರಿಸುವುದು ಹೇಗೆಂದು ತಿಳಿಯಲು tinyurl.com/wikihelpkn ತಾಣವನ್ನು ನೋಡಿ.
Vijayavani

ಶ್ರದ್ಧೆ ಸ್ಪರ್ಧೆ
ಶ್ರದ್ಧೆ ಸ್ಪರ್ಧೆ
ನಮ್ಮ ಬದುಕನ್ನು ಪ್ರಚೋದಿಸುವ
ಶಕ್ತಿಗಳಲ್ಲಿ ಮುಖ್ಯವಾದವುಗಳು
ಎರಡು: ಒಂದು ಶ್ರದ್ಧೆ, ಮತ್ತೊಂದು
ಸ್ಪರ್ಧೆ. ಇವುಗಳಲ್ಲಿ
ಮೊದಲನೆಯದು ಗುರುತಿಸಿದಲ್ಲದೆ
ಕಾಣದ ರೀತಿಯಲ್ಲಿ
ಕಾರ್ಯೋನ್ಮಖವಾಗುತ್ತದೆ;
ಎರಡನೆಯದು ಎಲ್ಲರಿಗೂ ಕಾಣುವಂತೆ
ವಿಜೃಂಭಿಸುತ್ತಾ
ಕ್ರಿಯಾಭಿಮುಖವಾಗುತ್ತದೆ.
ಶ್ರದ್ಧೆಯ ಹೆಜ್ಜೆ
ನಿಶ್ಯಬ್ದವಾದದ್ದು; ಸ್ಪರ್ಧೆಯ
ನಡಿಗೆ ಸಶಬ್ದವಾದದ್ದು.
ಸೂರ್ಯೋದಯ
ಚಂದ್ರೋದಯಗಳಷ್ಟೆ ಸದ್ದಿಲ್ಲದೆ
ಬೆಳಕಾಗುತ್ತದೆ ಶ್ರದ್ಧೆ; ಡೋಲು
ಬಜಾವಣೆ ಜಾಹೀರಾತುಗಳಿಲ್ಲದೆ
ಹೆಜ್ಜೆಯಿಡಲಾರದು ಸ್ಪರ್ಧೆ.
ಶ್ರದ್ಧೆ ಅರಳುವ ಹೂವಿನಂತೆ
ಮೌನವಾದದ್ದು; ಸ್ಪರ್ಧೆ
ಮೊರೆಯುವ ಗಾಳಿಯಂತೆ
ಧಾವಿಸತಕ್ಕದ್ದು, ಅದಕ್ಕೆ
ಮೌನವೆಂದರೆ ಭಯ; ಶಬ್ದವೆಂದರೆ
ಪ್ರಿಯ.
ಮುಗ್ಧವಾದದ್ದು ಶ್ರದ್ಧೆ;
ಕುಟಿಲವಾದದ್ದು ಸ್ಪರ್ಧೆ.
ಸ್ಪರ್ಧೆಗೆ ಸಂಖ್ಯೆಗಳ ಮೇಲೆ,
ಗಾತ್ರಗಳ ಮೇಲೆ ಗಮನ. ಶ್ರದ್ಧೆಗೆ
ಗುಣದ ಮೇಲೆ ಗಟ್ಟಿಯಾದದ್ದರ
ಮೇಲೆ ಗಮನ. ಶ್ರದ್ಧೆಗೆ
ನಿರಾಡಂಬರವೆ ಇಷ್ಟವಾದರೆ,
ಸ್ಪರ್ಧೆಗೆ ಆಡಂಬರ, ಅಟ್ಟಹಾಸಗಳೆ
ಇಷ್ಟ.
ಶ್ರದ್ಧೆಗೆ ಅಶಿವದ ಭೀತಿಯಿಲ್ಲ;
ಆದರೆ ಸ್ಪರ್ಧೆಗೆ ಸದಾ ಅಮಂಗಳದ
ಶಂಕೆ. ಶ್ರದ್ಧೆ ಯಾವುದರಲ್ಲೂ
ನಂಬಿಕೆಯನ್ನು
ಕಳೆದುಕೊಳ್ಳುವುದಿಲ್ಲ.
ಸ್ಪರ್ಧೆಗೆ ತಾನು
ಗೆಲ್ಲುವುದರಲ್ಲಿ ಹೊರತು
ಇನ್ನಾವುದರಲ್ಲೂ ಆಸಕ್ತಿ ಇಲ್ಲ.
ಅದರ ಜೊತೆಗೆ ಪ್ರತಿಯೊಂದೂ
ಪ್ರತಿಯೊಬ್ಬರೂ ತನಗೆ
ಪ್ರತಿಸ್ಪರ್ಧಿಯಾಗಿದ್ದಾರೆಂಬ
ಭ್ರಮೆಯೇ ಅದಕ್ಕೆ ಪ್ರಚೋದಕ.
ಎಲ್ಲರನ್ನೂ ಹಿಂದೆ ಹಾಕುವುದು
ಹೇಗೆ, ತಾನು ಮಾತ್ರ
ಮುಂದುವರಿಯುವುದು ಹೇಗೆ
ಎನ್ನುವುದೇ ಅದರ ಧ್ಯಾಸ. ಆದರೆ
ಶ್ರದ್ಧೆಯ ನಿಲುವೇ ಬೇರೆ. ಅದರ
ಪಾಲಿಗೆ ಜಗತ್ತೆಲ್ಲಾ ಒಂದು
ರಣರಂಗವೆಂಬ ಭ್ರಮೆಯಿಲ್ಲ;
ಜಗತ್ತೆಲ್ಲಾ ಸ್ನೇಹರಂಗವೆಂಬ
ವಿಶ್ವಾಸವಿದೆ. ಇತರರ
ಪ್ರತಿಸ್ಪರ್ಧೆಯಿಂದ ತನಗೇನೂ
ತೊಂದರೆಯಿಲ್ಲ ಎಂಬ
ಧೈರ್ಯವಿದೆ. ಎಲ್ಲರ ಜೊತೆಗೆ,
ಎಲ್ಲರೊಂದಿಗೆ
ಸಹಯಾತ್ರಿಯಾಗುವುದರಲ್ಲೇ
ಅದಕ್ಕೆ ಆಸಕ್ತಿ; ಯಾರನ್ನಾದರೂ
ಹಿಂದೆ ಹಾಕುವುದರ ಮೂಲಕವೇ ತಾನು
ಮುಂದುವರಿಯಬಲ್ಲೆನೆಂಬ
ಭಾವನೆಯೇ ಅದಕ್ಕೆ ಸಮ್ಮತವಿಲ್ಲ.
ಹಾಗೆಂದರೆ ಶ್ರದ್ಧೆ ಎಂಬುದು
ಜಡವೆಂದಾಗಲೀ,
ನಿರೋಧಪ್ರಿಯವೆಂದಾಗಲಿ,
ತಟಸ್ಥವೆಂದಾಗಲಿ ಅರ್ಥವಲ್ಲ.
ಅದಕ್ಕೆ ಗೆಲ್ಲಲೇಬೇಕೆಂಬ
ಹಠವಿಲ್ಲ. ಆದರೆ ನಿಲ್ಲಬಾರದೆಂಬ
ವಿವೇಕವಿದೆ. ಓಡುವುದೇ ಪ್ರಗತಿಯ
ಲಕ್ಷಣವೆಂಬ ತಪ್ಪು ತಿಳವಳಿಕೆ
ಇಲ್ಲ. ನಿಲ್ಲದೆ, ನಿಂತ ನೀರಾಗಿ
ಕೊಳೆಯದೆ, ನಿರಂತರವಾಗಿ,
ನಿರಾತಂಕವಾಗಿ ಪ್ರವಹಿಸುವುದೆ
ಪ್ರಗತಿಯ ಲಕ್ಷಣವೆಂಬ ಅರಿವಿದೆ.
ಸ್ವಾರ್ಥಮೂಲವಾದುದು ಸ್ಪರ್ಧೆ;
ಪರಾರ್ಥ ಪ್ರಿಯವಾದದ್ದು
ಶ್ರದ್ಧೆ. ಸಿಕ್ಕ ಅವಕಾಶದಲ್ಲಿ
ಹೇಗಾದರೂ ಮಾಡಿ ಬೇರೂರಿ
ಬೆಳೆದು ಆಕ್ರಮಿಸುವ ಸ್ವಭಾವದ್ದು
ಸ್ಪರ್ಧೆ; ತನ್ನ ಜತೆಗೆ
ಬೇರೆಯವರನ್ನೂ ಬೆಳೆಯಗೊಡುವ
ಔದಾರ್ಯದ್ದು ಶ್ರದ್ಧೆ. ಸ್ಪರ್ಧೆ
ತಾತ್ಕಾಲಿಕವಾದದ್ದನ್ನು
ಮುಖ್ಯವೆಂದು ಭಾವಿಸುತ್ತದೆ;
ಶ್ರದ್ಧೆಗೆ ಅನಂತಕಾಲದ
ಕಲ್ಪನೆಯಲ್ಲಿ ವಿಶ್ವಾಸವಿದೆ.
ಯಾವುದು ತಾತ್ಕಾಲಿಕ, ಯಾವುದು
ಚಿರಕಾಲಿಕ ಎಂಬ ಮೌಲ್ಯ ವಿವೇಚನೆ
ಇದೆ. ಶ್ರದ್ಧೆಗೆ ಮುಖ್ಯವಾದದ್ದು
ನಿಷ್ಠೆ; ಸ್ಪರ್ಧೆಗೆ
ಮುಖ್ಯವಾದದ್ದು ಪ್ರತಿಷ್ಠೆ.
ಇದ್ದುದನ್ನು ಕೆಡಹುವುದರಲ್ಲಿ
ಸ್ಪರ್ಧೆಗೆ ಆಸಕ್ತಿ;
ಬಿದ್ದುದನ್ನು
ನಿಲ್ಲಿಸುವುದರಲ್ಲಿ ಶ್ರದ್ಧೆಗೆ
ಆಸಕ್ತಿ. ಸದ್ಯಃ ಪ್ರಯೋಜನವೆ
ಸ್ಪರ್ಧೆಯ ಗುರಿ; ಅಂದಂದಿನದು
ಅಂದಂದೇ ಫಲ
ಕೊಡುವಂತಾಗಬೇಕೆಂಬುದು ಅದರ
ದೃಷ್ಟಿ. ಶ್ರದ್ಧೆಗೆ ಮಾಡುವ
ಕೆಲಸವನ್ನು ಸರಿಯಾಗಿ
ಮಾಡಬೇಕೆಂಬ ಕಡೆ ಗಮನವೇ ಹೊರತು,
ಅದು ತಕ್ಷಣದಲ್ಲಿ ಫಲವಾಗಿ
ದಕ್ಕಬೇಕೆಂಬ ಕಡೆಗೆ
ಆಸಕ್ತಿಯಿಲ್ಲ.
ಮಹಾತ್ವಾಕಾಂಕ್ಷಿಗಳ ಅಹಂಕಾರ
ವಿಲಾಸಗಳಲ್ಲಿ ಸ್ಪರ್ಧೆ
ವಿಜೃಂಭಿಸುತ್ತದೆ; ಸದ್ದಿರದ
ಸಮಸ್ತ ಸಾಧನೆಗಳಲ್ಲಿ ಶ್ರದ್ಧೆ
ಪ್ರತಿಬಿಂಬಿತವಾಗುತ್ತದೆ.
ಸ್ಪರ್ಧೆ ಮೇಲುನೋಟಕ್ಕೆ
ಗೆಲ್ಲುವಂತೆ ಅಥವಾ ಗೆದ್ದಂತೆ
ತೋರುತ್ತದೆ; ಶ್ರದ್ಧೆ
ಮೇಲುನೋಟಕ್ಕೆ ಸೋತಂತೆ ಅಥವಾ
ಸೋಲುವಂತೆ ತೋರುತ್ತದೆ. ಆದರೆ
ಕಡೆಗೂ ಗೆಲ್ಲುವುದು ಶ್ರದ್ಧೆ.
ಯಾಕೆಂದರೆ ಅದಕ್ಕೆ ಅಪಾರವಾದ
ಆತ್ಮವಿಶ್ವಾಸವಿದೆ. ಕಾಯುವ
ತಾಳ್ಮೆ ಇದೆ; ಶ್ರೇಯಸ್ಸಿನಲ್ಲಿ
ನಂಬಿಕೆ ಇದೆ.
Posted from WordPress for Android
➖➖➖➖➖➖➖➖➖➖➖
ನಮ್ಮ ಬದುಕನ್ನು ಪ್ರಚೋದಿಸುವ
ಶಕ್ತಿಗಳಲ್ಲಿ ಮುಖ್ಯವಾದವುಗಳು
ಎರಡು: ಒಂದು ಶ್ರದ್ಧೆ, ಮತ್ತೊಂದು
ಸ್ಪರ್ಧೆ. ಇವುಗಳಲ್ಲಿ
ಮೊದಲನೆಯದು ಗುರುತಿಸಿದಲ್ಲದೆ
ಕಾಣದ ರೀತಿಯಲ್ಲಿ
ಕಾರ್ಯೋನ್ಮಖವಾಗುತ್ತದೆ;
ಎರಡನೆಯದು ಎಲ್ಲರಿಗೂ ಕಾಣುವಂತೆ
ವಿಜೃಂಭಿಸುತ್ತಾ
ಕ್ರಿಯಾಭಿಮುಖವಾಗುತ್ತದೆ.
ಶ್ರದ್ಧೆಯ ಹೆಜ್ಜೆ
ನಿಶ್ಯಬ್ದವಾದದ್ದು; ಸ್ಪರ್ಧೆಯ
ನಡಿಗೆ ಸಶಬ್ದವಾದದ್ದು.
ಸೂರ್ಯೋದಯ
ಚಂದ್ರೋದಯಗಳಷ್ಟೆ ಸದ್ದಿಲ್ಲದೆ
ಬೆಳಕಾಗುತ್ತದೆ ಶ್ರದ್ಧೆ; ಡೋಲು
ಬಜಾವಣೆ ಜಾಹೀರಾತುಗಳಿಲ್ಲದೆ
ಹೆಜ್ಜೆಯಿಡಲಾರದು ಸ್ಪರ್ಧೆ.
ಶ್ರದ್ಧೆ ಅರಳುವ ಹೂವಿನಂತೆ
ಮೌನವಾದದ್ದು; ಸ್ಪರ್ಧೆ
ಮೊರೆಯುವ ಗಾಳಿಯಂತೆ
ಧಾವಿಸತಕ್ಕದ್ದು, ಅದಕ್ಕೆ
ಮೌನವೆಂದರೆ ಭಯ; ಶಬ್ದವೆಂದರೆ
ಪ್ರಿಯ.
ಮುಗ್ಧವಾದದ್ದು ಶ್ರದ್ಧೆ;
ಕುಟಿಲವಾದದ್ದು ಸ್ಪರ್ಧೆ.
ಸ್ಪರ್ಧೆಗೆ ಸಂಖ್ಯೆಗಳ ಮೇಲೆ,
ಗಾತ್ರಗಳ ಮೇಲೆ ಗಮನ. ಶ್ರದ್ಧೆಗೆ
ಗುಣದ ಮೇಲೆ ಗಟ್ಟಿಯಾದದ್ದರ
ಮೇಲೆ ಗಮನ. ಶ್ರದ್ಧೆಗೆ
ನಿರಾಡಂಬರವೆ ಇಷ್ಟವಾದರೆ,
ಸ್ಪರ್ಧೆಗೆ ಆಡಂಬರ, ಅಟ್ಟಹಾಸಗಳೆ
ಇಷ್ಟ.
ಶ್ರದ್ಧೆಗೆ ಅಶಿವದ ಭೀತಿಯಿಲ್ಲ;
ಆದರೆ ಸ್ಪರ್ಧೆಗೆ ಸದಾ ಅಮಂಗಳದ
ಶಂಕೆ. ಶ್ರದ್ಧೆ ಯಾವುದರಲ್ಲೂ
ನಂಬಿಕೆಯನ್ನು
ಕಳೆದುಕೊಳ್ಳುವುದಿಲ್ಲ.
ಸ್ಪರ್ಧೆಗೆ ತಾನು
ಗೆಲ್ಲುವುದರಲ್ಲಿ ಹೊರತು
ಇನ್ನಾವುದರಲ್ಲೂ ಆಸಕ್ತಿ ಇಲ್ಲ.
ಅದರ ಜೊತೆಗೆ ಪ್ರತಿಯೊಂದೂ
ಪ್ರತಿಯೊಬ್ಬರೂ ತನಗೆ
ಪ್ರತಿಸ್ಪರ್ಧಿಯಾಗಿದ್ದಾರೆಂಬ
ಭ್ರಮೆಯೇ ಅದಕ್ಕೆ ಪ್ರಚೋದಕ.
ಎಲ್ಲರನ್ನೂ ಹಿಂದೆ ಹಾಕುವುದು
ಹೇಗೆ, ತಾನು ಮಾತ್ರ
ಮುಂದುವರಿಯುವುದು ಹೇಗೆ
ಎನ್ನುವುದೇ ಅದರ ಧ್ಯಾಸ. ಆದರೆ
ಶ್ರದ್ಧೆಯ ನಿಲುವೇ ಬೇರೆ. ಅದರ
ಪಾಲಿಗೆ ಜಗತ್ತೆಲ್ಲಾ ಒಂದು
ರಣರಂಗವೆಂಬ ಭ್ರಮೆಯಿಲ್ಲ;
ಜಗತ್ತೆಲ್ಲಾ ಸ್ನೇಹರಂಗವೆಂಬ
ವಿಶ್ವಾಸವಿದೆ. ಇತರರ
ಪ್ರತಿಸ್ಪರ್ಧೆಯಿಂದ ತನಗೇನೂ
ತೊಂದರೆಯಿಲ್ಲ ಎಂಬ
ಧೈರ್ಯವಿದೆ. ಎಲ್ಲರ ಜೊತೆಗೆ,
ಎಲ್ಲರೊಂದಿಗೆ
ಸಹಯಾತ್ರಿಯಾಗುವುದರಲ್ಲೇ
ಅದಕ್ಕೆ ಆಸಕ್ತಿ; ಯಾರನ್ನಾದರೂ
ಹಿಂದೆ ಹಾಕುವುದರ ಮೂಲಕವೇ ತಾನು
ಮುಂದುವರಿಯಬಲ್ಲೆನೆಂಬ
ಭಾವನೆಯೇ ಅದಕ್ಕೆ ಸಮ್ಮತವಿಲ್ಲ.
ಹಾಗೆಂದರೆ ಶ್ರದ್ಧೆ ಎಂಬುದು
ಜಡವೆಂದಾಗಲೀ,
ನಿರೋಧಪ್ರಿಯವೆಂದಾಗಲಿ,
ತಟಸ್ಥವೆಂದಾಗಲಿ ಅರ್ಥವಲ್ಲ.
ಅದಕ್ಕೆ ಗೆಲ್ಲಲೇಬೇಕೆಂಬ
ಹಠವಿಲ್ಲ. ಆದರೆ ನಿಲ್ಲಬಾರದೆಂಬ
ವಿವೇಕವಿದೆ. ಓಡುವುದೇ ಪ್ರಗತಿಯ
ಲಕ್ಷಣವೆಂಬ ತಪ್ಪು ತಿಳವಳಿಕೆ
ಇಲ್ಲ. ನಿಲ್ಲದೆ, ನಿಂತ ನೀರಾಗಿ
ಕೊಳೆಯದೆ, ನಿರಂತರವಾಗಿ,
ನಿರಾತಂಕವಾಗಿ ಪ್ರವಹಿಸುವುದೆ
ಪ್ರಗತಿಯ ಲಕ್ಷಣವೆಂಬ ಅರಿವಿದೆ.
ಸ್ವಾರ್ಥಮೂಲವಾದುದು ಸ್ಪರ್ಧೆ;
ಪರಾರ್ಥ ಪ್ರಿಯವಾದದ್ದು
ಶ್ರದ್ಧೆ. ಸಿಕ್ಕ ಅವಕಾಶದಲ್ಲಿ
ಹೇಗಾದರೂ ಮಾಡಿ ಬೇರೂರಿ
ಬೆಳೆದು ಆಕ್ರಮಿಸುವ ಸ್ವಭಾವದ್ದು
ಸ್ಪರ್ಧೆ; ತನ್ನ ಜತೆಗೆ
ಬೇರೆಯವರನ್ನೂ ಬೆಳೆಯಗೊಡುವ
ಔದಾರ್ಯದ್ದು ಶ್ರದ್ಧೆ. ಸ್ಪರ್ಧೆ
ತಾತ್ಕಾಲಿಕವಾದದ್ದನ್ನು
ಮುಖ್ಯವೆಂದು ಭಾವಿಸುತ್ತದೆ;
ಶ್ರದ್ಧೆಗೆ ಅನಂತಕಾಲದ
ಕಲ್ಪನೆಯಲ್ಲಿ ವಿಶ್ವಾಸವಿದೆ.
ಯಾವುದು ತಾತ್ಕಾಲಿಕ, ಯಾವುದು
ಚಿರಕಾಲಿಕ ಎಂಬ ಮೌಲ್ಯ ವಿವೇಚನೆ
ಇದೆ. ಶ್ರದ್ಧೆಗೆ ಮುಖ್ಯವಾದದ್ದು
ನಿಷ್ಠೆ; ಸ್ಪರ್ಧೆಗೆ
ಮುಖ್ಯವಾದದ್ದು ಪ್ರತಿಷ್ಠೆ.
ಇದ್ದುದನ್ನು ಕೆಡಹುವುದರಲ್ಲಿ
ಸ್ಪರ್ಧೆಗೆ ಆಸಕ್ತಿ;
ಬಿದ್ದುದನ್ನು
ನಿಲ್ಲಿಸುವುದರಲ್ಲಿ ಶ್ರದ್ಧೆಗೆ
ಆಸಕ್ತಿ. ಸದ್ಯಃ ಪ್ರಯೋಜನವೆ
ಸ್ಪರ್ಧೆಯ ಗುರಿ; ಅಂದಂದಿನದು
ಅಂದಂದೇ ಫಲ
ಕೊಡುವಂತಾಗಬೇಕೆಂಬುದು ಅದರ
ದೃಷ್ಟಿ. ಶ್ರದ್ಧೆಗೆ ಮಾಡುವ
ಕೆಲಸವನ್ನು ಸರಿಯಾಗಿ
ಮಾಡಬೇಕೆಂಬ ಕಡೆ ಗಮನವೇ ಹೊರತು,
ಅದು ತಕ್ಷಣದಲ್ಲಿ ಫಲವಾಗಿ
ದಕ್ಕಬೇಕೆಂಬ ಕಡೆಗೆ
ಆಸಕ್ತಿಯಿಲ್ಲ.
ಮಹಾತ್ವಾಕಾಂಕ್ಷಿಗಳ ಅಹಂಕಾರ
ವಿಲಾಸಗಳಲ್ಲಿ ಸ್ಪರ್ಧೆ
ವಿಜೃಂಭಿಸುತ್ತದೆ; ಸದ್ದಿರದ
ಸಮಸ್ತ ಸಾಧನೆಗಳಲ್ಲಿ ಶ್ರದ್ಧೆ
ಪ್ರತಿಬಿಂಬಿತವಾಗುತ್ತದೆ.
ಸ್ಪರ್ಧೆ ಮೇಲುನೋಟಕ್ಕೆ
ಗೆಲ್ಲುವಂತೆ ಅಥವಾ ಗೆದ್ದಂತೆ
ತೋರುತ್ತದೆ; ಶ್ರದ್ಧೆ
ಮೇಲುನೋಟಕ್ಕೆ ಸೋತಂತೆ ಅಥವಾ
ಸೋಲುವಂತೆ ತೋರುತ್ತದೆ. ಆದರೆ
ಕಡೆಗೂ ಗೆಲ್ಲುವುದು ಶ್ರದ್ಧೆ.
ಯಾಕೆಂದರೆ ಅದಕ್ಕೆ ಅಪಾರವಾದ
ಆತ್ಮವಿಶ್ವಾಸವಿದೆ. ಕಾಯುವ
ತಾಳ್ಮೆ ಇದೆ; ಶ್ರೇಯಸ್ಸಿನಲ್ಲಿ
ನಂಬಿಕೆ ಇದೆ.
Posted from WordPress for Android
➖➖➖➖➖➖➖➖➖➖➖
ರಾತ್ರಿ ಅಥವಾ ನಸುಕಿನಲ್ಲಿಯೇ ಹೃದಯಾಘಾತ ಸಂಭವಿಸಲು ಕಾರಣವೇನು ಗೊತ್ತಾ?

ನಾವು ಪೇಪರನಲ್ಲಿ ಮತ್ತು ನ್ಯೂಸ್ ಚಾನೆಲ್ ನಲ್ಲಿ ಎಷ್ಟೋ ಸಲ ಕೇಳ್ತೇವೆ ಚಿಕ್ಕ ವಯಸ್ಸಿನ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟ ಅಷ್ಟೇ ಏಕೆ ನಮ್ಮ ಸುತ್ತಮುತ್ತಲೂ ಅನೇಕ ಸಂಗತಿಗಳನ್ನು ಕೇಳುತ್ತೇವೆ. ಜೊತೆಗೆ ಕೆಲವರಂತೂ ತಪ್ಪದೆ ಜಿಮ್ ಗೆ ಹೋಗುವವರು ಮರಣ ಸಹಿತ ಇದರಿಂದ ಆಗಿದನ್ನು ಕೇಳಿರಬಹುದು.ಹಾಗಾದರೆ ಇದರಿಂದ ಬಚಾವಾಗಲು ಬರೀ ಮೂರರಿಂದ ನಾಲ್ಕು ನಿಮಿಷ ಅಷ್ಟೇ ಸಾಕು.ಡಾಕ್ಟರಗಳ ಪ್ರಕಾರ ಯಾರು ನಸುಕಿನಲ್ಲಿ ಮತ್ತು ನಿದ್ರೆಯಿಂದ ಎದ್ದು ಮೂತ್ರವಿಸರ್ಜನೆಗೆ ಹೋಗುತ್ತಾರೆ ಅವರ ಸಲುವಾಗಿ ಅತೀ ಮುಖ್ಯವಾದ ಸೂಚನೆ ಇದೆ.ರಾತ್ರಿಯಲ್ಲಿ ನಿದ್ರೆಯಿಂದ ಮೂತ್ರ ವಿಸರ್ಜನೆ ಅಥವಾ ಯಾವುದೇ ಕಾರಣಕ್ಕೆ ಆಕಸ್ಮಿಕವಾಗಿ ಎದ್ದಾಗ ಆ ವೇಳೆಯಲ್ಲಿ ನಾವು 3 ರಿಂದ 4 ನಿಮಿಷ ಜಾಗ್ರತೆ ವಹಿಸಿದರೆ ಆಕಸ್ಮಿಕ ಮೃತ್ಯುವಿನ ಸಂಖ್ಯೆಯನ್ನು ಕಡಿಮೆ ಮಾಡಬಹುದು. ಶಾರೀರಿಕ ದೃಷ್ಟಿಯಿಂದ ಸದೃಢವಾದ ವ್ಯಕ್ತಿಯೇ ರಾತ್ರಿ ಸಮಯದಲ್ಲಿ ಮರಣ ಹೊಂದಿದ್ದಾನೆ.ಇಂತಹ ವ್ಯಕ್ತಿಗಳ ಬಗ್ಗೆ ನಾವು ಎಷ್ಟೋ ಸಲ ಮಾತಾಡುತ್ತೇವೆ ಅಯ್ಯೋ ಈತನಿಗೆ ನಾನು ನಿನ್ನೆ ಮಾತಾಡಿಸಿದ್ದೇ ನಿನ್ನೆನೆ ಚೆನ್ನಾಗಿದ್ದ ಒಮ್ಮೆಲೇ ಏನಾಯ್ತು? ಇದು ಸಾಧ್ಯವೇ ಇಲ್ಲ. ಅಂತೆಲ್ಲ ಮಾತಾಡ್ತೇವೆ. ಇದಕ್ಕೆಲ್ಲ ಮುಖ್ಯ ಕಾರಣ ರಾತ್ರಿ ನಿದ್ರೆಯಿಂದ ಮೂತ್ರವಿಸರ್ಜನೆಗೆ ಲಗುಬಗೆಯಿಂದ ಎದ್ದು ಓಡುವದು.ಗಾಢ ನಿದ್ರೆಯಿಂದ ಒಮ್ಮೆಲೇ ಏಳುವದರಿಂದ ಮೆದುಳಿಗೆ ರಕ್ತ ಸಂಚಲನ ಸರಿಯಾಗಿ ಆಗುವುದಿಲ್ಲ. ಈಗ ಮೇಲೆ ಹೇಳಿದ ಪ್ರಕಾರ ಈ ಸಮಯದಲ್ಲಿ ನಾಲ್ಕು ನಿಮಿಷ ಬಹಳ ಪ್ರಾಮುಖ್ಯವಾದದು. ಗಾಢ ನಿದ್ರೆಯಿಂದ ತ್ವರಿತವಾಗಿ ಹಾಸಿಗೆಯಿಂದ ಏಳುವದರಿಂದ ಶರೀರದ ಇಸಿಜಿಯ ಪ್ಯಾಟರ್ನ್ ಒಮ್ಮೆಲೇ ಚೇಂಜ್ ಆಗುವದು. ಇದರಿಂದ ಮೆದುಳಿಗೆ ರಕ್ತ ಸಂಚಾರ ಒಮ್ಮೆಲೇ ಹರಿಯುವದಿಲ್ಲ. ಇದರಿಂದ ಹೃದಯಕ್ಕೆ ಆಘಾತವಾಗುವದು. ಆದ್ದರಿಂದ ಬಚಾವಾಗಲು ನಾಲ್ಕು ನಿಮಿಷದ ಒಳ್ಳೆಯ ಉಪಾಯ ಮತ್ತು ರೂಢಿ ಅನುಸರಿಸಿದರೆ ತುಂಬಾ ಒಳ್ಳೆಯದು.
1) *ನಿದ್ರೆಯಿಂದ ಎಚ್ಚರವಾದಾಗ ಹಾಗೆ ಒಂದು ನಿಮಿಷ ಹಾಸಿಗೆಯಲ್ಲಿಯೇ ಮಲಗಿರಿ* .
2) *ಮುಂದಿನ ಅರ್ಧ ನಿಮಿಷ ಅಥವಾ ಒಂದು ನಿಮಿಷ ಹಾಸಿಗೆಯಲ್ಲಿ ಕುಳಿತುಕೊಳ್ಳಿ* .
3) *ಆನಂತರ ಮುಂದಿನ ಎರಡು ನಿಮಿಷ ಪಲ್ಲಂಗದ ಮೇಲಿನಿಂದ ಕಾಲುಗಳನ್ನು ಕೆಳಗೆ ಬಿಟ್ಟು ಕುಳಿತುಕೊಳ್ಳಿಇಷ್ಟೂ* *ಸಮಯವನ್ನು ದಿನವೂ ರೂಢಿಸಿಕೊಂಡರೆ ಆಕಸ್ಮಿಕ* *ಮೃತ್ಯುವಿನ ಸಂಖ್ಯೆ ಕಡಿಮೆ ಆಗುವದು*.
*ಇದನ್ನು ಆದಷ್ಟು ಶೇರ್ ಮಾಡಿದರೆ ಒಂದು ಒಳ್ಳೆಯ ಮೆಸೇಜ್ ಎಲ್ಲರಿಗೂ ಸಿಕ್ಕ ಹಾಗಾಗುತ್ತದೆ*......

▪▪▪▪▪▪▪▪▪▪▪
ಒಂದೂರಿನಲ್ಲಿ ಒಬ್ಬ ರಾಜನಿದ್ದ. ಅವನು ಜನರ ಬಗ್ಗೆ ಯಾವಾಗಲೂ ಕಾಳಜಿ ವಹಿಸುತ್ತಿದ್ದ. ತನ್ನ ಜನರಿಗೆ ರಾಜ್ಯದ ಬಗ್ಗೆ, ನನ್ನ ಬಗ್ಗೆ ಎಷ್ಟು ಕಾಳಜಿ ಇದೆ ಎಂದು ತಿಳಿದುಕೊಳ್ಳಬೇಕು ಎಂದೆನಿಸಿತು. ಅದಕ್ಕಾಗಿ ಊರಿನ ರಸ್ತೆ ಮಧ್ಯದಲ್ಲಿ ದೊಡ್ಡ ಕಲ್ಲೊಂದನ್ನು ಇರಿಸಿದ. ಅದನ್ನು ಯಾರಾದರೂ ತೆಗೆದು ಪಕ್ಕಕ್ಕಿಡುತ್ತಾರೋ ಅಥವಾ ಹಾಗೆ ಓಡಾಡುತ್ತಾರೋ ಎಂದು ಅವನು ನೋಡಬೇಕಿತ್ತು. ದಾರಿಯ ಮಧ್ಯೆ ಇಟ್ಟು ಪಕ್ಕದಲ್ಲೇ ಅವಿತು ಕುಳಿತ. ಪಂಡಿತರೊಬ್ಬರು ಬಂದರು. ಇವರು ಖಂಡಿತಾ ಕಲ್ಲನ್ನು ಸರಿಸಿ ಮುಂದೆ ಹೋಗುತ್ತಾರೆ ಎಂದುಕೊಂಡ ರಾಜ. ಆದರೆ ಅವರು ಕಲ್ಲನ್ನು ದಾಟುತ್ತಾ, ‘ಮೂರ್ಖ ರಾಜ ಸರಿಯಾಗಿ ರಾಜ್ಯವನ್ನು ನೋಡಿಕೊಳ್ಳಲು ಬರುವುದಿಲ್ಲ’ ಎಂದು ಬೈಯುತ್ತಾ ಹೋದ. ನಂತರ ಹೆಂಗಸೊಬ್ಬಳು ಮೊಸರು ಮಾರುತ್ತಾ ಬಂದಳು.
ತಲೆಯ ಮೇಲೆ ಗಡಿಗೆ ಇದ್ದ ಕಾರಣ ಅದನ್ನು ಇಳಿಸಿ ಕಲ್ಲು ಸರಿಸಿ ಹೋಗುವ ಕಷ್ಟ ತೆಗೆದುಕೊಳ್ಳಲಿಲ್ಲ. ರಾಜನಿಗೆ ನಿರಾಸೆಯಾಯಿತು. ಯಾರಿಗೂ ಬೇರೊಬ್ಬರ ಬಗ್ಗೆ ಇಲ್ಲ. ಎಲ್ಲ ತಮ್ಮ ಬಗ್ಗೆ ಮಾತ್ರ ಯೋಚಿಸುತ್ತಾರೆ ಎಂದು ಬೇಸರಿಸಿಕೊಂಡ. ಸ್ವಲ್ಪ ಹೊತ್ತಿನಲ್ಲೇ ಸೈನಿಕನೊಬ್ಬ ಬಂದ. ಆತ ಕಲ್ಲನ್ನು ನೋಡಿ ‘ ಇದ್ಯಾರು ರಸ್ತೆ ಬದಿ ಹೀಗೆ ಕಲ್ಲನ್ನು ಇಟ್ಟವರು, ಹೆಂಗಸರು ಮಕ್ಕಳು ಓಡಾಡುತ್ತಾರೆ ಎಂಬ ಪರಿಜ್ಞಾನವೇ ಇಲ್ಲ’ಎಂದು ಬೈಯುತ್ತಾ ಕಲ್ಲನ್ನು ಎತ್ತಿ ಪಕ್ಕಕ್ಕಿಡಲು ಪ್ರಯತ್ನಿಸಿದ. ಕಲ್ಲನ್ನು ಎತ್ತಿದಾಗ ಅವನಿಗೆ ಆಶ್ಚರ್ಯ. ಒಂದು ಚಿನ್ನದ ನಾಣ್ಯವಿರುವ ಚೀಲ, ಒಂದು ಚೀಟಿ ಇತ್ತು. ಚೀಟಿಯಲ್ಲಿ ‘ಕಲ್ಲನ್ನು ಎತ್ತಿ ಪಕ್ಕಕ್ಕಿಟ್ಟವರಿಗೆ ಈ ನಾಣ್ಯಗಳು’ ಎಂದು ಬರೆದಿತ್ತು.
*ದಾರಿಗೆ ಅಡ್ಡ ಬಂದ ಕಲ್ಲುಗಳು, ಜೀವನದಲ್ಲಿ ಅಡ್ಡ ಬಂದ ಸಮಸ್ಯೆಗಳು ಯಾವಾಗಲೂ ನಿಮ್ಮನ್ನು ಪರೀಕ್ಷಿಸುತ್ತವೆ. ಅದರಿಂದ ತಪ್ಪಿಸಿಕೊಳ್ಳುವುದು, ಓಡಿ ಹೋಗುವುದು ಸುಲಭ. ಆದರೆ ಹಾಗೆ ಮಾಡಿದರೆ, ಕಷ್ಟದ ನಂತರ ಸಿಗುವ ಸುಖದಿಂದ ವಂಚಿತರಾಗುತ್ತೀರಿ.*

ಆತ್ಮಜ್ಞಾನದಿಂದ ಅಮೃತತ್ವ
ಶ್ರೀವಾಣಿ
ಆತ್ಮಜ್ಞಾನದಿಂದ ಅಮೃತತ್ವ
ಶ್ರೀ ಸಿದ್ಧೇಶ್ವರ ಸ್ವಾಮೀಜಿ
ನಾವು ತೊಡುವ ಬಟ್ಟೆ ಸ್ವಚ್ಛವಾಗಿದ್ದರೆ, ಸುಂದರವಾಗಿದ್ದರೆ ನಮ್ಮ ಜೀವನವೂ ಅಷ್ಟೇ ಸುಂದರವಾಗಿರುತ್ತದೆ, ಸ್ವಚ್ಛವಾಗಿರುತ್ತದೆ. ಬಟ್ಟೆ ಎಂದಮೇಲೆ ಹಾಸು-ಹೊಕ್ಕು ಎರಡೂ ಇರಲೇಬೇಕು. ವಿದ್ಯೆ, ಅವಿದ್ಯೆ ಅಥವಾ ಜ್ಞಾನ ಮತ್ತು ಕರ್ಮ ಇವೆರಡೂ ನಮ್ಮ ಬಾಳ-ಬಟ್ಟೆಯ ಹಾಸು-ಹೊಕ್ಕು. ಅವೆರಡರಲ್ಲಿ ಒಂದಿಲ್ಲದಿದ್ದರೂ ನಮ್ಮ ಬಾಳಬಟ್ಟೆಯು ಸಿದ್ಧವಾಗಲಾರದು. ವಿದ್ಯೆ ಎಂದರೆ ಜ್ಞಾನ ಮಾಡಿಕೊಳ್ಳುವುದು, ಅವಿದ್ಯೆ ಎಂದರೆ ಕರ್ಮ ಅಥವಾ ದುಡಿಯುವುದು ಎಂದರ್ಥ. ಲಕ್ಷಾಂತರ ವರುಷದ ಜೀವವಿಕಾಸದ ಕಥೆಯನ್ನು ನೋಡಿದರೂ ಜ್ಞಾನ ಮತ್ತು ಕರ್ಮ ಇವೆರಡೇ ಮಾನವನ ಎಲ್ಲ ಪ್ರಗತಿಗೆ ಕಾರಣವಾಗಿವೆ.
ವಿದ್ಯಾಂಚಾವಿದ್ಯಾಂಚ ಯಸ್ತದ್ವೇದೋಭಯಂ ಸಹ |
ಅವಿದ್ಯಯಾ ಮೃತ್ಯುಂ ತೀತ್ರ್ವಾ ವಿದ್ಯಯಾಮೃತತ್ವಮಶ್ನುತೇ ||
(ಈ.ಉ.11)
ಆತ್ಮವಿದ್ಯೆ ಹಾಗೂ ನಿಷ್ಕಾಮಕರ್ಮಗಳೆರಡೂ ಭಿನ್ನವಲ್ಲ. ಅವೆರಡನ್ನು ಕೂಡಿಯೇ ಅರಿಯಬೇಕು; ಅಳವಡಿಸಿಕೊಳ್ಳಬೇಕು. ಸಾಧಕನು ನಿಷ್ಕಾಮ ಕರ್ಮದಿಂದ ಮೃತ್ಯುವನ್ನು ದಾಟುತ್ತಾನೆ. ಆತ್ಮಜ್ಞಾನದಿಂದ ಅಮೃತತ್ವವನ್ನು ಹೊಂದುತ್ತಾನೆ.
ನಾವು ಮಾಡುವ ಕರ್ಮಗಳ ಉದ್ದೇಶ ಸರಿಯಾಗಿಲ್ಲದಿದ್ದರೆ ಆತ್ಮಜ್ಞಾನ ಅಥವಾ ಅತ್ಮಾನಂದವು ದೊರೆಯಲಾರದು. ಪರಮಸತ್ಯ ಪರಮಾತ್ಮನ ಅರಿವಿಲ್ಲದೆ ಮಾಡಿದ ಕರ್ಮವು ಬಂಧನಕ್ಕೆ ಕಾರಣವಾಗುತ್ತದೆ. ಬರೀ ಪ್ರಾಪಂಚಿಕ ಆಶೆ-ಆಕಾಂಕ್ಷೆಗಳ ಪೂರೈಸುವುದೇ ಕರ್ಮಗಳ ಉದ್ದೇಶವಲ್ಲ. ಅದಕ್ಕಿಂತಲೂ ಶ್ರೇಷ್ಠವಾದ ಉದ್ದೇಶವು ನಾವು ಮಾಡುವ ಕರ್ಮಕ್ಕೆ ಇದೆ. ಜೀವನದಲ್ಲಿ ಪರಮಶಾಂತಿ, ಪರಮಾನಂದವನ್ನು ಪಡೆಯುವುದೇ ನಾವು ಮಾಡುವ ಎಲ್ಲ ಕರ್ಮಗಳ ಪರಮೋದ್ದೇಶವಾಗಿದೆ.
ಓರ್ವ ಕಲಾವಿದನ ಕೈಯಲ್ಲಿ ಒಂದು ಕುಂಚ ಸಿಕ್ಕರೆ ಸಾಕು ಒಂದು ಸುಂದರವಾದ ಕಲಾಕುಸುಮವು ಅರಳಿಬಿಡುತ್ತದೆ. ಬೇರೆಯವರ ಕೈಯಲ್ಲಿ ಸಿಕ್ಕರೆ ಸುಂದರವಾದ ಕಲೆಯೂ ಕೆಟ್ಟು ಹೋಗುತ್ತದೆ. ನೂರು ವಸಂತಗಳ ನಮ್ಮ ಆಯುಷ್ಯವೇ ಚಿತ್ರ ಬರೆಯುವ ಪರದೆ. ಸುಂದರವಾದ ಕರ್ಮಗಳೆಂಬ ಕುಂಚನ್ನು ಹಿಡಿದು, ಭಾವದ ಬಣ್ಣನ್ನು ಬಳಸಿ, ಜ್ಞಾನದ ಬೆಳಕಿನಲ್ಲಿ ನಾವು ನಮ್ಮ ಜೀವನದ ಅಪ್ರತಿಮವಾದ ಚಿತ್ರವನ್ನು ಬರೆಯಬಹುದಾಗಿದೆ. ಹೀಗೆ ಸುಜ್ಞಾನ, ಸತ್ಕರ್ಮಗಳಿಂದ ನಾವು ಈ ಜಗತ್ತಿನಲ್ಲಿ ಸುಂದರವಾದ ಬದುಕನ್ನು ಕಟ್ಟಿಕೊಳ್ಳಬೇಕು. ಪರಮಶಾಂತಿ, ಪರಮಾನಂದವನ್ನು ಅನುಭವಿಸಬೇಕು, ಇಲ್ಲದಿದ್ದರೆ ನಮ್ಮ ಜೀವನವು
ನಿರರ್ಥಕವಾದಂತೆಯೇ!
ಪ್ರಜಾಪ್ರೇಮಿಯಾದ ಮಹಾರಾಜ. ಅಂದು ಅವನ ಹುಟ್ಟುಹಬ್ಬ. ತನ್ನಿಮಿತ್ಯ ರಾಜನು ತನ್ನ ಪ್ರಜೆಗಳಿಗೆಲ್ಲ ಸಂತೋಷಕೂಟವನ್ನು ಏರ್ಪಡಿಸಿದ್ದ. ಇಷ್ಟೇ ಅಲ್ಲ ತನ್ನ ಹುಟ್ಟುಹಬ್ಬದ ದಿವಸ ಯಾರಾದರೂ ಅರಮನೆಗೆ ಬಂದು ತನ್ನನ್ನು ಭೇಟಿಯಾಗಬಹುದು ಎಂದು ಡಂಗುರ ಸಾರಿಸಿದ. ರಾಜನ ದರ್ಶನ ಹಾಗೂ ಸಂತೋಷಕೂಟ ಎರಡೂ ದೊರೆಯುತ್ತವೆ ಎಂದಮೇಲೆ ಕೇಳುವುದೇನಿದೆ? ಊರಿಗೆ ಊರೇ ಅರಮನೆಯತ್ತ ಮುಖ ಮಾಡಿತು. ರಾಜನ ದರ್ಶನಕ್ಕಾಗಿ ಅರಮನೆಗೆ ಬರುವವರಿಗೆಲ್ಲ ದಾರಿಯುದ್ದಕ್ಕೂ ಬಗೆ ಬಗೆಯಾದ ತಿಂಡಿ-ತಿನುಸುಗಳು, ಬಟ್ಟೆ-ಬರೆ, ಉಡಿಗೆ-ತೊಡಿಗೆಗಳನ್ನು, ಸಂಗೀತ-ನೃತ್ಯವನ್ನೂ ಉಚಿತವಾಗಿ ಕೊಡುವ ಏರ್ಪಾಡು ಮಾಡಿದ್ದರು. ಬಂದವರೆಲ್ಲರೂ ಉಚಿತವಾಗಿದ್ದ ತಿಂಡಿ-ತಿನುಸು, ಉಡಿಗೆ-ತೊಡಿಗೆ, ಸಂಗೀತ-ನೃತ್ಯಗಳಲ್ಲಿಯೇ ಮಗ್ನರಾಗಿ ಬಿಟ್ಟರು. ಅರಮನೆಯ ಹೂದೋಟದಲ್ಲಿದ್ದ ರಾಜನತ್ತ ಯಾರೊಬ್ಬರೂ ಹೋಗಲಿಲ್ಲ. ಸಂಜೆಯ ಸಮಯಕ್ಕೆ ಒಬ್ಬ ಹಿರಿಯ ಅನುಭವಿಕ ರೈತನು ಅರಮನೆಗೆ ಬಂದ. ತಕ್ಷ ಣ ರಸ್ತೆಯ ಬದಿಯಲ್ಲಿದ್ದ ಅಂಗಡಿಯವರು ಬನ್ನಿ ಬನ್ನಿ ಎಂದು ಕರೆದು 'ಇದರಲ್ಲಿ ನಿಮಗೇನು ಬೇಕು ತೆಗೆದುಕೊಳ್ಳಿ, ಎಲ್ಲವೂ ಉಚಿತ' ಎಂದು ಹೇಳಿದರು. ರೈತ ಹೇಳಿದ 'ನನಗೇನೂ ಬೇಡ, ಮಹಾರಾಜನಿಗೆ ಭೆಟ್ಟಿಯಾಗಬೇಕು ಅಷ್ಟೇ!' ಇಷ್ಟು ಹೇಳಿ ರೈತನು ನೇರವಾಗಿ ಹೂದೋಟದಲ್ಲಿದ್ದ ರಾಜನಿಗೆ ಭೇಟಿಯಾದ. 'ಬೆಳಗಿನಿಂದ ಸಂಜೆಯವರೆಗೆ ದಾರಿ ಕಾಯ್ದರೂ ಯಾರೂ ಬಂದಿರಲಿಲ್ಲ, ಈಗ ನೀನೊಬ್ಬನಾದರೂ ಬಂದೆಯಲ್ಲಾ' ಎಂದು ರಾಜನು ವಾತ್ಸಲ್ಯದಿಂದ ರೈತನನ್ನು ಆಲಂಗಿಸಿದಾಗ ಈರ್ವರ ಕಣ್ಣುಗಳಲ್ಲಿ ಆನಂದ ಭಾಷ್ಪ ಧಾರೆಯಿಟ್ಟಿತ್ತು!!
ನಾವಿರುವ ಈ ಪ್ರಪಂಚವೇ ಪರಮಾತ್ಮನ ಹೂದೋಟ. ನಾವೆಲ್ಲರೂ ಪ್ರಜೆಗಳು. ಭಕ್ತ ವತ್ಸಲನಾದ ಪರಮಾತ್ಮನು ನಮಗೆ ದರ್ಶನವನ್ನಿತ್ತು ನಮ್ಮನ್ನು ಉದ್ಧರಿಸಬೇಕೆಂದು ನಮಗಾಗಿ ನಿತ್ಯ ದಾರಿ ಕಾಯುತ್ತಾನೆ. ಪ್ರಪಂಚದ ವಿಷಯ ವ್ಯಾಮೋಹಗಳಲ್ಲಿ ಆಕಂಠಪೂರ್ತಿ ಮುಳುಗಿದ ನಮಗೆ ಆ ಮಹಾದೇವನತ್ತ ಹೋಗಲು ಸಮಯವೆಲ್ಲಿದೆ? ಬುದ್ಧ, ಬಸವ, ಮಹಾವೀರ, ಜ್ಞಾನೇಶ್ವರ ಮೊದಲಾದ ಬೆರಳಣಿಕೆಯ ಮಹಾತ್ಮರು ಮಾತ್ರ ಪ್ರಪಂಚದ ಎಲ್ಲ ಬಂಧನಗಳನ್ನು ಹರಿದೊಗೆದು ಆ ಪರಮಾತ್ಮನ ದಿವ್ಯ ದರ್ಶನ ಪಡೆದು ಧನ್ಯರಾದರು.
ಆಧಾರ : ಈಶ ಪ್ರಸಾದ
〰〰〰〰〰〰〰〰〰〰〰

ಸಕಾರಾತ್ಮಕ ಚಿಂತನೆ
ಒಬ್ಬ ವ್ಯಕ್ತಿಯಿದ್ದ. ಆತ ಒಬ್ಬಂಟಿಯಾಗಿದ್ದ. ಜತೆಯೂ ಮಾತನಾಡುತ್ತಿರಲಿಲ್ಲ. ತನ್ನ ಪಾಡಿಗೆ ತಾನು ಆಫೀಸಿಗೆ ಹೋಗುತ್ತಿದ್ದ. ಬರುತ್ತಿದ್ದ. ತರಕಾರಿ ಕೊಳ್ಳುವಾಗ, ದಿನಸಿ ಅಂಗಡಿಯಲ್ಲಿ ಎಲ್ಲಿಯೂ ಆತ ನಗುತ್ತಿದ್ದದ್ದನ್ನು ಯಾರೂ ನೋಡಿರಲಿಲ್ಲ. ನಿಗೂಢ ಎನಿಸುತ್ತಿದ್ದ. ಹೀಗೆ ವರ್ಷಗಳೇ ಕಳೆದಿದ್ದವು. ಎಂದಿನಂತೆ ಪೇಪರ್‌ನವರು ಪೇಪರ್ ಹಾಕಿ ‘ಬಿಲ್’ ಎಂದು ಕೂಗಿ, ಬೆಳ್ಳಂಬೆಳಗ್ಗೆಯೇ ಸಿಂಡರಿಸಿದ ಇವರ ಮುಖ ನೋಡಬೇಕಲ್ಲಾ ಎಂದು ಗೊಣಗಿಕೊಳ್ಳುತ್ತಿದ್ದ. ಅಷ್ಟರಲ್ಲಿ ಬಾಗಿಲು ತೆಗೆದು ಆತ ಹಸನ್ಮುಖನಾಗಿ ‘ಎಷ್ಟಾಯ್ತು?’ ಎಂದು ಕೇಳಿದ. ಪೇಪರ್ ಹಾಕುವವನಿಗೆ ಆಶ್ಚರ್ಯ. ಅವನ ಮುಖ ನಿಂತ. ‘ಮನೆಯಲ್ಲಿ ಎಲ್ಲರೂ ಹೇಗಿದ್ದಾರೆ?’ ಎಂದು ಪ್ರಶ್ನಿಸಿದ. ಈಗಂತೂ ಪೇಪರ್‌ನವ ಮೂರ್ಛೆ ಬೀಳುವುದು ಬಾಕಿ!
ಆತ ಊರಿನಲ್ಲಿ ಅರ್ಧ ಜನಕ್ಕೆ ‘ಆ ವ್ಯಕ್ತಿಗೆ ಹುಷಾರಿಲ್ಲ, ಅವರು ನಗುತ್ತಿದ್ದಾರೆ’ ಎಂದು ಸಾರುತ್ತಾ ಬಂದ. ನಂತರ ತರಕಾರಿಯವನ ಬಳಿ, ದಿನಸಿಯವನ ಬಳಿಯೂ ಹೀಗೆ ಮಾತನಾಡಿದ. ಎಲ್ಲರೂ ಇವನನ್ನು ನೋಡುವವರೆ. ಆತ ಪ್ರತಿದಿನ ದೇವಸ್ಥಾನಕ್ಕೆ ಹೋಗುತ್ತಿದ್ದ. ಅಲ್ಲಿಯೂ ಹೀಗೆ ಇರುತ್ತಿದ್ದ. ಬದಲಾದ ಇವನ ಹಾವಭಾವ ನೋಡಿ ಪೂಜಾರಿ ಬಂದು ಮಾತನಾಡಿಸಿದ.‘ನಾನು ದಿನವೂ ನಿಮ್ಮನ್ನು ಆದರೆ ಹಿಂದೆಂದಿಗಿಂತಲೂ ವಿಭಿನ್ನವಾಗಿ ಇಂದು ಕಾಣುತ್ತಿದ್ದೀರಿ. ಏನಾಯ್ತು ನಿಮಗೆ’ ಎಂದರು. ಅದಕ್ಕೆ ಆತ ‘ ಯಾವಾಗಲೂ ನಕಾರಾತ್ಮಕವಾಗಿ ಚಿಂತಿಸುವ, ಬದುಕುವವರಿಗೆ ಮಾತ್ರ ರೋಗಗಳು ಬರುತ್ತವೆಯಂತೆ.ನಾನು ಎಲ್ಲರಂತೆ ಇದ್ದೆ. ಆದರೆ ಎಂದೂ ನಕಾರಾತ್ಮಕವಾಗಿ ಚಿಂತಿಸಿದವನಲ್ಲ.ಆದರೆ ನನಗೆ ಬದುಕುಳಿಯಲಾರದಂತ ರೋಗ ಬಂದುಬಿಟ್ಟಿತು.
ಹೇಗಿದ್ದರೂ ಸಾಯುತ್ತೇನೆ ಎಂದು ಗೊತ್ತಾಗಿತ್ತು. ಜೀವನದ ಮೇಲೆ ನನ್ನ ಸಿಟ್ಟು ಪ್ರದರ್ಶಿಸಲು ಹಾಗಿರುತ್ತಿದ್ದೆ. ನಗು ದೂರ ಮಾಡಿದ್ದೆ’ ಎಂದ. ಅದಕ್ಕೆ ಪೂಜಾರಿ ‘ಹಾಗಿದ್ದರೆ ಈಗೇಕೆ ನಗುತ್ತಾ ಎಲ್ಲರೊಂದಿಗೆ ಚೆನ್ನಾಗಿ ಎಂದ. ಅದಕ್ಕೆ ವ್ಯಕ್ತಿ ‘ ನಾನು ಈ ಕುರಿತು ಆಲೋಚಿಸುತ್ತಿದ್ದೆ. ಆಗ ನಕಾರಾತ್ಮಕವಾಗಿದ್ದ ಕಾರಣಕ್ಕೆ ನನಗೆ ಅನಾರೋಗ್ಯ ಸ್ಥಿತಿ ಬಂದೊದಗಿದೆ ಎಂದಾದರೆ, ಸಕಾರಾತ್ಮಕವಾಗಿದ್ದು, ನಗುವಿನ ಕೈಹಿಡಿದರೆ ನನ್ನ ಆರೋಗ್ಯ ವೃದ್ಧಿಸುವುದಿಲ್ಲವೆ? ಅದೇ ಕಾರಣಕ್ಕೆ ಹೀಗೆ ನಗುತ್ತಾ ಇದ್ದೇನೆ. ಸಕಾರಾತ್ಮಕಶಕ್ತಿಯನ್ನೊಮ್ಮೆ ನಂಬಿ ನೋಡುತ್ತೇನೆ ಎಂದ. ಹೌದಲ್ಲವಾ? ನಕಾರಾತ್ಮಕ ಅಂಶಗಳು ಕೈಬೀಸಿ ಕರೆಯುತ್ತವೆ, ಆಕರ್ಷಿಸುತ್ತವೆ. ಆದರೆ ಬದುಕಲು ಬೇಕಾದ್ದು ಅದಲ್ಲ. ಸಕಾರಾತ್ಮಕ ಚಿಂತನೆ ಆರಂಭವಾದರೆ ಜಗತ್ತಿನ ಅರ್ಧ ಸಮಸ್ಯೆ ಕಡಿಮೆಯಾದಂತೆ ಕಾಣುತ್ತದೆ. ಸುಲಭ ಎನಿಸುತ್ತದೆ. ಏನೇ ಬಂದರೂ ಎದುರಿಸಬಲ್ಲೆ ಎಂಬ ಆತ್ಮವಿಶ್ವಾಸ ಮೂಡುತ್ತದೆ.

ಸಹಜ ಅಭಿವ್ಯಕ್ತಿಯ ಸೌಂದರ್ಯ
ಸಹಜ ಅಭಿವ್ಯಕ್ತಿಯ ಸೌಂದರ್ಯ
ಶ್ರೀನಿವಾಸ ಅರ್ಕ
ನಿಮ್ಮ ಅಂತರಂಗದ ತೃಪ್ತಿಗಾಗಿ ನೀವು ಹಾಡಿದಾಗ, ನಿಮ್ಮ ಕಂಠ ಸುಶ್ರಾವ್ಯವಾಗಿರುತ್ತದೆ. ಬೇರೆಯವರಿಗಾಗಿ ಹಾಡಲು ನೀವು ಪ್ರಯತ್ನಿಸಿದಾಗ, ಈ ಸಹಜವಾದ, ಅಂತರಂಗದ ರಾಗ ಕಳೆದುಹೋಗಬಹುದು. ನೀವು ಆತ್ಮ ತೃಪ್ತಿಗೆ, ಸಾಕ್ಷಾತ್ಕಾರಕ್ಕೆಂದು ನೃತ್ಯ ಮಾಡಬೇಕೆಂದಾಗ, ಯಾವುದೇ ಪೂರ್ವ ಸಿದ್ಧತೆ ಇಲ್ಲದೆ, ನೀವು ಸಹಜವಾಗಿ ನರ್ತಿಸಬಲ್ಲಿರಿ. ಆ ಸಂದರ್ಭದಲ್ಲಿ ಹಾಡು ಮತ್ತು ನೃತ್ಯ ನಿಮ್ಮ ಹೃದಯದ ಅಭಿವ್ಯಕ್ತಿಗಳಾಗಿರುತ್ತವೆ. ಮನಸ್ಸು ಕೇವಲ ದರ್ಶಕನಾಗಿರುತ್ತದೆ. ಹೃದಯ, ಯಾವುದೇ ತಾಳವಾದ್ಯಗಳ, ಪ್ರೇಕ್ಷಕರ ಅಗತ್ಯ ಬೀಳದ ಮಾರ್ಗದರ್ಶಿಯಾಗುತ್ತದೆ.
ನೃತ್ಯ ನಿಮ್ಮ ನಿಜವಾದ ಅಭಿವ್ಯಕ್ತಿ. ಈ ನೃತ್ಯವನ್ನು ನೀವು ವ್ಯವಸಾಯದ ದೃಷ್ಟಿಯಿಂದ ಮಾಡುತ್ತಿಲ್ಲ. ಯಾವುದೇ ಬಹುಮಾನ ಪಡೆಯಲು ನರ್ತಿಸುತ್ತಿಲ್ಲ ಅಥವಾ ಪ್ರೇಕ್ಷಕರ ಕೈ ಚಪ್ಪಾಳೆಯ ಸದ್ದನ್ನು ಕೇಳಲೂ ನೀವು ನರ್ತಿಸುತ್ತಿಲ್ಲ. ಯಾವುದೇ ಕೀಳು ಕಾರಣಗಳಿಲ್ಲದೆ ನೃತ್ಯ ಮಾಡುವುದು, ಆತ್ಮತೃಪ್ತಿ ತರುವ ಅನುಭವ. ಈ ನೃತ್ಯಕ್ಕೆ ತರಬೇತಿ ಬೇಕಿಲ್ಲ. ತಾಲೀಮು ನಡೆಸಬೇಕಿಲ್ಲ. ನಿಮ್ಮಲ್ಲಿರುವ ಎಲ್ಲ ಅಂಗಗಳು ಇದರ ಭಾಗವಾಗುತ್ತವೆ. ನೃತ್ಯ ಮಾಡುವಾಗ ಅವು ಅದರಲ್ಲಿ ಭಾಗವಹಿಸುತ್ತವೆ. ನೆಲ ಡೊಂಕಾಗಿದೆಯೇ, ಮಟ್ಟಸವಾಗಿದೆಯೇ, ಮೋಡಕವಿದ ವಾತಾವರಣವೇ, ಗಾಳಿ ಜೋರಾಗಿ ಬೀಸುತ್ತಿದೆಯೇ, ಪ್ರೇಕ್ಷಕರು ಇದ್ದಾರೆಯೇ, ಇಲ್ಲವೇ ಎಂಬುದರ ಕಡೆ ನಿಮ್ಮ ಜ್ಞಾನ ಆಗ ಹೋಗುವುದಿಲ್ಲ. ನಿಮಗೆ ನೃತ್ಯ ಮಾಡಬೇಕೆನ್ನಿಸುತ್ತದೆ, ಹಾಗಾಗಿ ನರ್ತಿಸುತ್ತೀರಿ. ಹಾಡುವುದು, ಇಂತಹದೇ ಪ್ರಕ್ರಿಯೆ. ಹಕ್ಕಿಗಳು ನಿಶಾಂತವಾಗಿ ಹಾಡುತ್ತಿರುತ್ತವೆ. ಕಾರಣ ಅದು ಅವುಗಳ ಸಹಜ ಅಭಿವ್ಯಕ್ತಿ.
ಅಹಂಕಾರದಲ್ಲಿ ಜೀವಿಸುವವರು ಹಾಡಲಾರರು, ನರ್ತಿಸಲಾರರು. ಅವರ ನೃತ್ಯದಲ್ಲಿ ಕಪಟವಿರುತ್ತದೆ. ಅವರು ಒಂದೊಂದು ಹೆಜ್ಜೆಯನ್ನು ಲೆಕ್ಕಾಚಾರ ಮಾಡಿ ಇಡುತ್ತಾರೆ. ಅವರಿಗೆ ನೃತ್ಯ ಮಾಡುವಾಗ ಇನ್ನೊಬ್ಬರ ಮೇಲೆ ಪ್ರಭಾವ ಬೀರಬೇಕಾಗಿರುತ್ತದೆ. ಇನ್ನೊಬ್ಬರನ್ನು ಸಂತೋಷಗೊಳಿಸಬೇಕೆಂಬ ಇರಾದೆ ಇರುತ್ತದೆ. ಅನೇಕ ಬಾರಿ ಅಭಿಮಾನ ಮತ್ತು ಅಹಂಕಾರ ಈ ಪದಗಳನ್ನು ಸಮನಾರ್ಥದಲ್ಲಿ ಉಪಯೋಗಿಸಲಾಗುತ್ತದೆ. ಆದರೆ ಅವುಗಳ ಅರ್ಥದಲ್ಲಿ ತುಂಬಾ ವ್ಯತ್ಯಾಸವಿದೆ. ಅಭಿಮಾನ ಎಂಬುದು ಆನಂದಾಭಿವ್ಯಕ್ತಿಯ ಮೊದಲ ಹೆಜ್ಜೆ. ನಿಮಗೆ ನಿಮ್ಮ ಕೆಲಸದಲ್ಲಿ ಅಭಿಮಾನವಿದೆ. ಅಂದರೆ ನೀವು ಈ ಕೆಲಸ ಮಾಡುವಾಗ ಆನಂದಿಸುತ್ತೀರಿ ಎಂದರ್ಥ. ಇದು ನಿಮ್ಮ ಪ್ರವೃತ್ತಿಗೆ, ಅಭಿರುಚಿಗೆ ತಕ್ಕದಾಗಿದೆ. ನಿಮ್ಮ ಕೆಲಸದಲ್ಲಿ ನಿಮಗೆ ಅಭಿಮಾನವಿಲ್ಲ ಎಂದರೆ ನೀವು ತಪ್ಪು ಕೆಲಸದಲ್ಲಿದ್ದೀರಿ ಎಂದರ್ಥ. ನೀವು ಅಥವಾ ನಿಮ್ಮ ಪ್ರೀತಿ ಪಾತ್ರರಾದವರು ಏನನ್ನಾದರೂ ಹಿರಿಯದನ್ನು ಗಳಿಸಿದಾಗನಿಮಗೆ ಅಭಿಮಾನವೆನಿಸುತ್ತದೆ. ನಿಮ್ಮ ಕಾರ್ಯ ಕುಶಲತೆಯಲ್ಲಿ, ಕಾರ್ಯಕ್ಷಮತೆಯಲ್ಲಿ ಆತ್ಮ ವಿಶ್ವಾಸ ಮೂಡಿದಾಗ ನಿಮಗೆ ಅಭಿಮಾನವೆನಿಸುತ್ತದೆ. ಅಭಿಮಾನ ಎಂಬುದು ನಿಮ್ಮ ಬಗ್ಗೆ ಉನ್ನತ ಮಟ್ಟದ ಚಿತ್ರವನ್ನು ನೀಡುತ್ತದೆ. ಅದು ನಿಮ್ಮ ವ್ಯಕ್ತಿತ್ವವನ್ನೇ ಆವರಿಸಿಕೊಂಡರೆ, ಅದು ದುರಭಿಮಾನವೆನಿಸುತ್ತದೆ. ವಿನಯದಿಂದ ಕೂಡಿದ ಅಭಿಮಾನ ಆರೋಗ್ಯಕರವಾದದ್ದು. ದುರಭಿಮಾನ ವಿನಾಶಕಾರಿ. ಆದರೂ ಆತ್ಮಪ್ರಜ್ಞೆಯ ಅವಕೋಕನಕ್ಕೆ ಸ್ವಲ್ಪ ಮಟ್ಟಿನ ಅಭಿಮಾನ ಇರಬೇಕು. ಸ್ವಾರ್ಥದಿಂದ ಪ್ರೇರಿತವಾದ ಅಭಿಮಾನನಿಮ್ಮನ್ನು ನಿಮ್ಮದೇಜಾಲದಲ್ಲಿ ಸಿಕ್ಕಿಸುತ್ತಾ ಹೋಗುತ್ತದೆ. ಜೇಡ ತನ್ನ ಜಾಲದಿಂದ ಹೊರಗೆ ಬರಬಲ್ಲುದು. ಆದರೆ ದುರಭಿಮಾನದ ಜಾಲ ಅದೃಶ್ಯವಾದದ್ದು, ಹಾಗೂ ಅನೇಕ ಬಾರಿ ಕ್ಲಿಷ್ಟವಾದದ್ದು. ಅಹಂಕಾರ ಎಂಬುದು ಅಭಿಮಾನದ ತುರೀಯಾವಸ್ಥೆ. ಇದು ಸುಳ್ಳು ಅಭಿಮಾನದ ರೂಪ. ಆಹಂಕಾರ ಎಂಬುದು ಬೇರೆಯವರು ನಿಮ್ಮ ಬಗ್ಗೆ ಏನು ಆಲೋಚಿಸುತ್ತಾರೆ ಎಂಬುದರ ಮೇಲೆ ನಿರ್ಧಾರಿತವಾಗುತ್ತದೆ. ಇದು ಚಂಚಲ ಎಂಬುದು ಬಿಡಿಸಿ ಹೇಳಬೇಕಾಗಿಲ್ಲ. ಏಕೆಂದರೆ ಬೇರೆಯವರ ಅಭಿಪ್ರಾಯ ಒಂದೇ ರೀತಿ ಇರುವುದಿಲ್ಲ ಅಲ್ಲವೇ?

ನಿಮ್ಮನ್ನು ನೋಡಿಕೊಳ್ಳುವವರಿರುತ್ತಾರೆ
ನಿಮ್ಮನ್ನು ನೋಡಿಕೊಳ್ಳುವವರಿರುತ್ತಾರೆ
ಶ್ರೀಶ್ರೀ ರವಿಶಂಕರ್
ಹಿರಿಯರಾದವರು, ತಾವು ಮತ್ತೊಬ್ಬರ ಮೇಲೆ ಅವಲಂಬಿತರಾಗಿದ್ದೇವೆæ, ಸ್ವತಂತ್ರರಾಗಿಬಿಡಬೇಕು ಎಂದು ದುಃಖಿಸುತ್ತಿರುತ್ತಾರೆ. ನೋಡಿ, ಇದುವರೆಗೂ ಯಾವ ಮಗುವೂ ಸ್ವತಂತ್ರವಾಗಿಲ್ಲ. ನೀವು ಮಗುವಾಗಿದ್ದಾಗ ನಿಮ್ಮನ್ನು ಹೆತ್ತವರು ನಿಮ್ಮನ್ನು ನೋಡಿಕೊಂಡರು. ನಿಮ್ಮ ಮುದಿತನದಲ್ಲಿ ನಿಮ್ಮ ಮಕ್ಕಳು ಅಥವಾ ಬೇರೆ ಯಾರೋ ನಿಮ್ಮನ್ನು ನೊಡಿಕೊಳ್ಳುತ್ತಾರೆ. ಆದ್ದರಿಂದ ಆರಂಭದಿಂದ ಕೊನೆಯವರೆಗೂ ಜೀವನವು ಅವಲಂಬಿಯಾಗಿದೆ. ಇದರ ನಡುವೆ ನಾವು ಸ್ವತಂತ್ರರು ಎಂದುಕೊಂಡರೂ, ಅನೇಕ ವಿಷಯಗಳ ಮೇಲೆ ಅವಲಂಬಿಗಳಾಗಿದ್ದೇವೆ. ನಿಮ್ಮ ಗಮನವೆಲ್ಲಾ ದೈವದ ಮೇಲಿದ್ದರೆ ನಿಮಗೆ ಅವಲಂಬನೆಯ ಹೊರೆಯನ್ನು ಅನುಭವಿಸುವುದಿಲ್ಲ ಅಥವಾ ಸ್ವತಂತ್ರರಾಗಬೇಕೆಂಬ ಆಶಾಭಂಗ, ಚಡಪಡಿಕೆಯೂ ಇರುವುದಿಲ್ಲ. ಎರಡೂ ಮಾಯವಾಗುತ್ತವೆ.
ಸ್ವತಂತ್ರರಾಗಬೇಕೆಂಬ ಭಾವನೆಯುಳ್ಳವರುಆಶಾಭಂಗಕ್ಕೊಳಗಾಗುತ್ತಾರೆ. ಏಕೆಂದರೆ ಸ್ವಾತಂತ್ರ್ಯಕ್ಕಾಗಿ ಕಾಯುವುದೇ ಆಶಾಭಂಗತನ. ಎಚ್ಚೆತ್ತು ನೋಡಿ. ನೀವು ಮಗುವಾಗಿದ್ದಾಗ ಅವಲಂಬಿಗಳಾಗಿರಲಿಲ್ಲವೆ? ''ನನ್ನ ಹೆತ್ತವರ ಮೇಲೆ ಅವಲಂಬಿಗಳಾಗಿರುವುದರಿಂದ ನಾನೆಲ್ಲಿಂದ ಬಂದೆನೊ ಅಲ್ಲಿಗೇ ಮರಳಿ ಹೋಗಿಬಿಡುತ್ತೇನೆ'' ಎನ್ನುವುದಿಲ್ಲ ಒಂದು ಮಗು! ಹೆತ್ತವರ ರೂಪದಲ್ಲಿ, ಮಕ್ಕಳ ರೂಪದಲ್ಲಿ ಅಥವಾ ಸ್ನೇಹಿತರ ರೂಪದಲ್ಲಿ, ಎಲ್ಲಿಂದಲೇ ಸಹಾಯ ಬರಲಿ, ಅದೆಲ್ಲವೂ ಒಂದೇ ಮೂಲದಿಂದ ಎಂದರೆ ದೈವತ್ವದಿಂದ ಬರುತ್ತಿದೆ. ಭಗವಂತನೇ ನಿಮ್ಮ ಹೆತ್ತವರಾಗಿ ನಿಮ್ಮನ್ನು ಪೋಷಿಸಿದ.
ನಮ್ಮಲ್ಲಿ ಬೆಳೆಸಿಕೊಂಡಿರುವ ಅಸುರಕ್ಷ ತೆಯ ಭಾವವನ್ನು ಹೊರಕ್ಕೆಸೆದು ಸುಟ್ಟುಬಿಡಿ. ನಿಮ್ಮ ಮಕ್ಕಳೇ ನಿಮ್ಮನ್ನು ನೋಡಿಕೊಳ್ಳುತ್ತಾರೆ ಎಂದುಕೊಳ್ಳಬೇಡಿ. ನಿಮ್ಮ ಕೊನೆಯ ಉಸಿರನ್ನು ಬಿಡುತ್ತಿರುವಾಗ ನಿಮ್ಮ ಕೆಲಸದವರೊ ಅಥವಾ ಪಕ್ಕದ ಮನೆಯವರೊ ಬಂದು ಸಹಾಯಮಾಡಬಹುದು. ಯಾರಿಗೆ ಗೊತ್ತು? ಯಾರೇ ನಿಮಗೆ ಸಹಾಯ ಮಾಡಿದರೂ ಭಗವಂತನೇ ಬಂದು ನಿಮಗೆ ಆ ರೂಪದಲ್ಲಿ ಸಹಾಯ ಮಾಡುತ್ತಿದ್ದಾನೆ. ನಿಮಗೆ ಸಹಾಯ ಮಾಡುವ ಹೊಣೆಯನ್ನು ಆ ದೈವೀ ಶಕ್ತಿಗೆ ಕೊಟ್ಟುಬಿಡಿ. ನಿಮಗೆ ಯಾವಾಗ ಅವಶ್ಯಕವೋ ಆಗ, ಯಾವುದೇ ರೂಪದಲ್ಲಿ ಬಂದು ನಿಮಗೆ ಸಹಾಯ ಮಾಡಲಿ. ಯಾರ ಸಹಾಯದಿಂದಲೂ ನೀವು ಮುಜುಗರ ಪಡಬೇಕಿಲ್ಲ ಅಥವಾ ಹೊರೆಯನ್ನು ಅನುಭವಿಸಬೇಕಿಲ್ಲ. ತಿಳಿಯಿತೆ?
''ನಾನು ಯೋಗ್ಯವಾದ ವ್ಯಕ್ತಿ ನನಗೆಲ್ಲವೂ ಬರಬೇಕು'' ಎಂದುಕೊಂಡರೆ ಸಮಸ್ಯೆಗಳು ಬರುತ್ತವೆ, ದೂರುಗಳು ಬರುತ್ತವೆ. ಆಗ ನಿಮ್ಮ ಯೋಗ್ಯತೆಯೂ ಕಡಿಮೆಯಾಗುತ್ತದೆ. ದೂರುಗಳು ಕೊನೆಗೊಂಡಾಗ ಸರಳತೆ, ಸುಲಭತೆ, ವಿನಮ್ರತೆ ಮೂಡುತ್ತದೆ. ನಮಗೇನು ಬರಬೇಕೊ ಅದಕ್ಕಿಂತಲೂ ಹೆಚ್ಚಾಗಿ ಆಶೀರ್ವದಿಸಲ್ಪಟ್ಟೆವೆಂದು ಭಾವಿಸಿದಾಗ ಕೃತಜ್ಞತೆಯು ಉಕ್ಕುತ್ತದೆ. ಆಗ ಎಲ್ಲವೂ ನಿಮ್ಮ ಬಳಿಗೆ ತಾನಾಗಿಯೇ ಬರಲಾರಂಭಿಸುತ್ತದೆ. ನಿಮಗೆಲ್ಲಾ ಬರಬೇಕೆಂದು ತಗಾದೆ ಮಾಡಲಾರಂಭಿಸಿದರೆ, ನಿಮ್ಮೊಳಗಿರುವ ಏನೋ ಒಂದು ಸಣ್ಣದಾಗುತ್ತದೆ. ನಾವು ಮಾಡಿರುವ ಪರಿಶ್ರಮಕ್ಕೆ ಪುರಸ್ಕರಿಸಬೇಕು, ತಮಗೆ ಸಂಬಳ ಕೊಡಬೇಕು ಎಂದು, ಓರ್ವ ನೌಕರರ ಸ್ಥಾನದಲ್ಲಿ ನಿಂತು ತಗಾದೆ ಮಾಡಿದಂತಿರುತ್ತದೆ. ತಗಾದೆ ಮಾಡದೆ ಭಗವಂತ ಆಶೀರ್ವದಿಸಿದ್ದಾನೆ ಎಂದು ಭಾವಿಸಿದರೆ, ನಿಮ್ಮನ್ನು ಬಹಳ ಚೆನ್ನಾಗಿ ನೋಡಿಕೊಳ್ಳಲಾಗುತ್ತದೆ.
ಕನ್ನಡ ವಚನವೊಂದು, ''ಶರಣು ಹೋಗು ಜೀವನ, ರಹಸ್ಯದಲಿ ಸತ್ಯದಲಿ'' ಎನ್ನುತ್ತದೆ. ಜೀವನ ಬಗ್ಗೆ ಹೆಚ್ಚಾಗಿ ತಿಳಿದಷ್ಟೂ, ತಿಳಿಯದೆ ಇರುವುದು ಇನ್ನಷ್ಟು ಹೆಚ್ಚುತ್ತದೆ. ಒಂದು ಪುಟ್ಟ ಮಗುವಿನ ಜಗತ್ತು ಅದರ ಆಟಿಕೆಗಳು ಸ್ನೇಹಿತರು ಮತ್ತು ಕುಟುಂಬವಷ್ಟೆ. ಮಗು ಬೆಳೆದಾಗ ಹೊರಗಿನ ವಿಶಾಲವಾದ ಜಗತ್ತನ್ನು ತಿಳಿಯುತ್ತದೆ ಮತ್ತು ಅರಿಯಬೇಕಾದದ್ದು ಇನ್ನಷ್ಟಿರುತ್ತದೆ. ನಮ್ಮ ತಾರ್ಕಿಕ ಬುದ್ಧಿಯನ್ನು ಬಿಟ್ಟು ಸೃಷ್ಟಿಯ ಸೃಷ್ಟಿಕರ್ತನೆ ನಮ್ಮೊಳಗಿದ್ದಾನೆ ಎಂದು ಮೌನವಾದ ಧ್ಯಾನದಲ್ಲಿ ಅರಿತಾಗ ಅಪಾರ ಶಾಂತಿ ಮತ್ತು ತೃಪ್ತಿ ನಮ್ಮ ಆಂತರ್ಯದಲ್ಲಿ ಉಕ್ಕುತ್ತದೆ. ಭಗವಂತನೇ ನಿಮ್ಮೊಳಗಿರುವಾಗ ನಿಮ್ಮನ್ನು ನೋಡಿಕೊಳ್ಳುವವರು ಯಾರು ಎಂಬ ಪ್ರಶ್ನೆಯೇಕೆ? ಶರಣಾಗಿ, ಪ್ರಶಾಂತವಾಗಿ, ಸಂತೋಷದಿಂದಿರಿ.

ಸೋಲನ್ನು ಗೆಲುವನ್ನಾಗಿಸುವ ಬಗೆ
★ಸೋಲನ್ನು ಗೆಲುವನ್ನಾಗಿಸುವ ಬಗೆ★
ಅಮೆರಿಕದ ರಾಷ್ಟ್ರಾಧ್ಯಕ್ಷರಲ್ಲಿ ಜಾರ್ಜ್ ವಾಷಿಂಗ್‍ಟನ್ ಹಾಗೂ ಅಬ್ರಹಾಂ ಲಿಂಕನ್ ಅವರಷ್ಟು ಅತ್ಯಂತ ವಿಭಿನ್ನ ಗುಣದ ವ್ಯಕ್ತಿಗಳನ್ನು ಕಾಣುವುದು ಕಷ್ಟ. ಇಬ್ಬರ ವ್ಯಕ್ತಿತ್ವಗಳಲ್ಲಿ ಯಾವ ಸಾಮ್ಯತೆಯೂ ಕಾಣುವುದಿಲ್ಲ. ಜಾರ್ಜ್ ವಾಷಿಂ-ಗ್‍ಟನ್ ಅತ್ಯಂತ ಶ್ರೀಮಂತ ಮನೆತನದಿಂದ ಬಂದವರು.
ಆತ ಸದಾ ಏಕಾಂಗಿಯಾಗಿದ್ದು, ಸಂಪ್ರದಾಯವನ್ನು ಪಾಲಿಸುವ ಹಾಗೂ ಹತ್ತಿರ ಹೋಗಲು ಯಾರಿಗಾದರೂ ಭಯ ತರಿಸುವಂತಹ ವ್ಯಕ್ತಿತ್ವ ಅವರದು. ಆದರೆ, ಅಬ್ರಹಾಂ ಲಿಂಕನ್ ಇದಕ್ಕೆ ವ್ಯತಿರಿಕ್ತವೆಂಬಂತೆ ತೀರ ಬಡತನದಿಂದ ಬಂದವರು. ಯಾವುದೇ ಜನರ ಗುಂಪಿನಲ್ಲಿ ಸೇರಿ ಹೋಗುವಂತಹ ಗುಣ ಅವರದು. ಯಾರು ಏನೇ ಟೀಕೆ ಮಾಡಿದರೂ ಅದನ್ನು ಸಹಿಸಿಕೊಂಡು ತಮ್ಮ ಮೇಲೆಯೇ ನಗೆ ಚಟಾಕಿ ಹಾರಿಸುವ ಸುಲಭದ ಗುಣ ಲಿಂಕನ್ನರದು. ಆದರೆ, ಇವರಿಬ್ಬರ ನಡುವೆ ಅತ್ಯಂತ ಸಮಾನವಾದದ್ದೆಂದರೆ ಇಬ್ಬರೂ ಅನುಭವಿಸಿದ ಸೋಲಿನ ಸರಪಳಿಗಳು.
ಅಬ್ರಹಾಂ ಲಿಂಕನ್ ಜೀವನ ಸೋಲಿಗೆ ಪ್ರಸಿದ್ಧವಾದದ್ದು. ಸಂಕ್ಷಿಪ್ತವಾಗಿ ಅದನ್ನು ಹೇಳಬಹುದಾದದ್ದು ಹೀಗೆ. ಅವರೊಬ್ಬ ಉದ್ಯಮಿಯೊಂದಿಗೆ ಕೆಲಸ ಮಾಡಲು ಹೋಗಿ ಸೋತರು. ನಂತರ ರಾಜ್ಯದ ಚುನಾವಣೆಯಲ್ಲಿ ಸೋಲು. ಮತ್ತೊಮ್ಮೆ ತಾವೇ ವ್ಯಾಪಾರ ಮಾಡಲು ಹೋಗಿ ಅಪಾರ ಸೋಲು ಕಂಡರು. ಮುಂದೆ ಎಷ್ಟೋ ವರ್ಷಗಳ ಕಾಲ ಸಾಲದ ಹಣವನ್ನು ಕಟ್ಟುವುದರಲ್ಲೇ ಅವರ ಗಳಿಕೆ ಕರಗಿತು. ಮುಂದೊಮ್ಮೆ ರಾಜ್ಯದ ಚುನಾವಣೆಯಲ್ಲಿ ಗೆಲುವು, ಆದರೆ ಆಗ ಅವರ ಹೆಂಡತಿ ತೀರಿಹೋದಳು.
ಆಗ ಅವರು ತುಂಬ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು, ಖಿನ್ನತೆ ಬಹುಕಾಲ ಕಾಡಿತು. ರಾಜ್ಯದ ಶಾಸನಸಭೆಯ ಅಧ್ಯಕ್ಷ ಸ್ಥಾನಕ್ಕೆ ಸ್ವರ್ಧಿಸಿ ಸೋತರು. ಮುಂದೆ ಕಾಂಗ್ರೆಸ್‌ನ ಸ್ಥಾನಕ್ಕೆ ಚುನಾವಣೆಯಲ್ಲಿ ಸೋಲು. ಅಮೆರಿಕದ ಸೆನೆಟ್‌ಗೆ ಆರಿಸಿ ಬರಲು ಪ್ರಯತ್ನಿಸಿ ಸೋತರು. ಮುಂದೆ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದಾಗ ಅವರಿಗೆ ನೂರು ವೋಟು ಕೂಡ ಬರಲಿಲ್ಲ. ಕೊನೆಗೊಮ್ಮೆ ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಿದಾಗ ಯಶ ದೊರಕಿತು. ಅದು ಅವರನ್ನು ಅಮೆರಿಕದ ಅತ್ಯಂತ ಯಶಸ್ವಿ ರಾಷ್ಟ್ರಪತಿಯನ್ನಾಗಿ ಮಾಡಿತು.
ಜಾರ್ಜ್ ವಾಷಿಂಗ್‍ಟನ್ ಕಮಾಂಡರ್ ಆಗಿ ತಮ್ಮ ಜೀವನದುದ್ದಕ್ಕೂ ಗೆದ್ದದ್ದು ಎರಡೇ ಯುದ್ಧಗಳನ್ನು. ಉಳಿದವುಗಳಲ್ಲಿ ಬರೀ ಸೋಲು. ಕೊನೆಯ ಯುದ್ಧದಲ್ಲಂತೂ ಬ್ರಿಟಿಷ್ ಸೈನ್ಯ ಇವರನ್ನು ಲಾಂಗ್ ಐಲಾಂಡ್‌ನಿಂದ, ಬ್ರೂಕ್ಲಿನ್ ಸೇತುವೆಯಿಂದ, ಮ್ಯಾನ್‌ಹಟನ್ ದ್ವೀಪದವರೆಗೆ ಹಿಂದೆ ಓಡಿಸಿತು. ಎಲ್ಲ ಸೋಲುಗಳನ್ನು ತಾಳ್ಮೆಯಿಂದ ತಡೆದುಕೊಂಡ ವಾಷಿಂಗ್‍ಟನ್ ಕೊನೆಯ ಹಂತದಲ್ಲಿ ಯುದ್ಧವನ್ನು ಗೆದ್ದೇ ಬಿಟ್ಟರು.
ಬ್ರಿಟಿಷ್ ಜನರಲ್ ಕಾರ್ನವಾಲೀಸ್ ಶರಣಾಗತಿ ಸೂಚಿಸುವಂತೆ ತನ್ನ ಖಡ್ಗವನ್ನು ನೀಡುತ್ತ ಹೇಳಿದ, ‘ಜನರಲ್, ನಿಮಗೆ ನನ್ನ ಸಲಾಮ್. ನಿಮ್ಮಂತಹ ನಾಯಕರನ್ನು ನಾನು ಇದುವರೆಗೂ ನೋಡಿಲ್ಲ. ಪ್ರತಿ ಕ್ಷಣದಲ್ಲೂ ಸೋಲನ್ನೇ ಕಾಣುತ್ತಲಿದ್ದರೂ ಗೆಲುವಿನ ಆಸೆಯನ್ನು ಬಿಡದೇ ಹೋರಾಡಿದ ನಿಮಗೆ ನನ್ನ ಅಭಿನಂದನೆಗಳು. ನಿಮ್ಮ ಯಶಸ್ಸಿನ ಸೂತ್ರ ನನಗೆ ಈಗ ತಿಳಿಯಿತು’. ಲಿಂಕನ್ ಹಾಗೂ ವಾಷಿಂಗ್ಟನ್ ಅವರ ಬದುಕು ನಮಗೆ ಕಲಿಸುವ ಪಾಠವೆಂದರೆ ಸೋಲು ಪರಿಶ್ರಮದೊಂದಿಗೆ ಸೇರಿದರೆ ಯಶಸ್ಸು ದೊರೆಯುತ್ತದೆ.
ಸೋಲು ಒಂದು ಘಟನೆ ಮಾತ್ರ, ಅದು ಜೀವನವಲ್ಲ. ‘ಬದುಕಿನಲ್ಲಿ ಲಕ್ಷಾಂತರ ಘಟನೆಗಳು ಜರುಗುತ್ತವೆ. ಅದರಲ್ಲಿ ಕೆಲವು ಮಾತ್ರ ವೈಫಲ್ಯವನ್ನು ಕಾಣಬಹುದು. ಒಂದು ವಿಫಲತೆ ಒಬ್ಬ ಮನುಷ್ಯನ ಪರಿಶ್ರಮದ ವಿಫಲತೆಯಲ್ಲ. ಅದು ಆ ಕ್ಷಣದಲ್ಲಿ ಪ್ರಯತ್ನ ಸಾಕಾಗಲಿಲ್ಲವೆಂಬುದನ್ನು ಹೇಳುತ್ತದೆ. ಮುಂದಿನ ಕ್ಷಣದಲ್ಲಿ ಪ್ರಯತ್ನವನ್ನು ಹೆಚ್ಚು ಮಾಡಿದರೆ ಸಾಕು ವಿಫಲತೆ ಓಡಿ ಹೋಗುತ್ತದೆ. ಇದನ್ನೇ ತಾನೇ ಈ ಇಬ್ಬರೂ ಮಹಾನುಭಾವರು ತಮ್ಮ ಬದುಕಿನ ಮೂಲಕ ಕಲಿಸಿದ್ದು? ನಾವು ಪಾಠ ಕಲಿತರೆ ನಮಗೇ ಒಳ್ಳೆಯದು.
🔹🔹🔹🔹🔹🔹🔹🔹🔹🔹🔹
Subscribe to:
Posts (Atom)