Saturday, 20 August 2016

ನಮ್ಮ ದೇಹದಲ್ಲೇ ಇದೆ ವಿಭಿನ್ನತೆ!

ನಮ್ಮ ದೇಹದಲ್ಲೇ ಇದೆ ವಿಭಿನ್ನತೆ!



ಡಾ. ಗಿರಿಧರ ಕಜೆ ಎಂ.ಡಿ.(ಆಯು)

ಒಬ್ಬವ್ಯಕ್ತಿ ಒಂದೇ ದೇಹಪ್ರಕೃತಿಯ ಲಕ್ಷಣಗಳನ್ನು ಹೊಂದಿರುವುದಿಲ್ಲ. ಬದಲಾಗಿ, ಮೂರು ಪ್ರಕೃತಿಗಳ ವಿಭಿನ್ನ ಗುಣಗಳ ಸಮೂಹವಾಗಿರುತ್ತಾನೆ. ಯಾವ ಪ್ರಕೃತಿಯ ಗುಣಗಳು ಓರ್ವನಲ್ಲಿ ಅಧಿಕವಾಗಿದೆಯೋ ಅದರ ಆಧಾರದಲ್ಲಿ ಆ ವ್ಯಕ್ತಿಯ ಪ್ರಕೃತಿ ನಿರ್ಧರಿತವಾಗುತ್ತದೆ. ಇಂತಹ ಪಮ್ಯರ್ುಟೇಶನ್ ಮತ್ತು ಕಾಂಬಿನೇಶನ್​ನಿಂದಾಗಿ ವ್ಯಕ್ತಿತ್ವವು ಒಬ್ಬರಿಂದ ಒಬ್ಬರಿಗೆ ಸಂಪೂರ್ಣ ವಾಗಿ ಭಿನ್ನವಾಗುತ್ತ ಹೋಗುತ್ತದೆ. ನ್ಯಾಯವೈದ್ಯಶಾಸ್ತ್ರದ ಪ್ರಕಾರ ಜಗತ್ತಿನಲ್ಲಿ ಹೆಚ್ಚೆಂದರೆ ಕೇವಲ ಹತ್ತುಮಂದಿಗೆ ಬೆರಳಚ್ಚು ಒಂದೇ ಸಮನಾಗಿ ಇರಲೂಬಹುದು! ಜೀವಜಗತ್ತಿನಲ್ಲಿ ಎಷ್ಟೊಂದು ವೈವಿಧ್ಯ. ಇದಕ್ಕೆ ನಮ್ಮ ಶರೀರಪ್ರಕೃತಿಯೂ ಹೊರತಲ್ಲ. ಆದ್ದರಿಂದಲೇ ಸಮನಾದ ಹೆಸರಿನ ಒಂದೇ ಆಹಾರ-ವಿಹಾರ-ಆಚಾರ-ಸಂಸ್ಕೃತಿ -ಪರಿಸರ-ವಯಸ್ಸು-ಉಡುಗೆ-

ತೊಡುಗೆ ಉಳ್ಳ ಅವಳಿ ಮಕ್ಕಳಲ್ಲಿ ಒಂದೇ ಕಾಯಿಲೆಯಿದ್ದರೆ, ಬೇರೆಬೇರೆ ಔಷಧಗಳು ಬೇಕಾಗುತ್ತದೆ ಎನ್ನುವ ಆಯುರ್ವೆದತತ್ತ್ವ ಸದೃಢವಾಗಿದೆ. ಅವಳಿ ಮಕ್ಕಳಲ್ಲಿ ಒಂದು ಮಗು ದಿನಕ್ಕೆ 16 ಘಂಟೆ ನಿದ್ರಿಸಿದರೆ ಇನ್ನೊಂದು 12 ಗಂಟೆ ನಿದ್ರೆಯಿಂದಲೇ ತೃಪ್ತವಾಗುತ್ತದೆ. ಕೇವಲ ವಯಸ್ಸಿಗನುಗುಣವಾಗಿ ನಿದ್ರೆ ಎಂಬ ಆಧುನಿಕತತ್ತ್ವ ಇಲ್ಲಿ ತಲೆಕೆಳಗಾಗುತ್ತದೆ. ಆಯುರ್ವೆದದ ಪ್ರಕಾರ ಹೆಚ್ಚಿನನಿದ್ರೆಗೆ ಕಫಪ್ರಕೃತಿ ಕಾರಣವಾದರೆ, ಕಡಿಮೆನಿದ್ರೆ ಸಾಕಾಗಲು ವಾತಪ್ರಕೃತಿಯೇ ಮೂಲವಾಗಿದೆ. ಕುಡಿಯಲು ಕಾಫಿ ನೀಡಿದಾಗ ಕೆಲವರು ಬಿಸಿಕಡಿಮೆಯಾಯಿತೆಂದು ಗೊಣಗಿದರೆ ಇನ್ನು ಕೆಲವರು ಮತ್ತೂ ತಣ್ಣಗಾಗುವ ತನಕ ಕಾದು ಸೇವಿಸುತ್ತಾರೆ. ಪ್ರವಾಸ ಹೋಗುವ ಆಲೋಚನೆ ಬಂದಾಗ ಮನೆಯಲ್ಲಿ ಒಂದಿಬ್ಬರು ಚಳಿಗಾಲದಲ್ಲಿ ಬೆಚ್ಚಗಿನ ಪ್ರದೇಶಕ್ಕೆ ಹೋಗಲು ಒಲವು ತೋರಿದರೆ ಇನ್ನಿಬ್ಬರು ಬೇಸಿಗೆಯಲ್ಲಿ ತಂಪಾದಸ್ಥಳ ಸೇರಲು ಬಯಸುತ್ತಾರೆ. ವಾತ ಹಾಗು ಕಫಪ್ರಕೃತಿಯವರಿಗೆ ಬಿಸಿ ಇಷ್ಟವಾದರೆ ಪಿತ್ತಪ್ರಕೃತಿಯವರು ಅಪೇಕ್ಷಿಸುವುದು ತಂಪನ್ನೇ.

ಆಯುರ್ವೆದದಲ್ಲಿ ಒಬ್ಬ ವ್ಯಕ್ತಿಯ ಶರೀರಪ್ರಕೃತಿ ಮಾತ್ರವಲ್ಲ ಮಾನಸಿಕ ಪ್ರಕೃತಿಯನ್ನೂ ಸವಿಸ್ತಾರವಾಗಿ ವಿವರಿಸಿದ್ದಾರೆ! ಇವುಗಳನ್ನು ತಿಳಿದುಕೊಳ್ಳುವುದರಿಂದ ನಮ್ಮನ್ನು ಹೆಚ್ಚು ಅರಿಯಬಹುದು. ನಮಗೆ ಸೂಕ್ತವಾದ ಆಹಾರವಸ್ತು, ಆಹಾರಪದ್ಧತಿಗಳನ್ನು

ನಿಖರವಾಗಿ ನಿರ್ಧರಿಸಬಹುದು. ಇತರರನ್ನು ಅರಿತು ಹೆಚ್ಚಿನ ಹೊಂದಾಣಿಕೆಯನ್ನು ಹೊಂದಬಹುದು. ಚಿಕಿತ್ಸೆಯನ್ನು ಸುಲಭಗೊಳಿಸಬಹುದು. ಮನೆ ಹಾಗೂ ಕಚೇರಿಯ ವಾತಾವರಣ ಉತ್ತಮಗೊಳಿಸಬಹುದು. ದೇಹಪ್ರಕೃತಿಯ ಭಿನ್ನತೆ ಅರಿತರೆ ಜೀವನದಲ್ಲಿ ಖಿನ್ನತೆ ಇರದು.

ಪಂಚಸೂತ್ರಗಳು



ಮುಸುಂಬಿ: ಕೆಮ್ಮು ಕಡಿಮೆಮಾಡಲು ಸಹಕಾರಿ.

ಮೂಲಂಗಿ: ಕಣ್ಣಿನ ರೋಗಗಳಿದ್ದಾಗ ಹಿತ.

ಬಡೆಸೊಪ್ಪು: ಚರ್ಮವ್ಯಾಧಿಗಳಲ್ಲಿ ಅನುಕೂಲಕರ.

ಸಾಸಿವೆ: ಗುಲ್ಮ/ಪ್ಲೀಹದ ತೊಂದರೆ ಸರಿಪಡಿಸಲು ಸಹಕಾರಿ.

ಕೊನೇ ಹನಿ

ಜಾಜಿಮಲ್ಲಿಗೆಯ ಐದಾರು ಎಲೆಗಳನ್ನು ಸೇವಿಸಿದರೆ ಬಾಯಿಹುಣ್ಣು ಶೀಘ್ರ ಉಪಶಮನ.

ನನ್ನದು ಎಂಬ ಭಾವ ತೊಲಗಿದರೆ ಆನಂದ

💢  ನನ್ನದು ಎಂಬ ಭಾವ ತೊಲಗಿದರೆ ಆನಂದ


ಓರ್ವ ಶ್ರೇಷ್ಠ ಭಕ್ತಿ ಸಾಧಕನಿದ್ದ. ಆತನು ತರುಣನಾಗಿದ್ದ. ಒಂದು ದಿನ ಅವನು ಪ್ರವಾಸಕ್ಕೆಂದು ಹೊರಟ. ದಾರಿಯಲ್ಲಿ ಧಾರಾಕಾರವಾಗಿ ಮಳೆ ಸುರಿಯತೊಡಗಿತು. ಅಲ್ಲೇ ಹತ್ತಿರದಲ್ಲಿ ಒಂದು ಸುಂದರ ಮನೆ. ಆ ಮನೆಯ ಮುಂದೆ ಚಪ್ಪರದ ಅಡಿಯಲ್ಲಿರುವ ಕಟ್ಟೆಯ ಮೇಲೆ ತರುಣ ಕುಳಿತ. ಅದನ್ನು ಕಂಡು, ಆ ಮನೆಯ ಯಜಮಾನ ತಕ್ಷ ಣ ಬಾಗಿಲು ತೆಗೆದು ಹೊರಬಂದ. ''ನಮ್ಮ ಮನೆಯ ಮುಂದೆ ಏಕೆ ಕುಳಿತಿರುವೆ? ನಡೆಯಾಚೆ!,'' ಎಂದು ಆತ ತರುಣನನ್ನು ಗದರಿಸಿದ. ''ಓ, ಇದು ನಿಮ್ಮ ಮನೆಯೇ? ಕ್ಷ ಮಿಸಿ, ನನಗೆ ಗೊತ್ತಾಗಲಿಲ್ಲ,'' ಎಂದು ಆ ತರುಣ ಸಹಜವಾಗಿ ಎದ್ದು ಹೊರಟ. ಅಲ್ಲೇ ಎದುರಿಗಿರುವ ಮರದಡಿ ಬಂದು ಕುಳಿತ. ಮೇಲೆ ತುಂತುರು ಮಳೆ ಸುರಿಯುತ್ತಿದೆ. ಸುತ್ತಮುತ್ತ ಹಸಿರು ಹಾಸಿದೆ. ಪ್ರಕೃತಿಯೆಲ್ಲ ವರ್ಷಾಸ್ನಾನ ಮಾಡಿ ಕಳೆಗೊಂಡಿದೆ. ಈ ನಿಸರ್ಗ ಸ್ವರ್ಗ ಕಂಡು ಭಕ್ತಿ ಸಾಧಕನ ಹೃದಯ ತುಂಬಿಬಂದು ಹಾಡತೊಡಗಿದ. ಒಳಗಿರುವ ಮನೆಯ ಯಜಮಾನನು ತರುಣನ ಆನಂದಗೀತೆಯನ್ನು ಕೇಳಿ ಹೊರಬಂದ.

 ಮಳೆಯಲ್ಲಿ ತೋಯುತ್ತಲಿದ್ದರೂ ಈ ತರುಣ ಎಷ್ಟು ಮಧುರವಾಗಿ, ಆನಂದವಾಗಿ ಹಾಡುತ್ತಿದ್ದಾನೆ. ನಾನು ಇಂಥ ಭವ್ಯ ಮನೆಯಲ್ಲಿದ್ದು ಅರವತ್ತು ವರುಷಗಳೇ ಕಳೆದು ಹೋದವು. ಆದರೆ ಒಂದು ದಿನವೂ ಈ ತರುಣನಿಗಾದ ಆನಂದ ನನಗೆ ಆಗಲಿಲ್ಲ. ಈ ತರುಣನಲ್ಲಿ ಏನೋ ವಿಶೇಷ ಇರಬೇಕು ಎಂದು ಅವನ ಬಳಿಗೆ ಹೋದ. ''ಬಾರಪ್ಪ, ನಮ್ಮ ಮನೆಯ ಮುಂದೆ ಕುಳಿತುಕೊಂಡು ಹಾಡು ಬಾ,'' ಎಂದು ಮನೆಯ ಯಜಮಾನ ವಿನಯದಿಂದ ಕರೆದ. ''ಇಲ್ಲ ಯಜಮಾನರೇ, ನಾನಿಲ್ಲಿ ಆರಾಮವಾಗಿದ್ದೇನೆ. ನೀವೂ ಬನ್ನಿ ನಿಮಗೂ ಆನಂದವಾಗುತ್ತದೆ. ಅದು ನಿಮ್ಮ ಮನೆ. ಇದು ಎಲ್ಲರ ಮನೆ! ದೇವರ ಮನೆ! ನಿಮ್ಮ ಮನೆಯಲ್ಲಿ ನಿಮಗೆ ಆನಂದವಾಗಿರಬಹುದು, ಆಗಿರಲಿಕ್ಕಿಲ್ಲ. ಆದರೆ ದೇವನ ಈ ಮನೆಯಲ್ಲಿ ಎಲ್ಲರಿಗೂ ಆನಂದ! ದಯವಿಟ್ಟು ಅನುಭವಿಸಿರಿ,'' ಎಂದನು ಭಕ್ತಿಯೋಗಿ. ಈ ಅನುಭವದ ನುಡಿಗಳನ್ನು ಕೇಳಿದಾಗ, ಯಜಮಾನನ ಹೃದಯದ ಅಹಂಕಾರದ ಕತ್ತಲೆ ಕರಗಿಹೋಯಿತು.

''ನೀವು ಮಹಾ ಸಂತರು. ನಾನು ಅರಿಯಲಿಲ್ಲ. ನನ್ನನ್ನು ಕ್ಷಮಿಸಿರಿ. ದಯವಿಟ್ಟು ನಿಮ್ಮ ಆನಂದಯೋಗವನ್ನು ನನಗೂ ತಿಳಿಸಿರಿ,'' ಎಂದು ಮನೆಯ ಯಜಮಾನನು ಬೇಡಿಕೊಂಡ. ''ಜಗತ್ತಿನಲ್ಲಿ ನಾವು ಮನೆ- ಮಠ, ಮಕ್ಕಳು- ಮರಿ, ಗುರು- ದೇವರು ಏನನ್ನಾದರೂ ಪ್ರೀತಿಸಬಹುದು. ಆದರೆ ಆ ಪ್ರೀತಿಯಲ್ಲಿ ಈ ವಸ್ತು 'ನನ್ನದು' ಎಂಬ ಭಾವ ಅತಿಯಾಗಿ ಬೆರೆತುಕೊಂಡಿರಬಾರದು. ಆಗ ನಮ್ಮ ಜೀವನವು ಜೇನಾಗುತ್ತದೆ!'' ಎಂದು ಆ ಭಕ್ತಿಸಾಧಕ ಮಧುವಿದ್ಯೆಯನ್ನು ಅರುಹಿದ. ಈ ಮಧುರ ಮಾತುಗಳನ್ನು ಕೇಳುತ್ತಲೇ ಆನಂದಭಾಷ್ಪ ಸಮೇತನಾಗಿ ಆ ಯಜಮಾನನು 'ನಾನು ಧನ್ಯನಾದೆ. ಇನ್ನು ಮೇಲೆ ನೀನೇ ನನ್ನ ಗುರು' ಎಂದು ಆ ತರುಣ ಭಕ್ತಿಸಾಧಕನಿಗೆ ತಲೆಬಾಗಿದ. 'ನನ್ನ ಗುರು ಎನ್ನಬೇಡಿ, ಸಹಜವಾಗಿ ಸತ್ಯವನ್ನು ಅನುಭವಿಸಿರಿ ಆನಂದಿಸಿರಿ' ಎಂದು ಭಕ್ತಿ ಸಾಧಕನು ಯಜಮಾನನನ್ನು ಎಚ್ಚರಿಸಿದನು. ಈಗ ಯಜಮಾನನು ನಿಜವಾಗಿಯೂ ಅನಿಕೇತನನಾಗಿದ್ದ, ಆನಂದ ನಿಲಯವನ್ನು ಪ್ರವೇಶಿಸಿದ್ದ. ಇದುವೆ ಆನಂದಯೋಗ !


ಆಧಾರ : ಕಥಾಮೃತ * ಶ್ರೀ ಸಿದ್ದೇಶ್ವರ ಸ್ವಾಮೀಜಿ

🔸🔹🔸🔹🔸🔹🔸🔹🔸

ವಂದೇ ಮಾತರಂ...ಭಾವಾರ್ಥ

ವಂದೇ ಮಾತರಂ

ವಂದೇ ಮಾತರಂ ಗೀತೆಯನ್ನು ರಚಿಸಿದ್ದು ವಂಗ ದೇಶಭಕ್ತ ಬಂಕಿಮಚಂದ್ರ ಚಟ್ಟೋಪಾಧ್ಯಾಯ ಇವರು. ಕ್ರಿ.ಶ. ೧೮೭೬.ನಲ್ಲಿ ‘ಆನಂದಮಠ’ ಎಂಬ ಕಾದಂಬರಿಯನ್ನು ಬರೆಯುತ್ತಿರಲು ಅವರಿಗೆ ‘ವಂದೇ ಮಾತರಂ’ ಗೀತೆಯನ್ನು ರಚಿಸುವ ಪ್ರೇರಣೆ ಬಂತು ಎಂಬ ನಂಬಿಕೆ ಇದೆ. ಕ್ರಿ.ಶ. ೧೮೮೨ರಲ್ಲಿ ಈ ಕಾದಂಬರಿ ಪ್ರಕಾಶನಗೊಂಡ ಅಲ್ಪಾವಧಿಯಲ್ಲಿಯೇ ಈ ಗೀತೆ ಸ್ವಾತಂತ್ರ್ಯ ಹೋರಾಟಗಾರರ ಪ್ರೇರಣಾ ಸ್ಥಾನವನ್ನು ಗಿಟ್ಟಿಸಿತು.


ವಂದೇ ಮಾತರಮ್
ಸುಜಲಾಂ ಸುಫಲಾಂ ಮಲಯಜಶೀತಲಾಮ್
ಶಸ್ಯಶ್ಯಾಮಲಾಂ ಮಾತರಮ್ |
ಶುಭ್ರಜ್ಯೋತ್ಸ್ನಾ ಪುಲಕಿತಯಾಮಿನೀಂ
ಫುಲ್ಲಕುಸುಮಿತಧ್ರುಮದಲಶೋಭಿನಿಂ

ಸುಹಾಸಿನಿಂ ಸುಮಧುರ ಭಾಷಿಣೀಂ
ಸುಖದಾಂ ವರದಾಂ ಮಾತರಮ್ || ೧ ||
ವಂದೇ ಮಾತರಮ್ |
ಕೋಟಿ-ಕೋಟಿ-ಕಂಠ-ಕಲ-ಕಲ-ನಿನಾದ-ಕರಾಲೆ ,
ಕೋಟಿ-ಕೋಟಿ-ಭುಜೈಧೃತ-ಖರಕರವಾಲೆ,
ಕೇ ಬೋಲೆ ಮಾ ತುಮಿ ಅಬಲೆ|
ಬಹುಬಲಧಾರಿಣಿಂ ನಮಾಮಿ ತಾರಿಣೀಂ
ರಿಪುದಲವಾರಿಣೀಂ ಮಾತರಮ್ || ೨ ||
ವಂದೇ ಮಾತರಮ್ |

ತುಮಿ ವಿದ್ಯಾ, ತುಮಿ ಧರ್ಮ
ತುಮಿ ಹೃದಿ, ತುಮಿ ಮರ್ಮ
ತ್ವಂ ಹಿ ಪ್ರಾಣಾಃ ಶರೀರೆ
ಬಾಹುತೆ ತುಮಿ ಮಾ ಶಕ್ತಿ,
ಹೃದಯೆ ತುಮಿ ಮಾ ಭಕ್ತಿ,
ತೋಮಾರಈ ಪ್ರತಿಮಾ ಗಡಿ ಮಂದಿರೆ-ಮಂದಿರೆ
ಮಾತರಮ್ || ೩ || ವಂದೇ ಮಾತರಮ್ |
ತ್ವಂ ಹಿ ದುರ್ಗಾ ದಶಪ್ರಹರಣಧಾರಿಣೀ
ಕಮಲಾ ಕಮಲದಲವಿಹಾರಿಣಿ
ವಾಣಿ ವಿದ್ಯಾದಾಯಿನಿ, ನಮಾಮಿ ತ್ವಾಮ್
ನಮಾಮಿ ಕಮಲಾಂ ಅಮಲಾಂ ಅತುಲಾಂ ಸುಜಲಾಂ ಸುಫಲಾಂ ಮಾತರಮ್ || ೪ ||

ವಂದೇ ಮಾತರಮ್ |
ಶ್ಯಾಮಲಾಂ ಸರಲಾಂ ಸುಸ್ಮಿತಾಂ ಭೂಷಿತಾಂ
ಧರಣೀಂ ಭರಣೀಂ ಮಾತರಮ್ || ೫ ||
ವಂದೇ ಮಾತರಮ್ |
– ಬಂಕಿಮಚಂದ್ರ ಚಟ್ಟೋಪಾಧ್ಯಾಯ
(‘ವಂದೇ ಮಾತರಂ’ ಗೀತೆಯನ್ನು ರವಿವಾರ, ಕಾರ್ತಿಕ ಶುದ್ಧ ನವಮಿ, ಶಕೆ ೧೭೯೭ (೭ ನವೆಂಬರ್ ೧೮೭೫) ಈ ದಿನದಂದು ಪೂರ್ಣವಾಗಿ ರಚಿಸಲಾಯಿತು.




🇮🇳ವಂದೇ ಮಾತರಂ’ ಗೀತೆಯ ಭಾವಾರ್ಥ🇮🇳


ಹೇ ಮಾತೆ, ನಾನು ನಿನಗೆ ವಂದಿಸುತ್ತೇನೆ.ಜಲ, ಧನಧಾನ್ಯಗಳಿಂದ ಸಮೃದ್ಧವಾಗಿರುವ, ದಕ್ಷಿಣದಲ್ಲಿನ ಮಲಯ ಪರ್ವತದಿಂದ ಬರುವ ವಾಯುಲಹರಿಗಳಿಂದ ಶೀತಲವಾಗುವ ಮತ್ತು ವಿಪುಲವಾದ ಕೃಷಿಯಿಂದ ಶ್ಯಾಮಲ ವರ್ಣವಾಗಿರುವ, ಹೇ ಮಾತೆ !

ಶ್ವೇತಶುಭ್ರ ಬೆಳದಿಂಗಳಿನಿಂದ ನಿನ್ನ ರಾತ್ರಿಗಳು ಪ್ರಫುಲ್ಲಿತವಾಗಿರುತ್ತವೆ, ಅದೇ ರೀತಿ ಅರಳಿದ ಹೂವುಗಳಿಂದ ನಿನ್ನ ಭೂಮಿಯು ವೃಕ್ಷಬಳ್ಳಿಗಳ ವಸ್ತ್ರಗಳನ್ನು ಧರಿಸಿದಂತೆ ಸುಶೋಭಿತವಾಗಿ ಕಾಣಿಸುತ್ತದೆ. ಸದಾ ಹಸನ್ಮುಖ ಮತ್ತು ಸದಾಕಾಲ ಮಧುರವಾಗಿ ಮಾತನಾಡುವ, ವರದಾಯಿನಿ, ಸುಖಪ್ರದಾಯಿನಿಯಾಗಿರುವ ಹೇ ಮಾತೆ !

ಮೂವತ್ತು ಕೋಟಿ ಕಂಠಗಳಿಂದ ಭಯಂಕರವಾದ ಗರ್ಜನೆಯು ಮೊಳಗುತ್ತಿರುವಾಗ ಮತ್ತು ಆರವತ್ತು ಕೋಟಿ ಕೈಗಳಲ್ಲಿ ಹಿಡಿದಿರುವ ಖಡ್ಗಗಳ ಮೊನೆಯು ಹೊಳೆಯುತ್ತಿರುವಾಗ ಹೇ ಮಾತೆಯೇ ನೀನು ಅಬಲೆಯಾಗಿದ್ದಿ ಎಂದು ಹೇಳಲು ಯಾರಿಗಾದರೂ ಧೈರ್ಯವಿದೆಯೇ? ವಾಸ್ತವದಲ್ಲಿ ಮಾತೆಯೇ ಅಪಾರ ಸಾಮರ್ಥ್ಯವು ನಿನ್ನಲ್ಲಿದೆ. ಶತ್ರುಸೈನ್ಯದ ಪಡೆಯನ್ನೇ ಹಿಂತಿರುಗಿಸಿ ನಿನ್ನ ಸಂತಾನವಾದ ನಮ್ಮನ್ನು ರಕ್ಷಿಸುತ್ತಿರುವ ಹೇ ಮಾತೆಯೇ ನಾನು ನಿನಗೆ ವಂದಿಸುತ್ತೇನೆ.

ನೀನೇ ನಮ್ಮ ಜ್ಞಾನ, ನೀನೇ ನಮ್ಮ ಚಾರಿತ್ರ್ಯ, ನೀನೇ ನಮ್ಮ ಧರ್ಮವಾಗಿದ್ದಿ. ನೀನೇ ನಮ್ಮ ಹೃದಯ, ನೀನೇ ನಮ್ಮ ಚೈತನ್ಯವಾಗಿದ್ದಿ. ನಮ್ಮ ದೇಹದಲ್ಲಿನ ಪ್ರಾಣವು ಖಂಡಿತವಾಗಿಯೂ ನೀನೇ ಆಗಿದ್ದಿ. ನಮ್ಮ ಮಣಿಕಟ್ಟಿನಲ್ಲಿರುವ ಶಕ್ತಿ ನೀನೇ ಮತ್ತು ಅಂತಃಕರಣದಲ್ಲಿನ ಕಾಳಿಯೂ ನೀನೇ. ದೇವಸ್ಥಾನದಲ್ಲಿ ನಾವು ಯಾವ ಮೂರ್ತಿಯ ಪ್ರತಿಷ್ಠಾಪನೆ ಮಾಡುತ್ತೇವೆಯೋ ಅದೆಲ್ಲವೂ ನಿನ್ನದೇ ರೂಪಗಳು.

ತನ್ನ ಹತ್ತೂ ಕೈಗಳಲ್ಲಿ ಹತ್ತು ಶಸ್ತ್ರಗಳನ್ನು ಧರಿಸಿದ ಶತ್ರುಸಂಹಾರಿಣಿ ದುರ್ಗೆಯೂ ನೀನೆ ಮತ್ತು ಕಮಲದ ಪುಷ್ಪಗಳಿಂದ ತುಂಬಿದ ಸರೋವರದಲ್ಲಿ ವಿಹರಿಸುವ ಕಮಲಕೋಮಲ ಲಕ್ಷ್ಮೀಯೂ ನೀನೆ. ನಿನಗೆ ನಮ್ಮ ನಮಸ್ಕಾರ. ಮಾತೆ, ನಾನು ನಿನಗೆ ವಂದಿಸುತ್ತೇನೆ. ಐಶ್ವರ್ಯದಾತ್ರಿ, ಪುಣ್ಯಪ್ರದಾಯಿನಿ ಮತ್ತು ಪಾವನ, ಪವಿತ್ರ ಜಲಪ್ರವಾಹಗಳಿಂದ ಮತ್ತು ಅಮೃತಮಯ ಫಲಗಳಿಂದ ಸಮೃದ್ಧಳಾಗಿರುವ ಮಾತೆಯೇ ನಿನ್ನ ಶ್ರೇಷ್ಠತನಕ್ಕೆ ಯಾವುದೇ ಹೋಲಿಕೆಯಿಲ್ಲ, ಯಾವುದೇ ಮಿತಿಯೂ ಇಲ್ಲ. ಹೇ ಮಾತೆ, ಹೇ ಜನನಿ ನಿನಗೆ ನನ್ನ ಪ್ರಣಾಮಗಳು.

ಭಾರತ ಮಾತೆಯ ಸುಪುತ್ರರೆ, ರಾಷ್ಟ್ರಾಭಿಮಾನದ ಜೋಪಾಸನೆಗೆ ಸನ್ನದ್ಧರಾಗಿ !

ಸ್ವಾತಂತ್ರ್ಯ ಎಂದರೇನು?


ಸ್ವಾತಂತ್ರ್ಯ ಎಂದರೇನು?


ಒಬ್ಬ ವ್ಯಕ್ತಿ ತನ್ನಷ್ಟಕ್ಕೆ ತಾನು ಜೀವಿಸುವುದು ಸ್ವಾತಂತ್ರ್ಯವೇ? ವ್ಯಕ್ತಿ ಸ್ವಾತಂತ್ರ್ಯವನ್ನು ನಾವು ಸ್ವಾತಂತ್ರ್ಯ ಕರೆಯುತ್ತೇವೆಯೇ?  ಸ್ವಾತಂತ್ರ್ಯ ಎಂದರೆ ನಮ್ಮಿಚ್ಛೆಯಂತೆ ನಾವು ಬದುಕುವುದು ಮತ್ತು ವರ್ತಿಸುವುದೇ? ಹಾಗಾದರೇ ಸ್ವೇಚ್ಛಾಚಾರವೇ ಸ್ವಾತಂತ್ರ್ಯವೇ?

ಬ್ರಿಟಿಷರ ವಿರುದ್ಧ ಸೈನ್ಯ ಕಟ್ಟಿ ಹೋರಾಡಿದ ನೇತಾಜಿ ಸುಭಾಷ್ ಚಂದ್ರ ಬೋಸ್, ಶತ್ರುವಿನ ನೆಲದಲ್ಲೇ ದೇಶಭಕ್ತಿಯನ್ನು ಮೊಳಗಿಸಿದ ಶ್ರದ್ದಾಪುರುಷ ವೀರ ಸಾವರ್ಕರ್, ಪಂಜಾಬಿನ ಕ್ರಾಂತಿಸಿಂಹ ಭಗತ್ ಸಿಂಗ್, ಅಪ್ರತಿಮ ಕ್ರಾಂತಿಕಾರಿ ಚಂದ್ರಶೇಖರ್ ಅಜಾದ್, ಮಹಾರಾಷ್ಟ್ರದ ಚಾಪೇಕರ್ ಬಂಧುಗಳು, ದೂರದ ಏಡನ್ ನಲ್ಲಿ ಅತ್ಯಂತ ದಯನೀಯವಾಗಿ ಸತ್ತುಹೋದ ವಾಸುದೇವ ಬಲವಂತ ಫಡಕೆ ಮುಂತಾದ ಲಕ್ಷಾಂತರ ಜನ ಸ್ವಾತಂತ್ರ್ಯಯೋಧರು ವ್ಯಕ್ತಿಸ್ವಾತಂತ್ರ್ಯದ ಹೆಸರಿನಲ್ಲಿ ತಮ್ಮ ಮುಂದಿನ ಜನಾಂಗ ಎಲ್ಲ ವಿಧಗಳ ನೈತಿಕ ಅಧಃಪತನದ ದಾರಿಯಲ್ಲಿ ಸಾಗಲೆಂದು ಸ್ವಾತಂತ್ರ್ಯದೇವಿಗೆ ತಮ್ಮ ರುಧಿರಾಭಿಷೇಕ ಮಾಡಿದರೇ?

ವ್ಕಕ್ತಿ ಸ್ವಾತಂತ್ರ್ಯವೇ ಸ್ವಾತಂತ್ರ್ಯವಲ್ಲ. ಸ್ವೇಚ್ಛಾಚಾರಕ್ಕೂ ಸ್ವಾತಂತ್ರ್ಯಕ್ಕೂ ವ್ಯತ್ಯಾಸವಿದೆ. ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಆರುವರೆ ಲಕ್ಷ ಸ್ವಾತಂತ್ರ್ಯ ಯೋಧರು ತಮ್ಮ ಪ್ರಾಣತ್ಯಾಗ ಮಾಡಿದ್ದಾರೆ. ಆದರೆ ನಮಗೆ ನಿಜ ಸ್ವಾತಂತ್ರ್ಯದ ಅರ್ಥ ಗೊತ್ತಿಲ್ಲ. ಸ್ವಾತಂತ್ರ್ಯವೆಂದರೆ ನಮ್ಮ ದೇಶದ ಸಾರ್ವಭೌಮತೆಯನ್ನು ಎತ್ತಿಹಿಡಿಯುವುದು. ಈ ಸಾರ್ವಭೌಮತೆಗಾಗಿಯೇ ನಮ್ಮ ಸ್ವಾತಂತ್ರ್ಯ ಯೋಧರು ಬಲಿದಾನ ಮಾಡಿದ್ದು. ಒಂದು ದಿನ ಸ್ವಾತಂತ್ರ್ಯ ದಿನಾಚರಣೆ ಆಚರಿಸಿ ನಾವು ನಮ್ಮ ಸ್ವಾತಂತ್ರ್ಯ ಯೋಧರನ್ನು ಮರೆತುಬಿಡುತ್ತಿದ್ದೇವೆ.

ಬನ್ನಿ ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸೋಣ. ಈ ದೇಶದ ಭವ್ಯತೆಯನ್ನು ಹಾಡಿ ಹೊಗಳೋಣ. ಈ ದೇಶಕ್ಕಾಗಿ ಮಡಿದ ಸ್ವಾತಂತ್ರ್ಯ ಯೋಧರನ್ನು ನೆನೆಯೋಣ.

vasundara p

ವಿಚಿತ್ರ ವಿಶ್ವದ ವಾಸ್ತವ ಸತ್ಯಗಳು

ವಿಚಿತ್ರ ವಿಶ್ವದ ವಾಸ್ತವ ಸತ್ಯಗಳು


🔹ರಸ್ತೆಗಳು ವಿಶಾಲವಾಗಿವೆ, ಆದರೆ
      ದೃಷ್ಟಿಕೋನ ಸಂಕುಚಿತವಾಗಿವೆ!
🔹ನಾವು ಹೆಚ್ಚು ಖರೀದಿಸುತ್ತೇವೆ, ಆದರೆ
     ಕಡಿಮೆ ಉಪಯೋಗಿಸುತ್ತೇವೆ!
🔹ನಮ್ಮ ಮನೆಗಳು ದೊಡ್ಡದಾಗುತ್ತಿವೆ,
      ಆದರೆ ಕುಟುಂಬ ಚಿಕ್ಕದಾಗಿರುತ್ತದೆ !
🔹ಅನುಕೂಲಗಳು ಹೆಚ್ಚಿವೆ, ಆದರೆ
     ಅನುಭವಿಸಲು ಸಮಯವೇ ಇಲ್ಲ!
🔹ಅಸಾಮಾನ್ಯ ವಿದ್ಯಾರ್ಹತೆಗಳಿವೆ,ಆದರೆ
      ಸಾಮಾನ್ಯ ಜ್ಙಾನ ಕಡಿಮೆಯಾಗಿದೆ!
🔹ವಿಷಯ ಸಂಗ್ರಹ ಹೆಚ್ಚಾಗಿದೆ, ಆದರೆ
      ವಿವೇಚನೆ ಕಡಿಮೆಯಾಗಿದೆ!
🔹ಪರಿಣತರು ಹೆಚ್ಚಿದ್ದಾರೆ,
      ಸಮಸ್ಯೆಗಳು ಹೆಚ್ಚಿವೆ!
🔹ಔಷಧಿಗಳು ಹೆಚ್ಚಿವೆ,
     ಆರೋಗ್ಯ ಕಡಿಮೆಯಾಗಿದೆ!
🔹ನಾವು ಹೆಚ್ಚು ಗಳಿಸುತ್ತೇವೆ, ಆದರೂ
     ನೆಮ್ಮದಿಯಿಂದ ಜೀವಿಸುತ್ತಿಲ್ಲ.
🔹ತುಂಬ ವೇಗವಾಗಿ ಹೋಗುತ್ತೇವೆ,ತುಂಬ
     ಬೇಗ ಕೋಪಿಸಿಕೊಳ್ಳುತ್ತೇವೆ!
🔹ರಾತ್ರಿ ತುಂಬ ಹೊತ್ತು ಎದ್ದಿರುತ್ತೇವೆ,
     ಬೆಳಿಗ್ಗೆ ತುಂಬ ಬಳಲುತ್ತೇವೆ
🔹ಕಡಿಮೆ ಓದುತ್ತೇವೆ,
      ತುಂಬ ಟೀವಿ ನೋಡುತ್ತೇವೆ:
🔹ತೋರಿಕೆಯ ಭಕ್ತಿ ಜಾಸ್ತಿ,
      ಪರಿಶುದ್ಧ ಮನದ ಪ್ರಾರ್ಥನೆ ಕಡಿಮೆ
🔹ನಮ್ಮ ಆಸ್ತಿ ಪಾಸ್ತಿಗಳ ಬೆಲೆ ಏರಿದೆ,ಆದರೆ
      ನಮ್ಮ ಮೌಲ್ಯಗಳು ಕುಸಿದಿವೆ!
🔹ತುಂಬಾ ಹೆಚ್ಚು ಮಾತನಾಡುತ್ತೇವೆ,ತುಂಬ
      ಕಡಿಮೆ ಪ್ರೀತಿಸುತ್ತೇವೆ ಜೊತೆಗೆ ತುಂಬ
      ಸುಳ್ಳು  ಹೇಳುತ್ತೇವೆ!
🔹ನಮ್ಮ ಜೀವನಕ್ಕೆ ವರ್ಷಗಳನ್ನು ತುಂಬುತ್ತೇವೆ,
      ಆದರೆ ವರ್ಷಗಳಿಗೆ ಜೀವ ತುಂಬುವುದಿಲ್ಲ!
🔹ನಾವು ಚಂದ್ರಲೋಕವನ್ನು ಮುಟ್ಟಿ ಬಂದಿದ್ದೇವೆ,
     ಆದರೆ ನಮ್ಮ ಕಾಂಪೌಂಡ ದಾಟಿ ನೆರೆಯವರನ್ನು
     ಭೇಟಿಯಾಗಲು ಹೋಗುವುದಿಲ್ಲ.
🔹ನಾವು ಬಹಿರಂಗದಲ್ಲಿ ಗೆದ್ದವರಂತೆ ಅಂದುಕೊಳ್ಳುತ್ತೇವೆ,
      ಆದರೆ ಅಂತರಂಗದಲ್ಲಿ  ಸೋಲುತ್ತಿದ್ದೇವೆ!
🔹ಗಾಳಿಯನ್ನು ಶುದ್ಧಿಗೊಳಿಸಲು ಹೆಣಗುತ್ತೇವೆ,
     ಆದರೆ ನಮ್ಮ ಆತ್ಮ ಮಲೀನಗೊಂಡಿದ್ದು ನಮಗೆ
      ಗೋಚರವಾಗುವುದಿಲ್ಲ.
🔹ಬರವಣಿಗೆ ಹೆಚ್ಚಾಗಿದೆ, ಆದರೆ
      ಅರಿವು ಕಡಿಮೆಯಾಗಿದೆ!
🔹ಹೆಚ್ಚು ಆಲೋಚಿಸುತ್ತೇವೆ, ಆದರೆ
     ಕಡಿಮೆ ಸಾಧಿಸುತ್ತೇವೆ!
🔹ನಮ್ಮ ಆರ್ಥಿಕ ಸ್ಥಿತಿ  ಸುಧಾರಿಸಿದೆ,ಆದರೆ
     ನೈತಿಕತೆ ಕುಸಿದಿದೆ!
🔹ಇದು ವಿವಿಧ ಭಕ್ಷಗಳ ಕಾಲ, ಆದರೆ
      ಕಡಿಮೆ ಜೀರ್ಣಶಕ್ತಿಯ ಕಾಲ
🔹ಎತ್ತರದ ನಿಲುವು ಠೀವಿ, ಆದರೆ ಕುಬ್ಜ ವ್ಯಕ್ತಿತ್ವ
🔹ವಿಶ್ವಶಾಂತಿಯ ಬಗ್ಗೆ ಮಾತನ್ನಾಡುತ್ತೇವೆ,
      ಆದರೆ ಮನೆಯಲ್ಲಿ ಕಾದಾಡುತ್ತೇವೆ!
🔹ಗಂಡ ಹೆಂಡಿರ  ದುಡಿಮೆ ಹೆಚ್ಚಾಗಿದೆ,
     ಆದರೆ ಸಂಬಂಧಗಳು ಛಿದ್ರಗೊಂಡು
     ವಿಚ್ಛೇದನಗಳು ಹೆಚ್ಚಾಗಿವೆ!
🔹ಅದ್ಬುತ ವಿನ್ಯಾಸದ ನಿವಾಸಗಳಿವೆ,ಆದರೆ
     ಮನಶ್ಯಾಂತಿ  ಮುರಿದುಬಿದ್ದಿದೆ.

         🙏🙏🌻🌻🙏🙏

Thursday, 18 August 2016

Army wife : The hardest job in the Army

Army wife : The hardest job in the Army


I wear no uniforms, no blues or Olive greens
But I am in the Army in the ranks rarely seen

I have no rank upon my shoulders – salutes I do not give
But the military world is the place where I live

I’m not in the chain of command, orders I do not get
But my husband is the one who does, this I can not forget

I’m not the one who fires the weapon, who puts my life on the line
But my job is just as tough. I’m the one that’s left behind

My husband is a patriot, a brave and prideful man
And the call to serve his country not all can understand

Behind the lines I see the things needed to keep this country free
My husband makes the sacrifice, but so do our kids and me

I love the man I married, Soldiering is his life
But I stand among the silent ranks known as the “Army wife"

ತನ್ನರಿವೇ ಧ್ಯಾನ

🔹ತನ್ನರಿವೇ ಧ್ಯಾನ🔹


ಧ್ಯಾನ ಎಂದರೇನು ಎಂಬುದನ್ನು ನೀವೇ ಕಂಡುಕೊಳ್ಳಬಹುದು. ಧ್ಯಾನದಲ್ಲಿ ಅಪ್ರತಿಮ ಚೆಲುವಿದೆ. ಹೇಗೆ ಧ್ಯಾನ ಮಾಡಬೇಕು ಎಂಬುದಲ್ಲ. ಧ್ಯಾನವೆಂದರೇನು ಎಂಬುದು ನಿಮಗೆ ಗೊತ್ತಿದ್ದರೆ ಅದೊಂದು ಅಸಾಧಾರಣ ಸಂಗತಿ. ಹೇಗೆ ಎಂದಡೊನೆ ವಿಧಾನದ ಪ್ರಶ್ನೆ ಎದುರಾಗುತ್ತದೆ. ಆದುದರಿಂದ ಹೇಗೆ ಎಂದು ಕೇಳಲೇಬೇಡಿ. ಏಕೆಂದರೆ, ಭಯದ ಅರಿವೇ ಧ್ಯಾನ. ಸುಖದ ಸ್ವರೂಪ, ಪರಿಣಾಮಗಳ ಅರಿವೇ ಧ್ಯಾನ. ತನ್ನರಿವೇ ಧ್ಯಾನ. ಹೀಗಾಗಿ ಅದು ವ್ಯವಸ್ಥೆಯ ಆಧಾರ ಸದಾಚಾರ, ಈ ಸದಾಚಾರ ಸುದ್ಗುಣದಲ್ಲೇ ಶಿಸ್ತಿನ ಗುಣವಿದೆ. ಈ ಶಿಸ್ತು ಎಂದರೆ ದಮನವಲ್ಲ. ನಿಯಂತ್ರಣವಲ್ಲ. ಅನುಕರಣೆಯೂ ಅಲ್ಲ. ಇಂಥ ಮನಸ್ಸನ್ನು ಮಾತ್ರ ಧ್ಯಾನಸ್ಥ ಮನಸ್ಸು ಎನ್ನುಬಹುದು.

ಅವಲೋಕನಕಾರ ಮತ್ತು ಅವಲೋಕಿತನದ ನಡುವೆ ಅಂತರವಿದ್ದಾಗ ಸ್ಪಷ್ಟವಾಗಿ ಕಾಣಲು ಸಾಧ್ಯವಿಲ್ಲ. ಧ್ಯಾನವೆಂದರೆ ಎಲ್ಲವನ್ನೂ ಸ್ಪಷ್ಟವಾಗಿ ನೋಡುವುದು. ಅಂದರೆ ಹೂ, ಒಂದು ಸುಂದರ ಮುಖ, ಸುಂದರ ಸಂಜೆಯ ಬಾನು, ಹಕ್ಕಿಯ ರೆಕ್ಕೆ ಇತ್ಯಾದಿ ನೋಡುವಾಗ ಭೌತಿಕ ಹಾಗೂ ಮಾನಸಿಕ ಅಂತರಗಳು ಗೋಚರಿಸುತ್ತವೆ. ಈ ಅಂತರವಿರುವಾಗ ಅಲ್ಲಿ ಸಂಘರ್ಷವಿರುತ್ತದೆ. ಈ ಅಂತರವನ್ನು ಆಲೋಚನೆ ಅಂದರೆ, ವೀಕ್ಷ ಕ ಸೃಷ್ಟಿಸುತ್ತಾನೆ. ಅಂತರವಿಲ್ಲದೆ ನೀವು ಯಾವತ್ತಾದರೂ ಒಂದು ಹೂವನ್ನು ನೋಡಿದ್ದೀರಾ? ಅವಲೋಕನಕಾರ ಹಾಗೂ ಅವಲೋಕಿತದ ನಡುವೆ ಅಂತರ ಇರದಂತೆ ನೀವು ಯಾವತ್ತಾದರೂ ಸುಂದರ ಹೂವನ್ನು ನೋಡಿದ್ದೀರಾ?

ನಾವು ಒಂದು ಅಂದದ ಹೂವನ್ನು ಪದಗಳ ಪರದೆಯ ಮೂಲಕ, ವಿಚಾರಗಳ ಜವನಿಕೆಯ ಮೂಲಕ, ಇಷ್ಟಾನಿಷ್ಟಗಳ ಮೂಲಕ ನೋಡುತ್ತೇವೆ. ಆ ಹೂವು ನಮ್ಮ ತೋಟದಲ್ಲಿರಬೇಕಿತ್ತು ಅಥವಾ ಅದೆಂಥ ಚೆಲುವಿನ ಹೂವು ಎಂದೆಲ್ಲ ಹೇಳುತ್ತಾ ನೋಡುತ್ತೇವೆ. ಈ ಗಮನದಲ್ಲಿ ನೀವು ನೋಡುತ್ತಿರುವಾಗ ಶಬ್ದ, ಇಷ್ಟ, ಸಂತೋಷ ಇತ್ಯಾದಿಗಳು ನಿಮ್ಮ ಹಾಗೂ ಹೂವಿನ ನಡುವೆ ಪ್ರತ್ಯೇಕತೆಯನ್ನು ಸೃಷ್ಟಿಸುತ್ತದೆ. ಹೀಗೆ ನಿಮ್ಮ ಹಾಗೂ ಹೂವಿನ ನಡುವೆ ಆಂತರಿಕ ಭಿನ್ನತೆ ಇದೆ. ಸರಿಯಾದ ಪರಿಕಲ್ಪನೆಯಿಲ್ಲ. ಆದರೆ, ಅಂತರವಿಲ್ಲದಿರುವಾಗ ನೀವು ಹೂವನ್ನು ಹಿಂದೆಂದೂ ನೋಡಿರದ ರೀತಿಯಲ್ಲಿ ನೋಡುತ್ತೀರುತ್ತೀರಿ. ಆಲೋಚನೆಯಲ್ಲದಿರುವಾಗ ಹೂವಿನ ಬಗ್ಗೆ ಸಸ್ಯಶಾಸ್ತ್ರೀಯ ಮಾಹಿತಿ ಇಲ್ಲದಿರುವಾಗ, ಇಷ್ಟ ಅನಿಷ್ಟದ ಪ್ರಶ್ನೆಯಿಲ್ಲದಿರುವಾಗ, ಕೇವಲ ಪೂರ್ಣ ಗಮನವಿರುವಾಗ ಅಂತರ ಅಳಸಿ ಹೋಗುತ್ತದೆ. ನೀವು ಹೂವಿನೊಂದಿಗೆ, ಹಕ್ಕಿಯೊಂದಿಗೆ ಮೋಡದೊಂದಿಗೆ ಅಥವಾ ಆ ಮುಖದೊಂದಿಗೆ ಪೂರ್ಣ ತಾದಾತ್ಮ್ಯದಲ್ಲಿರುತ್ತೀರಿ.

ಇಂಥ ಮನಸ್ಸಿನ ಗುಣವಿದ್ದಾಗ ಅವಲೋಕನಕಾರ ಮತ್ತು ಅವಲೋಕಿತದ ನಡುವಿನ ಅಂತರ ಅಳಿಸಿ ಹೋದಾಗ ವಸ್ತು ಹೆಚ್ಚು ನಿಚ್ಚಳವಾಗಿ ಕಾಣುವಾಗ, ಅದನ್ನು ನಾವು ತೀವ್ರಭಾವದಿಂದ ಕಾಣುವಾಗ ಒಲವಿನ ಗುಣವಿರುತ್ತದೆ. ಒಲವಿನಲ್ಲೇ ಚೆಲುವಿರುತ್ತದೆ.

ನಾವು ಸದಾ ಆಲೋಚನೆಯ ಎದುರು ಹೆಣಗಾಡುತ್ತಿರುತ್ತೇವೆ. ಏಕೆಂದರೆ, ಆಲೋಚನೆ ಶಾಂತವಾದರೆ ಮಾತ್ರವೇ ಒಳಹೊರಗೆ ಶಾಂತಿಯಿರಬಲ್ಲದು. ಪರಮಾನಂದ ಇರಬಲ್ಲದು. ಹೀಗಾಗಿ ನಾವು ಉದ್ದೀಪನ ದ್ರವ್ಯ, ಶಮನಕಾರಕ, ಮಂತ್ರ ಪಠಣ ಇತ್ಯಾದಿಗಳ ಮೂಲಕ ಮನಸ್ಸನ್ನು ಶಾಂತಗೊಳಿಸಲು ಯತ್ನಿಸುತ್ತೇವೆ. ಆದರೆ, ಆಲೋಚನೆಯಿಂದ ನಿಶ್ಶಬ್ದವಾದ ಮನಸ್ಸಿಗೂ ಬಿಡುಗಡೆಯಿಂದ ಒದಗಿದ ನಿಶ್ಶಬ್ದಕ್ಕೂ ಹೋಲಿಕೆ ಸಲ್ಲದು. ಈ ನಿಶ್ಶಬ್ದ ಅಥವಾ ಮೌನದ ಆಯಾಮ ಬೇರೆ ಬಗೆಯದು. ಈ ಸ್ಥಿತಿ ಏನೆಂಬದನ್ನು ನೀವೇ ಕಂಡುಕೊಳ್ಳಬೇಕು. ಬೇರೆ ಯಾರೂ ನಿಮಗಾಗಿ ಬಾಗಿಲು ತೆರೆದಿಡಲು ಸಾಧ್ಯವಿಲ್ಲ. ಹೀಗಾಗಿ ಈ ನೀಡಿದಾದ ಪಯಣದಲ್ಲಿ ಸಾಗಲು ಮನ ಮಾಡಿದಿದ್ದರೆ ಇದು ಮೊಟಕುಗೊಂಡ ಪಯಣ, ಬಾಳಿಗರ್ಥವಿಲ್ಲದ ಪಯಣ. ನೀವು ಪಯಣಿಸಲು ನಿಶ್ಚಯಿಸಿದರೆ ಯಾವುದು ಪವಿತ್ರವೆಂಬುದು ನಿಮಗೇ ತಿಳಿದೀತು.

-ಜಿ. ಕೃಷ್ಣಮೂರ್ತಿ
🔹🔹🔹🔹🔹🔹🔹🔹🔹