Saturday, 24 February 2018

ಮೂಗುತಿ ಧರಿಸುವುದರಿಂದಾಗುವ ಲಾಭಗಳು

ಮೂಗುತಿ ಧರಿಸುವುದರಿಂದಾಗುವ ಲಾಭಗಳು 

೧. ‘ಮೂಗುತಿಯನ್ನು ಧರಿಸುವುದರಿಂದ ಮೂಗಿನ ಬಿಂದುವಿನ ಮೇಲೆ ಒತ್ತಡವು ನಿರ್ಮಾಣವಾಗಿ ‘ಬಿಂದುಒತ್ತಡದ (ಆಕ್ಯುಪ್ರೆಶರ್)’ ಉಪಚಾರವಾಗುವುದರಿಂದ ಅಲ್ಲಿನ ಕಪ್ಪು ಶಕ್ತಿಯು ಕಡಿಮೆಯಾಗುತ್ತದೆ.

  ೨. ಕೆಟ್ಟ ಶಕ್ತಿಗಳಿಂದ ಉಸಿರಾಟದ ಮಾರ್ಗದಿಂದ ಹಲ್ಲೆಯಾಗದಂತೆ ಮೂಗುತಿಯು ಮೂಗು ಮತ್ತು ಶ್ವಾಸಮಾರ್ಗವನ್ನು ರಕ್ಷಿಸುತ್ತದೆ.’

 ೩. ‘ಮೂಗುತಿಯಲ್ಲಿರುವ ಸಾತ್ತ್ವಿಕತೆ ಮತ್ತು ಚೈತನ್ಯದಿಂದ ಮೂಗಿನ ಸುತ್ತಲೂ ಚೈತನ್ಯದ ವಲಯವು ನಿರ್ಮಾಣವಾಗುತ್ತದೆ ಮತ್ತು ಮೂಗಿನ ಸುತ್ತಲಿನ ವಾಯುಮಂಡಲವು ಶುದ್ಧವಾಗುತ್ತದೆ. ಇದರಿಂದ ಶ್ವಾಸಮಾರ್ಗದಿಂದ ಶುದ್ಧಗಾಳಿಯು ದೇಹವನ್ನು ಪ್ರವೇಶಿಸಬಲ್ಲದು.’

 *ಸ್ತ್ರೀಯರಿಗೆ ಮಾತ್ರ ಮೂಗುತಿ ಹಾಕಲು ಹೇಳಿರುವುದರ ಹಿಂದೆಯೂ ಶಾಸ್ತ್ರವಿದೆ.

 ಸ್ತ್ರೀಯರ ಮನಸ್ಸು ಚಂಚಲವಾಗಿರುತ್ತದೆ. ಮೂಗುತಿಯನ್ನು ಧರಿಸುವುದರಿಂದ ಸ್ತ್ರೀಯರ ಚಂದ್ರನಾಡಿ ಕಾರ್ಯನಿರತವಾಗಿ ಮನಸ್ಸು ಸ್ಥಿರವಾಗುತ್ತದೆ. ಸ್ತ್ರೀಯರು ಯಾವುದೇ ಕಾರ್ಯವನ್ನು ಮಾಡುವಾಗ ಯೋಗ್ಯ ನಿರ್ಣಯ ತೆಗೆದುಕೊಳ್ಳಲು ಅನುಕೂಲವಾಗುತ್ತದೆ.  ಇದರಿಂದಲೇ ಹಿಂದೂ ಧರ್ಮದ ಮಹಾನತೆಯು ಗಮನಕ್ಕೆ ಬರುತ್ತದೆ! ಹಿಂದೂ ಧರ್ಮವು ಪ್ರತಿಯೊಂದು ವಿಷಯದಿಂದ ಅಂದರೆ ಆಚಾರಧರ್ಮದಿಂದ ಮಾನವನಿಗೆ ಆಧ್ಯಾತ್ಮಿಕ, ಶಾರೀರಿಕ ಮತ್ತು ಮಾನಸಿಕವಾಗಿ ಯೋಗ್ಯವಾದ ಕೃತಿಯನ್ನೇ ಮಾಡಲು ಕಲಿಸುತ್ತದೆ. ಮನುಷ್ಯನಿಗೆ ಅದರ ಶಾಸ್ತ್ರ ತಿಳಿಯದಿದ್ದರೂ, ಶ್ರದ್ಧೆಯಿಂದ ಅದೇ ರೀತಿ ಪಾಲನೆ ಮಾಡಿದರೆ ಅವನ ಐಹಿಕ ಮತ್ತು ಪಾರಮಾರ್ಥಿಕ ಜೀವನವು ಆನಂದದಲ್ಲಿರುವುದು. ಇದಕ್ಕೆ ಸಂದೇಹವೇ ಇಲ್ಲ. 
🔹🔹🔹🔹🔹🔹🔹🔹🔹🔹🔹

Once we started seeing the beauty of life,

ugliness starts disappearing.

If we start looking at life with joy,

sadness starts disappearing.

We cannot have heaven and hell together,
We can have only one.It is our choice…

osho
🔸🔸🔸🔸🔸🔸🔸🔸🔸🔸🔸

ಹುಲ್ಲುಕಡ್ಡಿ ಶಕ್ತಿ


ಶ್ರೀವಾಣಿ

ಹುಲ್ಲುಕಡ್ಡಿ ಶಕ್ತಿ

ಶ್ರೀ ಸಿದ್ಧೇಶ್ವರ ಸ್ವಾಮೀಜಿ

ಸ್ವಯಂಭು ಎಂದರೆ ಸತ್ಯವು ಸ್ವತಃ ಸಿದ್ಧವಾಗಿದೆ. ಅದನ್ನು ಯಾರೂ ನಿರ್ಮಿಸಿಲ್ಲ. ನಿರ್ಮಾಣವಾದುದು ನಿರ್ನಾಮವಾಗುತ್ತದೆ, ನಾಶ ಹೊಂದುತ್ತದೆ. ಗಡಿಗೆ ಒಡೆಯುತ್ತದೆ ವಿನಾ ಮಣ್ಣು ಒಡೆಯುವುದಿಲ್ಲ. ಗಡಿಗೆಯಂತಿರುವ ಸುಳ್ಳಿನ ಜಗತ್ತು ನಾಶವಾಗುತ್ತದೆ ವಿನಾ ಸತ್ಯ ಸಾಯುವುದಿಲ್ಲ! ನಾಶವಾಗುವುದಿಲ್ಲ. ಓರ್ವ ಮುದುಕಿ ಒಂದು ದೇವರ ಮೂರ್ತಿಯನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸುತ್ತಿದ್ದಳು. ಅರ್ಧ ಆಯುಷ್ಯವನ್ನು ಆ ಮೂರ್ತಿಯ ಆರಾಧನೆಯಲ್ಲಿ ಕಳೆದಿದ್ದಳು. ಒಂದು ದಿನ ಆಕೆಯ ಮೊಮ್ಮಗನು ಬಂದು ''ನಿನ್ನ ಆಯುಷ್ಯವೆಲ್ಲ ವ್ಯರ್ಥವಾಯಿತು,'' ಎಂದು ಹೇಳಿದ. ''ಏಕೆ?'' ಎಂದು ಮುದುಕಿ ಕೇಳಿದಳು. ''ದೇವರಿಲ್ಲವೆಂದು ಇಂದು ವಿದ್ವಾಂಸರು ಸಿದ್ಧ ಮಾಡಿದ್ದಾರೆ,'' ''ದೇವರೇಕೆ ಇಲ್ಲ?.'' ಎಂದಳು ಮುದುಕಿ ''ದೇವರು ಕಾಣುವುದಿಲ್ಲ ಆದ್ದರಿಂದ ಅವನು ಇಲ್ಲ!,'' ಎಂದ ಮೊಮ್ಮಗ. ಮುದುಕಿ ಹೇಳಿದಳು-''ಕಣ್ಣಿಲ್ಲದವರಿಗೆ ದೇವರು ಹೇಗೆ ಕಾಣುತ್ತಾನೆ?,'' ಮೊಮ್ಮಗ ಹೇಳಿದ- ''ವಿದ್ವಾಂಸರಿಗೆ ನೀನು ಕಣ್ಣಿಲ್ಲವೆಂದು ಹೇಗೆ ಹೇಳುತ್ತೀ?,'' ಮುದುಕಿ ಹೇಳಿದಳು-''ಅವರಿಗೆ ಹೊರಗಿನ ಕಣ್ಣಿರಬಹುದು ಆದರೆ ಒಳಗಿನ ಕಣ್ಣು ಅರಿವಿನ ಕಣ್ಣಿಲ್ಲ. ಅರಿವಿನ ಅನುಭಾವದ ಕಣ್ಣಿಗೆ ಮಾತ್ರ ದೇವನು ಕಾಣುತ್ತಾನೆ!,'' ಮುದುಕಿಯ ಈ ಮಾತನ್ನು ಕೇಳಿದಾಗ ನಿರ್ಗುಣ, ನಿರಾಕಾರ, ನಿರಂಜನನಾದ ಆ ಮಹದೇವನ ಅರಿವಿನ ಬೆಳಕು ಮೊಮ್ಮಗನ ಮನದಲ್ಲಿ ಚೆಲ್ಲವರಿದಿತ್ತು.

ಕೆಲವು ನಾಸ್ತಿಕರು ನಮ್ಮ ಪ್ರಸಿದ್ಧ ದೇವಾಲಯಗಳ ಮೂರ್ತಿಯನ್ನು ಒಡೆದು ಹಾಕಿದರು. ಭಾರತೀಯರ ದೇವರ ಕಥೆ ಮುಗಿಯಿತೆಂದು ಕುಣಿದಾಡಿದರು. ಆದರೆ ಅವರು ಒಡೆದುದು ದೇವರ ಮೂರ್ತಿಯನ್ನೇ ವಿನಾ ದೇವರನ್ನಲ್ಲ ಎಂಬ ಸರಳ ಸತ್ಯ ಅವರಿಗೆ ತಿಳಿಯಲಾರದುದೇ ಪರಮಾಶ್ಚರ್ಯ. ಹಲಗೆಯ ಮೇಲೆ ಬರೆದ ಅಕ್ಷ ರಗಳನ್ನು ಅಳಿಸಿದರೆ ಮೂಲ ಅಕ್ಷ ರಗಳೆಂದಾದರೂ ನಾಶವಾಗುತ್ತವೆಯೇ? ಪರಮಾತ್ಮನನ್ನು ನಾಶಮಾಡುವ ಶಕ್ತಿ ಈ ಜಗತ್ತಿನಲ್ಲಿ ಇನ್ನೊಂದಿಲ್ಲ.

ಒಂದುದಿನ ಅಗ್ನಿ ದೇವತೆ, ಜಲದೇವತೆ, ವಾಯುದೇವತೆ ಮೂವರಲ್ಲಿ ನಾ ಶ್ರೇಷ್ಠ, ನೀ ಶ್ರೇಷ್ಠ ಎಂಬ ವಾದ ಎದ್ದಿತು. ಅಲ್ಲೆ ಇದ್ದ ಒಂದು ಹುಲ್ಲು ಕಡ್ಡಿ ಹೇಳಿತು- ''ನಾನು ಹೇಳುತ್ತೇನೆ ನಿಮ್ಮಲ್ಲಿ ಯಾರು ಶ್ರೇಷ್ಠರೆಂದು. ಆಗಿಯೇ ಹೋಗಲಿ, ನಿಮ್ಮ ಶಕ್ತಿಯ ಪ್ರಯೋಗ ನನ್ನ ಮೇಲೆ!,'' ವಾಯು ದೇವತೆ ಬಿರುಗಾಳಿ ಬೀಸಿದರೆ ಹೆಮ್ಮರಗಳೇ ಉರುಳಿದವು. ಹುಲ್ಲುಕಡ್ಡಿ ಸ್ವಲ್ಪ ಹೊತ್ತು ಬಾಗಿ ಮತ್ತೆ ಮೊದಲಿನಂತೆ ನಿಂತಿತು. ಜಲದೇವತೆ ಜಲಪ್ರಳಯವನ್ನು ಮಾಡಿದ. ಆಗಲೂ ಹುಲ್ಲು ಸ್ವಲ್ಪ ಹೊತ್ತು ಬಾಗಿ ಮತ್ತೆ ಹಾಗೇ ನಿಂತಿತು. ಕೊನೆಗೆ ಅಗ್ನಿ ದೇವತೆ ಬೆಂಕಿಯ ಮಳೆಗರೆದರೆ ಆ ಕರಕಿ ಹುಲ್ಲಿನ ಮೇಲಿನ ಎರಡೆಲೆ ಕರಕಾಗಿದ್ದವು. ಮತ್ತೆ ಸ್ವಲ್ಪ ಸಮಯದ ನಂತರ ನೆಲದೊಳಗಿಂದ ಮೊಳಕೆಯೊಡೆದು ಮೇಲೆ ಬಂದಿತ್ತು ಅಷ್ಟೊತ್ತಿಗೆ ತ್ರಿಮೂರ್ತಿಗಳು ಬೆವತು ಸೋತು ಹೋಗಿದ್ದರು! ಆಗ ಆ ಹುಲ್ಲು ಕಡ್ಡಿ ಹೇಳಿತು-''ತ್ರಿಮೂರ್ತಿಗಳೇ ನಿಮ್ಮನ್ನು ಸೋಲಿಸಿದವ ನಾನಲ್ಲ ನನ್ನೊಳಗಿರುವ ಆ ಪರಮಾತ್ಮ ಶಕ್ತಿ. ಅದೇ ಶಕ್ತಿ ನಿಮ್ಮಲ್ಲಿಯೂ ಇದೆ. ಆದರೆ ನೀವು ಅಹಂಕರಿಸಿದ್ದರಿಂದ ನಿಮಗೆ ಸೋಲಾಗಿದೆ. ನಿರಹಂಕಾರಿಗಳು ವಿನಯಶೀಲರೂ ಆಗಿ ನೀವು ನಡೆದುಕೊಂಡರೆ ಆ ಮಹಾದೇವನ ಕರುಣೆಯಿಂದ ನೀವು ಮತ್ತೆ ವಿಜಯಶಾಲಿಗಳಾಗಿ ಮೆರೆಯುತ್ತೀರಿ!.'' ಆ ಹುಲ್ಲುಕಡ್ಡಿಯ ಉಪದೇಶದಿಂದ ತ್ರಿಮೂರ್ತಿಗಳ ಅಹಂಕಾರ ಅಳಿದಿತ್ತು. ಅರಿವಿನ ಕಣ್ಣು ತೆರೆದಿತ್ತು. ಪ್ರಪಂಚಕ್ಕೆಲ್ಲ ಸರ್ವಶಕ್ತನು ಸ್ವಯಂಸಿದ್ಧನು ಆಗಿರುವ ಆ ಪರಮಸತ್ಯ ಪರಮಾತ್ಮನೇ ಸ್ವಯಂಭು.

ಆಧಾರ : ಈಶ ಪ್ರಸಾದ

🔸🔸🔸🔸🔸🔸🔸🔸🔸🔸🔸

ಮನಸ್ಸಿನ ಆಂತರ್ಯದ ಆಕಾಶ

ಮನಸ್ಸಿನ ಆಂತರ್ಯದ ಆಕಾಶ

ಶ್ರೀ ಶ್ರೀ ರವಿಶಂಕರ್‌

ಲೀಟರ್‌ಗಳನ್ನು ಹೇಗೆ ಲೆಕ್ಕ ಮಾಡುತ್ತೀರಿ? ಪಾತ್ರೆಯ ಸಾಮರ್ಥ್ಯ‌ ಒಂದು ಲೀಟರ್‌, ಎರಡು ಲೀಟರ್‌ ಅಥವಾ ಅರ್ಧ ಲೀಟರ್‌ ಎಂದು ಲೆಕ್ಕ ಮಾಡುತ್ತೇವೆ. ಕಾರಣ ಎಂದರೆ ಎಲ್ಲಾ ಕಾರಣಗಳ ಕಾರಣ. ಅದು ಯಾವುದರ ಪ್ರಭಾವವೂ ಅಲ್ಲ. ಪ್ರಭಾವ ಎಂದರೆ ಅದರ ಹಿಂದೆ ಏನೋ ಒಂದು ಕಾರಣ ಇರುತ್ತದೆ. ಕಾರಣ ಎಂದರೆ ಅಂತಿಮವಾದ ಕಾರಣ. ಅದರ ಹಿಂದೆ ಬೇರೆ ಯಾವ ಕಾರಣವೂ ಇರುವುದಿಲ್ಲ.

ವಿವಿಧ ಜಾತಕಗಳನ್ನು ನೋಡಿ ಜನರು ವಿವಿಧ ರೀತಿಯ ಚಿತ್ತಾಕಾಶವನ್ನು ತಿಳಿಯುತ್ತಾರೆ. ಕುಂಡಲಿಯಿಂದ ಕೆಲವು ಗುಣಗಳನ್ನು ಕಂಡುಹಿಡಿಯಬಹುದು. ಇದು ಚಿತ್ತಾಕಾಶವನ್ನು ಸೂಚಿಸುತ್ತದೆ. ಒಂದು ವ್ಯಕ್ತಿಯಲ್ಲಿರುವ ಆಲೋಚನೆಗಳ, ಭಾವನೆಗಳ ರೀತಿ. ಕಾಲವೂ ಮುಖ್ಯ. ಆದರೆ ಜಾತಕದ ಭವಿಷ್ಯ ಧೂಮಕೇತುವಿನ ಭವಿಷ್ಯದಂತೆ. ಅವು ಸದಾ ಸರಿಯಾಗಿರುತ್ತವೆಂದಲ್ಲ. ಧೂಮಕೇತುವಿನ ಭವಿಷ್ಯ ಸದಾಕಾಲ ಕೆಲಸ ಮಾಡುವುದಿಲ್ಲ. ಗುಡುಗು ಮಿಂಚು ಇರುತ್ತದೆನ್ನುತ್ತಾರೆ, ಆದರೆ ಸೂರ್ಯನು ಹೊಳೆಯುತ್ತಾನೆ! ಆದ್ದರಿಂದ ಜ್ಯೋತಿಷ್ಯವು ಒಂದು ಸಾಧ್ಯತೆಯಷ್ಟೆ.

ಭಾವನೆಗಳೂ ಚಂದ್ರಮನ ಮೇಲೆ ಅವಲಂಬಿತವಾಗಿವೆ. ಚಂದ್ರಮನು ಒಂದು ಸ್ಥಳದಲ್ಲಿ ಎರಡು ಕಾಲ ದಿವಸಗಳಿಗಿಂತಲೂ ಹೆಚ್ಚಾಗಿ ಇರುವುದಿಲ್ಲ. ಆ ಸ್ಥಳದಿಂದ ಚಂದ್ರಮನು ಜರುಗಿದಾಗ ನಿಮ್ಮ ಭಾವನೆಯೂ ಬದಲಿಸುತ್ತದೆ. ಚಂದ್ರಮ ಮತ್ತು ಶನಿಯು ಒಂದಾದಾಗ ಜನರು ಖಿನ್ನರಾಗುತ್ತಾರೆ. ಈ ಭಾವನೆಗಳು ಬರುತ್ತವೆ, ಹೋಗುತ್ತವೆ. ಯಾವುದೂ ಶಾಶ್ವತವಲ್ಲ. ಯಾವ ಗ್ರಹವೂ ಸ್ಥಿರವಾಗಿ ಒಂದೇ ಕಡೆ ನಿಲ್ಲುವುದಿಲ್ಲ. ಎಲ್ಲವೂ ಚಲಿಸುತ್ತವೆ. ಆದರೆ ಈ ಯಾವುದೇ ಭಾವನೆಗಳೊಡನೆ ನೀವು ಗುರುತಿಸಿಕೊಂಡಾಗ ನೀವು ಸಿಲುಕಿಕೊಳ್ಳುತ್ತೀರಿ. ಆಗ ನೀವು ಮುಂದಕ್ಕೆ ಹೋಗುವುದಿಲ್ಲ. ಆಗ ಅದು ನಿಮ್ಮ ದೇಹದೊಳಗೆ ಹೊಕ್ಕುತ್ತದೆ, ಖಾಯಿಲೆ ಬೀಳುತ್ತೀರಿ. ಎಲ್ಲವೂ ಅದ್ಭುತವಲ್ಲವೆ? ಆದ್ದರಿಂದ ದಾರಿಯೇನು? ಇಲ್ಲಿಂದ ಮುಂದಕ್ಕೆ ಹೇಗೆ ಹೋಗುವುದು?

ಮೋಡವಿರುವ ದಿನದಂದು ವಿಮಾನವು ಹೇಗೆ ಹಾರುತ್ತದೆ? ಮೋಡಗಳ ಮೇಲಕ್ಕೆ ಹಾರುತ್ತದೆ ಮತ್ತು ಸೂರ್ಯನು ಹೊಳೆಯುತ್ತಾನೆ. ಆಧ್ಯಾತ್ಮಿಕ ಅಭ್ಯಾಸಗಳು ಇರುವುದೇ ಅದಕ್ಕಾಗಿ. ಆಧ್ಯಾತ್ಮಿಕ ಅಭ್ಯಾಸಗಳು ನಮ್ಮನ್ನು ಚಿತ್ತಾಕಾಶದಿಂದ ಚಿದಾಕಾಶಕ್ಕೆ ಕೊಂಡೊಯ್ಯುತ್ತದೆ. ಎಲ್ಲಾ ಭಾವನೆಗಳನ್ನೂ ದಾಟಿ ಹೊರಬರುತ್ತೇವೆ.

ಬಹಳ ಹಿಂದೆಯೆ ಋುಷಿಗಳು ಒಂಭತ್ತು ಗ್ರಹಗಳು ಹನ್ನೆರಡು ರಾಶಿಗಳಲ್ಲಿ ಚಲಿಸಿ 108 ಬದಲಾವಣೆಗಳು ಆಗುತ್ತವೆ. ಇದರಿಂದ ಒಳ್ಳೆಯ ಪ್ರಭಾವಗಳು ಹೆಚ್ಚುತ್ತದೆ ಮತ್ತು ಕೆಟ್ಟ ಪ್ರಭಾವವು ಕುಗ್ಗುತ್ತಾ ಹೋಗುತ್ತದೆ. ಓಂ ನಮಃ ಶಿವಾಯ 108 ಸಲ ಉಚ್ಚರಿಸಿದರೆ ನಿಮ್ಮ ಆತ್ಮವನ್ನು ಉತ್ಥಾಪಿಸಿ, ಅದರಿಂದ ಹೊರಗೆ ಕರೆದೊಯ್ದು ಚಿದಾಕಾಶದೊಡನೆ ಸಂಬಂಧ ಕಲ್ಪಿಸುತ್ತದೆ.

ತಮಿಳುನಾಡಿನಲ್ಲಿ ''ಚಿತ್ತಂಬಲಂ ಶಿವ'' ಎನ್ನುತ್ತಾರೆ. ಇದು ಚಿದಾಕಾಶವನ್ನು ಸೂಚಿಸುತ್ತದೆ. ''ನಾನು ಶಿವ ಎಂದೊಡನೆಯೇ ಚಿದಾಕಾಶದೊಳಗೆ ಹೊಕ್ಕುತ್ತೇನೆ, ಚೈತನ್ಯದ ಆಕಾಶದೊಳಗೆ ಹೊಕ್ಕುತ್ತೇನೆ'' ಎಂಬುದು ಇದರ ಅರ್ಥ. ಶಿವ ಚಿತ್ತಂಬಲಂ ಎಂದರೆ ಗುರು ತತ್ತ್ವ ಅಥವಾ ಶಿವತತ್ತ್ವ ಅಥವಾ ನಮ್ಮದೇ ಆತ್ಮ. ಎಲ್ಲವೂ ಅದೇ ಮತ್ತು ಅದೇ ಧ್ಯಾನ. ಉನ್ನತ ಸ್ಥಿತಿಗೇರಿದಾಗ ಆಗುವ ಅನುಭವವಿದು. ಎಲ್ಲಾ ಆಲೋಚನೆಗಳೂ ಹೊರಟು ಹೋಗುತ್ತವೆ. ಭಾವನೆಗಳು ನೆಲೆನಿಲ್ಲುತ್ತವೆ ಅತಿ ಪ್ರಶಾಂತವಾದ, ಅತಿ ಮಂಗಳವಾದ, ಅತ್ಯಂತ ಆಂತರ್ಯದ ಆಕಾಶವನ್ನು ಅನುಭವಿಸುತ್ತೇವೆ. ಸುದರ್ಶನ ಕ್ರಿಯೆಯಿಂದ ಆಗುವುದೇ ಇದು. ನಿಮ್ಮನ್ನು ಸುತ್ತಲೂ ಕೊಂಡೊಯ್ದು ಕೊಂಡೊಯ್ದು ನಂತರ ನಿಮ್ಮನ್ನು ಈ ವಲಯದಿಂದ ಹೊರಕ್ಕೆ ಕೊಂಡೊಯ್ಯುತ್ತದೆ. ಆಗ ಚಿದಾಕಾಶದೊಳಗೆ ಹೊಕ್ಕುತ್ತೀರಿ. ಶಿವ ತಿರು ಚಿತ್ತಂಬಲಂ!

🔸🔸🔸🔸🔸🔸🔸🔸🔸🔸🔸

ಮಲಗುವಾಗ ಉತ್ತರಕ್ಕೆ ಏಕೆ ತಲೆ ಹಾಕುವುದಿಲ್ಲ???

ಮಲಗುವಾಗ ಉತ್ತರಕ್ಕೆ ಏಕೆ ತಲೆ ಹಾಕುವುದಿಲ್ಲ???

ಈ ಸಂಪೂರ್ಣ ಸೂರ್ಯ ಮಂಡಲವೇ ಒಂದು ಅಗಾಧವಾದ ವಿದ್ಯುತ್ ಕಾಂತೀಯ ಪ್ರಭಾವಕ್ಕೆ ಒಳಗಾಗಿದೆ. ನಿಮಗೆ ತಿಳಿದಿರುವಂತೆ ಈ ಭೂಮಿಯೆ ಒಂದು ಭೃುಹತ್ ಅಯಸ್ಕಾಂತವಾಗಿದೆ, ನಾವು ಉತ್ತರಕ್ಕೆ ತಲೆ ಹಾಕಿ ಮಲಗಿದಾಗ ನಮ್ಮ ದೇಹದ ಕಾಂತೀಯ ದಿಕ್ಕು ಹಾಗೂ ಭೂಮಿಯ ಕಾಂತೀಯ ದಿಕ್ಕು, ಎರಡರ ನಡುವೆಯು ಅಸಮಾನವಾದ ಸಂಬಂಧ ಏರ್ಪಟ್ಟು ದೇಹದ ಮೇಲೆ ಅನೇಕ ದುಷ್ಪರಿಣಾಮಗಳನ್ನು ಬೀರುತ್ತದೆ.

ಅವುಗಳಲ್ಲಿ ಮುಖ್ಯವಾಗಿ ಹೃದಯದ ಕೆಲಸಕ್ಕೆ ತೊಂದರೆಗಳನ್ನು ಉಂಟುಮಾಡುತ್ತದೆ, ಅದಲ್ಲದೆ ದೇಹದಲ್ಲಿರುವ ಕಬ್ಬಿಣದ ಅಂಶ ಕೂಡ ಭೂಮಿಯ ವಿದ್ಯುತ್ ಕಾಂತೀಯತೆಗೆ ಸ್ಪಂದಿಸುವದರಿಂದ ಈ ದಿಕ್ಕಿನಲ್ಲಿ ಮಲಗುವುದರಿಂದ ತಲೆ ಭಾಗದ ಕಡೆ ರಕ್ತದ ಕಬ್ಬಿಣದ ಅಂಶದ ಚಲನೆ ಕೇಂದ್ರೀಕೃತ ಆಗುವುದರಿಂದ ಅಲ್ಜೈಮರ್, ಪಾರ್ಕಿನ್ಸನ್ ಮುಂತಾದ ಕಾಯಿಲೆಗಳಿಗೆ ಹಾಗೂ ರಕ್ತದೋತ್ತಡ ಕೂಡ ಜಾಸ್ತಿಯಾಗುತ್ತದೆ, ಹಾಗಾಗಿ ಇಂತಹ ಆಚರಣೆ ನಮ್ಮ ಸಂಸ್ಕೃತಿಯ ಮೌಢ್ಯವಲ್ಲ, ವೈಜ್ಞಾನಿಕ ಸಂಶೋಧನೆ.

ಮಂಗಳಸೂತ್ರದ ಮಹತ್ವವೇನು?


ಮಂಗಳಸೂತ್ರದ ಮಹತ್ವವೇನು?


*ಮಂಗಳಸೂತ್ರ*
ಎಂಬುದು ಒಂದು ಆಭರಣ ಎಂದು ಪರಿಗಣಿಸಿದರೆ ಅದು ತಪ್ಪಾಗುತ್ತದೆ. ಮಂಗಳಸೂತ್ರವನ್ನು ತೊಡುವುದರಿಂದ ಆಕೆಯ ಸೌಂದರ್ಯ ಹೆಚ್ಚುವುದಲ್ಲದೇ ಆಕೆಗೆ ಅದು ಸೌಭಾಗ್ಯದ ಸಂಕೇತ ಕೂಡ.

ಶ್ರೀಆದಿಶಂಕರರು ತಮ್ಮ ಸೌಂದರ್ಯಲಹರಿಯಲ್ಲಿ ಅದರ ಪ್ರಾಮುಖ್ಯತೆಗೆ ಒತ್ತುಕೊಟ್ಟಿದ್ದಾರೆ.

*ಹಿಂದೂ ಸಂಸ್ಕೃತಿಯಲ್ಲಿ ಮಂಗಳಸೂತ್ರಕ್ಕೆ ಬಹಳ ಪ್ರಾಮುಖ್ಯತೆ ಇದೆ.*

ಅದನ್ನು ತೊಡುವುದು ಗಂಡ-ಹೆಂಡತಿಯ ಸಂಬಂಧವನ್ನು ವೈಭವೀಕರಿಸಲಾಗಿದೆ. ಅದು ಗಂಡನ ಆಯಸ್ಸು ಹೆಚ್ಚಲಿ ಎಂಬ ಆಶಯದ ಸಂಕೇತ. ಮದುವೆಯಲ್ಲಿ ವರ ಅದನ್ನು ಕನ್ಯೆಯ ಕೊರಳಿಗೆ ಕಟ್ಟುತ್ತಾನೆ. ಹಾಗೆ ಕಟ್ಟುವಾಗ ಹೀಗೆಂದು ಪ್ರಮಾಣ ಮಾಡುತ್ತಾನೆ “ನಾನು ಈ ಮಗಳಸೂತ್ರವನ್ನು ಕಟ್ಟುತ್ತಿರುವುದರ ಮೂಲ ಉದ್ಧೇಶ ನೀನು ಧೀರ್ಘಕಾಲ ಸುಮಂಗಲಿಯಾಗಿ ಬಾಳು.”

ಮದುವೆಯಾದ ಮಹಿಳೆಯರು ಮಂಗಳಸೂತ್ರವನ್ನು ತಮ್ಮ ಜೀವನಪೂರ್ತಿ ತೊಡುತ್ತಾರೆ.

ಹೀಗೆ ತೊಡುವುದರ ಹಿಂದಿನ ಉದ್ಧೇಶ ತಮ್ಮ ಪತಿ ಮತ್ತು ಕುಟುಂಬದ ಸದಸ್ಯರು ಚೆನ್ನಾಗಿ ಬಾಳಲಿ ಮತ್ತು ದುಷ್ಟ ಜನರ ಕೆಟ್ಟ ದೃಷ್ಟಿ ಅವರ ಮೇಲೆ ಬೀಳದಿರಲಿ ಎಂದು.

ಮಂಗಳಸೂತ್ರದಲ್ಲಿ ಮೂರು ಗಂಟುಗಳಿರುತ್ತವೆ. ಆ ಮೂರು ಗಂಟುಗಳು ಹೆಣ್ಣಿನ ಮೂರು ಸ್ಥಿತಿಗಳನ್ನು ಸೂಚಿಸುತ್ತವೆ. ಅವುಗಳ ಅರ್ಥ ಹೀಗಿದೆ.—-

೧) ಮೊದಲ ಗಂಟು ಅವಳು ತನ್ನ ಗಂಡನಿಗೆ ವಿಧೇಯಳಾಗಿರುವುದರ ಸಂಕೇತ,

೨) ಎರಡನೆಯ ಗಂಟು ಕುಟುಂಬದ ಸದಸ್ಯರಿಗೆ ಸೇರಿದವಳಾಗಿರುವುದರ ಸಂಕೇತ,ಇನ್ನು

೩) ಮೂರನೆಯ ಗಂಟು ತಾನು ದೇವರಿಗೆ ಅರ್ಪಿತಳು ಎಂಬುದರ ಸಂಕೇತ.

ಅರಿಷಿನಕುಂಕುಮ ಹಚ್ಚಿಕೊಳ್ಳುವಾಗ ಮೊದಲು ಅದಕ್ಕೆ ಹಚ್ಚಿ ನಂತರ ಹಣೆಗೆ ಇಟ್ಟುಕೊಳ್ಳುವುದರಿಂದ ಮಹಿಳೆ ಅದರ ಪಾವಿತ್ರತೆಯನ್ನು ಹೆಚ್ಚು ಎಂದು ತೋರಿಸುವುದಲ್ಲದೇ ತಾನೂ ಮುತ್ತೈದೆಯಾಗಿ ಸಮಾಜದಲ್ಲಿ ಗೌರವಾನ್ವಿತಳು ಎಂಬುದನ್ನು ಸೂಚಿಸುತ್ತದೆ.

ಕೆಲವ ಮಹಿಳೆಯರು ರಾತ್ರಿ ಮಲಗುವಾಗ ಚಿನ್ನದ ಮಂಗಳಸೂತ್ರವನ್ನು ಗೂಟಕ್ಕೆ ಹಾಕಿ ಮಲಗುವುದುಂಟು. ಅದು ಧಾರ್ಮಿಕವಾಗಿ ತಪ್ಪು.
ಆದರೆಅವರ ಸಮಜಾಯಿಷಿ ಏನೆಂದರೆ ಮಲಗಿದಾಗ ಹೊರಳಾಡುವುದರಿಂದ ಚಿನ್ನದ ಸೂತ್ರ ಕೆಡಬಹುದು ಎಂಬುದಾಗಿದೆ.
ಇದು ತಪ್ಪಾದರೂ ಅವರವರ ವಿವೇಚನೆಗೆ ಬಿಟ್ಟಿದ್ದು !!

ಪದಗಳಿಗೆ ಕಟ್ಟುಬಿದ್ದಾಗ

ಪದಗಳಿಗೆ ಕಟ್ಟುಬಿದ್ದಾಗ


ಜಿಡ್ಡು ಕೃಷ್ಣಮೂರ್ತಿ

ನಾವು ಮಾತುಗಳನ್ನು ಕಲಿತಿದ್ದೇವೆ; ಆದರೆ ಪದಗಳಿಗೆ ದಾಸರಾಗಿದ್ದೇವೆ. ನಾವು ಪದಗಳ ಆಚೆಗೆ ಸರಿಯಲು ಉತ್ಸುಕರಾಗಿದ್ದೇವೆ. ಪದಗಳನ್ನು ಬುಡಮೇಲು ಮಾಡಿ, ಚಿಂದಿ ಚಿಂದಿ ಮಾಡಿ, ಪದಗಳಿಂದ ಬಿಡುಗಡೆ ಹೊಂದುವುದಿದೆಯಲ್ಲ ಅದು ಅಸಾಧಾರಣ ಪರಿಭಾವನೆ ಮತ್ತು ಶಕ್ತಿಯನ್ನು ತುಂಬುತ್ತದೆ.

ಇದು ಸುಲಭವಾಗಿ ಕಳಚಿಕೊಳ್ಳುವ ಸಂಗತಿಯಲ್ಲ; ಏಕೆಂದರೆ ಪದ- ಸಂಕೇತ- ವಿಚಾರಕ್ಕೆ ಮನಸ್ಸಿನ ಮೇಲೆ ಅಪಾರ ಹಿಡಿತವಿದೆ. ನಾವು ಮನಸ್ಸಿನಲ್ಲೊಂದು ಪರಿವರ್ತನೆ ಉಂಟುಮಾಡುವ ಬಗ್ಗೆ ಮಾತನಾಡುತ್ತಿದ್ದೇವೆ. ಹಾಗೆ ಮಾಡಲು ಶಬ್ದ ಸ್ಥಗಿತಗೊಳ್ಳಬೇಕು. ಸಮಾಪ್ತಿಯಾಗಬೇಕು. ಶಬ್ದವನ್ನು ತೆಗೆದುಬಿಟ್ಟರೆ, ಉಳಿದಿದ್ದೇನು? ಪದವು ಗತವನ್ನು ಪ್ರತಿನಿಧಿಸುತ್ತದೆ, ಅಲ್ಲವೆ? ಅಸಂಖ್ಯ ಚಿತ್ರಗಳು, ಬಿಂಬಗಳು, ಅನುಭವಗಳ ಪದರಗಳು ಇವೆಲ್ಲ ಶಬ್ದ, ವಿಚಾರ, ಸ್ಮ ೃತಿಯನ್ನು ಆಧರಿಸಿವೆ. ದೇವರು ಎಂಬ ಪದವನ್ನು ತೆಗೆದುಕೊಳ್ಳಿ. ದೇವರು ಎಂಬ ಪದ ದೇವರಲ್ಲ; ಶಬ್ದ, ಸಂಕೇತ ಅದಲ್ಲದಿರುವಾಗ, ನಂಬಿಕೆ, ವಿಚಾರ ಇಲ್ಲದಿರುವಾಗ ವ್ಯಕ್ತಿಗೆ ದೇವರು ಎಂಬ ಆ ಅಗಾಧತೆ, ಅಪ್ರಮೇಯ ಗುಣ ಅಥವಾ ಅದು ಏನೇ ಆಗಲಿ ಅದರ ಅರಿವು ಮೂಡುತ್ತವೆ.

ನೋಡಿ, 'ಯಾತನಾಮಯ' ಎಂಬ ಶಬ್ದವನ್ನು ನಾವು ಉಪಯೋಗಿಸುತ್ತೇವೆ. ಆದರೆ ಆ ಶಬ್ದವೇ ಸಮಸ್ಯೆಯನ್ನು ಪರಿಶೀಲಿಸದಂತೆ ನಿರ್ಬಂಧ ಒಡ್ಡುತ್ತದೆ. ಸ್ವಿಸ್‌ ಎಂಬ ಪದ ಕೇಳಿದೊಡನೆಯೆ ಸ್ವಿಸ್‌ ವ್ಯಕ್ತಿ ಪುಳಕಗೊಳ್ಳುತ್ತಾನೆ. ಅಂತೆಯೇ ಕ್ರಿಸ್ತ ಎಂಬ ಪದ ಕೇಳಿದ ಕೂಡಲೆ ಕ್ರಿಶ್ಚಿಯನ್‌ ರೋಮಾಂಚಿತನಾಗುತ್ತಾನೆ. ಇಂಗ್ಲೆಂಡ್‌ ಎಂಬ ಪದ ಕೇಳಿದಾಗ ಇಂಗ್ಲಿಷನಿಗೆ ಖುಷಿಯಾಗುತ್ತದೆ. ನಾವು ಶಬ್ದಗಳಿಗೆ, ಸಂಕೇತಗಳಿಗೆ ಮತ್ತು ವಿಚಾರಗಳಿಗೆ ಗುಲಾಮರು.

ಯಾವುದೇ ಅನುಭವವನ್ನು, ಮನಸ್ಸಿನ ಯಾವುದೇ ಸ್ಥಿತಿಯನ್ನು ಏನಿದೆಯೋ ವಸ್ತು ಸ್ಥಿತಿಯನ್ನು, ಯಥಾರ್ಥವನ್ನು ಗ್ರಹಿಸಲು ಪದಗಳಿಗೆ ದಾಸರಾಗಬಾರದು. ನಾಮಕರಣ, ಶಬ್ದ ಹಲಬಗೆಯ ನೆನಪುಗಳನ್ನು ಬಡಿದೆಬ್ಬಿಸುತ್ತದೆ. ಈ ನೆನಪುಗಳು ವಸ್ತುಸ್ಥಿತಿ, ನಿಯಂತ್ರಣ, ರೂಪವನ್ನು ಆಕ್ರಮಿಸಿಕೊಂಡು ವಸ್ತುಸ್ಥಿತಿಗೆ ಏನಿದೆಯೋ ಅದಕ್ಕೆ ಮಾರ್ಗದರ್ಶನ ಮಾಡುತ್ತವೆ.

ಪ್ರತಿಯೊಂದು ಶಬ್ದ, ಯೋಚನೆ ಮನಸ್ಸನ್ನು ರೂಪಿಸುತ್ತದೆ. ಯೋಚನೆಯನ್ನು ಅರಿಯದೆ ಮನಸ್ಸು ಶಬ್ದಗಳಿಗೆ ದಾಸನಾಗುತ್ತದೆ. ಹೀಗಾದಾಗ ದುಃಖ ಹೊಮ್ಮುತ್ತದೆ.

ಧ್ಯಾನ ಅರಳಬೇಕಾದರೆ ಎಲ್ಲ ಬಗೆಯ ಬಿಂಬ, ಶಬ್ದ, ಸಂಕೇತ ಕೊನೆಗೊಳ್ಳಬೇಕು. ಆದರೆ ಶಬ್ದದ ಅಭ್ಯಾಸ, ಶಬ್ದ ಭಾವಕೋಶ, ಹುದುಗಿರುವ ಅರ್ಥಗಳು ಶಬ್ದದಿಂದ ಬಿಡುಗಡೆ ಹೊಂದುವುದನ್ನು ತಡೆಯುತ್ತವೆ. ಈ ಬಿಡುಗಡೆಯಿಲ್ಲದಿದ್ದರೆ ನೀವು ಶಬ್ದಗಳಿಗೆ, ತೀರ್ಮಾನಗಳಿಗೆ ವಿಚಾರಗಳಿಗೆ ದಾಸರಾಗುತ್ತೀರಿ. ಶಬ್ದವು ಮಧ್ಯಪ್ರವೇಶಿಸದೆ ನೀವು ಆಲಿಸಲು ಸಾಧ್ಯವೆ? ನಾನು ನಿಮ್ಮನ್ನು ಪ್ರಿತಿಸುತ್ತೇನೆ ಎಂದು ನೀವು ನನಗೆ ಹೇಳುತ್ತಿರಿ. ಆಗ ಏನಾಗುತ್ತದೆ? ಶಬ್ದಗಳು ಯಾವ ಅರ್ಥವನ್ನೂ ಹೊರಹೊಮ್ಮಿಸುವುದಿಲ್ಲ. ಸಂಬಂಧದ ಭಾವವನ್ನು ಯೋಚನೆಯೇ ಶಬ್ದವಾಗಿ ಮಧ್ಯಪ್ರವೇಶಿಸುತ್ತದೆ. ಮುಕ್ತವಾಗಿ ಆಲಿಸುತ್ತದೆ ಮತ್ತು ನಾನು ನಿನ್ನನ್ನು ಪ್ರಿತಿಸುತ್ತೇನೆ ಎಂದಾಗ ಯಾವುದೇ ಪೂರ್ವಾಗ್ರಹ ಹೊಂದಿರುವುದಿಲ್ಲ ಎಂಬ ಎಚ್ಚರವನ್ನೂ ಮನಸ್ಸು ಹೊಂದಿರುತ್ತದೆ.

ಪದಗಳು ಸಂವಹನ ಸಾಧನಗಳು. ಆದರೆ ಕೆಲವು ನಿರ್ದಿಷ್ಟ ಪದಗಳು ನಮ್ಮಲ್ಲಿ ನರ ಸಂಬಂಧಿ ಅಥವಾ ಮಾನಸಿಕ ಸ್ಪಂದನವನ್ನುಂಟು ಮಾಡಿದಾಗ ಸಂವಹನ ನಡೆಸುವುದು ಕಷ್ಟವಾಗುತ್ತದೆ. ಅದಕ್ಕಾಗಿಯೇ ಪದಗಳಿಂದ ಆಚೆಗೆ ಜಿಗಿಯಬೇಕು ಎಂದು ನಾನು ಹೇಳುವುದು.

🔹🔹🔹🔹🔹🔹🔹🔹🔹🔹🔹